ಅಪ್ಪ, ಅಮ್ಮನಿಗಾಗಿ 17 ಕೋಟಿ ರೂ. ವೇತನಕ್ಕೆ ಗುಡ್‌ಬೈ
ಮಾದರಿ ಮಗ ಎನಿಸಿದ ಲಂಡನ್‌ನ ಕಂಪನಿಯೊಂದರ ಸಿಇಒ ಆಂಡ್ರ್ಯೂ ಫಾರ್ಮಿಕಾ
Team Udayavani, Jun 30, 2022, 7:10 AM IST
ಲಂಡನ್: ಅಪ್ಪ- ಅಮ್ಮನ ಆಶ್ರಯದಲ್ಲಿ ಬೆಳೆದು ಬದುಕು ಕಟ್ಟಿಕೊಳ್ಳುವ ಮಕ್ಕಳು ಒಂದೊಳ್ಳೆ ಸ್ಥಾನಗಳಿಗೆ ಬಂದ ಮೇಲೆ ಅದೇ ಹೆತ್ತವರನ್ನು ಫುಟ್‌ಪಾತ್‌ಗೆ ಅಟ್ಟಿರುವ ಅನೇಕ ಪ್ರಸಂಗಗಳಿವೆ.
ಆದರೆ, ಲಂಡನ್‌ನ ಕಂಪನಿಯ ಉನ್ನತಾಧಿಕಾರಿ ಇಳಿ ವಯಸ್ಸಿನ ತಮ್ಮ ಅಪ್ಪ- ಅಮ್ಮನ ಜತೆಗೆ ಇರಬೇಕೆಂಬ ಉದ್ದೇಶದಿಂದಲೇ ವಾರ್ಷಿಕವಾಗಿ ಸುಮಾರು 17 ಕೋಟಿ ರೂ. ಸಂಬಳವಿರುವ ತಮ್ಮ ಹುದ್ದೆಯನ್ನು ತೊರೆದಿದ್ದಾರೆ!
ಇಂಥದ್ದೊಂದು ನಿರ್ಧಾರ ಕೈಗೊಳ್ಳುವ ಮೂಲಕ ಲಂಡನ್‌ನ ಜ್ಯೂಪಿಟರ್ ಫಂಡ್ ಮ್ಯಾನೇಜ್ಮೆಂಟ್ ಎಂಬ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ (ಸಿಇಒ) ಆಂಡ್ರ್ಯೂ ಫಾರ್ಮಿಕಾ ಈಗ ಸುದ್ದಿಯಾಗಿದ್ದಾರೆ! ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿಯಾಗಿದ್ದು, ಅ. 1ರಂದು ತಾವು ಕಂಪನಿ ಬಿಡುವುದಾಗಿ ತಿಳಿಸಿದ್ದಾರೆ.
ತಮ್ಮ ಅಪ್ಪ-ಅಮ್ಮನ ಜತೆಗೆ ಕಾಲಕಳೆಯಲು, ಸಮುದ್ರದ ದಂಡೆಗಳಲ್ಲಿ ನಿಶ್ಚಿಂತೆಯಿಂದ ಇರಲು ತೀರ್ಮಾನಿಸಿ ಕೆಲಸ ಬಿಡುತ್ತಿರುವುದಾಗಿ ಅವರು ರಾಜೀನಾಮೆ ಪತ್ರದಲ್ಲಿ ಉಲ್ಲೇಖೀಸಿದ್ದಾರೆ. 2019ರಲ್ಲಿ ಜ್ಯೂಪಿಟರ್ ಕಂಪನಿಯ ಸಿ.ಇ.ಒ. ಆಗಿ ನೇಮಕಗೊಂಡಿದ್ದ ಅವರಿಗೆ ಕಂಪನಿಯು ಇಲ್ಲಿಯವರೆಗೆ 53 ಕೋಟಿ ರೂ.ಗಳನ್ನು (ವರ್ಷಕ್ಕೆ ಸರಾಸರಿ 17.66 ಕೋಟಿ ರೂ.) ವೇತನ ರೂಪದಲ್ಲಿ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LignoSat: ಮರದಿಂದ ತಯಾರಿಸಿದ ವಿಶ್ವದ ಮೊದಲ ಉಪಗ್ರಹ ಉಡಾವಣೆ!
US Parliament Election: ಭಾರತ ಮೂಲದ 9 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?
MUST WATCH
ಹೊಸ ಸೇರ್ಪಡೆ
Milk: ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ
Congress: ಜಮೀರ್ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ ದೂರು
Olympics; 2036ರ ಒಲಿಂಪಿಕ್ಸ್‌ಗೆ ಬಿಡ್: ಭಾರತದಿಂದ ಐಒಸಿಗೆ ಅಧಿಕೃತ ಅರ್ಜಿ
Belagavi: ಎಸ್‌ಡಿಎ ಆತ್ಮಹ*ತ್ಯೆ: ಸಚಿವೆ ಹೆಬ್ಬಾಳ್ಕರ್ ರಾಜೀನಾಮೆಗೆ ಬಿಜೆಪಿ ಪಟ್ಟು
Supreme Court: ಬೇಕಾಬಿಟ್ಟಿ ಖಾಸಗಿ ಆಸ್ತಿ ಸ್ವಾಧೀನ ಸಲ್ಲ;ವಿಶೇಷ ಪ್ರಕರಣದಲ್ಲಷ್ಟೇ ಸ್ವಾಧೀನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.