ವಿಶ್ವದ ಬೃಹತ್ ಮೀನು ಪತ್ತೆ; ಕಾಂಬೋಡಿಯದಲ್ಲಿ ಸಿಕ್ಕಿತು ಸ್ಟಿಂಗ್ರೇ ತಳಿಯ ಮೀನು
299.82 ಕೆ.ಜಿ. ತೂಕ, 13 ಅಡಿ ಉದ್ದ
Team Udayavani, Jun 22, 2022, 6:55 AM IST
ನವದೆಹಲಿ: ವಿಶ್ವದಲ್ಲೇ ಬೃಹತ್ ಗಾತ್ರದ ಮೀನು ಕಾಂಬೋಡಿಯಾದ ಮೆಕಾಂಗ್ ನದಿಯಲ್ಲಿ ಪತ್ತೆಯಾಗಿದೆ. ಸ್ಟಿಂಗ್ರೇ ತಳಿ ಅಂದರೆ ಶಾರ್ಕ್ ಜಾತಿಗೆ ಸೇರಿದ ಇದನ್ನು ವೈಜ್ಞಾನಿಕ ಭಾಷೆಯಲ್ಲಿ ಉರೊಜಿಮ್ನಸ್ ಪಾಲಿಲೆಪಿಸ್ ಎನ್ನುತ್ತಾರೆ. ಇದರ ತೂಕ 299.825 ಕೆಜಿ, 13 ಅಡಿ ಉದ್ದವಿದೆ. ಇದು 2005ರಲ್ಲಿ ಥಾಯ್ಲೆಂಡ್ನಲ್ಲಿ ಸಿಕ್ಕ ಮೀನಿಗಿಂತ ಹೆಚ್ಚು ತೂಕವಿದೆ.
ಇದನ್ನು ಪತ್ತೆ ಮಾಡಿದ್ದು ಜೆಬ್ ಹೊಗಾನ್ ಎಂಬ ಜೀವಶಾಸ್ತ್ರಜ್ಞ. ಮೀನುಗಾರರು ಇಂತಹದ್ದೊಂದು ಭಾರೀ ಮೀನಿದೆ ಎಂದು ಸುಳಿವು ನೀಡಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಜೆಬ್ ಹೊಗಾನ್ ಮತ್ತವರ ತಂಡ ಮೀನನ್ನು ನೀರಿನಿಂದ ಹೊರತಂದು ಅಳತೆ ಮಾಡಿ ಮತ್ತೆ ನೀರಿಗೆ ಬಿಟ್ಟಿದೆ.
ಇದನ್ನೂ ಓದಿ:ಸರ್ಕಾರಿ ಶಾಲೆಗಳ ಮೂಲಭೂತ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಸಿದ್ದು ಸವದಿ
ಈ ಮೀನಿನ ಬಾಯಿಯ ತುದಿಯಲ್ಲಿ ಬಹಳ ಚೂಪಾದ, ವಿಷಪೂರಿತ ಮುಳ್ಳಿದೆ. ಚುಚ್ಚಿದರೆ 1 ಅಡಿ ದೂರಕ್ಕೆ ಮುಳ್ಳು ಇಳಿಯುತ್ತದೆ. ಆದರೆ ಮನುಷ್ಯನಿಗೆ ಇವು ತೊಂದರೆ ಮಾಡುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.