ಪಕ್ಷಾಂತರ ನಿಷೇಧ ಕಾಯ್ದೆಗೆ ಇನ್ನಷ್ಟು ತಿದ್ದುಪಡಿ ಅಗತ್ಯ: ಖರ್ಗೆ
ಪಕ್ಷಾಂತರಿಗಳಿಗೆ ತಕ್ಕಶಾಸ್ತಿ ಮಾಡಲು ರಾಜಕೀಯ ಪಕ್ಷಗಳು ಒಗ್ಗಟ್ಟಾಗಬೇಕು
Team Udayavani, Jul 1, 2022, 6:49 PM IST
ಕಲಬುರಗಿ: ದೇಶದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಗೆ ಇನ್ನಷ್ಟು ತಿದ್ದುಪಡಿ ತರುವುದು ಅಗತ್ಯವಿದೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ ತಂದು ಪಕ್ಷಾಂತರಿಗಳಿಗೆ ತಕ್ಕಶಾಸ್ತಿ ದೊರಕುವಂತಾಗಲು ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದರು.
ಒಂದು ವೇಳೆ ಯಾರೇ ಪಕ್ಷ ಬಿಡುವುದಾದ್ರೆ , ಬೇರೆ ಪಕ್ಷಕ್ಕೆ ತಗೋಬಾರದು, ಐದು ವರ್ಷ ಸ್ಪರ್ಧಿಸುವ ಅವಕಾಶ ನೀಡಬಾರದು. ಅಂದಾಗ ಮಾತ್ರ ಬುದ್ದಿ ಕಲಿತಾರೆ. ಇಲ್ಲದಿದ್ರೆ ಇದೇ ರೀತಿ ಮಾಡಕೊಂತ ಹೋದ್ರೆ ದೇಶದ ಗತಿ ಏನು ಎಂಬುದೇ ತಿಳಿಯುತ್ತಿಲ್ಲ. ಈ ವಿಷಯದ ಬಗ್ಗೆ ಸಂದರ್ಭ ಬಂದಾಗ ಲೋಕಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸುತ್ತೇನೆ ಎಂದು ಖರ್ಗೆ ತಿಳಿಸಿದರು.
ಮಹಾರಾಷ್ಟ್ರದಲ್ಲಿ ಶಿವಸೇನೆ ನಮ್ಮ ಮೈತ್ರಿ ಸರಕಾರ ಬಂದಾಗಿನಿಂದ ಬೀಳಿಸುವ ಪ್ರಯತ್ನ ನಡೆಯುತ್ತಲೇ ಬಂದಿವೆ. ಅದರಲ್ಲೂ ಬಿಜೆಪಿಯಿಂದ ಒಂದು ಹವ್ಯಾಸವಾಗಿ ಬಿಟ್ಡಿದೆ. ಏನಾದರು ಮಾಡಿ ನಡೆಯೋ ಸರ್ಕಾರ ಉರುಳಿಸುವುದೇ ಆಗಿದೆ.ಸಿಂಧೆಯನ್ನು ಸಿಎಂ ಮಾಡಿದ್ದು ಪೂರ್ವ ನಿಯೋಜಿತ ಯೋಜನೆಯಾಗಿದೆ. ಅವರ ಸರಕಾರ ಬೀಳಿದಿ ನಿಮ್ಮನ್ನೆ ಸಿಎಂ ಮಾಡ್ತಿವಿ ಅಂತ ಹೇಳಿದ್ರು ಅನ್ನಿಸುತ್ತದೆಯಲ್ಲದೇ
ಮಹಾರಾಷ್ಟ್ರದಲ್ಲಿ ಬಿಜೆಪಿ ಕುತಂತ್ರದಿಂದ ಅಧಿಕಾರ ಕಿತ್ತುಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಪಕ್ಷವು ಕರ್ನಾಟಕ, ಮಧ್ಯಪ್ರದೇಶ, ಮಣಿಪುರ್, ಗೋವಾದಲ್ಲಿಯೂ ಸಹ ಬಿಜೆಪಿ ಇದೇ ರೀತಿ ಅಧಿಕಾರ ಕಿತ್ತುಕೊಂಡಿದೆ. ನಾವು ಅಧಿಕಾರ ಕಳೆದುಕೊಂಡಿದ್ದು ಜನರಿಂದ ಅಲ್ಲ. ಅಧಿಕಾರ ಮತ್ತು ಹಣ ಬಲದಿಂದ ಬಿಜೆಪಿ ಈ ರೀತಿ ಮಾಡುತ್ತಿದೆ. ಒಟ್ಟಾರೆ ಇಂತಹ ನಡೆಯು ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಪೆಟ್ಟು. ಲೋಕಸಭೆಯಲ್ಲಿ 330 ಸೀಟು ಗೆದ್ರು, ಅನೇಕ ರಾಜ್ಯಗಳಲ್ಲಿ ಅಧಿಕಾರದಲ್ಲಿದ್ರೂ ಮೋದಿಗೆ ತೃಪ್ತಿ ಇಲ್ಲ ಎಂದು ಖರ್ಗೆ ಟೀಕಿಸಿದರು.
