ಬಂಟರು ಸಹೃದಯಿ ದಾನಿಗಳಾಗಲಿ: ಎಸ್.ಎಂ. ಶೆಟ್ಟಿ
Team Udayavani, Jun 25, 2022, 11:38 AM IST
ಮುಂಬಯಿ: ಬಂಟರು ಶೈಕ್ಷಣಿಕ ಕ್ಷೇತ್ರಕ್ಕೆ ಉದಾರವಾಗಿ ದೇಣಿಗೆ ನೀಡಬೇಕು. ತಮ್ಮೆಲ್ಲರ ಯಥೇತ್ಛ ದಾನದಿಂದ ಮಕ್ಕಳು ಸುಶಿಕ್ಷಿತ ರಾಗಿ ಬಾಳು ಬೆಳಗಿಸಿದಾಗಲೇ ಭವ್ಯ ರಾಷ್ಟ್ರ ನಿರ್ಮಾಣ ವಾಗಬಲ್ಲದು. ಗಳಿಕೆಯ ಒಂದಿಷ್ಟು ಪಾಲನ್ನು ದಾನ ಮಾಡದಿದ್ದರೆ ಪ್ರಗತಿ ಅಸಾಧ್ಯ. ದಾನದಿಂದ ಮಾತ್ರ ಸುಲಭವಾಗಿ ಸಂಸ್ಥೆಗಳು ಪ್ರಗತಿ ಸಾಧಿಸಬಲ್ಲವು. ಆದ್ದರಿಂದ ಬಂಟರು ಇನ್ನೂ ಸಹೃದಯವಂತ ದಾನಿಗಳಾಗಬೇಕು. ನಮ್ಮಲ್ಲಿ ಇನ್ನೂ ಹಲವಾರು ಶಿಕ್ಷಣ ಸಂಸ್ಥೆಗಳು ಸ್ಥಾಪಿಸಿ ಶೀಘ್ರದಲ್ಲೇ ಬಂಟ್ಸ್ ವಿಶ್ವವಿದ್ಯಾನಿಲಯವನ್ನಾಗಿಸುವ (ಬಂಟ್ಸ್ ಡೀಮ್ಡ್ ಯುನಿವರ್ಸಿಟಿ) ಕನಸಿದೆ. ಇದರಿಂದ ಭವಿಷ್ಯದಲ್ಲಿ ಭವ್ಯ ಶಿಕ್ಷಣಾಲಯಗಳು ರೂಪುಗೊಳ್ಳುತ್ತವೆ. ಪೊವಾಯಿಯ ಶಿಕ್ಷಣಿಕ ಸಂಸ್ಥೆಯನ್ನೂ ಬಂಟ್ಸ್ ವಿವಿಯನ್ನಾಗಿ ಅಭಿವೃದ್ಧಿ ಪಡಿಸಬೇಕು ಎಂದು ಎಸ್.ಎಂ. ಶೆಟ್ಟಿ ಶೈಕ್ಷಣಿಕ ಸಂಸ್ಥೆಯ ಹಾಗೂ ಪೊವಾಯಿ ಎಜುಕೇಶನ್ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಎಸ್.ಎಂ. ಶೆಟ್ಟಿ ಹೇಳಿದರು.
ಪೊವಾಯಿ ಎಸ್.ಎಂ. ಶೆಟ್ಟಿ ಹೈಸ್ಕೂಲ್‌ನ ಆರ್.ಎನ್. ಶೆಟ್ಟಿ ಒಳಾಂಗಣ ಸಭಾಗೃಹದಲ್ಲಿ ಶುಕ್ರವಾರ ಪೂರ್ವಾಹ್ನ ಬಂಟ್ಸ್ ಸಂಘ ಮುಂಬಯಿ ಸಂಚಾಲಿತ ಎಸ್.ಎಂ. ಶೆಟ್ಟಿ ಶೈಕ್ಷಣಿಕ ಸಂಸ್ಥೆಯ ರಜತೋತ್ಸವ ಸಂಭ್ರಮವನ್ನು ಅವರು ದೀಪ ಬೆಳಗಿಸಿ ಉದ್ಘಾಟಿಸಿ, ಬಂಟ್ಸ್ ಬೊರಿವಲಿ ಕ್ಯಾಂಪಸ್‌ಗೂ ದಾನ ನೀಡಿ ಪ್ರೋತ್ಸಾಹಿಸಿ. ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಉತ್ತಮ ಮತ್ತು ಒಳ್ಳೆಯದು. ಇದು ಬಂಟರಿಂದ ಸಾಧ್ಯ. ಶಿಕ್ಷಣಕ್ಕೆ ಹೆಚ್ಚಿನ ಹಣ ವಿನಿಯೋಗಿಸಿ ಭವ್ಯ ರಾಷ್ಟ್ರ ನಿರ್ಮಾಣಕ್ಕೂ ಬಂಟ್ಸ್ ಸಂಘದ ಕೊಡುಗೆ ಅನುಪಮವಾಗಲಿ ಎಂದು ಸಲಹೆ ನೀಡಿದರು.
ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ ಅವರ ಅಧ್ಯಕ್ಷತೆ ಹಾಗೂ ಎಸ್.ಎಂ. ಶೆಟ್ಟಿ ಸಂಸ್ಥೆಯ ಕಾರ್ಯಾಧ್ಯಕ್ಷ ಬಿ.ಆರ್. ಶೆಟ್ಟಿ ನೇತೃತ್ವದಲ್ಲಿ ನೆರವೇರಿದ ಭವ್ಯ ಸಮಾರಂಭದಲ್ಲಿ ಪ್ರಧಾನ ಅಭ್ಯಾಗತರಾಗಿ ಬಂಟ್ಸ್ ಸಂಘ ಮುಂಬಯಿ ಮಾಜಿ ಅಧ್ಯಕ್ಷ ಹಾಗೂ ಪೊವಾಯಿ ಎಜುಕೇಶನ್ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಮನಮೋಹನ್ ಆರ್. ಶೆಟ್ಟಿ ಉಪಸ್ಥಿತರಿದ್ದರು.
ಎಸ್.ಎಂ. ಶೆಟ್ಟಿ ಸಂಸ್ಥೆಯ ಉಪ ಕಾರ್ಯಾಧ್ಯಕ್ಷರಾದ ರತ್ನಾಕರ ಶೆಟ್ಟಿ ಮುಂಡ್ಕೂರು, ವಸಂತ್ ಎನ್. ಶೆಟ್ಟಿ ಪಲಿಮಾರು, ಕಾರ್ಯದರ್ಶಿ ಸಿಎಸ್ ಉತ್ತಮ್ ಶೆಟ್ಟಿ, ಕೋಶಾಧಿಕಾರಿ ಸಿಎ ಜಗದೀಶ್ ಬಿ. ಶೆಟ್ಟಿ, ಸಂಚಾಲಕ ಸಿಎ ಹರೀಶ್ ಶೆಟ್ಟಿ, ಎಸ್.ಎಂ. ಶೆಟ್ಟಿ ಕಾಲೇಜು ಪ್ರಾಂಶುಪಾಲ ಡಾ| ಶ್ರೀಧರ ಶೆಟ್ಟಿ, ಸ್ಟೇಟ್ ಬೋರ್ಡ್ ಸ್ಕೂಲ್ ಪ್ರಾಂಶುಪಾಲೆ ಸೀಮಾ ಸಬ್‌ಲೋಕ್, ಇಂಟರ್‌ನ್ಯಾಶನಲ್ ಸ್ಕೂಲ್ ಪ್ರಾಂಶುಪಾಲೆ ಮಿಲ್ಫ್ರೇಡ್ ಲೋಬೋ, ಪ್ರಧಾನ ಪ್ರಬಂಧಕ ಡಾ| ಸಂದೀಪ್ ಸಿಂಗ್ ಉಪಸ್ಥಿತರಿದ್ದರು.
