ಮೂಲ ಸೌಕರ್ಯಕ್ಕಾಗಿ 4.5 ಕೋಟಿ ರೂ. ವೆಚ್ಚ; ಎಚ್‌.ಡಿ.ರೇವಣ್ಣ

ಲೋಪದೋಷ ಕಂಡು ಹಿಡಿಯಲು ದುರ್ಬಿನುಹಿಡಿದು ಹುಡುಕಬೇಕಾಗಿದೆ.

Team Udayavani, Jun 24, 2022, 5:57 PM IST

ಮೂಲ ಸೌಕರ್ಯಕ್ಕಾಗಿ 4.5 ಕೋಟಿ ರೂ. ವೆಚ್ಚ; ಎಚ್‌.ಡಿ.ರೇವಣ್ಣ

ಹೊಳೆನರಸೀಪುರ: ಪಟ್ಟಣದ ಪುರಸಭೆಯ ಎರಡನೇ ವಾರ್ಡಿನಿಂದ ಹತ್ತೂಂಬತ್ತನೆ ವಾರ್ಡಿನವರೆಗೆ ಇರುವ ಚರಂಡಿ ಮತ್ತು ರಸ್ತೆ ನಿರ್ಮಾಣಕ್ಕೆ 4.5 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಎಚ್‌.ಡಿ.ರೇವಣ್ಣ ನುಡಿದರು.

ಪಟ್ಟಣದ ಪುರಸಭೆ ಮುಂಭಾಗದಲ್ಲಿಏರ್ಪಡಿಸಿದ್ದ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಶಂಕು ಸ್ಥಾಪನೆ ನೇರವೇರಿಸಿ ಮಾತನಾಡಿದ ಅವರು, ಈಗಾಗಲೇ ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರಿಗಾಗಿ 65 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿ ಭರದಿಂದ ಸಾಗುತ್ತಿದೆ. ಪಟ್ಟಣದಲ್ಲಿ ಕಳೆದ ಮೂವತ್ತ ವರ್ಷಗಳ ಹಿಂದೆ ಒಳಚರಂಡಿ ನಿರ್ಮಿಸಿತ್ತಾದರೂ ಸಹ ಬಹಳ ವರ್ಷಗಳಾಗಿರುವದರಿಂದ ಬಹಳಷ್ಟು ಕಡೆ ದುರಸ್ತಿಗೊಳಿಸಬೇಕಿದೆ.

ಸಾರ್ವಜನಿಕರು ಮತ್ತು ನಿವಾಸಿಗಳಿಗೆ ಭಾರೀ ತೊಂದರೆ ಉಂಟಾಗುತ್ತಿದ್ದು, ಸಮಸ್ಯೆ ಪರಿಹರಿಸುವ ಸಲುವಾಗಿ 95 ಕೋಟಿ ರೂ.ವೆಚ್ಚದಲ್ಲಿ ಹೊಸದಾಗಿ ಒಳಚರಂಡಿ ಕಾಮಗಾರಿ ನಡೆಸಿ, ಮುಂದಿನ ಐವತ್ತು ವರ್ಷಗಳಿಗೆ ಬೇಕಾಗುವ ಸವಲತ್ತು ನೀಡಲು ಉದ್ದೇಶಿಸಲಾಗಿದೆ. ಈ ಕಾಮಗಾರಿ ಈಗಾಗಲೆ ಆರಂಭವಾಗಿದೆ ಅದು ಸದ್ಯದಲ್ಲೆ ಪೂರ್ಣಗೊಳಿಸಿ ಒಳಚರಂಡಿ ಸಮಸ್ಯಗೆ ಶಾಶ್ವತ ಪರಿಹಾರ ನೀಡಲು ಉದ್ದೇಶಿಸಲಾಗಿದೆ ಎಂದರು. ಪ್ರಸ್ತುತ ಹೊಳೆ ಬೀದಿಯನ್ನು ಕಾಂಕ್ರಿಟೀಕರಣ ಮಾಡಲು 1.25 ಕೋಟಿ ವೆಚ್ಚ ಮಾಡಲಾಗುತ್ತಿದೆ. ಈ ಕಾಮಗಾರಿಗೆ ಇಂದು ಶಂಕುಸ್ಥಾಪನೆ ನೇರವೇರಿಸಲಾಗಿದೆ ಎಂದರು.