ರಾಜಸ್ಥಾನದಲ್ಲಿ ಕನ್ಹಯ್ಯಲಾಲ್ ಹತ್ಯೆ ಪ್ರಕರಣ: ರಾಜಸ್ತಾನದಲ್ಲಿನ ಟ್ರೈಲರ್ ಹತ್ಯೆ ಘಟನೆ ನಾವೆಲ್ಲರೂ ತೀವ್ರವಾಗಿ ಖಂಡಿಸಿದ್ದೇವೆ. ಯಾರೇ ತಪ್ಪು ಮಾಡಲಿ, ಯಾವ ಪಂಗಡದವನೆ ಆಗಿರಲಿ.. ಅವರಿಗೆ ಕಾನೂನಿನ ಪ್ರಕಾರ ಶಿಕ್ಷೆ ಕೊಡಲೆಬೇಕು. ಘಟನೆ ನಂತರ ಅಲ್ಲಿಯ ಸಿಎಂ ಆರೋಪಿಗಳನ್ನ ತಕ್ಷಣ ಬಂಧಿಸಲು ಕ್ರಮ ಕೈಗೊಂಡಿದ್ದಾರೆ. ಜೊತೆಗೆ ಸಿಎಂ ಕೊಲೆಯಾದ ವ್ಯಕ್ತಿ ಮನೆಗೆ ಹೋಗಿ ಸಾಂತ್ವನ ಹೇಳಿದ್ದಾರೆ. ಹೀಗಾಗಿ ಅಲ್ಲಿನ ಸರಕಾರ ವಜಾ ಮಾಡುವ ಅವಶ್ಯಕತೆ ಇಲ್ಲ. ಹತ್ಯೆಗೆ ಸಂಬಂಧಿಸಿದ ಈಗಾಗಲೇ ಉನ್ನತಮಟ್ಟದ ತನಿಖೆಗೆ ಆದೇಶಿಸಲಾಗಿದೆ. ಆರೋಪಿಗಳು ಪಾಕಿಸ್ಥಾನದ ಜೊತೆ ನಂಟಿದೆ ಎಂಬ ಬಿಜೆಪಿ ಆರೋಪದ ಮೂಲಕ ರಾಜಕೀಯ ಮಾಡಲು ಹೊರಟಿದೆ. ಉತ್ತರ ಪ್ರದೇಶದಲ್ಲಿ ಎಷ್ಟೋ ಘಟನೆಗಳು ನಡೆದಿವೆ. ಅಲ್ಲಿನ ಸರಕಾರ ವಜಾ ಮಾಡಲಾಗಿದೆಯೇ?. ಧರ್ಮದ ಹೆಸರಿನಲ್ಲಿನ ಸಂಘರ್ಷ ಬಿಟ್ಟು ಶಾಂತಿಯಿಂದ ಇರುವಂತೆ ಮಾತಾಡಿ ಎಂದು ಪ್ರಧಾನಿ ಮೋದಿಗೆ ಹೇಳಿದರೆ ಬಾಯಿನೇ ತೆರೆಯಂಗಿಲ್ಲ. ಕಾಂಗ್ರೆಸ್ ಬಗ್ಗೆ ವಿದೇಶದಲ್ಲಿ ಪ್ರಧಾನಿ ಮೋದಿ ಮಾತಾಡ್ತಾರೆ. ಅದೇ ಬೇರೆಯವರು ಮಾತಾಡಿದ್ರೆ ದೇಶಕ್ಕೆ ಅವಮಾನ ಆಯ್ತು ಅಂತಾರೆ. ಹೀಗಾದರೆ ಹೇಗೆ? ಎಂದು ಖರ್ಗೆ ಪ್ರಶ್ನಿಸಿದರು.
ಮಾಜಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
ಕಸ್ತೂರಿಂಗನ್ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.