ರೈತರ ಕಡೆಗಣನೆ ಸರಿಯಲ್ಲ: ಹರೀಶ್
Team Udayavani, Jun 22, 2022, 6:56 PM IST
ಪಾಂಡವಪುರ: ಕೃಷ್ಣರಾಜ ಸಾಗರ ಅಣೆಕಟ್ಟು (ಕೆಆರ್‌ಎಸ್) ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರೈತರ ಹಿತ ಕಡೆಗಣಿಸಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ವಿಶ್ವೇಶ್ವರಯ್ಯ ನಾಲಾ ಆಧುನೀಕರಣ ಕಾಮಗಾರಿ ಕೈಗೆತ್ತಿಕೊಂಡರೆ ರೈತಸಂಘದಿಂದ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ರೈತಸಂಘದ ತಾಲೂಕು ಅಧ್ಯಕ್ಷ ಚಿಕ್ಕಾಡೆ ಹರೀಶ್ ಎಚ್ಚರಿಸಿದರು.
ಸುಮ್ಮನೆ ಕೂರುವುದಿಲ್ಲ: ಪಟ್ಟಣದ ರೈತ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜೂನ್ ಮತ್ತು ಜುಲೈ ತಿಂಗಳಲ್ಲಿ ಕಬ್ಬು ಬೆಳೆದು ಕಟಾವು ಹಂತ ತಲುಪಿದ್ದು, ಇಂತಹ ಸಂದರ್ಭದಲ್ಲಿ ನಾಲೆಗಳಿಗೆ ನೀರಿನ ಹರಿವು ತಪ್ಪಿಸಿ ಆಧುನೀಕರಣ ಕಾಮಗಾರಿ ಕೈಗೊಂಡರೆ ರೈತರು ನಷ್ಟ ಅನುಭವಿಸುತ್ತಾರೆ. ನಾಲೆಗಳಲ್ಲಿ ನೀರು ಹರಿವು ನಿಲ್ಲಿಸಬೇಕಾದರೆ ರೈತರಿಗೆ ಈ ಬಗ್ಗೆ ನೊಟೀಸ್ ನೀಡಬೇಕು. ಏಕಾಏಕಿ ಈ ರೀತಿ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ. ರಸಗೊಬ್ಬರ ಸೇರಿದಂತೆ ಕೃಷಿ ಯಂತ್ರೋಪಕರಣ ಮತ್ತು ಸಲಕರಣೆಗಳ ಬೆಲೆ ಗಗನಮುಖೀಯಾಗಿ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಈ ಮಧ್ಯೆ ನೀರಿಲ್ಲದೆ ಬೆಳೆ ಒಣಗಿದರೆ ಅದಕ್ಕೆ ಯಾರು ಹೊಣೆ. ರೈತರ ದಿಕ್ಕು ತಪ್ಪಿಸಿ ಕಾಮಗಾರಿ ಪ್ರಾರಂಭಿಸಿದರೆ ರೈತಸಂಘಟನೆ ಸುಮ್ಮನೆ ಕೂರುವುದಿಲ್ಲ ಎಂದು ಕಿಡಿಕಾರಿದರು.
ಭತ್ತ, ರಾಗಿ ಖರೀದಿ ಕೇಂದ್ರ ನಿರಂತರವಾರಿ ತೆರೆಯಿರಿ: ಸರ್ಕಾರಗಳು ರೈತರ ಬದುಕಿನ ಜತೆ ಚೆಲ್ಲಾಟವಾಡಿ ದರೆ ಸರ್ಕಾರ ಉರುಳಿಸುವ ಹೋರಾ ಟಕ್ಕೆ ರೈತರು ಕೈ ಹಾಕಬೇಕಾಗುತ್ತದೆ. ಈ ಭಾಗದಲ್ಲಿ 18 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 1.5 ಲಕ್ಷ ಟನ್ ಭತ್ತ ಬೆಳೆಯಲಾಗಿದೆ. ಸರ್ಕಾರ ನಿರಂತ ವಾಗಿ ಭತ್ತ ಮತ್ತು ರಾಗಿ ಖರೀದಿ ಕೇಂದ್ರ ತೆರೆಯಬೇಕು ಎಂದು ಆಗ್ರಹಿಸಿದರು.
