ಶಿರಸಿ: ಸ್ಪೀಕರ್ ಹೇಳಿದ ‘ಮಂಗನ ಕಾಟ ನಿಯಂತ್ರಣ’ ಪ್ರಸ್ತಾಪ!
Team Udayavani, Jun 29, 2022, 3:06 PM IST
ಶಿರಸಿ: ಮಂಗಗಳ ನಿಯಂತ್ರಣಕ್ಕೆ ಸಲಹೆ ಕೇಳಿದರೆ ಏನೆಲ್ಲ ಉತ್ತರ ತಜ್ಞರು, ಅಧಿಕಾರಿಗಳು ನೀಡಿದ್ದಾರೆ ಗೊತ್ತಾ?
ಬುಧವಾರ ಸ್ವತಃ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಗರದಲ್ಲಿ ನಡೆದ ಸಂಬಾರ ಬೆಳೆಗಳ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿ ವನ್ಯ ಮೃಗ ಕಾಟ ಪ್ರಾಸ್ತಾಪಿಸಿ ಮಾಡಿದರು. ವರ್ಷಗಳ ಹಿಂದೆ ಮಂಗಗಳ ಸಮಸ್ಯೆಗೆ ಸರಕಾರವೇ ತಜ್ಞರ ಪ್ರಸ್ತಾವ ಕೇಳಿದಾಗ ಬಂದ ಸಂಗತಿಗಳನ್ನು ಪ್ರಸ್ತಾಪಿಸಿ ಮಾತನಾಡಿದರು. ರೈತರ ಸಹನೆ ದೊಡ್ಡದು. ಎಲ್ಲವನ್ನೂ ಸಹಿಸಿಕೊಂಡು ಕೃಷಿ ಮಾಡುತ್ತಿದ್ದಾರೆ ಎಂದೂ ಬಣ್ಣಿಸಿದರು.
ಕಾಡು ಪ್ರಾಣಿ ಅದರಲ್ಲೂ ಮಂಗಗಳ ಕಾಟ ರೈತರಿಗೆ ಸಮಸ್ಯೆ ಆಗುತ್ತಿದೆ. ಈ ಮಂಗನ ಕಾಟ ನಿಯಂತ್ರಣಕ್ಕೆ ಸಲಹೆ ಕೇಳಿದರೆ ತಜ್ಞರು ಸಾಕಷ್ಟು ವರದಿ ನೀಡಿದರು. ಆ ವರದಿ ನೋಡಿದರೆ ಸರಕಾರಕ್ಕೆ, ರೈತರಿಗೆ ಇಬ್ಬರಿಗೂ ಅನುಷ್ಠಾನ ಸಮಸ್ಯೆ ಆಗುತ್ತದೆ ಎಂದು ಹಲವು ಉದಾಹರಣೆ ಸಹಿತ ಮಾತನಾಡಿದರು.
ಮಂಗಗಳ ನಿಯಂತ್ರಣಕ್ಕೆ ಒಬ್ಬರು ಗಂಡು ಮಂಗ ಹಿಡಿದು ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದೂ, ಕೆಲವರು ಹೆಣ್ಣು ಮಂಗಕ್ಕೆ ಮಾಡಬೇಕು ಎಂದೂ ಹೇಳಿದ್ದರು.
ಇನ್ನೊಬ್ಬರು ಒಂದ್ ಮಂಗಕ್ಕೆ ಬಣ್ಣ ಬಳಿಯಬೇಕೂ ಎಂದೂ, ಇನ್ನೊಬ್ಬರು ಸೋಲಾರ್ ಬೆಳಕು ಬಿಡಬೇಕು ಎಂದು ಹೇಳಿದರು. ಬಾಟಲಿ ಬಡಿಸಬೇಕು ಎಂದು ಹೇಳಿ ನಾನೂ ಒಯ್ದಿದ್ದೆ. ಕೊನೆಗೆ ಆ ಬಾಟಲಿ ಮನೆಗೆ ಏಕೆ ಬಂತು ಚರ್ಚೆ ಆಗುವಂತಾಯಿತು ಎಂದಾಗ ಸಭೆ ನಗೆಗಡಲಲಿ ತೇಲಿತು!
ಈ ವೇಳೆ ತೋಟಗಾರಿಕಾ ಉಪ ನಿರ್ದೇಶ ಬಿ.ಪಿ. ಸತೀಶ್, ಡೀನ್, ಎಂ.ಎಚ್.ತಟಗಾರ, ರೈತರಾದ ಆರ್.ಎಂ.ಹೆಗಡೆ ಸಾಲಕಣಿ, ಶಂಭು ಶಂಕರ ಶೆಡ್ಟಿ, ಯೋಗೀಶ ,ತಜ್ಞರಾದ ವಿ.ಎಂ.ಹೆಗಡೆ, ಅಬ್ದುಲ್‌ಕರಿಂ, ಶಂಕರ ಮೇಟಿ, ಗಜಾನನ ಗುಂಡೆವಾಡಿ, ವಿಶ್ವೇಶ್ವರ ಭಟ್ಟ ಇತರರು ಇದ್ದರು. ಗಣೇಶ ಹೆಗಡೆ ಸ್ವಾಗತಿಸಿದರು. ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ ಪ್ರಸ್ತಾವಿಕ ಮಾತನಾಡಿದರು.
ಟಿಆರ್ಸಿಯಲ್ಲಿ ತೋಟಗಾರಿಕಾ ಇಲಾಖೆ, ಕರ್ನಾಟಕ ಸಾಂಬಾರ ಪದಾರ್ಥಗಳ ಅಭಿವೃದ್ಧಿ ಮಂಡಳಿ, ತೋಟಗಾರಿಕಾ ಮಹಾ ವಿದ್ಯಾಲಯ, ಕ್ಲಾಪ್ಸ್ ರೈತ ಉತ್ಪಾದಕ ಕಂಪನಿ ಜಂಟಿಯಾಗಿ ಹಮ್ಮಿಕೊಂಡ ಸಂಬಾರು ಬೆಳೆಗಳ ಬೇಸಾಯ ತಂತ್ರಜ್ಞಾನ , ಸಂಸ್ಕರಣೆ ಹಾಗೂ ಮಾರುಕಟ್ಟೆ ಕುರಿತು ನಡೆದ ವಿಚಾರ ಸಂಕಿರಣ ಇದಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
Honnavar;ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವತಿಯರ ರಕ್ಷಣೆ
ಮುಂಡಗೋಡ: ಮಂಗನಬಾವು ಉಲ್ಬಣ-ಮೂರು ದಿನ ಶಾಲೆಗೆ ರಜೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.