ಮಳಲಿ ಮಸೀದಿ ವಿವಾದ: ಆರ್ಟಿಸಿಯಲ್ಲಿ ಮಸೀದಿ ಹೆಸರು ನಮೂದಿಗೆ ಎಸಿ ಕೋರ್ಟ್ ತಡೆ
Team Udayavani, Jun 21, 2022, 6:40 AM IST
ಮಂಗಳೂರು: ಮಳಲಿ ಮಸೀದಿಯ ಜಾಗಕ್ಕೆ ಸಂಬಂಧಿಸಿದಂತೆ ಆರ್ಟಿಸಿಯಲ್ಲಿ ಕಾಲಂ ನಂ. 11ರಲ್ಲಿ ಮಸೀದಿಯ ಹೆಸರು ನಮೂದಿಗೆ ಸಹಾಯಕ ಆಯುಕ್ತರ ನ್ಯಾಯಾಲಯ (ಎಸಿ ಕೋರ್ಟ್) ಸೋಮವಾರ ತಡೆಯಾಜ್ಞೆ ನೀಡಿದೆ.
ಮಸೀದಿ ಜಾಗದ ಆರ್ಟಿಸಿಯ ಕಾಲಂ ನಂ. 9ರಲ್ಲಿ ಜಾಗದ ಮಾಲಕರು ಸರಕಾರ ಎಂಬುದಾಗಿ ನಮೂದಿಸಿದ್ದು ಕಾಲಂ ಸಂಖ್ಯೆ 11ರಲ್ಲಿ ಜಾಗದ ಹಕ್ಕುದಾರರಾಗಿ ಮಸೀದಿ ಹೆಸರು ಉಲ್ಲೇಖೀಸಲಾಗಿತ್ತು. ಇದನ್ನು ಪ್ರಶ್ನಿಸಿ ಎಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಎಸಿ ಕೋರ್ಟ್ ಮಸೀದಿ ಹೆಸರು ನಮೂದು ಮಾಡಲು ತಡೆಯಾಜ್ಞೆ ನೀಡಿದೆ.
ಮಸೀದಿ ನವೀಕರಣ ಸಂದರ್ಭ ದೇವಾಲಯ ಹೋಲುವ ರಚನೆಗಳು ಕಂಡುಬಂದ ಹಿನ್ನೆಲೆಯಲ್ಲಿ ಕೋರ್ಟ್ ಕಮಿಷನರ್ ಮೂಲಕ ಸರ್ವೇ ನಡೆಸಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಮಂಗಳೂರಿನ 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ನಡೆಯುತ್ತಿದ್ದು ಮುಂದಿನ ವಿಚಾರಣೆ ಜೂ. 22ರಂದು ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.