ಮಹನೀಯರಿಗೆ ಗೌರವ :
ಕಾರ್ಯಕ್ರಮದಲ್ಲಿ ಬಂಟ್ಸ್ ಸಂಘ ಮುಂಬ ಉಪಾಧ್ಯಕ್ಷ ಉಳೂ¤ರು ಮೋಹನ್‌ದಾಸ್ ಶೆಟ್ಟಿ, ಜತೆ ಕಾರ್ಯದರ್ಶಿ ದಿವಾಕರ್ ಶೆಟ್ಟಿ ಇಂದ್ರಾಳಿ, ಜತೆ ಕೋಶಾಧಿಕಾರಿ ಮುಂಡಪ್ಪ ಎಸ್. ಪಯ್ಯಡೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಯುವ ವಿಭಾಗ ಕಾರ್ಯಾಧ್ಯಕ್ಷ ಸಾಗರ್ ದಿವಾಕರ ಶೆಟ್ಟಿ, ಎಸ್.ಎಂ. ಶೆಟ್ಟಿ ಸಂಸ್ಥೆಯ ಸದಸ್ಯರಾದ ಮಹೇಶ್ ಎಸ್. ಶೆಟ್ಟಿ, ಡಾ| ಮನೋಹರ್ ಎಸ್. ಹೆಗ್ಡೆ, ಪ್ರವೀಣ್ ಬಿ. ಶೆಟ್ಟಿ, ಹರೀಶ್ ವಾಸು ಶೆಟ್ಟಿ, ರಾಜೇಂದ್ರ ಎಸ್. ಶೆಟ್ಟಿ, ಶಾಂತಾ ಜಿ. ಶೆಟ್ಟಿ, ಅಪ್ಪಣ್ಣ ಎಂ. ಶೆಟ್ಟಿ, ರವೀಂದ್ರನಾಥ್ ಆರ್. ಶೆಟ್ಟಿ, ನಿಶಿತ್ ಶೆಟ್ಟಿ, ಪ್ರಾಯೋಜಕರ ಪ್ರತಿನಿಧಿ ವೈಶಾಲಿ ಶೆಟ್ಟಿ ಒಝ, ವೃತ್ತಿ ನಿರತ ಸಲಹೆಗಾರರಾದ ಬಿ. ವಿವೇಕ್ ಶೆಟ್ಟಿ, ಐಕಳ ಹರೀಶ್ ಶೆಟ್ಟಿ, ಸಿಎ ಶಂಕರ್ ಬಿ. ಶೆಟ್ಟಿ, ನ್ಯಾಯವಾದಿ ಬಿ.ಬಿ. ಶೆಟ್ಟಿ, ಬಂಟ್ಸ್ ಸಂಘದ ಮಾಜಿ ಅಧ್ಯಕ್ಷರಾದ ಆರ್.ಸಿ. ಶೆಟ್ಟಿ, ಬಿ. ವಿವೇಕ್ ಶೆಟ್ಟಿ, ಸುಧಾಕರ ಎಸ್. ಹೆಗ್ಡೆ, ಪದ್ಮನಾಭ ಎಸ್. ಪಯ್ಯಡೆ, ಡಾ| ಪಿ.ವಿ. ಶೆಟ್ಟಿ, ವಿಶ್ವಸ್ತ ಸದಸ್ಯರಾದ ಡಾ| ವಿರಾರ್ ಶಂಕರ್ ಬಿ. ಶೆಟ್ಟಿ, ಕೆ.ಎಂ. ಶೆಟ್ಟಿ, ಬೊರಿವಲಿ ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಡಾ| ಪಿ.ವಿ. ಶೆಟ್ಟಿ, ಉನ್ನತ ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಸಿಎ ಐ.ಆರ್. ಶೆಟ್ಟಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ, ಮುಲುಂಡ್ ಬಂಟ್ಸ್ ಅಧ್ಯಕ್ಷ ಮುರಳೀ ಕೆ. ಶೆಟ್ಟಿ, ಥಾಣೆ ಬಂಟ್ಸ್ ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ, ಜವಾಬ್ ಅಧ್ಯಕ್ಷ ರಮೇಶ್ ಎನ್. ಶೆಟ್ಟಿ, ರವಿ ಎಸ್. ಶೆಟ್ಟಿ (ಸಾಯಿ ಪ್ಯಾಲೇಸ್) ಸಹಿತ ಅನೇಕ ಮಹನೀಯರನ್ನು ಸ್ಮರಣಿಕೆಗಳನ್ನಿತ್ತು ಗೌರವಿಸಲಾಯಿತು.
ಬಂಟ್ಸ್ ಸಂಘದ ಉಪ ಸಮಿತಿಗಳ ಮುಖ್ಯಸ್ಥರು, ಎಸ್.ಎಂ. ಶೆಟ್ಟಿ ಸಂಸ್ಥೆಯ ಪದಾಧಿಕಾರಿಗಳು, ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರು, ಸಮನ್ವಯಕರು, ಶಿಕ್ಷಣ ಸಂಸ್ಥೆಯ ವಿವಿಧ ವಿಭಾಗಗಳ ಬೋಧಕರು, ಬೋಧಕೇತರ ಸಿಬಂದಿ ಸಹಿತ ಅನೇಕ ಗಣ್ಯರು ಭಾಗವಹಿಸಿದ್ದರು.
