60 ಅಡಿ ರಸ್ತೆ ಅಗಲೀಕರಣಕ್ಕೆ ಕರವೇ ಆಗ್ರಹ
Team Udayavani, Jun 24, 2022, 5:56 PM IST
ಘಿಪಟ್ಟಣದ ನಿಯೋಜಿತ ರಸ್ತೆ ಅಗಲೀಕರಣವನ್ನು 60 ಅಡಿಗೆ ನಿಗದಿ ಮಾಡುವಂತೆ ಆಗ್ರಹಿಸಿ ಕರವೇ ಮುಖಂಡರು ಮಂಗಳವಾರ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಪಟ್ಟಣವು ದಿನದಿಂದ ದಿನಕ್ಕೆ ಬೆಳೆಯುತ್ತಿರುವುದರಿಂದ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಇದರಿಂದ ಸುಗಮ ಸಂಚಾರಕ್ಕೆ ಸಾರ್ವಜನಿಕರು ಹರಸಾಹಸ ಪಡುವಂತಾಗಿದೆ. ಪಾದಚಾರಿಗಳಿಗೆ ಫುಟ್‌ಪಾತ್ ವ್ಯವಸ್ಥೆ ಇಲ್ಲದ ಕಾರಣ ತೊಂದರೆ ಪಡುವಂತಾಗಿದೆ.
ಈಗಾಗಲೇ ಬಸ್ ನಿಲ್ದಾಣ ವೃತ್ತದಿಂದ ಅಂಚೆಕಚೇರಿ ಯವರಿಗೆ ರಸ್ತೆ ಅಗಲೀಕರಣ ಮಾಡಲು ಪುರಸಭೆ ನಿರ್ಧಾರ ಮಾಡಿದೆ, ಪುರಸಭೆ ಆಡಳಿತ ಮಂಡಳಿ ಸಾಮಾನ್ಯ ಸಭೆಯಲ್ಲಿ ನಿರ್ಧಾರದಂತೆ 50 ಅಡಿಗೆ ಅಗಲೀಕರಣ ಮಾಡುವ ಅಳತೆ ಮಾಡಿ ಗುರುತು ಮಾಡಲಾಗಿದೆ. ಆದರೆ ವರ್ತಕರು, ಕಟ್ಟಡ ಮಾಲಿಕರು 45 ಅಡಿವರಿಗೆ ರಸ್ತೆ ಅಗಲೀಕರಣ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. 50 ಅಡಿ ರಸ್ತೆ ಅಗಲೀಕರಣ ಮಾಡಿದರೆ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ 50ರ ಬದಲು 60 ಅಡಿ ರಸ್ತೆ ಅಗಲೀಕರಣ ಮಾಡಬೇಕು ಯಾವುದೇ ಒತ್ತಡಕ್ಕೆ ಮಣಿಯದೇ ಪಟ್ಟಣದ ಸೌಂದರ್ಯಕರಣಕ್ಕೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ 60 ಅಡಿಯವರೆಗೆ ರಸ್ತೆ ಅಗಲೀಕರಣ ಮಾಡಬೇಕು ಎಂದು ಆಗ್ರಹಿಸಿದರು.
ಕರವೇ ಅಧ್ಯಕ್ಷ ಆಂಜನೇಯ ಭಂಡಾರಿ, ಭೀಮೇಶ ನಾಯಕ, ಶ್ರೀನಿವಾಸ, ಮೌನೇಶ ಬುಳ್ಳಾಪುರ, ರವಿ ಯಲಗಲದಿನ್ನಿ, ಆದಪ್ಪ, ಹನುಮಂತ, ಸಿದ್ದು ನಾಲತ್ವಾಡ, ವೆಂಕಟೇಶ ಉಪ್ಪಾರ, ರವಿಕುಮಾರ ಜೋಗಿ, ಸಂಗಮೇಶ,ನಾಗರಾಜ ಕಾಳಾಪುರ ಹಾಗೂ ಇನ್ನಿತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.