ರಣಜಿ ಫೈನಲ್‌: ಇನ್ನಿಂಗ್ಸ್‌ ಮುನ್ನಡೆಗೆ ಮಧ್ಯ ಪ್ರದೇಶ ಹೋರಾಟ


Team Udayavani, Jun 24, 2022, 6:19 AM IST

ರಣಜಿ ಫೈನಲ್‌: ಇನ್ನಿಂಗ್ಸ್‌ ಮುನ್ನಡೆಗೆ ಮಧ್ಯ ಪ್ರದೇಶ ಹೋರಾಟ

ಬೆಂಗಳೂರು: ಸರ್ಫರಾಜ್‌ ಖಾನ್‌ ಅವರ ಮತ್ತೂಂದು ಆಪತ್ಕಾಲದ ಶತಕ, ಮುಂಬಯಿಯ ಸವಾಲಿನ ಮೊತ್ತ, ಮಧ್ಯ ಪ್ರದೇಶದ ದಿಟ್ಟ ಚೇಸಿಂಗ್‌ನಿಂದಾಗಿ ರಣಜಿ ಟ್ರೋಫಿ ಫೈನಲ್‌ ಹಣಾಹಣಿ ದ್ವಿತೀಯ ದಿನವೇ ಕೌತುಕವನ್ನು ತೆರೆದಿರಿಸಿದೆ. ಇನ್ನಿಂಗ್ಸ್‌ ಮುನ್ನಡೆಯ ಪೈಪೋಟಿ ತೀವ್ರಗೊಂಡಿದೆ.

5 ವಿಕೆಟಿಗೆ 248 ರನ್‌ ಗಳಿಸಿದ್ದ ಮುಂಬಯಿ ಗುರುವಾರದ ಬ್ಯಾಟಿಂಗ್‌ ಮುಂದುವರಿಸಿ 374ಕ್ಕೆ ಆಲೌಟ್‌ ಆಯಿತು. ಸರ್ಫರಾಜ್‌ ಖಾನ್‌ ಎದುರಾಳಿಯ ದಾಳಿಯನ್ನು ಯಶಸ್ವಿಯಾಗಿ ನಿಭಾಯಿಸಿ 134 ರನ್‌ ಬಾರಿಸಿದರು. ಜವಾಬು ನೀಡ ಲಾರಂಭಿಸಿದ ಮಧ್ಯ ಪ್ರದೇಶ ಒಂದು ವಿಕೆಟಿಗೆ 123 ರನ್‌ ಗಳಿಸಿ ಸುಸ್ಥಿತಿಯಲ್ಲಿದೆ.

ಸರ್ಫರಾಜ್‌ 4ನೇ ಶತಕ :

40 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ಸರ್ಫರಾಜ್‌ ಖಾನ್‌ 134ರ ತನಕ ಬೆಳೆದರು. ಇದು 2021-22ರ ರಣಜಿ ಋತುವಿನಲ್ಲಿ ಸರ್ಫರಾಜ್‌ ಬಾರಿಸಿದ 4ನೇ ಶತಕ. 243 ಎಸೆತ ಎದುರಿಸಿದ ಸರ್ಫರಾಜ್‌ 13 ಬೌಂಡರಿ, 2 ಸಿಕ್ಸರ್‌ ಹೊಡೆದರು. ಈ ಸರಣಿಯಲ್ಲಿ 900 ರನ್‌ ಗಡಿ ದಾಟಿದ ಸಾಧನೆ ಸರ್ಫರಾಜ್‌ ಅವರದಾಯಿತು. ಅವರು ಕೇವಲ 6 ಪಂದ್ಯಗಳಿಂದ 937 ರನ್‌ ರಾಶಿ ಹಾಕಿದ್ದಾರೆ. ದ್ವಿತೀಯ ಸರದಿಯಲ್ಲೂ ಮಿಂಚಿದರೆ ಸಾವಿರ ರನ್‌ ಸಾಧನೆ ಅಸಾಧ್ಯವೇನಲ್ಲ.

