ನುಸಿರೋಗಕ್ಕೆ ತುತ್ತಾದ ತೆಂಗು ಬೆಳೆ
Team Udayavani, Jun 29, 2022, 4:33 PM IST
ಚನ್ನಪಟ್ಟಣ: ಸಂಕಷ್ಟದಲ್ಲಿ ಬೊಂಬೆನಗರಿ ಚನ್ನಪಟ್ಟಣ ಕ್ಷೇತ್ರದ ತೆಂಗು ಬೆಳೆಗಾರರು. ನುಸಿಪೀಡೆ ರೋಗದಿಂದ ಸಾವಿರಾರು ತೆಂಗಿನ ಮರಗಳ ಸುಳಿಗಳು ಒಣಗಿ ಹೋಗುತ್ತಿದೆ. ಬೃಹತ್ತಾಗಿ ತೆಂಗಿನ ಮರಗಳು ಬೆಳೆದರೂ, ಕಾಯಿ ಇಲ್ಲದೆ ನುಸಿರೋಗಕ್ಕೆ ತುತ್ತಾಗಿ ಬಳಲುತ್ತಿವೆ. ಇದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಾಗಿ ದಿಕ್ಕು ಕಾಣದೆ ಕಂಗಾಲಾಗಿದ್ದಾನೆ.
ಒಂದು ತೆಂಗಿನ ಸಸಿ ಬೆಳೆಸಿದ್ರೆ 70 ವರ್ಷದ ತರುವಾಯ ಅದು ನಮ್ಮನ್ನು ಸಾಕುತ್ತದೆ ಎಂಬ ನಾನ್ಮುಡಿ ಇದೆ. ಆದರೆ, ಇತ್ತೀಚಿಗೆ ಈ ನಾನ್ಮುಡಿ ಕೇವಲ ನಾನ್ಮುಡಿಯಾಗಿಯೇ ಉಳಿದುಕೊಂಡಿದೆ. ಪ್ರಕೃತಿಯೇ ಮಾನವನ ಮೇಲೆ ಮುನಿಸಿಕೊಂಡಿದ್ದು, ಒಂದೆಡೆ ಸರಿಯಾದ ಸಮಯದಲ್ಲಿ ಮಳೆಯಾಗದೆ ಕುಡಿಯಲು ನೀರಿಲ್ಲದೆ ಬರಗಾಲ ತಾಂಡವವಾಡುತ್ತಿದೆ. ಮತ್ತೂಂದೆಡೆ ತೆಂಗಿಗೆ ನುಸಿರೋಗ ಬಂದು ಇದನ್ನ ನಂಬಿಕೊಂಡು ಬಂದಿದ್ದ ರೈತ ಸಂಕುಲವನ್ನ ನಾಶ ಮಾಡಲು ಹೊರಟಿದೆ. ಇದಕ್ಕೆ ಚನ್ನಪಟ್ಟಣ ಕೂಡ ಹೊರತಾಗಿಲ್ಲ. ಜಿಲ್ಲೆಯ ರೈತರ ಜೀವನಾಡಿ ಬೆಳೆ ಎಂದ್ರೆ ಅದು ತೆಂಗು.
