ಹಳ್ಳಿಹೊಳೆ: ಮನೆ ಕಳ್ಳತನದ ಆರೋಪಿ ಬಂಧನ
Team Udayavani, Jun 21, 2022, 8:44 PM IST
ಸಿದ್ದಾಪುರ: ಹಳ್ಳಿಹೊಳೆ ಗ್ರಾಮದ ಕೆಳಮದುರೆ ಮನೆ ರಾಘವೇಂದ್ರ ಯಡಿಯಾಳ ಅವರ ಮನೆಗೆ ಜೂ.18ರ ರಾತ್ರಿ ಕಳ್ಳತನ ಮಾಡಿದ ಆರೋಪಿಯನ್ನು ಶಂಕರನಾರಾಯಣ ಪೊಲೀಸರು 24 ಗಂಟೆಯ ಒಳಗೆ ಬಂಧಿಸುವ ಮೂಲಕ ಸಾರ್ವಜನಿಕ ವಲಯದಲ್ಲಿ ಪ್ರಾಶಂಸನೆಗೆ ಒಳಗಾಗಿದ್ದಾರೆ.
ಆರೋಪಿ ಬೈಂದೂರು ತಾಲೂಕು ಉಪ್ಪುಂದದ ಮಯ್ಯರಕೇರಿಯ ಶ್ರೀಧರ ಮಡಿವಾಳ(38)ನನ್ನು ಸಿದ್ದಾಪುರದಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಆರೋಪಿ ಬಳಿ ಇದ್ದ 1,30,000 ರೂ.ಬೆಲೆ ಬಾಳುವ 28 ಗ್ರಾಂ ತೂಕದ 2 ಚಿನ್ನದ ಬಳೆ, 1,50,000 ರೂ.ಬೆಲೆ ಬಾಳುವ 30ಗ್ರಾಂ ತೂಕದ ಮಲ್ಲಿಗೆ ಮಿಟ್ಟಿಯ ಸರ, 20ಸಾವಿರ ಬೆಲೆ ಬಾಳುವ 4ಗ್ರಾಂ ತೂಕದ ಚಿನ್ನದ ಉಂಗುರ, ಹಿತ್ತಾಳೆ ಕರಡಿಗೆ ಮತ್ತು ನಗದು ಸಹಿತ ಕಳವಾದ ಎಲ್ಲಾ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿ ಶ್ರೀಧರ ಮಡಿವಾಳ ಕಳ್ಳತನ ಮಾಡಿದ ಬಳಿಕ ಸಿದ್ದಾಪುರಕ್ಕೆ ಬಂದು ಲಾಡ್ಜ್ ಒಂದರಲ್ಲಿ ರೂಂ ಮಾಡಿಕೊಂಡಿದ್ದ.
ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಶ್ರೀಕಾಂತ ಕೆ., ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಗೋಪಿಕೃಷ್ಣ, ಶಂಕರನಾರಾಯಣ ಪಿಎಸ್‌ಐಗಳಾದ ಶ್ರೀಧರ್ ನಾಯ್ಕ, ಸುದರ್ಶನ್, ಸಿಬಂದಿಗಳಾದ ಸೀತರಾಮ ಶೆಟ್ಟಿಗಾರ್, ರಾಘವೇಂದ್ರ, ಗೋಪಾಲಕೃಷ್ಣ, ಮಂಜುನಾಥ್, ರಾಕೇಶ್, ಅನಿಲ್‌ಕುಮಾರ್, ವಿಲ್ಪೆಡ್ ಡಿಸೋಜ್, ವಿಲಾಸ್ ರಾಥೋಡ್, ಆಲಿಂಗರಾಯ ಕಾಟೆ, ಚಂದ್ರಕುಮಾರ್, ಜಯರಾಮ ನಾಯ್ಕ ಅವರು ಕಾರ್ಯಚರಣೆಯಲ್ಲಿ ಭಾಗವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapura: ಅಪ್ರಾಪ್ತ ವಯಸ್ಕಳ ಜತೆ ಸಂಪರ್ಕ; ಮದುವೆಯಾಗುವುದಾಗಿ ಮೋಸ; 20 ವರ್ಷ ಶಿಕ್ಷೆ
ಕರಾವಳಿಯಲ್ಲಿ ಕಾಶ್ಮೀರಿ ಕೇಸರಿ ಬೆಳೆದ ಟೆಕ್ಕಿಗಳು; ಹೊಸ ಪ್ರಯೋಗದಲ್ಲಿ ಮೊದಲ ಯಶಸ್ಸು !
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
ಆನ್‌ಲೈನ್‌ನಲ್ಲಿ ಅಧಿಕ ಲಾಭಾಂಶದ ಆಮಿಷ: ಬ್ಯಾಂಕ್ ಮ್ಯಾನೇಜರ್‌ಗೆ ಲಕ್ಷಾಂತರ ರೂ. ವಂಚನೆ
ಸಿಎಂ ಕ್ಷಮೆಯಾಚಿಸಲಿ ರಾಘವೇಂದ್ರ ಆಗ್ರಹ
MUST WATCH
ಹೊಸ ಸೇರ್ಪಡೆ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.