ಇಂದು ಶ್ರೀಲಂಕಾ ವಿರುದ್ಧ 3ನೇ ಟಿ20: ವ‌ನಿತೆಯರಿಗೆ ವೈಟ್‌ವಾಶ್‌ ಅವಕಾಶ

ಕ್ಲೀನ್‌ ಸ್ವೀಪ್‌ ಸಾಧನೆಯತ್ತ ಕೌರ್‌ ಪಡೆ

Team Udayavani, Jun 27, 2022, 6:40 AM IST

ಇಂದು ಶ್ರೀಲಂಕಾ ವಿರುದ್ಧ 3ನೇ ಟಿ20: ವ‌ನಿತೆಯರಿಗೆ ವೈಟ್‌ವಾಶ್‌ ಅವಕಾಶ

ಡಂಬುಲ: ಆತಿಥೇಯ ಶ್ರೀಲಂಕಾ ವಿರುದ್ಧದ ಮೊದಲೆರಡೂ ಟಿ20 ಪಂದ್ಯಗಳನ್ನು ಗೆದ್ದ ಭಾರತದ ವನಿತೆಯರು ಈಗಾಗಲೇ ಸರಣಿ ಗೆದ್ದು ಸಂಭ್ರಮ ಆಚರಿಸಿದ್ದಾರೆ. ಮುಂದಿನ ಗುರಿ ವೈಟ್‌ವಾಶ್‌.

ಸೋಮವಾರ 3ನೇ ಹಾಗೂ ಅಂತಿಮ ಮುಖಾಮುಖಿ ನಡೆಯಲಿದ್ದು, ಹರ್ಮನ್‌ಪ್ರೀತ್‌ ಕೌರ್‌ ಪಡೆ ಇದನ್ನೂ ಗೆದ್ದು ಸರಣಿಯನ್ನು ಕ್ಲೀನ್‌ ಸ್ವೀಪ್‌ ಆಗಿ ವಶಪಡಿಸಿಕೊಳ್ಳುವ ಯೋಜನೆಯಲ್ಲಿದೆ.

ಭಾರತದ ಈವರೆಗಿನ ಸಾಧನೆಯನ್ನು ಗಮನಿಸಿದಾಗ ಕ್ಲೀನ್‌ ಸ್ವೀಪ್‌ ಅಸಾಧ್ಯ ವೇನಲ್ಲ. ಆದರೆ ಶ್ರೀಲಂಕಾಕ್ಕೂ ಗೆಲುವಿನ ಅನಿವಾರ್ಯತೆ ಇದೆ. ಪ್ರತಿಷ್ಠೆಗಾಗಿ ಅದು ಗೆಲ್ಲಲೇಬೇಕಿದೆ. ಸತತ 2 ಸರಣಿ ಗಳಲ್ಲಿ ಮೂರೂ ಪಂದ್ಯಗಳಲ್ಲಿ ಸೋಲ ನುಭವಿಸುವುದನ್ನು ಅದು ಯಾವ ಕಾರಣಕ್ಕೂ ಸಹಿಸದು. ಕಳೆದ ಪಾಕಿಸ್ಥಾನ ವಿರುದ್ಧದ ಸರಣಿಯಲ್ಲೂ ಲಂಕಾ 3-0 ವೈಟ್‌ವಾಶ್‌ ಸಂಕಟಕ್ಕೆ ಸಿಲುಕಿತ್ತು. ಹೀಗಾಗಿ ಅತಪಟ್ಟು ಪಡೆಯ ಮೇಲೆ ಭಾರೀ ಒತ್ತಡ ಇರುವುದು ಸುಳ್ಳಲ್ಲ.

ಅಧಿಕಾರಯುತ ಜಯ
ಎರಡೂ ಪಂದ್ಯಗಳಲ್ಲಿ ಭಾರತದ್ದು ಅಧಿಕಾರಯುತ ಜಯ. ಬ್ಯಾಟಿಂಗ್‌ಗೆ ವಿಶೇಷವಾಗಿ ಸಹಕರಿಸದ ಡಂಬುಲ ಟ್ರ್ಯಾಕ್‌ ಮೇಲೆ ಭಾರತದ ನಾರಿಯರು ಕ್ರಮವಾಗಿ 34 ರನ್‌ ಹಾಗೂ 5 ವಿಕೆಟ್‌ ಅಂತರದ ಗೆಲುವು ಸಾಧಿಸಿದ್ದರು. ಇದೇ ಲಯದಲ್ಲಿ ಸಾಗಿದರೆ ಭಾರತದಿಂದ ಹ್ಯಾಟ್ರಿಕ್‌ ಜಯಭೇರಿಯನ್ನು ನಿರೀಕ್ಷಿಸ ಲಡ್ಡಿಯಿಲ್ಲ. ಇದರಿಂದ ಮುಂಬರುವ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತ ತಂಡದ ಆತ್ಮವಿಶ್ವಾಸ ದೊಡ್ಡ ಮಟ್ಟದಲ್ಲೇ ಹೆಚ್ಚಲಿದೆ.