ಶೇ.40ರಷ್ಟು ಕುಟುಂಬ ತೆಂಗು ಬೆಳೆ ಅವಲಂಬನೆ: ಜಿಲ್ಲೆಯ ಶೇ. 35ರಿಂದ 40ರಷ್ಟು ಕುಟುಂಬ ಈ ತೆಂಗು ಬೆಳೆಯನ್ನ ಆಶ್ರಯಿಸಿಕೊಂಡಿದೆ. ಜಿಲ್ಲೆಯಲ್ಲಿ ಸುಮಾರು 35ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಮೊದ ಮೊದಲು ತೆಂಗು ಬೆಳೆಯಿಂದ ಅಧಿಕ ಲಾಭ ಪಡೆಯುತ್ತಿದ್ದ ರೈತನಿಗೆ, ಇತ್ತೀಚಿನ ದಿನಗಳಲ್ಲಿ ತೆಂಗಿನ ಬೆಳೆ ಎಂದ್ರೆ ಬೆಚ್ಚಿ ಬೀಳುತ್ತಾನೆ. ಕಾರಣ ತೆಂಗಿಗೆ ಮುಕ್ತವಾಗದ ನುಸಿ ಪೀಡೆ ರೋಗ. ಈ ರೋಗದಿಂದ ತೆಂಗಿನ ಸುಳಿಯೇ ಸಂಪೂರ್ಣವಾಗಿ ಒಣಗಲಾರಂಭಿಸಿದೆ. ಸುಮಾರು 50 ರಿಂದ 60 ಅಡಿ ಎತ್ತರವಾಗಿ ಬೆಳೆದ ತೆಂಗು ಕಾಯಿ ಇಲ್ಲದೆ ಬೆಳೆಯೆಲ್ಲಾ ಸಂಪೂರ್ಣವಾಗಿ ಒಣಗಿ ಯಾವುದೇ ಉಪಯೋಗಕ್ಕೆ ಬಾರದೆ ನಿಂತಿದೆ.
ತಾಲೂಕಿನ ಹೊಂಗನೂರು, ಬಿ..ಹಳ್ಳಿ, ಸಿಂಗರಾಜೀಪುರ, ಹನುಮಂತಪುರ, ಹನಿಯೂರು, ಕೂಡ್ಲುರು ಸೇರಿದಂತೆ ಹಲವು ಗ್ರಾಮದಲ್ಲಿ ತೆಂಗಿನ ಬೆಳೆಗೆ ನುಸಿರೋಗ ಬಂದಿದೆ. ಸಾವಿರಾರು ತೆಂಗಿನ ಮರಗಳಿಗೆ ನೀರಿಲ್ಲದೆ ಸುಳಿಯೇ ಒಣಗಲಾರಂಭಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಿಸುವಂತೆ ತೆಂಗ ಬೆಳೆಗಾರರು ಒತ್ತಾಯಿಸಿದ್ದಾರೆ.
ಶಾಶ್ವತ ಪರಿಹಾರ ಅಗತ್ಯ: ಒಟ್ಟಾರೆ ನುಸಿ ರೋಗ ದಿಂದಾಗಿ ತೆಂಗು ಗಿಡವೇ ಸಂಪೂರ್ಣವಾಗಿ ಹಾನಿಗೊಳ ಗಾಗಿದೆ. ತೋಟಗಾರಿಕೆ ಇಲಾಖೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಇಲ್ಲವೋ ಗೊತ್ತಿಲ್ಲ. ತೆಂಗಿನ ಬೆಳೆ ರೈತರ ಸಂಕಷ್ಟವನ್ನ ಕೇಳುವವರೇ ಇಲ್ಲ ದಾಗಿದೆ. ಈ ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ನುಸಿ ರೋಗಕ್ಕೆ ಶಾಶ್ವತ ಪರಿಹಾರ ಹುಡುಕಿ ಕೊಡುವಂತೆ ರೈತರು ಒತ್ತಾಯಿಸಿದ್ದಾರೆ.
ನುಸಿರೋಗ ಬಂದರೆ ತೆಂಗು ಸಂಪೂರ್ಣ ನಾಶ : ತೆಂಗಿಗೆ ನುಸಿರೋಗ ಅಂಟಿಕೊಂಡ್ರೆ ಸಾಕು ತೆಂಗಿನ ಮರವನ್ನೆ ಸಂಪೂರ್ಣ ಹಾನಿಗೊಳಿಸಲಿದೆ. ಕೆಲವು ತೆಂಗಿನ ಮರಗಳು ನುಸಿರೋಗದಿಂದ ತೆಂಗಿನ ಗರಿಯೆಲ್ಲಾ ಒಣಗಿ ಬೀಳುತ್ತಿದ್ದು, ಮರದಲ್ಲಿ ಕಾಯಿ ಸಂಖ್ಯೆ ಕೂಡ ಕಡಿಮೆಯಾಗಿದೆ. ಎಷ್ಟೋ ಹಳ್ಳಿಗಳಲ್ಲಿ ಕಾಯಿ ಬಾರದ ಹಿನ್ನೆಲೆ ತೆಂಗಿನ ಮರಗಳನ್ನು ಕಡಿದು ಕಟ್ಟಿಗೆಗೆ ಬಳಸಿಕೊಂಡಿದ್ದಾರೆ. ಇದನ್ನೆ ನಂಬಿಕೊಂಡು ಜೀವನ ಸಾಗಿಸುತ್ತಿರುವ ಎಷ್ಟೋ ಕುಟುಂಬಗಳು ಇಂದೂ ಬೀದಿಗೆ ಬಂದಿದ್ದು, ದಿಕ್ಕು ಕಾಣದೆ ಕಂಗಾಲಾಗಿದ್ದಾರೆ.
