ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಬೀನಾ ವೈದ್ಯ ಎಜ್ಯುಕೇಶನ್‌ ಟ್ರಸ್ಟ್‌ (ರಿ)

ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಮಾದರಿ ಪರಿವರ್ತನೆಗೆ ಶ್ರಮ: ವಿದ್ಯಾ ಕ್ಷೇತ್ರಕ್ಕೆ ಕಾಲಿಡುತ್ತಲೇ ಪೋಷಕರ ಮನಗೆಲ್ಲುವಲ್ಲಿ ಯಶಸ್ವಿ

Team Udayavani, Jul 2, 2022, 2:00 PM IST

thumb ad 4

ವಿದ್ಯಾ ದಾನಂ ಮಹಾದಾನಂ ಎನ್ನುವಂತೆ ಇಂದಿನ ಜಾಗತಿಕ ಸ್ಪರ್ಧಾ ಯುಗದಲ್ಲಿ ವಿದ್ಯೆಯೇ ಪ್ರಧಾನವಾಗುತ್ತಿದೆ. ಅದರಲ್ಲೂ ಗುಣಮಟ್ಟದ ಶಿಕ್ಷಣ, ಆಧುನಿಕ ಕಲಿಕೋಪಕರಣ ಇತ್ಯಾದಿಗಳು ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಇದನ್ನೆಲ್ಲವನ್ನರಿತು ಗ್ರಾಮೀಣ ಭಾಗದ ಒಂದು ಮಗುವೂ ಕೂಡಾ ಗುಣಮಟ್ಟದ ಶಿಕ್ಷಣ ಪಡೆಯಬೇಕು, ಮಗುವಿನ ಸರ್ವತೋಮುಖ ಬೆಳವಣಿಗೆಗೆ ಒಂದು ವಿದ್ಯಾ ಸಂಸ್ಥೆಯ ಅಗತ್ಯತೆಯನ್ನು ಕಂಡುಕೊಂಡ ಉದ್ಯಮಿ, ರಾಜಕಾರಣಿ ಎಲ್ಲದಕ್ಕೂ ಮಿಗಿಲಾಗಿ ಕೊಡುಗೈ ದಾನಿ ಮಂಕಾಳ ಎಸ್‌.ವೈದ್ಯ ಆರಂಭಿಸಿದ್ದೇ ಬೀನಾ ವೈದ್ಯ ಎಜ್ಯುಕೇಶನ್‌ ಟ್ರಸ್ಟ್‌ (ರಿ)ನೀರಗದ್ದೆ, ಮುರ್ಡೇಶ್ವರ.

ಓರ್ವ ಜನಸಾಮಾನ್ಯನಾಗಿ, ಉದ್ಯಮಿಯಾಗಿ, ಶಾಸಕರಾಗಿ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಭರವಸೆ ಮೂಡಿಸಿದ್ದ ಮಂಕಾಳ ವೈದ್ಯ ಅವರು ವಿದ್ಯಾ ಕ್ಷೇತ್ರಕ್ಕೆ ಕಾಲಿಡುತ್ತಲೇ ಪೋಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಎಷ್ಟೋ ವಿದ್ಯಾ ಸಂಸ್ಥೆಗಳು ಕೇವಲ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿಂದ ಆರಂಭವಾಗುತ್ತದೆಯಾದರೆ ಇವರ ವಿದ್ಯಾಸಂಸ್ಥೆ ಮಾತ್ರ ಆರಂಭದಲ್ಲಿಯೇ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಆರಂಭವಾಗಿರುವುದು ಜನತೆ ಅವರ ಮೇಲಿಟ್ಟಿರುವ ವಿಶ್ವಾಸದ ಧ್ಯೋತಕವಾಗಿದೆ ಎಂದರೆ ಅತಿಶಯವಾಗಲಾರದು.

