ರಾಷ್ಟ್ರಪತಿ ಚುನಾವಣೆಗೆ ಕಣ ರೆಡಿ: ದ್ರೌಪದಿ ಮುರ್ಮು Vs ಯಶವಂತ್ ಸಿನ್ಹಾ
Team Udayavani, Jun 22, 2022, 7:15 AM IST
ಜು. 18ರ ರಾಷ್ಟ್ರಪತಿ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಒಡಿಶಾದ ಆದಿವಾಸಿ ಮಹಿಳೆ ದ್ರೌಪದಿ ಮುರ್ಮು ಅವರನ್ನು ಕಣಕ್ಕಿಳಿಸಿದರೆ, ವಿಪಕ್ಷಗಳು ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿವೆ. ಹೀಗಾಗಿ ಈ ಬಾರಿಯೂ ರಾಷ್ಟ್ರಪತಿ ಚುನಾವಣೆ ಕುತೂಹಲ ಮೂಡಿಸಿದೆ.
ಸಮರ್ಥ ಆಡಳಿತಗಾರ್ತಿ ದ್ರೌಪದಿ ಮುರ್ಮು
ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಒಡಿಶಾ ಬಿಜೆಪಿ ನಾಯಕಿ ದ್ರೌಪದಿ ಮುರ್ಮು(64) ಅವರು ಆದಿವಾಸಿ ಜನಾಂಗದ ಜನಪ್ರಿಯ ಮಹಿಳಾ ನಾಯಕಿ ಮಾತ್ರವಲ್ಲ, ಝಾರ್ಖಂಡ್ ರಾಜ್ಯಪಾಲರಾಗಿ ಕಾರ್ಯನಿರ್ವಹಿಸುವ ಮೂಲಕ ತಾವೊಬ್ಬ ಸಮರ್ಥ ಆಡಳಿತಗಾರ್ತಿ ಎಂಬುದನ್ನೂ ಸಾಬೀತುಪಡಿಸಿದ್ದಾರೆ.
ಝಾರ್ಖಂಡ್ ರಾಜ್ಯ ಸ್ಥಾಪನೆ(2000)ದ ಬಳಿಕ ನೇಮಕಗೊಂಡ ಮೊದಲ ಮಹಿಳಾ ರಾಜ್ಯಪಾಲೆಯೂ ಹೌದು.
ರಾಯ್‌ರಂಗಪುರದಲ್ಲಿ ಮೊದಲಿಗೆ ಕೌನ್ಸಿಲರ್ ಆಗಿ ಆಯ್ಕೆಯಾಗುವ ಮೂಲಕ 1997ರಿಂದ ಮುರ್ಮು ಅವರ ರಾಜಕೀಯ ಜೀವನ ಆರಂಭವಾಯಿತು. ಅನಂತರದಲ್ಲಿ ಬಿಜೆಪಿ ಒಡಿಶಾ ಎಸ್‌ಟಿ ಮೋರ್ಚಾದ ಉಪಾಧ್ಯಕ್ಷೆಯಾಗಿ, ಅನಂತರ ಅಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ರಾಯ್‌ರಂಗಪುರದಿಂದ ಶಾಸಕಿಯಾಗಿ ಆಯ್ಕೆಯಾಗಿ 2 ಬಾರಿ ಒಡಿಶಾ ಅಸೆಂಬ್ಲಿಯನ್ನು ಪ್ರತಿನಿಧಿಸಿದ್ದರು. ಅಲ್ಲದೇ, ಬಿಜೆಪಿ ಬೆಂಬಲದೊಂದಿಗೆ ಬಿಜೆಡಿ ಒಡಿಶಾದಲ್ಲಿ ಸರಕಾರ ರಚನೆ ಮಾಡಿದ್ದ ಸಂದರ್ಭದಲ್ಲಿ ಸಚಿವೆಯಾಗಿಯೂ ಮುರ್ಮು ಸೇವೆ ಸಲ್ಲಿಸಿದ್ದರು.
ವರ್ಷದ ಅತ್ಯುತ್ತಮ ಶಾಸಕರಿಗೆ ಒಡಿಶಾ ಸರಕಾರ ನೀಡುವ “ನೀಲಕಂಠ ಪ್ರಶಸ್ತಿ’ಯೂ 2007ರಲ್ಲಿ ದ್ರೌಪದಿ ಅವರ ಪಾಲಾಗಿತ್ತು. ತಮ್ಮ ರಾಜಕೀಯ ಜೀವನದುದ್ದಕ್ಕೂ ಅವರು ಒಡಿಶಾದ ಬುಡಕಟ್ಟು ಸಮುದಾಯದ ಅಭಿವೃದ್ಧಿಗಾಗಿ ಶ್ರಮಪಟ್ಟಿದ್ದಾರೆ.
ಮೂಲತಃ ಛತ್ತೀಸ್‌ಗಢದವರಾದ ದ್ರೌಪದಿ ಅವರು 2015ರ ಮೇಯನಲ್ಲಿ ಝಾರ್ಖಂಡ್‌ನ ರಾಜ್ಯಪಾಲೆಯಾದರು. ಭುವನೇಶ್ವರದ ರಮಾದೇವಿ ಮಹಿಳಾ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪದವಿ ಪಡೆದಿರುವ ಅವರು, ಸುಮಾರು 2 ದಶಕಗಳ ಕಾಲ ರಾಜಕೀಯ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
ರಾಷ್ಟ್ರಪತಿಯಾಗಿ ಆಯ್ಕೆಯಾದರೆ ದೇಶದ ರಾಷ್ಟ್ರಪತಿ ಹುದ್ದೆಗೇರಿದ ಬುಡಕಟ್ಟು ಜನಾಂಗದ ಮೊದಲ ಮಹಿಳೆ ಎಂಬ ಖ್ಯಾತಿಗೆ ಅವರು ಪಾತ್ರರಾಗಲಿದ್ದಾರೆ.
