ತಿಳವಳ್ಳಿ ತಾಲೂಕಿಗಾಗಿ ಸ್ವಯಂಘೋಷಿತ ಬಂದ್-ಮನವಿ
Team Udayavani, Jun 21, 2022, 5:25 PM IST
ಹಾನಗಲ್ಲ: ತಿಳವಳ್ಳಿ ಗ್ರಾಮ ತಾಲೂಕು ಕೇಂದ್ರವನ್ನಾಗಿ ಪರಿವರ್ತಿಸುವಂತೆ ಒತ್ತಾಯಿಸಿ ತಿಳವಳ್ಳಿ ತಾಲೂಕು ರಚನಾ ಸಮಿತಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನತೆ ಸ್ವಯಂಘೋಷಿತ ಬಂದ್ ನಡೆಸಿ ಉಪ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸೋಮವಾರ ಬೆಳಗ್ಗೆ ತಿಳವಳ್ಳಿ ಫಾರೆಸ್ಟ್ ಗೇಟ್ ನಿಂದ ಪ್ರಮುಖ ಬೀದಿಗಳ ಮೂಲಕ ನಾ.ಸು. ಹರ್ಡಿಕರ ವೃತ್ತದವರೆಗೆ ಮೆರವಣಿಗೆ ನಡೆಸಿ ಉಪ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ತಿಳವಳ್ಳಿ ತಾಲೂಕು ರಚನಾ ಸಮಿತಿ ಅಧ್ಯಕ್ಷ ಹನುಮಂತಪ್ಪ ಶಿರಾಳಕೊಪ್ಪ ಮಾತನಾಡಿ, ತಾಲೂಕಿನ ಸುತ್ತಲಿನ 21ಕ್ಕೂ ಹೆಚ್ಚು ಗ್ರಾಪಂ ವ್ಯಾಪ್ತಿಯ ಸುಮಾರು 72 ಗ್ರಾಮಗಳ ನಾಗರಿಕರು ಕಳೆದ 30 ವರ್ಷದಿಂದ ತಿಳವಳ್ಳಿಯನ್ನು ತಾಲೂಕು ಕೇಂದ್ರವಾಗಿ ಪರಿವರ್ತಿಸಲು ವಿವಿಧ ಹೋರಾಟ ನಡೆಸುತ್ತ ಸರ್ಕಾರ ಹಾಗೂ ನಿಯೋಗಗಳಿಗೆ ವರದಿ ಸಲ್ಲಿಸಲಾಗಿದೆ. ತಿಳವಳ್ಳಿ ಭೌಗೋಳಿಕ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹೀಗೆ ತಾಲೂಕಿಗೆ ಬೇಕಾದ ಎಲ್ಲ ಅರ್ಹತೆಗಳೂ ಇವೆ ಎಂದರು.
ಈಗಾಗಲೇ 1994ರಲ್ಲಿ ಹುಂಡೇಕಾರ ಆಯೋಗ ತಿಳವಳ್ಳಿ ತಾಲೂಕು ಕೇಂದ್ರವಾಗಲು ಸೂಕ್ತವಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಹಿರೇಕೆರೂರ, ಬ್ಯಾಡಗಿ, ಹಾನಗಲ್ಲ ತಾಲೂಕಿನ ಮಧ್ಯ ಭಾಗದಲ್ಲಿ ತಿಳವಳ್ಳಿ ಗ್ರಾಮ ಇರುವುದರಿಂದ ಇದು ತಾಲೂಕು ಆದಲ್ಲಿ 21 ಗ್ರಾಪಂ ವ್ಯಾಪ್ತಿಯ 7 ಗ್ರಾಮಗಳ 1,40,000 ಜನರಿಗೆ ಕೇವಲ 3 ರಿಂದ 15 ಕಿ.ಮೀ ಅಂತರದಲ್ಲಿ ತಾಲೂಕಿನ ಎಲ್ಲ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ ಎಂದರು.
ಸಮಿತಿ ಉಪಾಧ್ಯಕ್ಷ ಹನುಮಂತಪ್ಪ ಕಲ್ಲೇರ ಮಾತನಾಡಿ, ಹಿಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಕುಮಾರಸ್ವಾಮಿ, ಸಿದ್ದರಾಮಯ್ಯ ಅವರಿಗೆ ತಿಳವಳ್ಳಿ ಗ್ರಾಮ ತಾಲೂಕು ಎಂದು ಪರಿವರ್ತಿಸಲು ಮನವಿ ಸಲ್ಲಿಸಲಾಗಿದೆ. ಅವರು ತಿಳವಳ್ಳಿ ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು.
