ಬರ್ಮಿಂಗ್‌ಹ್ಯಾಮ್‌: ಭಾರತಕ್ಕೆ ಸವಾಲಿನ ಟೆಸ್ಟ್‌

Team Udayavani, Jul 1, 2022, 7:30 AM IST

ಬರ್ಮಿಂಗ್‌ಹ್ಯಾಮ್‌: ಭಾರತಕ್ಕೆ ಸವಾಲಿನ ಟೆಸ್ಟ್‌

ಬರ್ಮಿಂಗ್ಹ್ಯಾಮ್‌: ಇಂಗ್ಲೆಂಡ್‌ನ‌ಲ್ಲಿ ಸರಣಿ ಗೆಲುವಿನ ಇತಿಹಾಸ ನಿರ್ಮಿಸಲು ಮುಂದಾಗಿರುವ ಭಾರತಕ್ಕೆ ಶುಕ್ರವಾರದಿಂದ ಬರ್ಮಿಂಗ್‌ಹ್ಯಾಮ್‌ “ಟೆಸ್ಟ್‌’ ಎದುರಾಗಲಿದೆ. ಇದನ್ನು ಗೆದ್ದರೆ ಅಥವಾ ಡ್ರಾ ಮಾಡಿಕೊಂಡರೆ ಟೀಮ್‌ ಇಂಡಿಯಾಕ್ಕೆ ಸರಣಿ ಒಲಿಯಲಿದೆ. ಆದರೆ ಈಗಿನ ಭಾರತ ತಂಡದ ಸ್ಥಿತಿ ಹಾಗೂ ಇಂಗ್ಲೆಂಡ್‌ನ‌ ಪ್ರಶ್ನಾತೀತ ಫಾರ್ಮ್ ಗಮನಿಸುವಾಗ ಕಣ್ಮುಂದೆ ಮೂಡುವ ಚಿತ್ರಣವೇ ಬೇರೆ. ಸರಣಿಯನ್ನು 2-2 ಸಮಬಲಕ್ಕೆ ತರಲು ಟೊಂಕ ಕಟ್ಟಿರುವ ಆಂಗ್ಲ ಪಡೆಗೇ ಅವಕಾಶ ಜಾಸ್ತಿ ಎನ್ನಬೇಕಾಗುತ್ತದೆ.

ಭಾರತದ ಸಮಸ್ಯೆ ಒಂದೆರಡಲ್ಲ. ನಾಯಕ ರೋಹಿತ್‌ ಶರ್ಮ ಗೈರು, ಓಪನರ್ ಯಾರೆಂಬ ಪ್ರಶ್ನೆ, ವಿರಾಟ್‌ ಕೊಹ್ಲಿಯ ಅನುಮಾನಾಸ್ಪದ ಫಾರ್ಮ್, ಬುಮ್ರಾಗೆ ಎದುರಾಗಿರುವ ಚೊಚ್ಚಲ ನಾಯಕತ್ವದ ಒತ್ತಡ, ಟಿ20ಯಿಂದ ಟೆಸ್ಟ್‌ ಕ್ರಿಕೆಟಿಗೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ… ಹೀಗೆ ಸಾಲು ಸಾಲು ಸಮಸ್ಯೆಗಳು ಭಾರತವನ್ನು ಕಾಡುತ್ತಿವೆ.

ಅಲ್ಲದೇ ಇಲ್ಲಿನ ಎಜ್‌ಬಾಸ್ಟನ್‌ ಅಂಗಳದಲ್ಲಿ ಭಾರತದ ದಾಖಲೆ ಕೂಡ ಕಳಪೆ. ಆಡಿದ 7 ಟೆಸ್ಟ್‌ಗಳಲ್ಲಿ ಆರನ್ನು ಸೋತಿದೆ. ಒಂದು ಪಂದ್ಯ ಡ್ರಾಗೊಂಡಿದೆ. ಇನ್ನೂ ಗೆಲುವಿನ ಖಾತೆ ತೆರೆದಿಲ್ಲ. ಇವನ್ನೆಲ್ಲ ಮೀರಿಸಿಯೂ ಡ್ರಾ ಅಥವಾ ಗೆಲುವು ಕಂಡರೆ 2007ರ ಬಳಿಕ ಇಂಗ್ಲೆಂಡ್‌ ನೆಲದಲ್ಲಿ ಭಾರತ ಮೊದಲ ಸಲ ಟೆಸ್ಟ್‌ ಸರಣಿ ವಶಪಡಿಸಿಕೊಂಡ ಸಾಧನೆ ಭಾರತದ್ದಾಗುತ್ತದೆ.