ಸಿನ್ಹಾ ಜನತಾದಳ, ಬಿಜೆಪಿ, ಟಿಎಂಸಿ, ಈಗ ರಾಷ್ಟ್ರಪತಿ ಅಭ್ಯರ್ಥಿ
ಬಿಜೆಪಿ ಮಾಜಿ ನಾಯಕ, ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾಗೆ ಈಗ 84 ವರ್ಷ. ಈಗವರು ಯುಪಿಎನ ಸರ್ವಸಮ್ಮತ ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿಯಾಗಿ ಕಣಕ್ಕಿಳಿದಿ ದ್ದಾರೆ! ಜನತಾದಳದಿಂದ ರಾಜಕೀಯ ಜೀವನ ಆರಂಭಿಸಿದ ಅವರು ಎನ್‌ಡಿಎ, ಕೇಂದ್ರದಲ್ಲಿ ಅಧಿಕಾರಕ್ಕೇರಿದಾಗ ವಿತ್ತ ಸಚಿವರಾಗಿ, ವಿದೇಶಾಂಗ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಅನಂತರ ಬಿಜೆಪಿ ತೊರೆದು, ಪ್ರಸ್ತುತ ಟಿಎಂಸಿಯಲ್ಲಿ ಪಾತ್ರ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಮೂಲತಃ ಸಿನ್ಹಾ ಐಎಎಸ್ ಅಧಿಕಾರಿ. ಬಿಹಾರ ಸರಕಾರದಲ್ಲಿ ವಿವಿಧ ಹುದ್ದೆ ನಿಭಾಯಿಸಿದ್ದರು. ಅನಂತರ ಕೇಂದ್ರದಿಂದ ವಿದೇಶಗಳಲ್ಲೂ ಜವಾ ಬ್ದಾರಿ ಹೊಂದಿದ್ದರು. ಜಯಪ್ರಕಾಶ ನಾರಾಯಣ ಅವರಿಂದ ಪ್ರೇರಿತ ರಾಗಿ ಸರಕಾರಿ ಹುದ್ದೆ ತೊರೆದು ರಾಜಕೀಯ ಜೀವನ ಆರಂಭಿಸಿದರು. 1989ರಲ್ಲಿ ಜನತಾದಳ ಸೇರಿ 90ರಿಂದ 91ರವರೆಗೆ ಕೇಂದ್ರ ವಿತ್ತ ಸಚಿವರಾಗಿದ್ದರು.
ಬಿಜೆಪಿ ಸೇರ್ಪಡೆ: 1992ರಲ್ಲಿ ಬಿಜೆಪಿ ಸೇರಿದ ಸಿನ್ಹಾ 25 ವರ್ಷಗಳ ಕಾಲ ಪಕ್ಷದಲ್ಲಿದ್ದರು. 1998ರಲ್ಲಿ ಝಾರ್ಖಂಡ್‌ನ ಹಜಾರಿಬಾಘ…ದಿಂದ ಸ್ಪರ್ಧಿಸಿ ಗೆದ್ದರು. ವಿತ್ತ ಸಚಿವರೂ ಆದರು. ಸರಕಾರ ಪತನಗೊಂಡು, 1999ರಲ್ಲಿ ಮತ್ತೆ ಲೋಕಸಭಾ ಚುನಾವಣೆದಾಗ ಲೂ ಗೆದ್ದರು. 2002-04ರವರೆಗೆ ವಿದೇಶಾಂಗ ಸಚಿವರಾಗಿದ್ದರು. 2004ರಲ್ಲಿ ರಾಜ್ಯಸಭಾ ಸದಸ್ಯರಾದರು. 2009ರಲ್ಲಿ ಮತ್ತೆ ಲೋಕಸಭೆಗೆ ಆಯ್ಕೆಯಾದರು. ಇದೇ ವೇಳೆ ಬಿಜೆಪಿ ಮೇಲೆ ಮುನಿಸಿಕೊಂಡ ಅವರು 2012ರ ರಾಷ್ಟ್ರಪತಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಣವ್ ಮುಖರ್ಜಿಗೆ ಮತ ಹಾಕಿದರು. 2014ರಲ್ಲಿ ತಮ್ಮ ಲೋಕಸಭಾ ಸ್ಥಾನವನ್ನು ಪುತ್ರ ಜಯಂತ್ ಸಿನ್ಹಾಗೆ ಬಿಟ್ಟುಕೊಟ್ಟರು. 2018ರಲ್ಲಿ ಬಿಜೆಪಿ ತೊರೆದರು.
ಮೋದಿ ಟೀಕಾಕಾರ: ಬಿಜೆಪಿ ತೊರೆದ ಮೇಲೆ ಪಕ್ಷ ಮತ್ತು ನರೇಂದ್ರ ಮೋದಿಯ ಟೀಕಾಕಾರರಾಗಿ ಬದಲಾದರು. ಬಿಜೆಪಿಯ ಸಿಎಎ ಕಾಯ್ದೆ ವಿರೋಧಿಸಿ 3,000 ಕಿ.ಮೀ. ಪಾದಯಾತ್ರೆ ಹಮ್ಮಿಕೊಂಡಿದ್ದರು. 2021ರಲ್ಲಿ ಟಿಎಂಸಿ ಸೇರಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.