ಎಂ.ಆರ್.ಸೀತಾರಾಂ ಕಾಂಗ್ರೆಸ್ಗೆ ಗುಡ್ ಬೈ? : ಇಂದು ಬೆಂಬಲಿಗರ ಜತೆ ಸಮಾಲೋಚನೆ
Team Udayavani, Jun 24, 2022, 6:48 AM IST
ಬೆಂಗಳೂರು: ಮಾಜಿ ಸಚಿವ ಎಂ.ಆರ್.ಸೀತಾರಾಂ ಅವರು ಕಾಂಗ್ರೆಸ್ಗೆ ಗುಡ್ ಬೈ ಹೇಳುವ ಸಾಧ್ಯತೆಯಿದೆ. ರಾಜಕೀಯವಾಗಿ ಪ್ರಮುಖ ತೀರ್ಮಾನ ಕೈಗೊಳ್ಳುವ ಸಂಬಂಧ ನಾಳೆ (ಶುಕ್ರವಾರ) ಬೆಂಬಲಿಗರು ಹಾಗೂ ಗಣ್ಯರ ಸಮಾಲೋಚನೆ ಸಭೆ ಕರೆದಿದ್ದಾರೆ.
ಬೆಂಬಲಿಗರಿಗೆ ಈ ಕುರಿತು ಪತ್ರ ಬರೆದಿರುವ ಅವರು, ಇತ್ತೀಚೆಗೆ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸುತ್ತಿರುವ ಬಗ್ಗೆ ಹಾಗೂ ತಾವು ಪಕ್ಷ ನಿಷ್ಠನಾಗಿ ಮಾಡಿರುವ ಸೇವೆ, ನಿರ್ವಹಿಸಿರುವ ಹುದ್ದೆಗಳ ಬಗ್ಗೆಯೂ ಸವಿವರವಾಗಿ ಬಹಿರಂಗವಾಗಿಯೇ ತಿಳಿಸಿದ್ದಾರೆ. 1999 ಹಾಗೂ 2004ರಲ್ಲಿ ಮಲ್ಲೇಶ್ವರದಿಂದ ಗೆದ್ದಿದ್ದ ತಾನು 2008ರಲ್ಲಿ ಪಕ್ಷದ ಕೆಲವರ ವಿಶ್ವಾಸದ್ರೋಹ ಹಾಗೂ ಒಳಸಂಚಿನಿಂದ ಸೋತಿದ್ದೆ. 2009ರಲ್ಲಿ ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ಸಜ್ಜಾದರೂ ಟಿಕೆಟ್ ನಿರಾಕರಿಸಲಾಯಿತು. ಅನಂತರ 2012ರಲ್ಲಿ ಪರಿಷತ್ಗೆ ಆಯ್ಕೆಯಾದ 2018ರಲ್ಲಿ ನನ್ನೊಂದಿಗೆ ಆಯ್ಕೆಯಾದವರಿಗೆ ಮತ್ತೂಂದು ಅವಕಾಶ ಕೊಟ್ಟರೂ ನನಗೆ ನಿರಾಕರಿಸಲಾಯಿತು. ಇತ್ತೀಚೆಗೆ ಸಹ ರಾಜ್ಯ ನಾಯಕರು ನನ್ನ ಹೆಸರು ಪರಿಷತ್ಗೆ ಶಿಫಾರಸು ಮಾಡಿದರೂ ರಾತೋ ರಾತ್ರಿ ಪಿತೂರಿ ನಡೆಸಿ ಅವಕಾಶ ನಿರಾಕರಿಸಲಾಯಿತು ಎಂದು ಪತ್ರದಲ್ಲಿ ಹೇಳಿದ್ದಾರೆ.
ಅರಮನೆ ಮೈದಾನದ ವೈಟ್ ಪೆಟಲ್ಸ್ ಗಾರ್ಡೆನಿಯಾ ಆವರಣದಲ್ಲಿ ಬೆಂಬಲಿಗರ ಸಭೆ ಕರೆಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
MUST WATCH
ಹೊಸ ಸೇರ್ಪಡೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.