ನನ್ನೊಳಗಿನ “ನಾನು’ ಹೋದರೆ ಹೋದೇನು


Team Udayavani, Jun 23, 2022, 6:15 AM IST

ನನ್ನೊಳಗಿನ “ನಾನು’ ಹೋದರೆ ಹೋದೇನು

ಅಹಂಕಾರ ಎಂದರೆ ಜೀವದ ಸ್ವಕೃತ ಧರ್ಮ ಎನ್ನಬಹುದು. ಸ್ವಕೃತ ಎಂಬ ಶಬ್ದವನ್ನು “ಸ್ವ’ದ ಅರಿವಿನಿಂದ ಅಂದರೆ ತನ್ನತನದ ಅರಿವಿನಿಂದ ಜೀವವು ಸ್ವೀಕರಿಸಿದ ಕೃತಿಸ್ವರೂಪ ಕರ್ಮ ಎಂಬ ಅರ್ಥದಲ್ಲಿ ಬಳಸಬಹುದು. “ನನ್ನೊಳಗಿರುವ ನಾನು ಹೋದರೆ ಹೋದೇನು’ ಎಂದು ಹೇಳಿದ ಕನಕದಾಸರ ಮಾತಿನಿಂದ ಮನುಷ್ಯನಲ್ಲಿನ ನನ್ನತನದ, ಅಂದರೆ ಅಹಂಭಾವದ ವ್ಯರ್ಥತೆಯು ತಿಳಿಯುತ್ತದೆ.

ಅಹಂಭಾವವು ಮನುಷ್ಯನ ಲೌಕಿಕ ಮತ್ತು ಪಾರಮಾರ್ಥಿಕ ಸುಖದಲ್ಲಿನ ಒಂದು ದೊಡ್ಡ ಅಡಚಣೆಯಾಗಿದೆ. ಅಹಂ ಭಾವದ ಬೀಜವು ಮನುಷ್ಯ ಜನ್ಮದಲ್ಲಿಯೇ ಇರುವುದರಿಂದ ಇದಕ್ಕೆ ಹಿರಿಯ-ಕಿರಿಯ, ಬಡವ-ಬಲ್ಲಿದ, ಅಶಿಕ್ಷಿತ-ಸುಶಿಕ್ಷಿತ ಎಂಬ ಯಾವುದೇ ಭೇದ ಇಲ್ಲ. ಎಲ್ಲರಲ್ಲಿಯೂ ಹೆಚ್ಚು ಅಥವಾ ಕಡಿಮೆ ಪ್ರಮಾಣದಲ್ಲಿ ಅಹಂಕಾರ ಭಾವವು ಇದ್ದೇ ಇರುತ್ತದೆ.
ಅಹಂಭಾವವು ಹೊಲದಲ್ಲಿ ಬೆಳೆಯುವ ಹುಲ್ಲಿನಂತೆ ಇರುತ್ತದೆ. ಎಲ್ಲಿಯವರೆಗೆ ನಾವು ಆ ಹುಲ್ಲನ್ನು ಬೇರುಸಹಿತವಾಗಿ ನಾಶ ಮಾಡುವುದಿಲ್ಲವೋ ಅಲ್ಲಿ ಯವರೆಗೆ ಆ ಹೊಲದಲ್ಲಿ ಉತ್ತಮ ಫ‌ಸಲು ಬರುವುದಿಲ್ಲ. ಆ ಹುಲ್ಲನ್ನು ಮನುಷ್ಯ ಪ್ರತೀ ದಿನವೂ ಸತತವಾಗಿ ನಾಶಮಾಡುತ್ತಲೇ ಇರಬೇಕಾಗುತ್ತದೆ. ಅದು ಸಾಧ್ಯವಾಗದಿದ್ದಲ್ಲಿ ಆ ಹುಲ್ಲು ಇಡೀ ಹೊಲವನ್ನು ಆವರಿಸಿ ನಿಷ#ಲ ವನ್ನಾಗಿಸುತ್ತದೆ. ಅದರಂತೆಯೇ ನಮ್ಮಲ್ಲಿರುವ ಅಹಂಭಾವವು ಸಂಪೂರ್ಣ ನಾಶವಾಗದ ಹೊರತು ನಾವು ಪರಿಪೂರ್ಣ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯವಿಲ್ಲ. ಸಾಧನೆಯ ಹಾದಿಯಲ್ಲಿ ಅಹಂಕಾರ ಎನ್ನುವುದು ಕಲ್ಲುಮುಳ್ಳುಗಳಿದ್ದಂತೆ. ಅಹಂಕಾರದ ಮುಳ್ಳನ್ನು ಹಾದಿಯಿಂದ ದೂರವಾಗಿಸಿ ಗುರಿಯತ್ತ ಹೆಜ್ಜೆ ಹಾಕಿದಲ್ಲಿ ಸಾಧನೆ ಸಾಧ್ಯ.ಒಂದೇ ಮಾತಿನಲ್ಲಿ ಹೇಳುವುದಾದರೆ ಸಾಧನೆಯ ಶಿಖರ ಏರಲು ನಮ್ಮಲ್ಲಿನ ಅಹಂಕಾರದ ದಮನವೇ ಮೊದಲ ಮೆಟ್ಟಿಲು.