ರೈತರ ಸಮಸ್ಯೆ ಆಲಿಸಿ: ರೈತರು ಸಂಕಷ್ಟದಲ್ಲಿದ್ದರೂ ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ನಾಪತ್ತೆಯಾಗಿದ್ದಾರೆ. ಒಮ್ಮೆಯೂ ರೈತರ ಸಭೆ ಕರೆದು ಚರ್ಚೆ ಮಾಡುವ ಗೋಜಿಗೆ ಹೋಗಿಲ್ಲ. ವಾರದೊಳಗೆ ಸಭೆ ಆಯೋಜಿಸಿ ರೈತರ ಸಮಸ್ಯೆ ಆಲಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ರೈತಸಂಘ ಪ್ರಧಾನ ಕಾರ್ಯದರ್ಶಿ ಕೆನ್ನಾಳು ವಿಜಯ ಕುಮಾರ್, ಉಪಾಧ್ಯಕ್ಷರಾದ ಹಾರೋಹಳ್ಳಿ ಲಕ್ಷ್ಮೇಗೌಡ, ಬೇಬಿ ನಟರಾಜು, ಮುಖಂಡರಾದ ಎಣ್ಣೆಹೊಳೆಕೊಪ್ಪಲು ಮಂಜು, ವೈ.ಜಿ.ರಘು, ಕೆನ್ನಾಳು ರಾಮಚಂದ್ರ, ಕ್ಯಾತನಹಳ್ಳಿ ದಿನೇಶ್‌ಬಾಬು ಉಪಸ್ಥಿತರಿದ್ದರು.
ಕಬ್ಬು ಬೆಳೆಗಾರರಿಗೆ ಆತಂಕ ಬೇಡ : ನಾಲೆ ವ್ಯಾಪ್ತಿಯಲ್ಲಿ 50 ಸಾವಿರ ಹೆಕ್ಟೇರ್‌ನಲ್ಲಿ ಕಬ್ಬು ಬೆಳೆಯಲಾಗಿದೆ. ಕಟ್ಟು ಪದ್ಧತಿಯಡಿ ಇನ್ನೂ 3-4ದಿನಗಳಲ್ಲಿ ನಾಲೆಗೆ ನೀರು ಹರಿ ಸದಿದ್ದರೆ ನಾಲಾ ವ್ಯಾಪ್ತಿಯ ಎಲ್ಲಾ ರೈತರು ಪ್ರತಿಭಟನೆಗೆ ಇಳಿಯಲಿದ್ದಾರೆ. ಕಬ್ಬು ಬೆಳೆದಿರುವ ರೈತರು ಆತಂಕಪಡಬಾರದು. ರೈತಸಂಘ ನಾಲೆ ಆಧುನೀಕರಣಕ್ಕೆ ಅವಕಾಶ ನೀಡುವುದಿಲ್ಲ. ವಿಶ್ವೇಶ್ವರಯ್ಯ ನಾಲೆ ಏರಿ ಮೇಲೆ ಹಿಟಾಚಿ, ಜೆಸಿಬಿ ಸದ್ದು ಮಾಡು ತ್ತಿದ್ದು, ಅಧಿಕಾರಿಗಳು ನಾಲೆ ಆಧುನೀಕರಣಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಅನು ಮಾನವಿದೆ ಎಂದು ರೈತಸಂಘದ ತಾಲೂಕು ಅಧ್ಯಕ್ಷ ಚಿಕ್ಕಾಡೆ ಹರೀಶ್ ಹೇಳಿದರು.ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ವಿಡಿಸಿಸಿ ಅಧ್ಯಕ್ಷರಾದ ಶಾಸಕ ಶಿವಾನಂದ ಪಾಟೀಲ, ವಂಚನೆ ಪ್ರಕರಣ ಬೆಳಕಿಗೆ ಬರುತ್ತಲೇ ಬ್ಯಾಂಕ್‍ನ ಇಬ್ಬರು ಸಿಬ್ಬಂದಿಯನ್ನು ಸಮಾನತು ಮಾಡಲಾಗಿದೆ. ವಂಚನೆ ಪ್ರಕರಣಕ್ಕೆ ಸಂಬಂದಿಸಿದಂತೆ ಪೊಲೀಸ್ ದೂರು ದಾಖಲಿಸಿದ್ದು, ಬ್ಯಾಂಕ್ ಅಧಿಕಾರಿ-ಸಿಬ್ಬಂದಿಗಳ ಶಾಮೀಲು ಇದೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್. ಅಶೋಕ್ ಆಗ್ರಹ
Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.