ಕೊರಟಗೆರೆ: ಬಸ್ ಸ್ಟ್ಯಾಂಡ್ ಆಯಿತು ಮಾರುಕಟ್ಟೆ; ಸಾರ್ವಜನಿಕರಿಗೆ ದಿನನಿತ್ಯ ಕಿರಿ ಕಿರಿ

ವ್ಯಾಪಾರಿಗಳ ಗೋಳು ಕೇಳುವವರು ಯಾರು ?

Team Udayavani, Jul 2, 2022, 7:37 PM IST

1-f-sdfs

ಕೊರಟಗೆರೆ: ಪಟ್ಟಣದ ಎಸ್.ಎಸ್.ಆರ್ ಸರ್ಕಲ್ ಎಂದೇ ಪ್ರಖ್ಯಾತಿಗೊಂಡಿರುವ ಅದರಲ್ಲೂ ಪಟ್ಟಣ ಪಂಚಾಯ್ತಿಯ ಮುಂಭಾಗದಲ್ಲಿರುವ ಬಸ್ ಸ್ಟ್ಯಾಂಡ್ ಸರ್ಕಲ್ ಇದೀಗ ಬಹುದೊಡ್ಡ ಬೀದಿ ಬದಿ ವ್ಯಾಪಾರಿಗಳ ಮಾರುಕಟ್ಟೆಯಾಗಿ ನಿರ್ಮಾಣವಾಗಿದೆ. ಇದಕ್ಕೆಲ್ಲಾ ಪಟ್ಟಣ ಪಂಚಾಯಿತಿಯ ಅಧಿಕಾರಿಗಳ ನಿರ್ಲಕ್ಷವೇ ಕಾರಣವಾಗಿದೆ. ಮಾರುಕಟ್ಟೆಗೆ ಅಂಗಡಿಗಳನ್ನು ಸ್ಥಳಾಂತರಿಸಲು ನಿರ್ಲಕ್ಷ ತೋರಿರುವ ಅಧಿಕಾರಿಗಳು ಎಲ್ಲಿದ್ದಾರೋ ಗೊತ್ತಾಗದಂತಾಗಿದೆ.

ಕೋವಿಡ್ ಸಂದರ್ಭದಲ್ಲಿ ಇದ್ದಂತಹ ಒಂದೆರಡು ಅಂಗಡಿಗಳು ಇದೀಗ ಬಸ್ ಸ್ಟ್ಯಾಂಡ್ ತುಂಬೆಲ್ಲಾ ಹರಡಿಕೊಂಡು ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಸಮಸ್ಯೆಯನ್ನುಂಟು ಮಾಡುತ್ತಿವೆ. ಇದನ್ನೆಲ್ಲ ಕಂಡೂ ಕಾಣದಂತೆ ಓಡಾಡುವ ತಾಲೂಕಿನ ಅಧಿಕಾರಿ ವರ್ಗದವರು ತಮ್ಮ ಅಧಿಕಾರದ ದಾಹದಲ್ಲಿ ತೇಲಾಡುತ್ತಿದ್ದಾರೆ.

ಇದಕ್ಕೆಲ್ಲ ಮುಕ್ತಿ ಯಾವಾಗ..? ಪ್ರತಿನಿತ್ಯ ನಡೆಸುವ ಮಾರುಕಟ್ಟೆ ಶುರುವಾಗುವುದು ಯಾರಿಂದ? ಎಲ್ಲಿ ಶುರುವಾಗಬೇಕು?. ವಾರದ ಏಳು ದಿನಗಳು ವ್ಯಾಪಾರ ಮಾಡಲು ಮಾರುಕಟ್ಟೆಗೆ ಪ್ರತ್ಯೇಕ ವ್ಯವಸ್ಥೆ ಇದ್ದರೂ ಕೂಡ ಬೀದಿ ಬದಿ ವ್ಯಾಪಾರಿಗಳು ಅಲ್ಲಿಗೆ ಹೋಗುತ್ತಿಲ್ಲ. ವ್ಯಾಪಾರಿಗಳ ಸಮಸ್ಯೆಯನ್ನು ಆಲಿಸಿ ಇದಕ್ಕೆಲ್ಲಾ ಕಾರಣವಾದರೂ ಏನು ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಪ.ಪಂ. ಅಧಿಕಾರಿಗಳು ಮಾಡದೇ
ಇರುವುದು ಅವರ ಕರ್ತವ್ಯಕ್ಕೆ ಅವರೇ ದ್ರೋಹ ಮಾಡುತ್ತಿರುವ ಹಾಗಿದೆ.