ಗುಣಮಟ್ಟದಲ್ಲೂ ರಾಜಿಯಿಲ್ಲ: ಕಾರ್ಯಕ್ರಮದಲ್ಲಿ ಹಾಜರಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಹಾಗೂ ಜೆಡಿಎಸ್‌ ನಾಯಕಿ ಭವಾನಿರೇವಣ್ಣ ಮಾತನಾಡಿ, ರೇವಣ್ಣ ಸಾಹೇಬರು ಮಾಡಿರುವ ಅಭಿವೃದ್ಧಿ ಕಾಮಗಾರಿಗಳು ಕೇವಲ ಜೆಡಿಎಸ್‌ನವರ ಅನುಭವಿಸುತ್ತಿಲ್ಲ, ತಾಲೂಕಿನ ಎಲ್ಲ ಜನರು ಅನುಭವಿಸುತ್ತಿದ್ದಾರೆ ಎಂಬು  ದನ್ನು ನಮ್ಮನ್ನು ಟೀಕಿಸುವವರು ಅರಿಯಬೇಕೆಂದರು.

ನಮ್ಮ ಕುಟುಂಬ ಜಿಲ್ಲೆಯ ಅಭಿವೃದ್ಧಿ ಮಾಡಿರುವ ಅಭಿವೃದ್ಧಿ ಒಂದು ಪಕ್ಷದ ಜನರಿಗಾಗಿ ಆಲ್ಲ. ನಾವೀಗ ಮಾಡಿರುವ ಅಭಿವೃದ್ಧಿ ಗಳಲ್ಲಿ ಯಾವೊಂದು ನ್ಯೂನತೆಗಳು ದೊರಕಲು ಸಾಧ್ಯವೇ ಇಲ್ಲ. ಲೋಪದೋಷ ಕಂಡು ಹಿಡಿಯಲು ದುರ್ಬಿನುಹಿಡಿದು ಹುಡುಕಬೇಕಾಗಿದೆ. ಆದರೂ ನಮ್ಮನ್ನು ಟೀಕಿಸುವವರಿದ್ದಾರೆ ಎಂದರು.

ನಾಮಫಲಕ ಹಾಕಿಸಿಕೊಳ್ಳುವ ಚಟ ಇಲ್ಲ: ಜೆಡಿಎಸ್‌ ಪಕ್ಷ ಜಿಲ್ಲೆ ಮತ್ತು ತಾಲೂಕಿಗೆ ಮಾಡಿರುವ ಕಾಮಗಾರಿ ಬಗ್ಗೆ ಸಾಲುಸಾಲಾಗಿ ತಿಳಿಸಿ ನಾವು ಮಾಡಿರುವ ಅಭಿವೃದ್ಧಿಗಳಿಗೆ ನಮ್ಮಗಳ ನಾಮಫ‌ಲಕ ಹಾಕಿದ್ದೇ ಆದಲ್ಲಿ ಜಿಲ್ಲೆಯಲ್ಲಿ ಬೇರೆಯವರು ನಾಮಫಲಕ ಹಾಕಲು ಸ್ಥಳವೇ ದೊರೆಯಲ್ಲ. ನಾಮಫಲಕ ಹಾಕಿಸಿಕೊಳ್ಳುವ ಚಟ ನಮ್ಮ ಕುಟುಂಬಕ್ಕೆ ಇಲ್ಲ ಎಂದು ತಿಳಿಸಿ, ನಮ್ಮನ್ನು ಟೀಕಿಸುವವರು ಆರ್ಥ ಮಾಡಿಕೊಳ್ಳಬೇಕು. ಜೊತೆಗೆ ನಾವು ಮಾಡಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಮುಂದಿನ ದಿನಗಳಲ್ಲಿ ಸುಣ್ಣಬಣ್ಣ ಮಾಡಿಸಲು ಸಹ ಕಷ್ಟವಾಗಲಿದೆ ಎಂದು ಭವಾನಿ ರೇವಣ್ಣ ಪರೋಕ್ಷವಾಗಿ ಸರ್ಕಾರಕ್ಕೆ ಟಾಂಗ್‌ ಕೊಟ್ಟರು.

ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಸುಧಾನಳಿನಿ ಅವರು ಮಾತನಾಡಿ, ಪುರಸಭೆಯಲ್ಲಿ ಅನೇಕ ಕಾಮಗಾರಿ ಮಾಡಿಸಬೇಕಿದ್ದು ಅದಕ್ಕೆ ತಾವು ಸರ್ಕಾರದಿಂದ ಅನುಧಾನ ತಂದುಕೊಡಬೇಕೆಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷೆ ತ್ರೀಲೋಚನಾ, ಮುಖ್ಯಾಧಿಕಾರಿ ಶಾಂತಲಾ ಹಾಗೂ ಪುರಸಭೆ ಸದಸ್ಯರುಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.

ಆರು ಡಯಾಲಿಸಿಸ್‌ ಯಂತ್ರ ಅಳವಡಿಕೆ: ಭವಾನಿ ರೇವಣ್ಣ
ನಾವುಗಳು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಳವಡಿ ಸಿರುವ ಯಂತ್ರಗಳು ಜಿಲ್ಲೆಯಲ್ಲಿ ಯಾವ ಆಸ್ಪತ್ರೆಯಲ್ಲೂ ಇಲ್ಲ ಎಂದು ಉದಾಹರಣೆ ನೀಡಿ, ಸಾರ್ವಜನಿಕ ಆಸ್ಪತ್ರೆಯಲ್ಲಿ ಆಳವಡಿಸಿರುವ ಸಿಟಿ ಸ್ಕ್ಯಾನಿಂಗ್‌ ಜಿಲ್ಲೆಯ ಯಾವೊಂದು ಸರ್ಕಾರಿ ಆಸ್ಪತ್ರೆಯಲ್ಲೂ ಇಲ್ಲ. ಇಂತಹ ಸವಲತ್ತು ತಂದಿರುವುದು ಕೇವಲ ಜೆಡಿಎಸ್‌ನವರಿಗಾಗಿ ಆಲ್ಲ, ಇನ್ನು ಡಯಾಲಿಸಿಸ್‌ ಗಾಗಿ ಈಗಾಗಲೇ ಅರು ಯಂತ್ರಗಳನ್ನು ಆಳವಡಿಸಿದ್ದು ನಿತ್ಯ ಹತ್ತಾರು ಮಂದಿ ಡಯಾಲಿಸಿಸ್‌ ಒಳಗಾಗಿ ತಮ್ಮ ಅರೋಗ್ಯ ಕಾಪಾಡಿಕೊಳ್ಳುತ್ತಿದ್ದಾರೆ ಎಂದು ಜಿಪಂ ಮಾಜಿ ಸದಸ್ಯೆ ಭವಾನಿ ರೇವಣ್ಣ ಹೇಳಿದರು.

ಟಾಪ್ ನ್ಯೂಸ್

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Congress; Dinner meeting does not need political significance: Satish Jarkiholi

Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್‌ ಜಾರಕಿಹೊಳಿ

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್‌ ರೇವಣ್ಣ

ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್‌ ರೇವಣ್ಣ

9-

ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ದಿಢೀರ್‌ ಕಾಣಿಸಿಕೊಂಡ ಬೆಂಕಿ; ತಪ್ಪಿದ ಭಾರಿ ಅನಾಹುತ

Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ

Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ

Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ

Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ

HD-Kumaraswmy

Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್‌.ಡಿ.ಕುಮಾರಸ್ವಾಮಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

Kiccha Sudeep supports Sanju Weds Geetha 2 movie

Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್‌‌

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.