ಎಸ್.ಎಂ. ಶೆಟ್ಟಿ, ಮನಮೋಹನ್ ಶೆಟ್ಟಿ ಮತ್ತು ಚಂದ್ರಹಾಸ ಕೆ. ಶೆಟ್ಟಿ ಅವರು ಸರಸ್ವತಿ ಮಾತೆಗೆ ಆರತಿ ಬೆಳಗಿಸಿ, ಶ್ರೀಫಲ ಒಡೆದು ಸಾಂಕೇತಿಕವಾಗಿ ಸಮಾರಂಭವನ್ನು ಉದ್ಘಾಟಿಸಿದರು. ಶಿಕ್ಷಕರು ಪ್ರಾರ್ಥನೆಗೈದರು.
ಹಳೆ ವಿದ್ಯಾರ್ಥಿಗಳ ಪರವಾಗಿ ಡಾ| ಕೃಪಾ ಶಾ ಅಭಿಪ್ರಾಯ ವ್ಯಕ್ತಪಡಿಸಿ ಶುಭ ಕೋರಿದರು. ಪ್ರಾಂಶುಪಾಲೆ ಸೀಮಾ ಸಬ್‌ಲೋಕ್ ತಮ್ಮ ಶಿಕ್ಷಣ ಮಂಡಳಿಯ ಬಗ್ಗೆ ವೀಡಿಯೋ ಚಿತ್ರಣ ಮೂಲಕ ಮಾಹಿತಿಯನ್ನಿತ್ತರು. ಶಾಲೆಯ ಪ್ರತಿಭಾನ್ವಿತೆ, ಕ್ರೀಡಾ ಚಾಂಪಿಯನ್ ಅಪೇಕ್ಷಾ ಫೆರ್ನಾಂಡಿಸ್ ಅವರನ್ನು ಪ್ರಾಂಶುಪಾಲೆ ಮಿಲೆx†àಡ್ ಲೋಬೋ ಪರಿಚಯಿಸಿದ್ದು, ಅವರನ್ನು ಅತಿಥಿಗಳು ಸಮ್ಮಾನಿಸಿ ಅಭಿನಂದಿಸಿದರು.
ರತ್ನಾಕರ ಶೆಟ್ಟಿ ಮುಂಡ್ಕೂರು ಸ್ವಾಗತಿಸಿದರು. ಸಿಎಸ್ ಉತ್ತಮ್ ಶೆಟ್ಟಿ ಅವರು ಪೊವಾಯಿ ಶಿಕ್ಷಣ ಸಂಸ್ಥೆಯ 25ರ ಸಾಧನೆ, ಕಾರ್ಯವೈಖರಿ ತಿಳಿಸಿ ಬೆಳ್ಳಿಹಬ್ಬದ ಪ್ರಯುಕ್ತ ವಾರ್ಷಿಕವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಮಧ್ಯಾಂತರದಲ್ಲಿ 25ರ ಸಾಧನೆಯ ಹಾದಿಯನ್ನು ಹಾಗೂ ಬಂಟರ ಸಂಘದ ಬೊರಿವಲಿ ಶಿಕ್ಷಣ ಸಂಸ್ಥೆಯ ಬಗ್ಗೆ ಸಾಕ್ಷ Âಚಿತ್ರದೊಂದಿಗೆ ಮಾಹಿತಿ ಬಿತ್ತರಿಸಲಾಯಿತು. ವಸಂತ್ ಶೆಟ್ಟಿ ಪಲಿಮಾರು, ಡಾ| ಶ್ರೀಧರ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಅನುಪ್ರಿಯಾ ಶೆಟ್ಟಿ ಮತ್ತು ವಿನಯ್ ಲಲಿತ್ ಕಾರ್ಯಕ್ರಮ ನಿರೂಪಿಸಿ, ಸಿಎ ಜಗದೀಶ್ ಶೆಟ್ಟಿ ವಂದಿಸಿದರು. ಶಾಲಾ ವಿದ್ಯಾರ್ಥಿಗಳು ಗಣಪತಿ ಸ್ತುತಿ, ಗಣೇಶ ವಂದನೆ ಯೊಂದಿಗೆ, ರಜತೋತ್ಸವದ 25ರ ಲಾಂಛನ (ಲೋಗೋ)ವನ್ನು ವರ್ಣಮಯವಾಗಿ ಅನಾವರಣಗೊಳಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಭರತನಾಟ್ಯ, ಶಾಸ್ತ್ರೀಯ ನೃತ್ಯ ಪ್ರದರ್ಶಿಸಲಾಯಿತು. ಅಧ್ಯಾಪಕರು ಭಕ್ತಿಲಹರಿ ಪ್ರಸ್ತುತ ಪಡಿಸಿದರು.
