ವಿದ್ಯಾರ್ಥಿಗಳ ಕೊರತೆ: ದ.ಕ. ಜಿಲ್ಲೆಯ 2 ಪಿಯು ಕಾಲೇಜು ಹೊರ ಜಿಲ್ಲೆಗೆ
Team Udayavani, Jun 24, 2022, 6:44 AM IST
ಸುಳ್ಯ: ಸತತವಾಗಿ ಶೂನ್ಯ ಮತ್ತು ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊಂದಿರುವ ಸರಕಾರಿ ಪದವಿ ಪೂರ್ವ ಕಾಲೇಜುಗಳನ್ನು ಬೇಡಿಕೆ ಇರುವ ಸರಕಾರಿ ಪ್ರೌಢ ಶಾಲೆಗಳಿಗೆ ಹುದ್ದೆ ಸಮೇತ ಸ್ಥಳಾಂತರಿಸಿ ಸರಕಾರಿ ಪ.ಪೂ. ಕಾಲೇಜುಗಳಾಗಿ ಮೇಲ್ದರ್ಜೇಗೇರಿಸಿ ಸರಕಾರ ಆದೇಶ ಮಾಡಿದೆ. ಅದರಂತೆ ಸುಳ್ಯ ತಾಲೂಕಿನ ಹರಿಹರ ಪಳ್ಳತ್ತಡ್ಕ ಪದವಿ ಪೂರ್ವ ಕಾಲೇಜು ಸಹಿತ ಜಿಲ್ಲೆಯ ಎರಡು ಸೇರಿದಂತೆ ರಾಜ್ಯದಲ್ಲಿ ಒಟ್ಟು ಏಳು ಸರಕಾರಿ ಪಿಯು ಕಾಲೇಜುಗಳು ಸ್ಥಳಾಂತರಗೊಳ್ಳಲಿವೆ.
ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಹರಿಹರ ಪಳ್ಳತ್ತಡ್ಕ ಸ.ಪ.ಪೂ. ಕಾಲೇಜು ಕೊಲಾರ ಜಿಲ್ಲೆಯ ಬಂಗಾರು ತಿರುಪತಿಗೆ, ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಸ.ಪ.ಪೂ. ಕಾಲೇಜು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಣೂರು ಪಡಕೆರೆಗೆ ಸ್ಥಳಾಂತರಗೊಳ್ಳಲಿವೆ.
ಮೂಡುಬಿದಿರೆಗೆ ಪಿಯು ಕಾಲೇಜು :
ವಿದ್ಯಾರ್ಥಿಗಳ ದಾಖಲಾತಿ ಕೊರತೆಯಿಂದ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಗಿರಿಯಾಪುರ ಸ.ಪ.ಪೂ. ಕಾಲೇಜು ದ.ಕ. ಜಿಲ್ಲೆಯ ಮೂಡುಬಿದಿರೆಯ ಅಳಿಯೂರು ಸರಕಾರಿ ಪ್ರೌಢ ಶಾಲೆಗೆ ಸ್ಥಳಾಂತರಗೊಂಡು ಪ.ಪೂ. ಕಾಲೇಜಾಗಿ ಮೇಲ್ದರ್ಜೆಗೇರಲಿದೆ. ಉಳಿದಂತೆ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ತಾವರಕೇರಿ ಪ.ಪೂ. ಕಾಲೇಜು ಅದೇ ಜಿಲ್ಲೆಯ ದೇವರಹಳ್ಳಿ ತಾಲೂಕಿಗೆ, ಗದಗ ಜಿಲ್ಲೆ ರೋಣದ ಹುಲ್ಲೂರು ಪ.ಪೂ. ಕಾಲೇಜು ಧಾರವಾಡ ಜಿಲ್ಲೆಯ ಅಳ್ನಾವರ್‌ಗೆ, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಅನಿವಾಳ ಪ.