ತಾಲೂಕಿನಲ್ಲಿ ಒಂದು ಉತ್ತಮ ವಿದ್ಯಾ ಸಂಸ್ಥೆಯನ್ನು ಹುಟ್ಟು ಹಾಕಬೇಕು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಕ್ರೀಡೆ, ಸಾಂಸ್ಕೃತಿಕ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡಬೇಕು, ವಿದ್ಯಾರ್ಥಿಗಳು ಕೇವಲ ಸರ್ಟಿಫಿಕೇಟ್‌ ಮಾತ್ರವಲ್ಲ ಜೀವನ ಶಿಕ್ಷಣ ಕಲಿಯಬೇಕು ಎನ್ನುವುದು ಇವರ ಮೂಲ ಉದ್ದೇಶವಾಗಿದ್ದು, ಇಂದು ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆಯೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ದಾಖಲೆಗಳನ್ನು ಬರೆಯುತ್ತಿದ್ದಾರೆ.

ಇಂದು ಬೀನಾ ವೈದ್ಯ ಇಂಟರ್‌ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ನಲ್ಲಿ ಎಲ್‌ಕೆಜಿಯಿಂದ ಡಿಗ್ರಿ ತನಕ ವಿದ್ಯಾಭ್ಯಾಸ ಮಾಡಲು ಅವಕಾಶವಿದ್ದು, ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಉತ್ತಮ ಸುಸಜ್ಜಿತ ಕಟ್ಟಡದಲ್ಲಿ ವಿಶಾಲವಾದ ಕೋಣೆಗಳು, ಉತ್ತಮ ಗಾಳಿ, ಬೆಳಕಿನ ವ್ಯವಸ್ಥೆ ಇರುವ ತರಗತಿಗಳು, ಸ್ಮಾರ್ಟ್‌ ಕ್ಲಾಸ್‌ ಬೋಧನಾ ವ್ಯವಸ್ಥೆ, ಇಂಟರ್‌ನೆಟ್‌ ಸೌಲಭ್ಯ ಮತ್ತು ಕಂಪ್ಯೂಟರ್‌ ಶಿಕ್ಷಣ, ಶಾಲಾ ವಾಹನದ ಸೌಲಭ್ಯ, ಮಧ್ಯಾಹ್ನ ಉಚಿತ ಭೋಜನ ವ್ಯವಸ್ಥೆ, ವಸತಿ ನಿಲಯ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು, ದೈಹಿಕ ಶಿಕ್ಷಣ, ಕಲೆ, ಕ್ರೀಡೆ, ಕರಾಟೆ, ವೆಸ್ಟರ್ನ್ ಮ್ಯೂಸಿಕ್‌, ತಬಲಾ, ಹಾರ್ಮೊನಿಯಂ, ಯೋಗ, ಭರತನಾಟ್ಯ ಮುಂತಾದ ವ್ಯವಸ್ಥೆ ಕಲ್ಪಿಸಲಾಗಿದೆ.

ಬೀನಾ ವೈದ್ಯ ಶಿಕ್ಷಣ ಸಂಸ್ಥೆ ಮೇಲೆ ಜನತೆಯಿಟ್ಟಿರುವ ವಿಶ್ವಾಸದ ಧ್ಯೋತಕ ಎನ್ನುವಂತೆ ವಿದ್ಯಾರ್ಥಿಗಳು ಕೂಡಾ ಅನೇಕ ಸಾಧನೆಗಳನ್ನು ಮಾಡುತ್ತಿದ್ದಾರೆ. ಸಂಸ್ಥೆಯೂ ಕ್ರೀಡಾ ಕ್ಷೇತ್ರಕ್ಕೆ ಆದ್ಯತೆ ನೀಡುತ್ತಿದ್ದು, ಸಂಸ್ಥೆ ಈಗಾಗಲೇ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲೂ ಭಾಗವಹಿಸಿದ್ದನ್ನು ಸ್ಮರಿಸಬಹುದು.