2017, ಡಿ.2ರಂದು ಮುಖ್ಯಮಂತ್ರಿಗಳು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದು ಇದೆ. ಈ ಎಲ್ಲ ವಿಷಯ ಪರಿಗಣಿಸಿ ತಿಳವಳ್ಳಿಯನ್ನು ತಾಲೂಕು ಕೇಂದ್ರವಾಗಿ ಪರಿವರ್ತಿಸಬೇಕು ಎಂದು ಒತ್ತಾಯಿಸಿದರು.
ಬಿ.ವಿ. ಬಿರಾದಾರ ಮಾತನಾಡಿ, ತಿಳವಳ್ಳಿ ತಾಲೂಕು ಕೇಂದ್ರವಾಗಿ ಪರಿವರ್ತಿಸಲು ತಿಳವಳ್ಳಿ, ಚಿಕ್ಕಾಂಶಿ ಹೊಸೂರ, ಗೊಂದಿ, ಶಿರಗೋಡ, ಹೊಂಕಣ, ಕಲ್ಲಾಪುರ, ಉಪ್ಪುಣಸಿ, ಶ್ಯಾಡಗುಪ್ಪಿ, ಮಲಗುಂದ, ಕೂಸನೂರ, ಹೇರೂರ, ಹಿರೇಹುಲ್ಲಾಳ, ಕೆಲವರಕೊಪ್ಪ, ಸೋಮಸಾಗರ, ಕಿರವಾಡಿ, ಸೂಡಂಬಿ, ಚಿಕ್ಕಬಾಸೂರ, ಘಾಲಪೂಜಿ, ಕಚವಿ, ಸಾತೇನಹಳ್ಳಿ, ಮಡ್ಲೂರ ಗ್ರಾಪಂಯ 72 ಗ್ರಾಮಗಳ ನಾಗರಿಕರು ನಿಯೋಜಿತ ತಿಳವಳ್ಳಿ ತಾಲೂಕಿಗೆ ಸೇರ್ಪಡೆಯಾಗಲು ಒಪ್ಪಿಗೆ ಹಾಗೂ ಬೆಂಬಲ ಸೂಚಿಸಿದ್ದಾರೆ ಎಂದರು.
ತಿಳವಳ್ಳಿ ಹಾಗೂ ಸುತ್ತಲಿನ ಎಲ್ಲ 7 ಗ್ರಾಮಗಳ ಆಟೋ, ಟೆಂಪೋ ಚಾಲಕರ ಸಂಘ, ವರ್ತಕರ ಸಂಘ, ರೈತ ಪದಾಧಿ ಕಾರಿಗಳು, ಹೋಟೆಲ್ ಮಾಲೀಕರ ಸಂಘ, ಅಂಜುಮನ್-ಎ-ಇಸ್ಲಂ ಕಮಿಟಿ, ಟ್ರ್ಯಾಕ್ಟರ್ ಮಾಲೀಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿ ಯಶಸ್ವಿಗೊಳಿಸಿದರು.
ಈ ವೇಳೆ ಬಸವರಾಜ ಹಾದಿಮನಿ, ಸುನೀಲ ಬಾರ್ಕಿ, ಆರೀಫ್ ಅಹ್ಮದ ಲೋಹಾರ, ರಾಜಣ್ಣ ಶೇಷಗಿರಿ, ಶಿವಲಿಂಗಪ್ಪ ತಲ್ಲೂರ, ಫಯಾಜಅಹ್ಮದ ಲೋಹಾರ, ಗುತ್ತೆಪ್ಪ ಬಾರ್ಕಿ, ಡಾ| ಸುನೀಲ ಹಿರೇಮಠ, ಬಸವರಾಜ ನರೇಂದ್ರ, ಭರ್ಮಣ್ಣ ಕುರುಬರ, ಮಹದೇವಪ್ಪ ತಳವಾರ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ
By Polls: ನಾನು ಉಳಿಯಬೇಕಾದರೆ ಶಿಗ್ಗಾವಿಯಲ್ಲಿ ಪಠಾಣ ಗೆಲ್ಲಬೇಕು: ಸಿಎಂ ಸಿದ್ದರಾಮಯ್ಯ
ಗತ್ತಿನೊಂದಿಗೆ ಅಖಾಡಕ್ಕಿಳಿದ ರಾಕ್‌ಸ್ಟಾರ್, ಜನನಾಯಕ, ಘಟಸರ್ಪ; ದಿಕ್ಕೆಟ್ಟು ಓಡಿದ ಹೋರಿ..
Waqf Issue: ವಕ್ಫ್ ಭೀತಿಯಿಂದ ಕಡಕೋಳದಲ್ಲಿ ಕಲ್ಲು ತೂರಾಟ: 32 ಮಂದಿ ವಶ
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.