ಆಟೋ ಚಾಲಕರಿಗೆ ನಿಲ್ದಾಣವಿಲ್ಲ, ಟ್ಯಾಕ್ಸಿ ಚಾಲಕರಿಗೆ ನಿಲ್ದಾಣವಿಲ್ಲ, ಖಾಸಗಿ ಬಸ್ ನಿಲ್ದಾಣವೂ ಇಲ್ಲ, ಹೂವು ಹಣ್ಣು ತರಕಾರಿ ಮಾರಲು ಮಾರುಕಟ್ಟೆ ಮೊದಲೇ ಇಲ, ಇದರ ಗೊಂದಲದಲ್ಲಿ ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ. ಆದಷ್ಟು ಬೇಗ ಕೊರಟಗೆರೆ ಪ.ಪಂ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪರಿಹಾರ ಒದಗಿಸಲಿ ಎಂಬುದೇ ನಮ್ಮ ಆಶಯ.

ಅಧಿಕಾರಿಗಳು ಆದಷ್ಟು ಬೇಗ ಎಚ್ಚೆತ್ತುಕೊಂಡು ವ್ಯಾಪಾರಸ್ಥರಿಗೆ ಅನುಕೂಲ ಮಾಡಿ ಕೊಡುವುದರ ಮೂಲಕ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಉಂಟಾಗುತ್ತಿರುವ ಸಮಸ್ಯೆಯನ್ನು ತಪ್ಪಿಸಬೇಕಿದೆ. ಇದೇ ತರ ಮುಂದುವರೆದರೆ ಅಪಘಾತಗಳು ಸಂಭವಿಸಿ ಜೀವ ಹಾನಿ ಉಂಟಾಗುವ ಸಂದರ್ಭಗಳು ಹೆಚ್ಚಾಗುತ್ತವೆ. ಆದ್ದರಿಂದ ಪ.ಪಂ. ಅಧಿಕಾರಿಗಳು ಶೀಘ್ರವೇ ಮಾರುಕಟ್ಟೆ ವ್ಯವಸ್ಥೆಯನ್ನು ಮಾಡಬೇಕಿದೆ.

ಪ.ಪಂ. ವ್ಯಾಪ್ತಿಗೆ ಒಳಪಡುವ ಎಲ್ಲಾ ವಾರ್ಡ್‍ಗಳ ಸದಸ್ಯರು ನಮ್ಮ ಜೊತೆ ಸಹಕರಿಸುತ್ತಿದ್ದಾರೆ. ಹಾಗೆಯೇ ಎಲ್ಲಾ ವಾರ್ಡ್‍ಗಳ ಜನತೆಯೂ ಪಟ್ಟಣವನ್ನು ಸ್ವತ್ಛತೆಯಿಂದ ಇಡಲು ನಮ್ಮ ಜೊತೆ ಕೈಜೋಡಿಸಬೇಕಾಗಿದೆ. ಆದ್ದರಿಂದ ಮೊದಲನೆಯ ಕೆಲಸ ತಮ್ಮ ಮನೆಯಲ್ಲಿರುವ ಕಸದ ಬುಟ್ಟಿಗಳಿಂದ ಹಸಿಕಸ ಒಣಕಸವನ್ನು ವಿಂಗಡಿಸಿ ಪಟ್ಟಣ ಪಂಚಾಯಿತಿಯಿಂದ ಬರುವ ವಾಹನದಲ್ಲಿ ಪ್ರತಿನಿತ್ಯ ನೀಡಿ ಸಹಕರಿಸಿ, ಜೊತೆಗೆ ಪಟ್ಟಣದ ಹೃದಯ ಭಾಗವಾಗಿರುವ ಎಸ್ ಎಸ್ ಆರ್ ವೃತ್ತದಲ್ಲಿ ಈಗಾಗಲೇ ಸಾರ್ವಜನಿಕರು ಹಾಗೂ ವಾಹನ ಸವಾರರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಟ್ರಾಫಿಕ್ ಜಾಮ್ ಅಧಿಕಾರಿಗಳಿಗೆ ಕಿರಿಕಿರಿ. ಆದ್ದರಿಂದ ನಾವು ನಿಗದಿಪಡಿಸುವ ಪ್ರತಿ ನಿತ್ಯದ ವಹಿವಾಟಿಗೆ ಮಾರ್ಕೆಟ್ ವ್ಯವಸ್ಥೆ ಮಾಡುತ್ತಿದ್ದೇವೆ. ಅಲ್ಲಿಗೆ ತಾವೆಲ್ಲರೂ ಪ್ರತಿನಿತ್ಯದ ಹೂವು ಹಣ್ಣು ತರಕಾರಿ ಇನ್ನಿತರೆ ವ್ಯಾಪಾರ ವಹಿವಾಟಿಗೆ ಬಳಸಿಕೊಂಡು ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಸಂಚಾರಕ್ಕೆ ಅನುವು ಮಾಡಿಕೊಡಬೇಕು.
– ಭಾಗ್ಯಮ್ಮ, ಪ.ಪಂ. ಕಾರ್ಯನಿರ್ವಹಣಾಧಿಕಾರಿ.