ಪೂ. ಕಾಲೇಜು ಬೆಂಗಳೂರು ದಕ್ಷಿಣ ಗೋವಿಂದರಾಜ ನಗರಕ್ಕೆ, ರಾಮನಗರ ಜಿಲ್ಲೆಯ ಮಾಗಡಿ ಮಂಚಿನಬೆಲೆ ಪ.ಪೂ. ಕಾಲೇಜು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಗೋಕುಳ ಗ್ರಾಮಕ್ಕೆ ಹುದ್ದೆ ಸಮೇತ ಸ್ಥಳಾಂತಗೊಳ್ಳಲಿದೆ ಎಂದು ಸರಕಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
ಉಪನ್ಯಾಸಕರಿಗೆ ಸಮಸ್ಯೆ:
ಸ್ಥಳಾಂತರಗೊಳ್ಳುವ ಕಾಲೇಜು ಗಳಲ್ಲಿರುವ ಉಪನ್ಯಾಸಕರು ಮತ್ತು ಸಿಬಂದಿಯನ್ನು ಕೂಡ ಹುದ್ದೆ ಸಮೇತ ತಿಳಿಸಲಾಗುವ ಕಡೆಗೆ ಸ್ಥಳಾಂತರಿಸುವ ಆದೇಶದಿಂದ ಅಂತಹ ಸ್ಥಳಗಳಲ್ಲಿರುವ ಸಿಬಂದಿ, ಉಪನ್ಯಾಸಕರು ಸಮಸ್ಯೆಗೊಳಗಾಗಿದ್ದಾರೆ. ಹೆಚ್ಚಿನ ಕಾಲೇಜುಗಳು ದೂರದ ಹೊರ ಜಿಲ್ಲೆಗಳಿಗೆ ಸ್ಥಳಾಂತರಗೊಂಡಿರುವುದು ಅವರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.
ಶೂನ್ಯ ದಾಖಲಾತಿ, ದಾಖಲಾತಿ ಕೊರತೆ ರಾಜ್ಯದಲ್ಲಿ ಕೆಲವು ಸ.ಪ.ಪೂ. ಕಾಲೇಜುಗಳನ್ನು ಸ್ಥಳಾಂತರಿಸಿದ ಆದೇಶ ಬಂದಿದ್ದು, ದ.ಕ. ಜಿಲ್ಲೆಯ 2 ಕಾಲೇಜುಗಳು ಸ್ಥಳಾಂತಗೊಳ್ಳಲಿವೆ. ಅಂತಹ ಕಾಲೇಜುಗಳಿಗೆ ಈ ಮೊದಲೇ ಮಕ್ಕಳನ್ನು ದಾಖಲಿಸದಂತೆ ಸೂಚಿಸಲಾಗಿತ್ತು. ಒಂದು ವೇಳೆ ಯಾರಾದರೂ ದಾಖಲಾಗಿದ್ದಲ್ಲಿ ಅವರನ್ನು ಸಮೀಪದ ಕಾಲೇಜುಗಳಿಗೆ ಸೇರ್ಪಡೆಗೊಳಿಸಬೇಕಿದೆ.– ಜಯಣ್ಣ, ಉಪನಿರ್ದೇಶಕರು, ಪ.ಪೂ. ಶಿಕ್ಷಣ ಇಲಾಖೆ ದ.ಕ.
-ದಯಾನಂದ ಕಲ್ನಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
Sulya: ನಿಲ್ಲಿಸಿದ್ದ ಕಾರಿಗೆ ಬಸ್ ಢಿಕ್ಕಿ; ಜಖಂ
Bantwala: ಬಿ.ಸಿ.ರೋಡಿನಲ್ಲಿ ರೈಲ್ವೇಯ ವಿದ್ಯುತ್ ಕೇಬಲ್ ಕಳವು
Sulya: ಆರಂತೋಡು: ಚಿಕನ್ ಸೆಂಟರ್‌ಗೆ ದಾಳಿ; ಮದ್ಯ ಅಕ್ರಮ ದಾಸ್ತಾನು ಪತ್ತೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.