ತಂಡಗಳ ಚಿತ್ರಣವೇ ಬದಲು :

2021ರ 5 ಟೆಸ್ಟ್‌ಗಳ ಸರಣಿಯಲ್ಲಿ 4 ಪಂದ್ಯಗಳು ಸಾಂಗವಾಗಿ ನಡೆದಿದ್ದವು. 5ನೇ ಟೆಸ್ಟ್‌ ವೇಳೆ ಕೊರೊನಾ ಭೀತಿ ಎದುರಾಯಿತು. ಭಾರತ ಆಡಲು ಹಿಂದೇಟು ಹಾಕಿ ತವರಿಗೆ ವಾಪಸಾಗಿತ್ತು. ಶುಕ್ರವಾರದಿಂದ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವುದು ಇದೇ ಪಂದ್ಯ.

ಒಂದೇ ವರ್ಷದಲ್ಲಿ ಎರಡೂ ಟೆಸ್ಟ್‌ ತಂಡಗಳ ಚಿತ್ರಣ ಸಂಪೂರ್ಣ ಬದಲಾಗಿದೆ. ಅಂದಿನ ಟೀಮ್‌ ಇಂಡಿಯಾ ಆರಂಭಿಕರಾದ ರೋಹಿತ್‌, ರಾಹುಲ್‌ ಈ ಬಾರಿ ಇಲ್ಲ. ಮಧ್ಯಮ ಸರದಿಯಾ ಬ್ಯಾಟರ್‌ ಅಜಿಂಕ್ಯ ರಹಾನೆ ಗೈರು ಎದ್ದು ಕಾಣುತ್ತಿದೆ. ಬೌಲಿಂಗ್‌ ವಿಭಾಗದಲ್ಲಿ ಗೋಚರಿಸುತ್ತಿರುವುದು ಇಶಾಂತ್‌ ಶರ್ಮ ಅನುಪಸ್ಥಿತಿ ಮಾತ್ರ. ಅಂದು ವಿರಾಟ್‌ ಕೊಹ್ಲಿ ಕ್ಯಾಪ್ಟನ್‌ ಆಗಿದ್ದರು. ಈ ಬಾರಿ ಬುಮ್ರಾಗೆ ಮೊದಲ ಅನುಭವ. ಇವರಲ್ಲಿ “ಲೀಡರ್‌ಶಿಪ್‌’ ಗುಣವಿದೆಯೇ ಎಂಬುದನ್ನು ಇನ್ನಷ್ಟೇ ಕಾಣಬೇಕಿದೆ.

ಬಲಾಡ್ಯಗೊಂಡಿದೆ ಇಂಗ್ಲೆಂಡ್‌ :

ಇನ್ನೊಂದೆಡೆ ಇಂಗ್ಲೆಂಡ್‌ ಕಳೆದ ಸಲಕ್ಕಿಂತ ಹೆಚ್ಚು ಬಲಾಡ್ಯವಾಗಿ ಬೆಳೆದಿದೆ. ಆ್ಯಶಸ್‌ ಮತ್ತು ವೆಸ್ಟ್‌ ಇಂಡೀಸ್‌ ಎದುರು ಬೆನ್ನು ಬೆನ್ನಿಗೆ ಅನುಭವಿಸಿದ ಸರಣಿ ಸೋಲನ್ನೇ ಆಂಗ್ಲ ಪಡೆ ಸವಾಲಾಗಿ ಸ್ವೀಕರಿಸಿತು. ಪರಿಣಾಮ, ಮೊನ್ನೆ ಮೊನ್ನೆ ನ್ಯೂಜಿಲ್ಯಾಂಡ್‌ ವಿರುದ್ಧ 3-0 ಕ್ಲೀನ್‌ಸಿÌàಪ್‌ ಪರಾಕ್ರಮ. ಇದೇ ಲಯದಲ್ಲಿ ಸಾಗಿ ಸರಣಿಯನ್ನು ಸಮಬಲಕ್ಕೆ ತರುವುದೇ ಇಂಗ್ಲೆಂಡಿನ ಯೋಜನೆ.