ಸಾಧನೆಯ ಉದ್ದೇಶವೇ ಅಹಂ ಭಾವವನ್ನು ನಾಶ ಮಾಡುವುದು ಆಗಿದೆ. ಆದರೂ ಮನುಷ್ಯನಲ್ಲಿ ಅಹಂ ಭಾವವು ಎಷ್ಟು ಬೇರೂರಿರುತ್ತದೆ ಎಂದರೆ ಸಾಧನೆಯ ಪಥದಲ್ಲಿರುವಾಗಲೂ ಅದನ್ನು ಸಂಪೂರ್ಣ ನಾಶಮಾಡಲು ಸಹಜವಾಗಿ ಸಾಧ್ಯ ಆಗುವುದಿಲ್ಲ. ಆದು ದರಿಂದ ಸಾಧನೆಯಿಂದ ಅಹಂಭಾವವು ತಾನಾಗಿಯೇ ಕಡಿಮೆ ಆಗುವುದು ಎಂದು ವಿಚಾರವನ್ನು ಮಾಡದೇ ಅಹಂಭಾವ ವನ್ನು ಕಡಿಮೆ ಮಾಡಿಕೊಳ್ಳಲು ಸತತವಾಗಿ ಪ್ರಯತ್ನವನ್ನು ಮಾಡಬೇಕು.

ಇದನ್ನೂ ಓದಿ : ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ನೆರವು ಯೋಜನೆಗೆ ಅಕ್ಟೋಬರ್‌ನಲ್ಲಿ ಚಾಲನೆ: ಬೊಮ್ಮಾಯಿ

ಹಾಗಾದರೆ ಮನುಷ್ಯ ಅಹಂಕಾರದಿಂದ ಪೂರ್ಣ ಮುಕ್ತನಾಗಲು ಸಾಧ್ಯವೇ ಎಂಬ ಪ್ರಶ್ನೆ ನಮ್ಮನ್ನು ಕಾಡದೇ ಇರದು. ಇದು ಸಹಜ ಕೂಡ. ಅಹಂಕಾರ ಇದ್ದರೆ ತಾನೆ ವ್ಯಕ್ತಿಯೋರ್ವನಲ್ಲಿ ಛಲ ಮೂಡಲು ಸಾಧ್ಯ. ಹಾಗೆಂದು ಅಹಂಕಾರವೇ ಆತನನ್ನು ಆವರಿಸಿಕೊಂಡರೆ ಅದು ಆತ ನನ್ನು ವಿನಾಶದತ್ತ ಕೊಂಡೊಯ್ಯುತ್ತದೆ. ಅಹಂಕಾರ ಎನ್ನುವುದು ಒಂದು ಮಿತಿಯಲ್ಲಿರಬೇಕೇ ಹೊರತು ಅದು ಅತಿರೇಕಕ್ಕೆ ತಲುಪಬಾರದು. ಅಹಂಕಾರ ಎಂದಿಗೂ ದುರಹಂಕಾರವಾಗಬಾರದು. ಯಾವಾಗ ನಮ್ಮಲ್ಲಿ ಅಹಂಕಾರ ಮೊಳಕೆ ಯೊಡೆಯಲಾರಂಭಿಸಿತೋ ಅದನ್ನು ನಮ್ಮ ನಿಯಂತ್ರಣ ದಲ್ಲಿಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಅದು ನಮ್ಮ ಹಿಡಿತವನ್ನು ತಪ್ಪಿ ನಮ್ಮನ್ನೇ ಆಹುತಿ ತೆಗೆದುಕೊಳ್ಳುತ್ತದೆ. ಈ ಕಾರಣಕ್ಕಾಗಿಯೇ ಅಹಂಕಾರದಿಂದ ದೂರವುಳಿಯುವುದೇ ಒಳಿತು ಎಂದು ಸಾಧಕರು ಮತ್ತು ಪ್ರಾಜ್ಞರು ಕಿವಿಮಾತು ಹೇಳಿರುವುದು.

