ವಿಟ್ಲ: ಬದನಾಜೆಯ ಬಸ್ ತಂಗುದಾಣದಲ್ಲಿ ರಕ್ತದ ಕಲೆ; ಕುಡಿದು ಬಿದ್ದಿರುವ ವ್ಯಕ್ತಿಯದೆಂದು ಶಂಕೆ
Team Udayavani, Jun 29, 2022, 12:44 PM IST
ವಿಟ್ಲ: ವಿಟ್ಲ ಸಮೀಪದ ಬದನಾಜೆಯ ಸಾರ್ವಜನಿಕ ಬಸ್ ತಂಗುದಾಣದಲ್ಲಿ ರಕ್ತದ ಕಲೆ ಪತ್ತೆಯಾಗಿ, ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದರು.
ಬಸ್ ನಿಲ್ದಾಣದಲ್ಲಿ ಯಾರನ್ನಾದರೂ ಹತ್ಯೆ ಮಾಡಲಾಗಿತ್ತೇ ಅಥವಾ ಅಪಘಾತದಿಂದ ಗಾಯಗೊಂಡವರು ಯಾರಾದರೂ ಬಸ್ ನಿಲ್ದಾಣದಲ್ಲಿ ಕುಳಿತು ಮತ್ತೆ ಆಸ್ಪತ್ರೆಗೆ ತೆರಳಿರಬಹುದೇ ಎಂಬ ಅನುಮಾನಗಳು ವ್ಯಕ್ತವಾದ ಬೆನ್ನಲ್ಲೇ ತನಿಖೆ ನಡೆಸಿದ ಪೊಲೀಸರಿಗೆ ಬದನಾಜೆ ಬಸ್ ತಂಗುದಾಣದಲ್ಲಿದ್ದುದು ನೆಲ್ಲಿಗುಡ್ಡೆಯ ವ್ಯಕ್ತಿಯೆಂದು ತಿಳಿದುಬಂದಿದೆ.
ಈತ ವಿಟ್ಲ ಸಂತೆ ನಡೆಯುವ ಕಟ್ಟಡದ ಬಳಿ ಬಿದ್ದುಕೊಂಡಿದ್ದನೆನ್ನಲಾಗಿದೆ. ವಿಟ್ಲ ಪೊಲೀಸರು ಮಾಹಿತಿ ತಿಳಿದು ಪರೀಕ್ಷಿಸಿದಾಗ ಬದನಾಜೆಯಿಂದ ಆತ ಬಂದಿದ್ದಾನೆಂದು ಖಚಿತವಾಯಿತು. ವಿಟ್ಲಕಸಬಾ ಗ್ರಾಮದ ನೆಲ್ಲಿಗುಡ್ಡೆಯ ಹಂಝ ಎಂದು ಆತನನ್ನು ಗುರುತಿಸಲಾಗಿದೆ.
ಈತ ಕಂಠಪೂರ್ತಿ ಅಮಲುಪದಾರ್ಥ ಸೇವಿಸಿ, ಆಯ ತಪ್ಪಿಬಿದ್ದಿರಬೇಕು. ಗಾಯಗೊಂಡ ಆತನ ಶರೀರದಿಂದ ರಕ್ತ ಬಿದ್ದಿರಬೇಕೆಂದು ಊಹಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.