ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ., ಜನಜಾಗೃತಿ ವೇದಿಕೆ: ಸೇವೆಯ ಶೌರ್ಯಕ್ಕೆ 2 ವರ್ಷ ಪೂರ್ಣ
Team Udayavani, Jun 21, 2022, 6:32 AM IST
ಬೆಳ್ತಂಗಡಿ: ಪ್ರಾಕೃತಿಕ ಅಥವಾ ಮಾನವ ನಿರ್ಮಿತ ವಿಪತ್ತಿನಂತಹ ತುರ್ತು ಪರಿಸ್ಥಿತಿಯ ಸಂದರ್ಭ ಸ್ಪಂದಿಸುವ ಸಲುವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಕಲ್ಪನೆಯಲ್ಲಿ ಹೊರಬಂದ “ಶೌರ್ಯ ವಿಪತ್ತು ಸೇವಾ ಸಮಿತಿ, ಧರ್ಮಸ್ಥಳ’ ರಾಜ್ಯಾದ್ಯಂತ ಮನೆಮಾತಾಗಿದ್ದು ಜೂ. 21ಕ್ಕೆ 2 ವರ್ಷ ಪೂರೈಸುತ್ತಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್. ಮಂಜು ನಾಥ್ ಮಾರ್ಗದರ್ಶನದಲ್ಲಿ ಜನಜಾಗೃತಿ ಪ್ರಾದೇಶಿಕ ವಿಭಾಗದ ಮುಖೇನ ಈ ಸಮಿತಿ ಕಾರ್ಯಾಚರಿಸುತ್ತಿದೆ.
50 ತಾಲೂಕುಗಳಲ್ಲಿ 5,055 ಮಂದಿಗೆ ತರಬೇತಿ :
ಶೌರ್ಯ ವಿಪತ್ತು ನಿರ್ವಹಣ ಕಾರ್ಯಕ್ರಮ ರಾಜ್ಯದ 11 ಜಿಲ್ಲೆಯ 50 ತಾಲೂಕುಗಳಲ್ಲಿ ಅನುಷ್ಠಾನಗೊಂಡಿದ್ದು, 2 ವರ್ಷಗಳಲ್ಲಿ 50 ತಾಲೂಕುಗಳಲ್ಲಿ 5,055 ಜನರನ್ನು ತರಬೇತಿಗೊಳಿಸಲಾಗಿದೆ. ದ.ಕ. ಜಿಲ್ಲೆಯ-4, ಉ.ಕ. ಜಿಲ್ಲೆಯ-8, ಹಾಸನ -5, ಚಿಕ್ಕಮಗಳೂರು -6, ಬೆಂಗಳೂರು
ಗ್ರಾ. -5, ಉಡುಪಿ -2, ಧಾರವಾಡ -4, ಬೆಳಗಾವಿ- 6, ಬಾಗಲಕೋಟೆ -7 ತಾಲೂಕು ಗಳಲ್ಲಿ ತರಬೇತಿ ಹೊಂದಿದ ವಿಪತ್ತು ನಿರ್ವಹಣ ತಂಡ ಸೇವೆ ಯಲ್ಲಿ ತೊಡಗಿಕೊಂ ಡಿದೆ. 20 ಬಗೆಯ 1.50 ಲಕ್ಷ ರೂ. ಮೌಲ್ಯದ ತುರ್ತು ಪರಿಕರ ಗಳನ್ನು 27 ತಾಲೂಕು ಸಮಿತಿಗಳಿಗೆ ನೀಡಲಾಗಿದೆ.
ಮುಂದಿನ ಗುರಿ :
- 10 ನೂತನ ವಿಪತ್ತು ನಿರ್ವಹಣ ಸಮಿತಿ ರಚನೆ
- ಕಲ್ಬುರ್ಗಿ ಪ್ರಾದೇಶಿಕ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಆರಂಭ.
- 10,000 ಸ್ವಯಂಸೇವಕರ ನೋಂದಣಿ
ಪ್ರಗತಿಯ ಪಕ್ಷಿನೋಟ :
- ಕಾರ್ಯಕ್ರಮ ಅನುಷ್ಠಾನವಾದ ತಾಲೂಕು- 50
- ಒಟ್ಟು ಸಂಯೋಜಕರು/ಸ್ವಯಂಸೇವಕರ ಸಂಖ್ಯೆ- 5,055
- ಕ್ಷಿಪ್ರ ಪ್ರತಿಕ್ರಿಯೆ ತಂಡ ರಚನೆ- 06
- ವಿಪತ್ತು ಸೇವೆ- 15,443
- ಸಾಮಾಜಿಕ ಸೇವೆ- 16,341
- ಒಟ್ಟು ಸೇವಾ ಚಟುವಟಿಕೆಗಳು- 31,784
- ಒಟ್ಟು ವಿನಿಯೋಗಿಸಿದ ಮಾನವ ದಿನಗಳು – 1,58,920
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.