ಡಂಬುಲದ ನಿಧಾನ ಗತಿಯ ಟ್ರ್ಯಾಕ್‌ ಮೇಲೆ ಭಾರತದ ಬೌಲರ್ ಅತ್ಯುತ್ತಮ ಪ್ರದರ್ಶನ ಕಾಯ್ದುಕೊಂಡು ಬಂದಿದ್ದಾರೆ. ಇದಕ್ಕೆ ದ್ವಿತೀಯ ಪಂದ್ಯವೇ ಸಾಕ್ಷಿ. ಶ್ರೀಲಂಕಾ ವಿಕೆಟ್‌ ನಷ್ಟವಿಲ್ಲದೆ 80ರ ಗಡಿ ದಾಟಿದಾಗ ದೊಡ್ಡ ಮೊತ್ತದ ಸಾಧ್ಯತೆ ಗೋಚರಿಸಿತ್ತು. ಆದರೆ ಈ ಹಂತದಲ್ಲಿ ತಿರುಗಿ ಬಿದ್ದ ಭಾರತದ ಬೌಲರ್, ಲಂಕೆಯನ್ನು 125ಕ್ಕೆ ಹಿಡಿದು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದರು. ಮೊದಲ ಪಂದ್ಯದಲ್ಲಿ 138 ರನ್ನುಗಳ ಸಾಮಾನ್ಯ ಮೊತ್ತವನ್ನು ಬೌಲರ್‌ಗಳೇ ಉಳಿಸಿಕೊಟ್ಟಿದ್ದರು.

ಶಫಾಲಿ ವರ್ಮ, ಎಸ್‌. ಮೇಘನಾ, ಯಾಸ್ತಿಕಾ ಭಾಟಿಯ ಬಿರುಸಿನ ಆಟಕ್ಕಿಳಿದರೆ ಭಾರತ ಇನ್ನೂ ದೊಡ್ಡ ಮೊತ್ತ ಪೇರಿಸಬಹುದು. ಆಗ ಗೆಲುವು ಕೂಡ ಸುಲಭವಾಗಲಿದೆ.

ಟಾಪ್ ನ್ಯೂಸ್

Congress: ಜಮೀರ್‌ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ‌ ದೂರು

Congress: ಜಮೀರ್‌ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ‌ ದೂರು

Bid for 2036 Olympics: Official application from India to IOC

Olympics; 2036ರ ಒಲಿಂಪಿಕ್ಸ್‌ಗೆ ಬಿಡ್‌: ಭಾರತದಿಂದ ಐಒಸಿಗೆ ಅಧಿಕೃತ ಅರ್ಜಿ

R.Ashok

Belagavi: ಎಸ್‌ಡಿಎ ಆತ್ಮಹ*ತ್ಯೆ: ಸಚಿವೆ ಹೆಬ್ಬಾಳ್ಕರ್‌ ರಾಜೀನಾಮೆಗೆ ಬಿಜೆಪಿ ಪಟ್ಟು

Supreme Court: ಬೇಕಾಬಿಟ್ಟಿ ಖಾಸಗಿ ಆಸ್ತಿ ಸ್ವಾಧೀನ ಸಲ್ಲ;ವಿಶೇಷ ಪ್ರಕರಣದಲ್ಲಷ್ಟೇ ಸ್ವಾಧೀನ

Supreme Court: ಬೇಕಾಬಿಟ್ಟಿ ಖಾಸಗಿ ಆಸ್ತಿ ಸ್ವಾಧೀನ ಸಲ್ಲ;ವಿಶೇಷ ಪ್ರಕರಣದಲ್ಲಷ್ಟೇ ಸ್ವಾಧೀನ

LignoSat: ಮರದಿಂದ ತಯಾರಿಸಿದ ವಿಶ್ವದ ಮೊದಲ ಉಪಗ್ರಹ ಉಡಾವಣೆ!