ಎಸ್.ಎಂ. ಶೆಟ್ಟಿ ಸ್ಥಳದಾನ ಮಾಡಿದ್ದರಿಂದ ಹಾಗೂ ಎಲ್ಲರಿಂದಲೂ ಸಾಕಷ್ಟು ಬೆಂಬಲ ದೊರೆತ ಫಲವಾಗಿ ಈ ಶಾಲೆ ಸ್ಥಾಪನೆಯಾಗಿಗೆ. 25 ವರ್ಷಗಳ ಹಿಂದೆ ಈ ಯೋಜನೆಯನ್ನು ಸವಾಲಾಗಿ ತೆಗೆದುಕೊಂಡ ಫಲವಾಗಿ ಇಂದು ಸುಮಾರು 8,000 ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಲು ಸಾಧ್ಯವಾಗಿದೆ. ದಯವಿಟ್ಟು ನಿಮ್ಮ ಕೈಯನ್ನು ಜೇಬಿನಲ್ಲಿ ಹಾಕಿ ಮತ್ತು ಹಣವನ್ನು ತೆಗೆಯಿರಿ ಎಂದು ಆವಾಗಲೇ ನಮಗೆ ಎಸ್.ಎಂ. ಶೆಟ್ಟಿ ಹೇಳುತ್ತಿದ್ದರು. ನಮ್ಮಲ್ಲಿನ ದಾನಿಗಳು ತಮ್ಮ ಉದಾರತೆ ತೋರುವ ಅಗತ್ಯವಿದೆ. ಆ ಮೂಲಕ ಇನ್ನೂ ಹೆಚ್ಚಿನ ಶಾಲೆ, ಶೈಕ್ಷಣಿಕ ಸಂಸ್ಥೆಗಳನ್ನು ಬಂಟ್ಸ್ ಸಂಘ ಆರಂಭಿಸಬೇಕು. ಬಂಟ್ಸ್ ಸಂಘದ ಹಿಂದಿನ ಮತ್ತು ಪ್ರಸ್ತುತ ಅಧ್ಯಕ್ಷರಿಗೆ ಅವರು ನೀಡಿದ ಸೇವೆಗಾಗಿ ಹಾಗೂ ಉತ್ತಮ ಶಿಕ್ಷಕ ಸಿಬಂದಿಯನ್ನು ನೇಮಿಸಿಕೊಂಡವರಿಗೆ ಕೃತಜ್ಞತೆ ಸಲ್ಲಿಸುವೆ.–ಮನಮೋಹನ್ ಶೆಟ್ಟಿ ಮಾಜಿ ಅಧ್ಯಕ್ಷರು, ಬಂಟ್ಸ್ ಸಂಘ ಮುಂಬಯಿ
ನಾವು ನಿಜವಾಗಿಯೂ ದಾನಿಗಳಿಂದ ಆಶೀರ್ವದಿಸಲ್ಪಟ್ಟಿದ್ದೇವೆ. ದೂರದೃಷ್ಟಿತ್ವವುಳ್ಳ ಮಹನೀಯರಿಂದ ಈ ಸಾಧನೆ ಸಾಧ್ಯವಾಗಿದೆ. ಇದೊಂದು ಸಮಾಜದ ಋಣ ಪೂರೈಸುವ ಕೆಲಸ. ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣೆಯಲ್ಲಿರುವ ಬಂಟರು ಶಿಕ್ಷಣದ ವ್ಯವಸ್ಥೆಯ ಸಾಧನೆಗೂ ಕಾರಣರಾಗಿದ್ದಾರೆ. ಶಿಕ್ಷಣ ನಿಜವಾದ ದೇವರ ಸೇವೆ. ಶಾಲೆಯಿಂದ ಕ್ರಾಂತಿಕಾರಿ ಬದಲಾವಣೆಗಳು ಸಾಧ್ಯವಾಗಿದ್ದು, ಮಕ್ಕಳಲ್ಲಿ ಶಿಕ್ಷಣದ ಜತೆಗೆ ನಾಯಕತ್ವ ಗುಣ ಬೆಳೆಸಿ ರಾಷ್ಟ್ರದ ಧುರೀಣರಾಗುವಂತೆ ಬೆಳೆಸಬೇಕಾಗಿದೆ. ಎಸ್.ಎಂ. ಶೆಟ್ಟಿ ಶಿಕ್ಷಣ ಸಂಸ್ಥೆಯು ಭಾರತ ರಾಷ್ಟ್ರಾದ್ಯಂತ ಮೆರೆಯುವಂತಾಗಲಿ.–ಚಂದ್ರಹಾಸ ಶೆಟ್ಟಿಅಧ್ಯಕ್ಷರು, ಬಂಟರ ಸಂಘ ಮುಂಬಯಿ
