ಮಕಳ ಹೆಸರಿಗೆ ಬರೆದ ಆಸ್ತಿ ಪುನಃ ತಂದೆಗೆ!
ಪಾಲಕರ ಪೋಷಣೆ ಸಂರಕ್ಷಣರ ಕಾಯ್ದೆಯಡಿ ಪಾಲಕರ ನೋಡಿಕೊಳ್ಳದ ಮಕ್ಕಳಿಗೆ ಹೊಸ ಪಾಠವಾದ ಆದೇಶ
Team Udayavani, Jul 1, 2022, 4:21 PM IST
ಬಾಗಲಕೋಟೆ: ತಂದೆ-ತಾಯಿಯನ್ನು ಜೋಪಾನವಾಗಿ ನೋಡಿಕೊಳ್ಳದ ಮಕ್ಕಳಿಗೆ ಇದೊಂದು ಹೊಸ ಪಾಠವಾಗಿದೆ. ತಂದೆ, ತನ್ನ ಆಸ್ತಿಯನ್ನು ಮಕ್ಕಳ ಹೆಸರಿಗೆ ಮಾಡಿದಾಗಲೂ, ಅವರು ಚೆನ್ನಾಗಿ ನೋಡಿಕೊಳ್ಳದಿದ್ದರೆ, ಪುನಃ ಆ ತಂದೆಯ ಹೆಸರಿಗೆ ಮಕ್ಕಳ ಆಸ್ತಿ ವರ್ಗಾಯಿಸಿಕೊಳ್ಳಬಹುದು. ಇಂತಹವೊಂದು ಆದೇಶವನ್ನು ಬಾಗಲಕೋಟೆ ಉಪ ವಿಭಾಗಾಧಿಕಾರಿ ಹೊರಡಿಸಿದ್ದಾರೆ.
ಹೌದು, ತನ್ನ ಜಮೀನನ್ನು ಇಬ್ಬರು ಮಕ್ಕಳ ಹೆಸರಿಗೆ ಬರೆದು ಕೊಟ್ಟಿದ್ದನ್ನು ಮರಳಿ ಅವರಿಗೆ ಹಕ್ಕನ್ನು ಬದಲಾಯಿಸಿ ಪಾಲಕರ ಪೋಷಣೆ ಹಾಗೂ ಹಿರಿಯ ನಾಗರಿಕ ರಕ್ಷಣಾ ಕಾಯ್ದೆಯಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಗುಳೇದಗುಡ್ಡದ ತಾಲೂಕಿನ ಹಂಗರಗಿ ಗ್ರಾಮದ ನಿವಾಸಿ ವೃದ್ಧ ಯಮನಪ್ಪ ಮಾದರ ಆಸ್ತಿ ವಿಷಯವಾಗಿ ನ್ಯಾಯ ಕೊಡಿಸುವಂತೆ ಪಾಲಕರ ಪೋಷಣೆ ರಕ್ಷಣಾ ಕಾಯ್ದೆಯಡಿ ಮನವಿ ಅರ್ಜಿ ಸಲ್ಲಿಸಿದ್ದರು. ಪ್ರಕರಣ ವಿಚಾರಣೆಗೆ ಸಂಬಂದಪಟ್ಟವರಿಗೆ ನೋಟಿಸ್ ಜಾರಿ ಮಾಡಲಾಗಿ, ಸದರಿ ಮನವಿದಾರರು ಸುಮಾರು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿರುವುದಕ್ಕೆ ವೈದ್ಯಕೀಯ ದಾಖಲೆ ಹಾಜರು ಪಡಿಸಿದ್ದರು.
ಮನವಿದಾರ ಯಮನಪ್ಪ ಮಾದರ ಅವರು, ಈಗಾಗಲೇ ತಮ್ಮ ಇಬ್ಬರು ಮಕ್ಕಳಾದ ವಾಸುದೇವ ಮತ್ತು ನಿಜಗುಣಿ ಅವರಿಗೆ ತಮ್ಮ ಜಮೀನಿನ ತಮ್ಮ ಹಕ್ಕನ್ನು 1994 ರಲ್ಲಿಯೇ ಬಿಟ್ಟು ಕೊಟ್ಟಿದ್ದರು. ಆದರೆ ಆ ಮಕ್ಕಳು ಅವರ ಜೀವನಕ್ಕೆ ಆರ್ಥಿಕವಾಗಿ ಯಾವ ಸಹಾಯಧನ ನೀಡುತ್ತಿರಲಿಲ್ಲ. ತಮ್ಮ ಕೊನೆಯಗಾಲದಲ್ಲಿ ತನ್ನ ನಂತರ ಮಡದಿಯ ಜೀವನ ಸಾಗಿಸಲು ಸೂಕ್ತ ಸಹಾಯ ದೊರೆಯುವುದಿಲ್ಲವೆಂಬ ಅಳಲನ್ನು ತೋಡಿಕೊಂಡಿದ್ದರು.
ಈ ಕುರಿತು ಪಾಲಕರ ಪೋಷಣೆ ಸಂರಕ್ಷಣೆ ಹಾಗೂ ಹಿರಿಯ ನಾಗರಿಕ ರಕ್ಷಣಾ ನ್ಯಾಯ ಮಂಡಳಿಯಲ್ಲಿ ಸದರಿ ಮನವಿದಾರ ಮತ್ತು ಪ್ರತಿವಾದಿಗಳ ಹೇಳಿಕೆ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಅವರು, ಗುಳೇದಗುಡ್ಡ ತಾಲೂಕಿನ ಹಂಗರಗಿ ಗ್ರಾಮದ ಜಮೀನನ್ನು ತನ್ನ ಇಬ್ಬರು ಗಂಡು ಮಕ್ಕಳಿಗೆ ಹಕ್ಕು ಬಿಟ್ಟಿರುವುದನ್ನು ರದ್ದು ಮಾಡಿ ಮರಳಿ ತಂದೆ-ತಾಯಿಯರ ಹೆಸರಿಗೆ ಹಕ್ಕು ಬದಲಾವಣೆ ಮಾಡಿ ಆದೇಶ ಹೊರಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.