ದ್ವಿತೀಯ ದಿನ ಸರ್ಫರಾಜ್‌ ಹೊರತುಪಡಿಸಿ ಉಳಿದವರ್ಯಾರೂ ಮುಂಬಯಿ ಸರದಿಯನ್ನು ಆಧರಿಸಿ ನಿಲ್ಲಲಿಲ್ಲ. ದಿನದ ದ್ವಿತೀಯ ಎಸೆತದಲ್ಲೇ ಶಮ್ಸ್‌ ಮುಲಾನಿ (12) ವಿಕೆಟ್‌ ಬಿತ್ತು. ಆಗಿನ್ನೂ ಮುಂಬಯಿ ಎರಡನೇ ದಿನದ ಖಾತೆ ತೆರೆಯಲಿಲ್ಲ. ಆದರೆ ತನುಷ್‌ ಕೋಟ್ಯಾನ್‌, ಧವಳ್‌ ಕುಲಕರ್ಣಿ ಒಂದೆಡೆ ಕ್ರೀಸ್‌ ಆಕ್ರಮಿಸಿಕೊಂಡು ಸಫ‌ìರಾಜ್‌ಗೆ ಉತ್ತಮ ಬೆಂಬಲ ನೀಡಿದರು. ಕೋಟ್ಯಾನ್‌ 39 ಎಸೆತ ನಿಭಾಯಿಸಿ 40 ರನ್‌ ಒಟ್ಟುಗೂಡಿಸಲು ನೆರವಾದರು. ಕೋಟ್ಯಾನ್‌ ಗಳಿಕೆ 15 ರನ್‌.

ಧವಳ್‌ ಕುಲಕರ್ಣಿ ಗಳಿಸಿದ್ದು ಒಂದೇ ರನ್ನಾದರೂ 36 ಎಸೆತ ಎದುರಿಸಿ ನಿಂತರು. ತುಷಾರ್‌ ದೇಶಪಾಂಡೆ 20 ಎಸೆತಗಳಿಂದ 6 ರನ್‌, ಮೋಹಿತ್‌ ಆವಸ್ಥಿ 11 ಎಸೆತಗಳಿಂದ ಅಜೇಯ 7 ರನ್‌ ಮಾಡಿದರು. ಸರ್ಫರಾಜ್‌ ಅಂತಿಮ ವಿಕೆಟ್‌ ರೂಪದಲ್ಲಿ ಪೆವಿಲಿಯನ್‌ ಸೇರಿಕೊಂಡರು.

ಮಧ್ಯ ಪ್ರದೇಶ ಪರ ಮಧ್ಯಮ ವೇಗಿ ಗೌರವ್‌ ಯಾದವ್‌ 4 ವಿಕೆಟ್‌ ಉರುಳಿಸಿ ಹೆಚ್ಚಿನ ಗೌರವ ಸಂಪಾದಿಸಿದರು. ಮತ್ತೋರ್ವ ಮೀಡಿಯಂ ಪೇಸರ್‌ ಅನುಭವ್‌ ಅಗರ್ವಾಲ್‌ 3, ಆಫ್ಸ್ಪಿನ್ನರ್‌ ಸಾರಾಂಶ್‌ ಜೈನ್‌ 2 ವಿಕೆಟ್‌ ಉರುಳಿಸಿದರು.