ನಾನು, ನನ್ನದು, ನನಗೆ ಇಂತಹ ಅಭಿಮಾನವನ್ನು ಇಟ್ಟುಕೊಳ್ಳುವುದು ಎಂದರೆ ಅಹಂಕಾರ. ನನ್ನ ದೇಹ, ನನ್ನ ಮನಸ್ಸು, ನನ್ನ ಪ್ರಾಣ, ನನ್ನ ಬುದ್ಧಿ, ನನ್ನ ಸಂಪತ್ತು, ನನ್ನ ಪತ್ನಿ, ಮಕ್ಕಳು, ನನಗೆ ಸುಖ ಸಿಗಬೇಕು ಎಂಬ ವಿಚಾರಗಳು ಅಹಂನಿಂದಲೇ ನಿರ್ಮಾಣ ಆಗುತ್ತವೆ. ಈರುಳ್ಳಿಯ ಸಿಪ್ಪೆಯನ್ನು ಸುಲಿದರೆ ಕೇವಲ ಸಿಪ್ಪೆಯೇ ಸಿಗುತ್ತದೆಯೇ ಹೊರತು, ಯಾವ ಸಾರವೂ ಕೈಗೆ ಸಿಗುವುದಿಲ್ಲ, ಹಾಗೆಯೇ ವಿಚಾರ ಮಾಡಿದಾಗ ನಮ್ಮೊಳಗಿನಿಂದ ನಾನು ಎನ್ನುವ ವಸ್ತುವೇ (ಅಹಂ) ಸಿಗಲಾರದು. ಕೊನೆಗೆ ಏನು ಉಳಿಯುತ್ತದೆಯೋ ಅದೇ ವ್ಯಕ್ತಿಯ ಸಾಧನೆ. ಸಾಧನೆಯ ಗುರಿ ತಲುಪಿದಾಗ ಆ ವ್ಯಕ್ತಿಗೆ ಲಭಿಸುವ ಅನುಭವ, ಆತನ ಸಂಭ್ರಮಕ್ಕೆ ಎಣೆ ಇರಲಾರದು. ನಾವು ಯಾವ ಅಹಂಕಾರವನ್ನು ಮೆಟ್ಟಿನಿಂತು ಈ ಸಾಧನೆ ಮಾಡಿದ್ದೇವೆಯೋ ಅದುವೇ ನಮ್ಮಲ್ಲಿ ಮತ್ತೆ ಅಹಂಕಾರದ ಬೀಜ ಮೊಳಕೆಯೊಡೆಯುವಂತೆ ಮಾಡಿದಲ್ಲಿ ಆ ಸಾಧನೆಯೂ ನಿಷ್ಪ್ರಯೋಜಕವಾಗುತ್ತದೆ.

- ಸಂತೋಷ್‌ ರಾವ್‌ ಪೆರ್ಮುಡ

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ಮಾರ್ಗ ಸುಗಮವಾದರೆ ಗುರಿ ಸಾಧನೆ ಸುಲಭ

ಮಾರ್ಗ ಸುಗಮವಾದರೆ ಗುರಿ ಸಾಧನೆ ಸುಲಭ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.