ಪ್ರವಾಸಿ ತಾಣ ಅಂತರಗಂಗೆ ಬೆಟ್ಟದಲ್ಲಿ ಜಂಗಲ್‌ ಲಾಡ್ಜ್!

ಬಾವಿ, ಔಷಧ ಗಿಡ ಮರಗಳು ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರು.

Team Udayavani, Jul 1, 2022, 6:03 PM IST

ಅಂತರಗಂಗೆ ಬೆಟ್ಟದಲ್ಲಿ ಜಂಗಲ್‌ ಲಾಡ್ಜ್!

ಕೋಲಾರ: ಬೆಂಗಳೂರಿಗೆ ಸಮೀಪವಿರುವ ಕೋಲಾರದ ಶತಶೃಂಗ ಬೆಟ್ಟವೆಂದು ಕರೆಯಲ್ಪಡುವ ಅಂತರ ಗಂಗೆ ಬೆಟ್ಟವನ್ನು ಹೇಗಾದರೂ ಮಾಡಿ, ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಬೇಕೆಂಬ ಪಣತೊಟ್ಟಿರುವ ಎಸ್‌ಪಿ ದೇವರಾಜ್‌ ಅವರು, ಜಂಗಲ್‌ ಲಾಡ್ಜ್ ಅಂಡ್‌ ರೆಸಾರ್ಟ್‌ ಎಂಡಿ ಹಾಗೂ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳನ್ನ ಜೊತೆಗೆ ಕರೆದುಕೊಂಡು ಬೆಟ್ಟ ಹತ್ತಿಸಿ ಪ್ರಕೃತಿ ಸ್ವರ್ಗದಂತಿರುವ ಸ್ಥಳಗಳನ್ನು ತೋರಿಸಿದರು.

ಇತ್ತೀಚಿಗೆ ಸುರಿದ ಮಳೆಯಿಂದಾಗಿ ಹಚ್ಚಹಸಿರಿನಿಂದ ಕಂಗೊಳಿಸುತ್ತಿರುವ ಅಂತರಗಂಗೆ ಬೆಟ್ಟಕ್ಕೆ ಬೆಳ್ಳಂಬೆಳಗ್ಗೆ ಪೊಲೀಸ್‌ ವರಿಷ್ಠಾಧಿಕಾರಿ ಜೊತೆಗೆ ಕೆಲವು ಅಧಿಕಾರಿಗಳು ಟ್ರಕ್ಕಿಂಗ್‌ಗೆ ಬಂದಿದ್ದರು. ಇನ್ನು ಕೆಲವರು ಬೆಟ್ಟದ ಮೇಲೆ ಸಿಗುವ ಹಣ್ಣು ಕಾಯಿ ತಿನ್ನುತ್ತಾ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿದರು.

ಬಹಳ ವರ್ಷದಿಂದ ನನೆಗುದಿಗೆ: ಕೋಲಾರದ ಶತಶೃಂಗ ಬೆಟ್ಟವೆಂದು ಕರೆಯುವ ಅಂತರಗಂಗೆ ಬೆಟ್ಟ ಪ್ರವಾಸಿ ತಾಣವಾಗದೆ, ಬಹಳಷ್ಟು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಅಂತರಗಂಗೆ ಬೆಟ್ಟದಲ್ಲಿ ಇತ್ತೀಚಿಗೆ ಸಂಸದ ಎಸ್‌ ಮುನಿಸ್ವಾಮಿ ನೇತೃತ್ವದಲ್ಲಿ ಸುಮಾರು 20 ಸಾವಿರ ಮಂದಿ ಭಾಗಿಯಾಗಿ ವಿಶ್ವ ಯೋಗ ದಿನಾಚರಣೆ ಆಚರಿಸಿದ ಬೆನ್ನಲ್ಲೇ ಈಗ ಜಿಲ್ಲೆಯವರೇ ಆದ ಎಸ್‌ಪಿ ಡಿ. ದೇವರಾಜ್‌ ಪ್ರವಾಸೋದ್ಯಮ ಇಲಾಖೆಯ ಜಂಗಲ್‌ ಲಾಡ್ಜ್ ಅಂಡ್‌ ರೆಸಾರ್ಟ್‌ ಎಂಡಿ ಮನೋಜ್‌ ಕುಮಾರ್‌ ರೆಡ್ಡಿ, ಅರಣ್ಯ ಇಲಾಖೆ ಸಿಸಿಎಫ್‌ ಲಿಂಗಾರಾಜು, ಡಿಎಫ್‌ಒ ಶಿವಶಂಕರ್‌ ಸೇರಿದಂತೆ ಇತರೆ ಅಧಿಕಾರಿಗಳ ತಂಡದೊಂದಿಗೆ ಆಗಮಿಸಿದ್ದರು.