ಎಸ್.ಎಂ. ಶೆಟ್ಟಿ ಶೈಕ್ಷಣಿಕ ಸಂಸ್ಥೆ ಬಗ್ಗೆ ತಿಳಿಸಿ ಶಿಕ್ಷಣದ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸಲು ಕಾಳಜಿ ವಹಿಸಿದವರಿಗೆ ಕೃತಜ್ಞರಾಗಿರುತ್ತೇವೆ. 25 ವರ್ಷಗಳ ಹಿಂದೆ ಮುಂಬಯಿಯ ಆಗಿನ ಪರಿಸ್ಥಿತಿಯಲ್ಲಿ ಒಂದು ಶಾಲೆಯನ್ನು ಕಟ್ಟುವುದು ಸಣ್ಣ ವಿಷಯವಾಗಿರಲಿಲ್ಲ. ಇಂದು ಕೂಡ ನಾವು ಅದೇ ತತ್ತ್ವಜ್ಞಾನದ ಗುಣಗಳನ್ನು ಇಟ್ಟುಕೊಂಡಿದ್ದೇವೆ. ಕಠಿನ ಪರಿಶ್ರಮ ಮತ್ತು ಸಮರ್ಪಣಾಭಾವದಿಂದ ರೂಪಿತ ಇಂತಹ ಶಿಕ್ಷಣ ಸಂಸ್ಥೆಯ ಸಾಧನೆ ಸ್ತುತ್ಯರ್ಹ. ಹೊಟೇಲು ಮತ್ತು ಉದ್ಯಮದ ಜನತೆಯ ಶಿಕ್ಷಣ ಪೂರ್ಣಗೊಳಿಸುವ ನಿಟ್ಟಿನಲ್ಲಿ ಬಂಟ್ಸ್ ಸಂಘವು 2 ರಾತ್ರಿ ಶಾಲೆಗಳನ್ನು ಪ್ರಾರಂಭಿಸಿತ್ತು. ಈ ರಾತ್ರಿ ಶಾಲೆಗಳಲ್ಲಿ ಓದಿದ ಬಂಟರು ಎಂಜಿನಿಯರ್, ವಕೀಲರು, ಉದ್ಯಮಿಗಳಾಗುವಂತೆ ಮಾಡಿದೆ. ಇದು ಹೊಸ ಪೀಳಿಗೆಗೆ ಉತ್ತಮ ಶಾಲೆಯನ್ನು ಪ್ರಾರಂಭಿಸಲು ಸ್ಫೂರ್ತಿಯಾಗಿದೆ. ಇದು ನಮ್ಮ ಟ್ರಸ್ಟಿಗಳು, ಹಿತೈಷಿಗಳು ಮತ್ತು ದಾನಿಗಳ ದೂರದೃಷ್ಟಿಯಿಂದ ಸಾಧ್ಯವಾಗಿದೆ. ಸಂಸ್ಥೆಯ ಸ್ಥಾಪನಕರ್ತರು, ಮುನ್ನಡೆಸಿದ ಗಣ್ಯರು, ದಾನಿಗಳು, ಸಮಿತಿಯ ಮುಖ್ಯಸ್ಥರು, ವಿದ್ಯಾರ್ಥಿಗಳು, ಪೋಷಕರು, ಭೋಧಕರು, ನೌಕರ ವೃಂದ ನೀಡಿರುವ ಸೇವೆಗೆ ಅಭಿವಂದನೆ.–ಬಿ.ಆರ್. ಶೆಟ್ಟಿ,ಕಾರ್ಯಾಧ್ಯಕ್ಷರು, ಎಸ್.ಎಂ. ಶೆಟ್ಟಿ ಸಂಸ್ಥೆ
-ಚಿತ್ರ – ವರದಿ: ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.