LignoSat: ಮರದಿಂದ ತಯಾರಿಸಿದ ವಿಶ್ವದ ಮೊದಲ ಉಪಗ್ರಹ ಉಡಾವಣೆ!

ಕರಾವಳಿಯಲ್ಲಿ ಕಾಶ್ಮೀರಿ ಕೇಸರಿ ಬೆಳೆದ ಟೆಕ್ಕಿಗಳು; ಹೊಸ ಪ್ರಯೋಗದಲ್ಲಿ ಮೊದಲ ಯಶಸ್ಸು !

ಕರಾವಳಿಯಲ್ಲಿ ಕಾಶ್ಮೀರಿ ಕೇಸರಿ ಬೆಳೆದ ಟೆಕ್ಕಿಗಳು; ಹೊಸ ಪ್ರಯೋಗದಲ್ಲಿ ಮೊದಲ ಯಶಸ್ಸು !

Supreme Court upheld the validity of the UP Madarsa Act

Madarsa Act: ಯುಪಿ ಮದರಸಾ ಕಾಯ್ದೆ ಸಿಂಧುತ್ವ ಎತ್ತಿಹಿಡಿದ ಸುಪ್ರೀಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bid for 2036 Olympics: Official application from India to IOC

Olympics; 2036ರ ಒಲಿಂಪಿಕ್ಸ್‌ಗೆ ಬಿಡ್‌: ಭಾರತದಿಂದ ಐಒಸಿಗೆ ಅಧಿಕೃತ ಅರ್ಜಿ

IPL Mega Auction: 24th and 25th IPL auction in Jeddah

IPL Mega Auction: ನ.24 ಮತ್ತು 25 ಜೆಡ್ಡಾದಲ್ಲಿ ಐಪಿಎಲ್‌ ಹರಾಜು

Ranji trophy: ಕರ್ನಾಟಕ-ಬಂಗಾಲ ಸೆಣಸಾಟ

Ranji trophy: ಕರ್ನಾಟಕ-ಬಂಗಾಲ ಸೆಣಸಾಟ

PKL 11: Panthers won against Yoddhas

PKL 11: ಯೋಧಾಸ್‌ ವಿರುದ್ಧ ಗೆದ್ದ ಪ್ಯಾಂಥರ್

Virat Kohli Birthday: Kohli blossomed in sand sculpture

Virat Kohli Birthday: ಮರಳುಶಿಲ್ಪದಲ್ಲಿ ಅರಳಿದ ಕೊಹ್ಲಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Congress: ಜಮೀರ್‌ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ‌ ದೂರು

Congress: ಜಮೀರ್‌ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ‌ ದೂರು

Bid for 2036 Olympics: Official application from India to IOC

Olympics; 2036ರ ಒಲಿಂಪಿಕ್ಸ್‌ಗೆ ಬಿಡ್‌: ಭಾರತದಿಂದ ಐಒಸಿಗೆ ಅಧಿಕೃತ ಅರ್ಜಿ

R.Ashok

Belagavi: ಎಸ್‌ಡಿಎ ಆತ್ಮಹ*ತ್ಯೆ: ಸಚಿವೆ ಹೆಬ್ಬಾಳ್ಕರ್‌ ರಾಜೀನಾಮೆಗೆ ಬಿಜೆಪಿ ಪಟ್ಟು

Supreme Court: ಬೇಕಾಬಿಟ್ಟಿ ಖಾಸಗಿ ಆಸ್ತಿ ಸ್ವಾಧೀನ ಸಲ್ಲ;ವಿಶೇಷ ಪ್ರಕರಣದಲ್ಲಷ್ಟೇ ಸ್ವಾಧೀನ

Supreme Court: ಬೇಕಾಬಿಟ್ಟಿ ಖಾಸಗಿ ಆಸ್ತಿ ಸ್ವಾಧೀನ ಸಲ್ಲ;ವಿಶೇಷ ಪ್ರಕರಣದಲ್ಲಷ್ಟೇ ಸ್ವಾಧೀನ

LignoSat: ಮರದಿಂದ ತಯಾರಿಸಿದ ವಿಶ್ವದ ಮೊದಲ ಉಪಗ್ರಹ ಉಡಾವಣೆ!

LignoSat: ಮರದಿಂದ ತಯಾರಿಸಿದ ವಿಶ್ವದ ಮೊದಲ ಉಪಗ್ರಹ ಉಡಾವಣೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.