ಕಾಲೇಜಿನ ಬಿಕಾಂ ವಿಭಾಗದಲ್ಲಿ ವಿದ್ಯಾರ್ಥಿಯು ದುಬೈ ಯೂನಿವರ್ಸಿಟಿ ಕ್ರಿಕೆಟ್‌ ಅಸೋಶಿಯೇಶನ್‌ಗೆ ಆಯ್ಕೆಯಾಗಿದ್ದು, ವಿದ್ಯಾರ್ಥಿಗಳು ಪೋಲ್‌ಬಾಲ್ ನಲ್ಲಿ ದಾಖಲೆ ನಿರ್ಮಿಸಿ ಯೂನಿವರ್ಸಿಟಿ ಬ್ಲ್ಯೂಗಳಾಗಿದ್ದು ಹಾಗೂ ವಿದ್ಯಾರ್ಥಿನಿಯರ ವಿಭಾಗದಲ್ಲಿ ಸತತವಾಗಿ ವಿನ್ನರ್‌ ಹಾಗೂ ರನ್ನರ್‌ ಅಫ್‌ ಆಗಿ ಹೊರ ಹೊಮ್ಮುತ್ತಿರುವುದು ಹೆಮ್ಮೆಯ ಸಂಗತಿ. ಪಿಯುಸಿ ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದ ಪೋಲ್‌ವಾಲ್ಟ್ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಕಲೆ ಮತ್ತು ಕ್ರೀಡೆಯಲ್ಲಿ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ವಿವಿಧೆಡೆ ಆಯೋಜಿಸಲಾದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆಲ್ಲುವ ಮೂಲಕ ಸಾಧನೆ ಮಾಡುವುದರೊಂದಿಗೆ ಆ ಸಂಪ್ರದಾಯ ಮುಂದುವರಿಸಿಕೊಂಡು ಹೋಗುತ್ತಿದೆ. ಇಲ್ಲಿ ಬಿಕಾಂನಲ್ಲಿ ಕಲಿತ ವಿದ್ಯಾರ್ಥಿಗಳು ಭಾಗಶಃ ಉದ್ಯೋಗಸ್ಥರಾಗಿದ್ದು ಅಸಿಸ್ಟೆಂಟ್‌ ಪ್ರೊಫೆಸರ್, ಮಲ್ಟಿ ನ್ಯಾಶನಲ್‌ ಕಂಪನಿ, ಬ್ಯಾಂಕ್‌ಗಳು, ಕೋ-ಆಪ್‌ರೇಟಿವ್‌ ಸೊಸೈಟಿಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಸಿ.ಎ ಮತ್ತು ಸಿ.ಎಸ್‌. ವ್ಯಾಸಂಗ ಮಾಡುತ್ತಿದ್ದಾರೆ.

2020-21ನೇ ಸಾಲಿನಲ್ಲಿ ವಿದ್ಯಾರ್ಥಿ ಕರ್ನಾಟಕ ಯುನಿವರ್ಸಿಟಿಯಲ್ಲಿ 6ನೇ ರ್‍ಯಾಂಕ್‌ ಪಡೆಯುವುದರೊಂದಿಗೆ ಸಂಸ್ಥೆಯ ಶಿಕ್ಷಣದ ಗುಣಮಟ್ಟ ಸಾಬೀತು ಪಡಿಸಿದೆ. ಶಾಲೆಯು ವಿದ್ಯಾರ್ಥಿಗಳ ಕೌಶಲ್ಯದ ಕಡೆಗೆ ಹೆಚ್ಚು ಗಮನ ವಹಿಸುತ್ತಿದ್ದು, ರಾಷ್ಟ್ರಮಟ್ಟದಲ್ಲಿ ವಿಜ್ಞಾನದ ಇನ್ಸ್‌ಫೈರ್‌ ಅವಾರ್ಡ್‌ಗೆ ಭಾಜನವಾಗಿದೆ.

ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಹಾಗೂ ಆಸಕ್ತಿದಾಯಕ ರೀತಿಯಲ್ಲಿ ಶಿಕ್ಷಣ ನೀಡುವಲ್ಲಿ ಸಂಸ್ಥೆ ಪ್ರಮುಖ ಪಾತ್ರ ವಹಿಸುತ್ತಿದೆ. ವಿದ್ಯಾರ್ಥಿಗಳಿಗೆ ವೈಯಕ್ತಿಕ ಆರೈಕೆ, ಸ್ನೇಹಪರ ಮಾರ್ಗದರ್ಶನ, ಸಂವಹನ ಕೌಶಲ್ಯಗಳು, ಸ್ಪರ್ಧಾತ್ಮಕ, ಬ್ಯಾಂಕಿಗ್‌ ಹಾಗೂ ನೀಟ್‌, ಜೆಇಇ, ಸಿಇಟಿ ಪರೀಕ್ಷೆಗಳಿಗಾಗಿ ವಿಶೇಷ ತರಬೇತಿ, ಪ್ರತಿದಿನ ಪರಿಹಾರ ತರಗತಿಗಳು, ಆಧುನಿಕ ಡಿಜಿಟಲಿಕೃತ ಕಂಪ್ಯೂಟರ್ ಲ್ಯಾಬ್‌ ಮತ್ತು ಸೈನ್ಸ್‌ ಲ್ಯಾಬ್‌, ಮ್ಯಾಥ್ಸ್ ಲ್ಯಾಬ್‌ ಇತ್ತೀಚಿನ ನಿಯತಕಾಲಿಕೆಗಳು ಹಾಗೂ ಪುಸ್ತಕಗಳ ಸಂಪುಟಗಳೊಂದಿಗೆ ಉತ್ತಮವಾಗಿ ಒದಗಿಸಲಾದ ಡಿಜಿಟಲ್‌ ಗಂಥಾಲಯ, ಇಂಟರ್‌ನೆಟ್‌ ಸೌಲಭ್ಯ, ಐ-ಟೆಕ್‌ ಸ್ಮಾರ್ಟ್‌ಕ್ಲಾಸ್‌, ದೃಶ್ಯ ಮಾಧ್ಯಮ ಕೊಠಡಿ, ಇಂಡೋರ್‌ ಸ್ಪೋರ್ಟ್ಸ್ ರೂಮ್‌, ರಿಸೋರ್ಸ್‌ ರೂಮ್‌, ಜಿಮ್‌, ನಾಯಕತ್ವ ಗುಣಗಳನ್ನು ಬೆಳೆಸಲು ಮತ್ತು ವೇದಿಕೆಯ ಧೈರ್ಯವನ್ನು ಅಭಿವೃದ್ಧಿ ಪಡಿಸಲು ವಿಶೇಷ ಅಸೆಂಬ್ಲಿಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಸ್ಪರ್ಧಾತ್ಮಕ, ಮಾನಸಿಕ ಸ್ಥಿತಿಯನ್ನು ಜಾಗೃತಗೊಳಿಸಲು ಅನೇಕ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಇದರಲ್ಲಿ ಎಲ್ಲಾ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಬಹುಮಾನ ಗೆಲ್ಲುತ್ತಾರೆ. ಶಿಕ್ಷಕರಿಗೆ-ಪೋಷಕರಿಗೆ ತರಬೇತಿ ಕಾರ್ಯಾಗಾರಗಳು, ಸಮಾಲೋಚನೆಗಳು, ಒತ್ತಡಮುಕ್ತ ಕಲಿಕೆ, ಸೃಜನಶೀಲ ಶಿಕ್ಷಣ ಹಾಗೂ ನೈತಿಕ ಮೌಲ್ಯಗಳು ಹೀಗೆ ಮೇಘಾ ಮತ್ತು ಮೈಕ್ರೋ ಇವೆಂಟ್‌ಗಳು ನವೀಕೃತ ಶಕ್ತಿಯೊಂದಿಗೆ ಶಿಕ್ಷಕರು ಸಹಾ ಕಲಿಯುವವರಾಗಿದ್ದಾರೆ ಎಂಬುದನ್ನು ನಂಬಿ ಅಪ್ಡೇಟ್ ಆಗುವುದು ಯಾವುದೇ ಕ್ಷೇತ್ರದಲ್ಲಿ ಯಶಸ್ಸಿನ ಕೀಲಿಕೈ ಆಗಿದೆ ಎಂಬುದನ್ನು ಬಲವಾಗಿ ನಂಬಿ ಸಂಸ್ಥೆಯು ಹೊಸ ಶಿಕ್ಷಣ ನೀತಿಗೆ ತನ್ನನ್ನು ತೆರೆದುಕೊಳ್ಳುತ್ತಿದೆ.