ತೆಂಗು ಬೆಳೆಯನ್ನೆ ಆಶ್ರಯಿಸಿಕೊಂಡಿದ್ದೇವೆ. ಮಕ್ಕಳ ರೀತಿಯಲ್ಲಿ ನಾವು ಮರಗಳನ್ನ ನೋಡಿಕೊಂಡಿದ್ದೇವೆ. ಆದರೆ, ಈ ನುಸಿ ರೋಗದಿಂದ ತೆಂಗಿನ ಗಿಡದ ಗರಿಯೇ ಒಣ ಹೋಗುತ್ತಿದ್ದು, ನಂತರ ಕೆಳಭಾಗದ ಗರಿಗಳು ಒಣಗಿ ಸುಳಿಯವರೆಗೂ ಈ ರೋಗ ಹರಡಿ ಕೊಂಡರೆ ಮರ ಸಂಪೂರ್ಣ ಹಾನಿಯಾಗುತ್ತದೆ. ನಂತರ ಈ ತೆಂಗಿನ ಗಿಡಗಳು ಯಾವುದೇ ಉಪಯೋಗಕ್ಕೆ ಬರುವುದಿಲ್ಲ. ನುಸಿರೋಗ ಹೊಸ ರೋಗವಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಿಸಬೇಕಿದೆ. –ಪುಟ್ಟಸ್ವಾಮಿ, ಹಿರಿಯ ರೈತ ಮುಖಂಡ
ನುಸಿರೋಗ ನಿವಾರಣೆಗೆ ತಾಲೂಕಿನಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ನುಸಿರೋಗಕ್ಕೆ ಪರಾವಲಂಬಿ ಜೀಗಳನ್ನ ಬಿಟ್ಟು ರೋಗವನ್ನ ಕಂಟ್ರೋಲ್ ಮಾಡುವ ವಿಧಾನವನ್ನ ಅನುಸರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಬಹಳ ಹಿಂದೆ ಕೂಡ್ಲೂರು, ಮಳೂರು ಸೇರಿದಂತೆ ಹಲವು ಕಡೆಗಳಲ್ಲಿ ನುಸಿರೋಗ ಕಾಣಿಸಿಕೊಂಡಿತ್ತು. ಅಂದು ಆ ಭಾಗದಲ್ಲಿ ನಿಯಂತ್ರಣ ಮಾಡಲಾಗಿತ್ತು. ಈಗ ಮತ್ತೂಮ್ಮೆ ಅಲ್ಲಲ್ಲಿ ನುಸಿರೋಗ ಕಾಣಿಕೊಂಡಿದೆ. ರೈತರು ನಮ್ಮ ಕಚೇರಿಗೆ ಬಂದ್ರೆ ನಿಯಂತ್ರಣ ಹೇಗೆ ಮಾಡುವುದು ಎಂಬುದರ ಬಗ್ಗೆ ಜಾಗೃತಿ ಮಾಡಲಾಗುತ್ತದೆ. – ವಿವೇಕ್, ಹಿರಿಯ ಸಹಾಯಕ ತೋಟಗಾರಿಕೆ ಅಧಿಕಾರಿ
– ಎಂ ಶಿವಮಾದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.