ಕಳೆದ ವರ್ಷ ಖನ್ನತೆಯಿಂದಾಗಿ ತಂಡದಿಂದ ಬೇರ್ಪಟ್ಟಿದ್ದ ಬೆನ್‌ ಸ್ಟೋಕ್ಸ್‌ ಈ ಬಾರಿ ತಂಡದ ಸಾರಥಿಯಾಗಿದ್ದಾರೆ. ನಾಯಕತ್ವ ಕಳೆದುಕೊಂಡ ಬಳಿಕ ಜೋ ರೂಟ್‌ ಅವರ ಬ್ಯಾಟ್‌ ಇನ್ನಷ್ಟು ಬಿರುಸುಗೊಂಡಿದೆ. ರೋರಿ ಬರ್ನ್ಸ್, ಡೊಮಿನಿಕ್‌ ಸಿಬ್ಲಿ, ಹಸೀಬ್‌ ಹಮೀದ್‌ ಅವರಂಥ ಸಾಮಾನ್ಯ ದರ್ಜೆಯ ಯಾವ ಆಟಗಾರರೂ ಇಲ್ಲ. ಮೊಯಿನ್‌ ಅಲಿ ಗೈರು ತಂಡಕ್ಕೊಂದು ಸಮಸ್ಯೆಯೇ ಅಲ್ಲ.

ಆ್ಯಂಡರ್ಸನ್‌ ಸಾರಥ್ಯದ ಬೌಲಿಂಗ್‌ ವಿಭಾಗವೂ ಘಾತಕವಾಗಿದೆ. ಬ್ರಾಡ್‌, ಪಾಟ್ಸ್‌, ಓವರ್ಟನ್‌, ಲೀಚ್‌ ಹೆಚ್ಚು ಪರಿಣಾಮಕಾರಿ ಆಗಿ ಗೋಚರಿಸುತ್ತಿದ್ದಾರೆ. ಇವರನ್ನು ನಿಭಾಯಿಸಿ ನಿಂತು ಆಡಬೇಕಾದುದು ಭಾರತದ ಮೊದಲ ಗೇಮ್‌ಪ್ಲ್ರಾನ್‌ ಆಗಬೇಕಿದೆ.

ಮೊದಲ 4 ಟೆಸ್ಟ್ಗಳ ಲಿತಾಂಶ :

ಟೆಸ್ಟ್‌ /   ಸ್ಥಳ       /ಫ‌ಲಿತಾಂಶ

1ನೇ ಟೆಸ್ಟ್‌ /         ನಾಟಿಂಗ್‌ಹ್ಯಾಮ್‌           ಡ್ರಾ

2ನೇ ಟೆಸ್ಟ್‌ /         ಲಾರ್ಡ್ಸ್‌               ಭಾರತಕ್ಕೆ 151 ರನ್‌ ಜಯ

3ನೇ ಟೆಸ್ಟ್‌ /         ಲೀಡ್ಸ್‌   ಇಂಗ್ಲೆಂಡಿಗೆ ಇ/76 ರನ್‌ ಜಯ

4ನೇ ಟೆಸ್ಟ್‌ /         ಓವಲ್‌ ಭಾರತಕ್ಕೆ 157 ರನ್‌ ಜಯ

ಬರ್ಮಿಂಗ್ಹ್ಯಾಮ್ನಲ್ಲಿ ಭಾರತ :

ವರ್ಷ/ ಲಿತಾಂಶ

1967       132 ರನ್‌ ಸೋಲು

1974       ಇ/78 ರನ್‌ ಸೋಲು

1979       ಇ/83 ರನ್‌ ಸೋಲು

1986       ಡ್ರಾ

1996       8 ವಿಕೆಟ್‌ ಸೋಲು

2011       ಇ/242 ರನ್‌ ಸೋಲು

ಸಂಭಾವ್ಯ ತಂಡಗಳು :

ಭಾರತ: ಶುಭಮನ್‌ ಗಿಲ್‌, ಚೇತೇಶ್ವರ್‌ ಪೂಜಾರ, ಹನುಮ ವಿಹಾರಿ, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌, ರವೀಂದ್ರ ಜಡೇಜ, ಶಾರ್ದೂಲ್‌ ಠಾಕೂರ್‌, ಮೊಹಮ್ಮದ್‌ ಶಮಿ, ಮೊಹಮ್ಮದ್‌ ಸಿರಾಜ್‌/ಆರ್‌. ಅಶ್ವಿ‌ನ್‌, ಜಸ್‌ಪ್ರೀತ್‌ ಬುಮ್ರಾ (ನಾಯಕ).