ರಾಷ್ಟ್ರದ ಭವಿಷ್ಯದ ಉತ್ತಮ ನಾಗರಿಕರನ್ನಾಗಿ ಬೆಳೆಸಲು ಬೀನಾ ವೈದ್ಯ ಎಜ್ಯುಕೇಶನ್‌ ಟ್ರಸ್ಟ್‌, ಸುಸಜ್ಜಿತ ಮೂಲ ಸೌಕರ್ಯದೊಂದಿಗೆ ಶುದ್ಧ ಪೌಷ್ಟಿಕಾಂಶವುಳ್ಳ ಆಹಾರವನ್ನು ಶುಚಿತ್ವದೊಂದಿಗೆ ವ್ಯವಸ್ಥಿತವಾಗಿ ನೀಡುತ್ತಿದೆ. ಮಕ್ಕಳ ಆರೋಗ್ಯ ಮತ್ತು ನೈರ್ಮಲ್ಯ ನೋಡಿಕೊಳ್ಳಲು ಕ್ಲಿನಿಕಲ್‌ ಸೌಲಭ್ಯ, ವಿಶೇಷ ದಾದಿಯರನ್ನು ಹೊಂದಿದೆ. ದೂರದಿಂದ ಬರುವ ಮಕ್ಕಳಿಗೆ ಸುಸಜ್ಜಿತ ಸಾರಿಗೆ ಸೌಲಭ್ಯ ಮತ್ತು ಸುಸಜ್ಜಿತ ವಸತಿ ಹಾಸ್ಟೇಲ್‌, ಸಹ ಪಠ್ಯ ಚಟುವಟಿಕೆಗಳ ಜತೆಗೆ ಶೈಕ್ಷಣಿಕ ಚಟುವಟಿಕೆಗಳನ್ನು ಸಮತೋಲನಗೊಳಿಸುತ್ತಿದೆ. ಉತ್ತಮ ಕಾರ್ಯಕ್ಷಮತೆಗಾಗಿ ಮಕ್ಕಳ ಹೊಂದಾಣಿಕೆ, ಸಮಾಲೋಚನಾ ತಂಡ, ಡೌಟ್‌ ಕ್ಲಿಯರಿಂಗ್‌ ಸೆಕ್ಷನ್‌, ಕ್ಲಾಸ್‌ ಮತ್ತು ಸ್ಲಿಪ್‌ ಟೆಸ್ಟ್‌, ಅತಿಥಿ ಉಪನ್ಯಾಸಕರ ಕೌನ್ಸೆಲಿಂಗ್‌ ಸೆಕ್ಷನ್‌, ಉತ್ತಮವಾದ ಶೌಚಾಲಯ ಕೊಠಡಿಗಳು, ಅಕ್ವಾಗಾರ್ಡ್‌ ಮತ್ತು ಫಿಲ್ಟರ್‌ ನೀರಿನ ವ್ಯವಸ್ಥೆ, ಶೈಕ್ಷಣಿಕ ವಿಹಾರ, ಸಂಸತ್ತು ಮತ್ತು ಮನೆಗಳ ವ್ಯವಸ್ಥೆ ಮತ್ತು ವಿವಿಧ ಕ್ಲಬ್‌ಗಳನ್ನು ಹೊಂದಿದೆ. ಹಾಗೂ ಅನೇಕ ಕಾರ್ಯಕ್ರಮಗಳನ್ನು ಸಂಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಗಳನ್ನು ಹೊರ ತೆಗೆಯಲು ಪ್ರಯತ್ನಿಸುತ್ತಿದೆ. ಸಂಸ್ಥೆ 10 ವರ್ಷಗಳಿಂದ ಸಮಾಜದ ವಿದ್ಯಾರ್ಥಿಗಳ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಮಾದರಿಯ ಪರಿವರ್ತನೆಗೆ ಶ್ರಮಿಸುತ್ತಿದ್ದು, ಗುಣಮಟ್ಟದ ಶಿಕ್ಷಣ ಮೂಲಕ ಆತ್ಮವಿಶ್ವಾಸದ ಭವಿಷ್ಯದ ನಾಯಕರನ್ನು, ಶಿಸ್ತಿನ, ಜವಬ್ದಾರಿಯುತ ಒಗ್ಗಟ್ಟಿನ ಸಮಾಜ ರಚಿಸಲು ಮುನ್ನಡೆಯುತ್ತಿದೆ.

