ಆಡಳಿತ ನಡೆಸುವುದು ಹೇಗೆಂದು ನಮಗೆ ಗೊತ್ತಿದೆ, ಕಾಂಗ್ರೆಸ್ ವಿರುದ್ಧ ನಳಿನ್ ಕುಮಾರ್ ವಾಗ್ದಾಳಿ
Team Udayavani, Jun 25, 2022, 12:50 PM IST
ಮಂಗಳೂರು : ದೇಶದಲ್ಲಿ 2014ರ ಅನಂತರ ಎನ್ಡಿಎ ಸರಕಾರ ಬಂದ ಮೇಲೆ ಪರಿವರ್ತನೆಯ ಹಾದಿ ಆರಂಭವಾಗಿದೆ. ರಾಷ್ಟ್ರಕ್ಕೆ ಉಪಯುಕ್ತವಾದ ಹತ್ತಾರು ಯೋಜನೆಗಳನ್ನು ಸರಕಾರ ತರುತ್ತಿದೆ. ದೇಶಕ್ಕೆ ಒಳ್ಳೆಯದಾಗುವ ಯೋಜನೆಗಳನ್ನು ವಿರೋಧಿಸುವುದು ಕಾಂಗ್ರೆಸ್ನ ಮಾನಸಿಕತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ನಗರದಲ್ಲಿ ಮಾತಾನಾಡಿದ ಅವರು, ಅಗ್ನಿಪಥ ಸೇನೆಯಲ್ಲಿ ಯುವಜನತೆ ಬರಬೇಕು, ಯುವಸೈನ್ಯ ಇರಬೇಕು ಎಂಬುದು ಉದ್ದೇಶದ ಯೋಜನೆ. ಎಲ್ಲರಿಗೂ ಮಿಲಿಟರಿ ಸಂಸ್ಕಾರ, ಶಿಕ್ಷಣ ಸಿಗಬೇಕು. ರಾಷ್ಟ್ರಭಕ್ತಿ ಜಾಗೃತವಾಗಬೇಕು. ಆಗ ಅವರ ಜೀವನದಲ್ಲಿ ಒಳ್ಳೆಯದಾಗುತ್ತದೆ. ರಾಷ್ಟ್ರಕ್ಕೂ ಒಳ್ಳೆಯದಾಗುತ್ತದೆ. ಇದನ್ನು ಕಾಂಗ್ರೆಸ್ನವರಲ್ಲಿ ಕೇಳಿಲ್ಲ. ಉದ್ಯೋಗ ಬಯಸುವವರಿಗೆ, ಸೇನೆ ಸೇರಲು ಬಯಸುವವರಿಗೆ, ರಾಷ್ಟ್ರಕ್ಕಾಗಿ ದುಡಿಯುವವರಿಗೆ ಅವಕಾಶವನ್ನು ಮಾಡಿಕೊಡಲಾಗುತ್ತಿದೆ. ಅಗ್ನಿಪಥ ಯುವಜನತೆಯ ಭವಿಷ್ಯಕ್ಕಾಗಿ. ಮುಂದೆಯೂ ಅವರಿಗೆ ಉದ್ಯೋಗ ದೊರೆಯುವ ಅವಕಾಶವಿದೆ. ಕಾಂಗ್ರೆಸ್ನದ್ದು ವಿರೋಧದ ಮಾನಸಿಕತೆ ಎಂದರು.
ಇದನ್ನೂ ಓದಿ: ಬಿಸಿಸಿಐ ದೆಸೆಯಿಂದ ಸೆಕಂಡ್ ಹ್ಯಾಂಡ್ ವಸ್ತುಗಳ ಅಂಗಡಿ ನಡೆಸ್ತಿದ್ದಾರೆ ಮಾಜಿ ಐಸಿಸಿ ಅಂಪೈರ್!
ಕಾಂಗ್ರೆಸ್ ದ್ವೇಷದ ಭಾವನೆ ಮೂಡಿಸುತ್ತಿದೆ. ರಾಜ್ಯದಲ್ಲಿ ಸರಕಾರ ಇರುವಾಗಲೂ ನಿರಂತರವಾಗಿ ಗಲಭೆಗೆ ಪ್ರಚೋದನೆ ನೀಡುತ್ತಾ ಬಂದಿದೆ. ಘಟನೆಗಳಲ್ಲಿ ಸೂತ್ರಧಾರಿಯಾಗಿ ಇರುವುದನ್ನು ಕಂಡಿದ್ದೇವೆ. ಡಿಜೆ ಹಳ್ಳಿ, ಕೆಜೆ ಹಳ್ಳಿ, ಶಿವಮೊಗ್ಗ ಹುಬ್ಬಳ್ಳಿ ಗಲಭೆಯ ಹಿಂದೆ ಕಾಂಗ್ರೆಸ್ ಇದೆ. ಕಾಂಗ್ರೆಸ್ ದ್ವೇಷದ ರಾಜಕಾರಣ ಹರಡುತ್ತದೆ. ಪಠ್ಯ ಪುಸ್ತಕದಲ್ಲಿ ಏನಿದೆ ಎಂದು ಓದದೆ ಮೂರ್ಖತನದ ಪರಮಾವಧಿ ತೋರಿಸುತ್ತಿದೆ ಎಂದು ವಾಗ್ದಾಲಿ ನಡೆಸಿದರು.
ಬಿಜೆಪಿ ಯಾವುದಕ್ಕೂ ಕ್ಷಮೆ ಕೇಳುವುದಿಲ್ಲ. ಆಡಳಿತ ನಡೆಸುವುದು ಹೇಗೆಂದು ಗೊತ್ತಿದೆ. ಸಾಹಿತಿಗಳು ಕೂಡ ಯೋಚನೆ ಮಾಡಲಿ. ಯಾವ ಕಾಲಘಟ್ಟದಲ್ಲಿ ಯಾವ ಹೋರಾಟ ಮಾಡಿದ್ದಾರೆಂದು. ಯಾರೇ ಆದರೂ ಕೂಡ ಪುಸ್ತಕದಲ್ಲಿರುವ ವಿಷಯಗಳನ್ನು ಮೊದಲು ತಿಳಿದುಕೊಳ್ಳಲಿ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್ ಬೋರ್ಡ್ ಗೆ ಬರೆಯುವುದು ಬೇರೆ: ಸಿ.ಟಿ ರವಿ
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.