ಇಂಗ್ಲೆಂಡ್‌: ಅಲೆಕ್ಸ್‌ ಲೀಸ್‌, ಜಾಕ್‌ ಕ್ರಾಲಿ, ಓಲೀ ಪೋಪ್‌, ಜೋ ರೂಟ್‌, ಜಾನಿ ಬೇರ್‌ಸ್ಟೊ, ಬೆನ್‌ ಸ್ಟೋಕ್ಸ್‌ (ನಾಯಕ), ಸ್ಯಾಮ್‌ ಬಿಲ್ಲಿಂಗ್ಸ್‌, ಸ್ಟುವರ್ಟ್‌ ಬ್ರಾಡ್‌, ಮ್ಯಾಥ್ಯೂ ಪಾಟ್ಸ್‌, ಜಾಕ್‌ ಲೀಚ್‌, ಜೇಮ್ಸ್‌ ಆ್ಯಂಡರ್ಸನ್‌.

ಆರಂಭ: ಅಪರಾಹ್ನ 3.00

ಪ್ರಸಾರ: ಸೋನಿ ಸ್ಪೋರ್ಟ್ಸ್

ಟಾಪ್ ನ್ಯೂಸ್

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Maharashtra: ಕಾಂಗ್ರೆಸ್‌ ಬಂಡಾಯ ಸ್ಪರ್ಧಿಗಳು 6 ವರ್ಷ ಅಮಾನತು

Maharashtra: ಕಾಂಗ್ರೆಸ್‌ ಬಂಡಾಯ ಸ್ಪರ್ಧಿಗಳು 6 ವರ್ಷ ಅಮಾನತು

Aranthodu: ಕಾನೂನು ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Aranthodu: ಕಾನೂನು ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Karkala ಸಿಸ್ಟರ್‌ ಡೋನಾಲ್ಡಾ ಪಾಯಸ್‌ ನಿಧನ

Karkala: ಅರುಣೋದಯ ವಿಶೇಷ ಶಾಲೆ ಮುಖ್ಯಸ್ಥೆ ಸಿಸ್ಟರ್‌ ಡೋನಾಲ್ಡಾ ಪಾಯಸ್‌ ನಿಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pro Kabaddi 2024: ಗೆಲುವಿನ ಹಳಿ ಏರಿದ ದಬಾಂಗ್‌ ಡೆಲ್ಲಿ

Pro Kabaddi 2024: ಗೆಲುವಿನ ಹಳಿ ಏರಿದ ದಬಾಂಗ್‌ ಡೆಲ್ಲಿ

KAR-BE

Ranji Trophy: ಕರ್ನಾಟಕಕ್ಕೆ ಹಿನ್ನಡೆ ಭೀತಿ

Test match: ಭಾರತ “ಎ’ ಮತ್ತೆ ಬ್ಯಾಟಿಂಗ್‌ ವೈಫ‌ಲ್ಯ

Test match: ಭಾರತ “ಎ’ ಮತ್ತೆ ಬ್ಯಾಟಿಂಗ್‌ ವೈಫ‌ಲ್ಯ

Women’s Big Bash League: “ದಶಕದ ತಂಡ’ದ ರೇಸ್‌ನಲ್ಲಿ ಕೌರ್‌

Women’s Big Bash League: “ದಶಕದ ತಂಡ’ದ ರೇಸ್‌ನಲ್ಲಿ ಕೌರ್‌

11

New Delhi: ಏಕಾಮ್ರ ಕ್ರೀಡಾ ಸಾಹಿತ್ಯ ಉತ್ಸವ ಮತ್ತೆ ಮರುಕಳಿಸಲಿದೆ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Dinesh-gundurao

Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್‌

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.