![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jun 21, 2022, 10:06 AM IST
ಚಿಕ್ಕಮಗಳೂರು: ಸಿದ್ದರಾಮಯ್ಯ ಮತ್ತು ಸುಳ್ಳು ಒಂದೇ ನಾಣ್ಯದ ಎರಡು ಮುಖಗಳು. ಸತ್ಯ ಮತ್ತು ಸಿದ್ದರಾಮಯ್ಯ ಎಣ್ಣೆ-ಸಿಗೇಕಾಯಿ ಇದ್ದಂತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಪ್ರಧಾನಿ ಮೋದಿಯವರು ಪ್ರವಾಹ ಬಂದಾಗ ಬರಲಿಲ್ಲ, ಆಕ್ಸಿಜನ್ ಕೊಡಲಿಲ್ಲ, ಈಗ ಯೋಗಕ್ಕೆ ಬಂದಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ, ಸುಳ್ಳು ಹೇಳುವುದರಲ್ಲಿ ಅವರಂತಹಾ ನಿಷ್ಟಾವಂತರು ಬೇರೆ ಯಾರಿಲ್ಲ. ಸುಳ್ಳಿಗೆ ಪ್ರಶಸ್ತಿ ನೀಡುವುದಾದರೆ ಸಿದ್ದರಾಮಯ್ಯ ಬಿಟ್ಟು ಬೇರೆ ಯಾರಿಗೂ ಸಿಗಲ್ಲ. ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿದ್ದರೂ ಆಕ್ಸಿಜನ್ ಪ್ಲಾಂಟ್ ಹಾಕಿಲ್ಲ. ಪ್ರತಿ ಆಸ್ಪತ್ರೆಗೂ ಆಕ್ಸಿಜನ್ ಪ್ಲಾಂಟ್ ಹಾಕಿದ್ದು ಪಿಎಂ ಕೇರ್ ನಲ್ಲಿ. ತ್ವರಿತ ನಿರ್ಧಾರ ಕೈಗೊಂಡರು. ಇಲ್ಲವಾದರೆ ಸಾವಿನ ಪ್ರಮಾಣ 10 ಪಟ್ಟು ಹೆಚ್ಚಾಗುತ್ತಿತ್ತು ಎಂದರು.
ಇದನ್ನೂಓದಿ:ಯೋಗಾಸನದಿಂದ ಉತ್ತಮ ಆರೋಗ್ಯ ಕಂಡುಕೊಂಡ ವಾಯುವಿಹಾರಿ ಮಹಿಳೆಯರು
9 ತಿಂಗಳಲ್ಲಿ ಎಲ್ಲರಿಗೂ ಎರಡು ಡೋಸ್ ಕೊಟ್ಟರು. ಸಿದ್ದರಾಮಯ್ಯ ಹಾಕಿಸಿಕೊಂಡಿಲ್ವಾ? ಆ ಡೋಸೇಜ್ ಇರದಿದ್ದಿರೆ, ಸಿದ್ದರಾಮಯ್ಯಗೆ ಸಿಗದಿದ್ದಿರೆ ಏನಾಗುತ್ತಿತ್ತು ಎಂದು ಊಹೆ ಮಾಡಿಕೊಳ್ಳಲಿ ಎಂದು ಸಿ.ಟಿ.ರವಿ ಹೇಳಿದರು.
You seem to have an Ad Blocker on.
To continue reading, please turn it off or whitelist Udayavani.