ಬೆಳ್ಳಂಬೆಳಗ್ಗೆ ಅಂತರಗಂಗೆ ಬೆಟ್ಟವನ್ನು ಟ್ರೆಕ್ಕಿಂಗ್‌ ಮಾಡಿಸಿ, ಬೆಟ್ಟದಲ್ಲಿರುವ ಶ್ರೀ ಕಾಶಿ ವಿಶ್ವನಾಥ ದೇವಾಲಯ ದರ್ಶಿಸಿ, ಬಸವನ ಬಾಯಲ್ಲಿ ನೀರು ಬರುವುದು, ಬೆಟ್ಟದಿಂದ ನೀರು ಹರಿದು ಧುಮುಕುವ ಫಾಲ್ಸ್‌, ಗುಹೆ, ಕೋಟೆ, ಬಾವಿ, ಔಷಧ ಗಿಡ ಮರಗಳು ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರು.

ಸುಂದರವಾದ ಸ್ಥಳಗಳು: ಬೆಂಗಳೂರಿಗೆ ಬಹಳ ಹತ್ತಿರವಾದ ಅಂತರಗಂಗೆ ಬೆಟ್ಟದಲ್ಲಿ ಸುಂದರವಾದ ಸ್ಥಳಗಳು ಇವೆ. ಪರಿಸರ ಜೊತೆ ಬೆರೆಯುವುದಕ್ಕೆ ಜಂಗಲ್‌ ಲಾಡ್ಜ್ ಕಡೆಯಿಂದ ಏನಾದರೂ ಅಭಿವೃದ್ಧಿ ಮಾಡಬೇಕು ಎಂದು ಎಂಡಿ ಮನೋಜ್‌ ಕುಮಾರ್‌ ರೆಡ್ಡಿ ಅವರಲ್ಲಿ ಮನವಿ ಮಾಡಿದರು.

ಜಂಗಲ್‌ ಲಾಡ್ಜ್$ ಅಂಡ್‌ ರೆಸಾರ್ಟ್ಸ್ನ ಎಂಡಿ ಮನೋಜ್‌ ಕುಮಾರ್‌ ಮಾತನಾಡಿ, ಅಂತರಗಂಗೆ ಬೆಟ್ಟ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಜಾಗವಾಗಿದೆ. ಬೆಂಗಳೂರಿನ ಯುವಕ, ಯುವತಿಯರು ಟ್ರಕ್ಕಿಂಗ್‌ಗೆ ಇಂತಹ ಜಾಗಗಳಿಗೆ ಬರುತ್ತಾರೆ. ಇನ್ನು ಅವರಿಗೆ ಮಾತ್ರವಲ್ಲದೆ ಜನಸಾಮಾನ್ಯರು ಬಂದು ಈ ಪರಿಸರ ವಾತಾವರಣದಲ್ಲಿ ಸಂತಸಪಟ್ಟು ಹೋಗುವ ದೃಷ್ಟಿ ಇಟ್ಟುಕೊಂಡು ಮೊದಲು ಜಂಗಲ್‌ ಕ್ಯಾಂಪ್‌ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಅಂತರಗಂಗೆ ಬೆಟ್ಟ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಜಾಗ. ಯುವತಿಯರು ಟ್ರಕ್ಕಿಂಗ್‌ಗೆ ಬರುತ್ತಾರೆ. ಅಲ್ಲದೆ, ಸಾಮಾನ್ಯರು ಈ ಪರಿಸರ ವಾತಾವರಣದಲ್ಲಿ ಸಂತಸಪಟ್ಟು ಹೋಗುವ ದೃಷ್ಟಿಯಿಂದ ಜಂಗಲ್‌ ಕ್ಯಾಂಪ್‌ ಮಾಡುತ್ತೇವೆ.
●ಮನೋಜ್‌ ಕುಮಾರ್‌,
ಜಂಗಲ್‌ ಲಾಡ್ಜ್ ಅಂಡ್‌ ರೆಸಾರ್ಟ್ಸ್ ಎಂಡಿ

ಟಾಪ್ ನ್ಯೂಸ್

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ

Allegation against Amit Shah: Canadian diplomats summoned

Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ: ಅಶ್ವತ್ಥನಾರಾಯಣ

C. N. Ashwath Narayan: ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

0528

Bangarapet: ಗ್ರಾಪಂಗಳಲ್ಲಿ ಇಲ್ಲ ಅಧಿಕಾರಿ-ಸಿಬ್ಬಂದಿ; ಸಮಸ್ಯೆ

Kolar

Air Force Emergency: ಬಂಗಾರಪೇಟೆ ಬಳಿ ವಾಯುಪಡೆ ಹೆಲಿಕಾಪ್ಟರ್‌ ತುರ್ತು ಭೂ ಸ್ಪರ್ಶ

0447

World Tourism Day: ಜಿಲ್ಲೆ ಪ್ರವಾಸೋದ್ಯಮ ಹೆಚ್ಚಳಕ್ಕೆ ಪ್ರಚಾರ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.