ಮಧ್ಯ ಪ್ರದೇಶ ದಿಟ್ಟ ಉತ್ತರ :

ಮಧ್ಯ ಪ್ರದೇಶ ಈಗಾಗಲೇ 41 ಓವರ್‌ಗಳನ್ನು ಯಶಸ್ವಿಯಾಗಿ ನಿಭಾಯಿಸಿದೆ. ಆರಂಭಿಕರಾದ ಯಶ್‌ ದುಬೆ ಮತ್ತು ಹಿಮಾಂಶು ಮಂತ್ರಿ ಮೊದಲ ವಿಕೆಟಿಗೆ 47 ರನ್‌ ಒಟ್ಟುಗೂಡಿಸಿದರು. ಈ ಹಂತದಲ್ಲಿ ತುಷಾರ್‌ ದೇಶಪಾಂಡೆ ಮುಂಬಯಿಗೆ ಮೊದಲ ಹಾಗೂ ದಿನದ ಏಕೈಕ ಯಶಸ್ಸು ತಂದಿತ್ತರು. ಆಕ್ರಮಣಕಾರಿಯಾಗಿ ಆಡುತ್ತಿದ್ದ ಮಂತ್ರಿ 31 ರನ್‌ ಮಾಡಿ ಲೆಗ್‌ ಬಿಫೋರ್‌ ಬಲೆಗೆ ಬಿದ್ದರು (50 ಎಸೆತ, 3 ಬೌಂಡರಿ, 2 ಸಿಕ್ಸರ್‌). ದುಬೆ 44 ಮತ್ತು ಶುಭಂ ಶರ್ಮ 41 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಮುರಿಯದ 2ನೇ ವಿಕೆಟಿಗೆ 76 ರನ್‌ ಪೇರಿಸಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: ಮುಂಬಯಿ-374 (ಸರ್ಫರಾಜ್‌ 134, ಜೈಸ್ವಾಲ್‌ 78, ಶಾ 47, ಜಾಫ‌ರ್‌ 26, ತಮೋರೆ 24, ಗೌರವ್‌ ಯಾದವ್‌ 106ಕ್ಕೆ 4, ಅನುಭವ್‌ ಅಗರ್ವಾಲ್‌ 81ಕ್ಕೆ 3, ಸಾರಾಂಶ್‌ ಜೈನ್‌ 46ಕ್ಕೆ 2). ಮಧ್ಯ ಪ್ರದೇಶ-ಒಂದು ವಿಕೆಟಿಗೆ 123 (ದುಬೆ ಬ್ಯಾಟಿಂಗ್‌ 44, ಶುಭಂ ಶರ್ಮ ಬ್ಯಾಟಿಂಗ್‌ 41, ಮಂತ್ರಿ 31, ದೇಶಪಾಂಡೆ 31ಕ್ಕೆ 1).

 

ರಣಜಿ ಫೈನಲ್‌ಗ‌ೂ ಡಿಆರ್‌ಎಸ್‌ ಇಲ್ಲ !

ಬೆಂಗಳೂರು: ಈ ಬಾರಿ ರಣಜಿ ಕೂಟದಲ್ಲಿ ಬಿಸಿಸಿಐ ಡಿಆರ್‌ಎಸ್‌ ಅಳವಡಿಸಿಲ್ಲ. ಫೈನಲ್‌ ಪಂದ್ಯದಲ್ಲೂ ಡಿಆರ್‌ಎಸ್‌ ಕೊರತೆ ಕಾಡಿದೆ. “ನಾವು ಇಬ್ಬರು ಅತ್ಯುತ್ತಮ ಅಂಪಾಯರ್‌ಗಳಾದ ಕೆ.ಎನ್‌. ಪದ್ಮನಾಭನ್‌, ವೀರೇಂದರ್‌ ಶರ್ಮ ಅವರನ್ನು ನೇಮಿಸಿದ್ದೇವೆ. ಅವರ ಸಾಮರ್ಥ್ಯದ ಮೇಲೆ ಪೂರ್ಣ ಭರವಸೆಯಿದೆ’ ಎಂಬುದು ಬಿಸಿಸಿಐ ಅಧಿಕಾರಿಯೊಬ್ಬರ ಪ್ರತಿಕ್ರಿಯೆ.

ಟಾಪ್ ನ್ಯೂಸ್

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Suside-Boy

Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.