ಸಂಸ್ಥೆಯ ಆಡಳಿತ ವೈಖರಿಗೆ ಎಷಿಯನ್‌ ಫೆಸಿಪಿಕ್‌ ಎಕ್ಸಲೆನ್ಸ್‌ ಅವಾರ್ಡ್‌ 2021 ಪ್ರಶಸ್ತಿ ಸಂದಿದೆ. ಸದಾ ಶಿಕ್ಷಣಕ್ಕಾಗಿಯೇ ಮನಮಿಡಿಯುವ ಶ್ರೀಯುತ ಮಂಕಾಳ ವೈದ್ಯರು, ಸಂಸ್ಥೆಯ ಬೆಳವಣಿಗೆಗೆ ಅಪಾರ ಶ್ರಮ, ಸಮಯ ನೀಡುತ್ತಿರುವ ಆಡಳಿತ ನಿರ್ದೇಶಕಿಯಾದ ಶ್ರೀಮತಿ ಪುಷ್ಪಲತಾ ವೈದ್ಯ, ಅಗತ್ಯ ಸಲಹೆ-ಸೂಚನೆ ನೀಡಲು ಸಲಹಾ ಸಮಿತಿ, ಉತ್ತಮ ಆಡಳಿತ ಮಂಡಳಿ, ಅವರಿಗೆ ಸಹಕಾರ ನೀಡುವ, ಶಿಕ್ಷಣದಲ್ಲಿ ಉತ್ತಮ ಅನುಭವ ಹೊಂದಿರುವ ಅನುಭವಿ ಪ್ರಾಂಶುಪಾಲರು, ಉತ್ತಮ ಪ್ರತಿಭಾನ್ವಿತ ಶಿಕ್ಷಕ ವರ್ಗ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿದೆ.

ಟಾಪ್ ನ್ಯೂಸ್

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IPL: Players from these countries are fully available for the next three seasons of IPL

IPL: ಇನ್ನು ಮೂರು ಸೀಸನ್‌ ಐಪಿಎಲ್‌ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ

1-a-raga-pg

Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್

Sagara: ತರಗತಿ ಕೊಠಡಿ ಅವ್ಯವಸ್ಥೆ; ಎಲ್‌ಬಿ ಕಾಲೇಜಿನ ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ

Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ

Talk war between Minister Sharanabasappa Darshanapura and MLA Sharanagouda Kandakur in KDP meeting

Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ

Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

1-honey

Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ‌,ಮಗಳು

5-dandeli

Dandeli: ವಿದ್ಯುತ್ ಕಂಬದ ಜಿಓಎಸ್ ಕಳವು‌ ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು

10

Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ

Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ

ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

1-motte

School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.