ಈಗಾಗಲೇ ಪಟ್ಟಣದಲ್ಲಿ ಮೂರು ಜಾಗಗಳನ್ನು ಪ್ರತಿನಿತ್ಯದ ಮಾರ್ಕೆಟ್ ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಗುರುತಿಸಲಾಗಿದೆ. ಆದಷ್ಟು ಬೇಗ ಯಾವುದಾದರೂ ಒಂದು ಜಾಗವನ್ನು ಮಾರ್ಕೆಟ್‍ಗೆ ಸಂಬಂಧಿಸಿದಂತೆ ಎಲ್ಲಾ ರೂಪುರೇಷೆಗಳನ್ನು ಸಿದ್ಧಪಡಿಸಿ ವ್ಯವಸ್ಥೆಮಾಡಲಾಗುತ್ತದೆ. ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಆಗುತ್ತಿರುವ ತೊಂದರೆ ನಮ್ಮ ಗಮನಕ್ಕೆ ಬಂದಿದೆ. ಆದಷ್ಟು ಬೇಗ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತೇವೆ. ಆದ್ದರಿಂದ ಬಸ್ಟ್ಯಾಂಡ್ ಮುಂಭಾಗದಲ್ಲಿರುವ ತರಕಾರಿ, ಹೂ, ಹಣ್ಣು ವ್ಯಾಪಾರಿಗಳು ಇದಕ್ಕೆ ನಮ್ಮ ಜತೆ ಸಹಕರಿಸಬೇಕಿದೆ. ಜೊತೆಗೆ ಸಾರ್ವಜನಿಕರ ಹಿತದೃಷ್ಟಿಯಿಂದ ವಾಹನ ಸವಾರರಿಗೆ ಆಗುತ್ತಿರುವ ತೊಂದರೆಯಿಂದ ಇದಕ್ಕೆಲ್ಲಾ ಪರಿಹಾರ ಒದಗಿಸಬೇಕಾಗಿದೆ ದಯವಿಟ್ಟು ಸಾರ್ವಜನಿಕರು ನಮ್ಮ ಜತೆ ಸಹಕರಿಸಿ.
– ಕಾವ್ಯ ರಮೇಶ್, ಪ.ಪಂ. ಅಧ್ಯಕ್ಷರು.

ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವ ಎಲ್ಲ ವಾರ್ಡ್‍ಗಳ ಜನರಿಗೆ ಮೂಲಭೂತ ಸೌಕರ್ಯಗಳ ಅನುಕೂಲ ಮಾಡಿಕೊಡಬೇಕು ಎನ್ನುವುದೇ ನಮ್ಮ ಗುರಿ. ಅದರಂತೆಯೇ ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಬೀದಿಬದಿ ವ್ಯಾಪಾರಿಗಳ ಹಾಗೂ ಸಾರ್ವಜನಿಕರ, ವಾಹನ ಸವಾರರ ಸಮಸ್ಯೆಯು ನಮ್ಮ ಗಮನಕ್ಕೆ ಬಂದಿದೆ, ಆದಷ್ಟು ಬೇಗ ಈ ಎಲ್ಲ ಸಮಸ್ಯೆಗಳಿಗೆ ಸದಸ್ಯರೊಂದಿಗೆ ಚರ್ಚಿಸಿ ಒಂದೇ ಪರಿಹಾರ ಒದಗಿಸುತ್ತೇವೆ.
– ಭಾರತಿ ಸಿದ್ದಮಲ್ಲಪ್ಪ, ಉಪಾಧ್ಯಕ್ಷೆ, ಪ.ಪಂ.

ನಮ್ಮ ಕೊರಟಗೆರೆಯ ಪಟ್ಟಣ ಪಂಚಾಯಿತಿಯ ಅಭಿವೃದ್ಧಿಗೆ ಪಟ್ಟಣದ ಹದಿನೈದು ವಾರ್ಡ್‍ಗಳ ಸದಸ್ಯರು ಒಟ್ಟಿಗೆ ಕೂಡಿ ಕೆಲಸ ಮಾಡುತ್ತಿದ್ದೇವೆ. ಅದರಂತೆ ಈಗ ನಮಗೆ ಎದುರಾಗಿರುವ ಒಂದು ಸಮಸ್ಯೆ ಮಾರುಕಟ್ಟೆ. ಸಾರ್ವಜನಿಕರು ಹಾಗೂ ವಾಹನ ಸವಾರರು ಓಡಾಡುವ ಪಟ್ಟಣ ಪಂಚಾಯ್ತಿಯ ಮುಂಭಾಗದಲ್ಲಿರುವ ಮುಖ್ಯರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಅದರಂತೆ ಸಾರ್ವಜನಿಕರು ಕೂಡ ಸಂಚರಿಸುತ್ತಾರೆ. ಕಳೆದ 2ವರ್ಷಗಳಿಂದ ಕೊರೊನಾ ಎಂಬ ಮಹಾಮಾರಿಯಿಂದ ಬೆಂಗಳೂರು ತೊರೆದು ಸ್ವಗ್ರಾಮಕ್ಕೆ ಬಂದಿರುವ ಕೆಲವು ಜನರು ತಮ್ಮ ದುಡಿಮೆಗಾಗಿ ಸಣ್ಣಪುಟ್ಟ ಬೀದಿಬದಿ ವ್ಯಾಪಾರವನ್ನು ಶುರು ಮಾಡಿಕೊಂಡಿದ್ದಾರೆ. ಅದರಂತೆಯೇ ಬೀದಿಬದಿ ವ್ಯಾಪಾರಸ್ಥರು ಪಟ್ಟಣದ ಪ್ರಮುಖ ರಸ್ತೆ ಬಸ್ ಸ್ಟ್ಯಾಂಡ್ ಸರ್ಕಲ್‍ನಲ್ಲಿ ಇಟ್ಟಿರುವುದು ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಆದಷ್ಟು ಬೇಗ ಮುಂದಿನ ಪಟ್ಟಣ ಪಂಚಾಯಿತಿ ಸಭೆಯಲ್ಲಿ ಸರ್ವ ಸದಸ್ಯರ ಜತೆ ಚರ್ಚಿಸಿ ಅವರಿಗೆ ಒಂದು ಸೂಕ್ತವಾದ ವ್ಯಾಪರ ಸ್ಥಳವನ್ನು ಗುರುತಿಸಿ ಅಲ್ಲಿಗೆ ಸಾರ್ವಜನಿಕರು ಓಡಾಡುವಂತೆ ಅನುಕೂಲ ಮಾಡಿಕೊಟ್ಟು ಹೂವು ಹಣ್ಣು ತರಕಾರಿ ಮಾರುವ ವ್ಯಾಪಾರಸ್ಥರಿಗೆ ಆದಷ್ಟು ಬೇಗ ಅನುಕೂಲ ಮಾಡಿಕೊಡುತ್ತವೆ.
– ಕೆ.ಎನ್ ನಟರಾಜು, ಸ್ಥಾಯಿ ಸಮಿತಿ ಅಧ್ಯಕ್ಷ, ಪ.ಪಂ.

ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಆಮೆಗತಿಯಲ್ಲಿ ಸಾಗುತ್ತಿರುವ ರಸ್ತೆಯಿಂದ ಅತಿಹೆಚ್ಚು ತೊಂದರೆಗಳಾಗುತ್ತಿವೆ. ಜೊತೆಗೆ ಎಸ್ ಎಸ್ ಆರ್ ವೃತ್ತದಲ್ಲಿ ಅತಿ ಹೆಚ್ಚು ತರಕಾರಿ ಅಂಗಡಿಗಳು ಹಾಗೂ ಹೂವು ಹಣ್ಣಿನ ಅಂಗಡಿಗಳು ಇದ್ದಾವೆ. ಇದರಿಂದ ಸಾರ್ವಜನಿಕರಿಗೂ ಹಾಗೂ ವಾಹನ ಸವಾರರಿಗೆ ತುಂಬ ತೊಂದರೆಯಾಗುತ್ತಿದೆ. ಇದನ್ನು ಕಂಡೂ ಕಾಣದಂತಿರುವ ಪಟ್ಟಣ ಪಂಚಾಯಿತಿಯ ಅಧಿಕಾರಿಗಳ ವರ್ತನೆ ಸಾರ್ವಜನಿಕರಿಗೆ ಬೇಸರ ತಂದಿದೆ.
– ಪ್ರಸನ್ನಕುಮಾರ್, ಸಾರ್ವಜನಿಕ.

ನಮಗೆ ನಿಗದಿಪಡಿಸುವ ಒಳ್ಳೆ ಜಾಗವನ್ನು ಗುರುತಿಸಿ ಕೊಟ್ಟು ಮಾರುಕಟ್ಟೆ ಮಾಡಿಕೊಟ್ಟರೆ ನಮಗೂ ಸಂತೋಷ. ಅಲ್ಲಿಗೆ ನಾವು ಹೋಗುತ್ತೇವೆ. ಪ್ರತಿನಿತ್ಯದ ವಹಿವಾಟಿಗೆ ತೊಂದರೆಯಾಗದಂತೆ ಅನುಕೂಲಗಳು ಮಾಡಿಕೊಡಬೇಕು. ಕುಡಿಯುವ ನೀರು, ಶೌಚಾಲಯ, ವಿದ್ಯುತ್ ವ್ಯವಸ್ಥೆ ಸೇರಿದಂತೆ ಸಾರ್ವಜನಿಕರು ಓಡಾಡಲು ಅವಕಾಶ ಕಲ್ಪಿಸಿಕೊಡಬೇಕು. ಅದಕ್ಕೆ ಬೇಕಾಗುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಮಾರ್ಕೆಟ್ ಮಾಡಿಕೊಟ್ಟರೆ ಖಂಡಿತವಾಗಿಯೂ ನಾವು ಅಲ್ಲಿ ಪ್ರತಿನಿತ್ಯದ ವ್ಯಾಪಾರವನ್ನು ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು. ಪ್ರತಿನಿತ್ಯ ಹೂವು ಹಣ್ಣು ತರಕಾರಿ ವ್ಯಾಪಾರ ಮಾಡಲು ನಿಗದಿತ ಸ್ಥಳವಿಲ್ಲ, ಆದ್ದರಿಂದ ಬಸ್ ಸ್ಟ್ಯಾಂಡ್ ಇನ್ನಿತರೆ ಸ್ಥಳಗಳಲ್ಲಿ ವ್ಯಾಪರಸ್ಥರುಎಲ್ಲೆಂದರಲ್ಲಿ ವ್ಯಾಪಾರ ಮಾಡುತ್ತಾರೆ, ಇದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ತೊಂದರೆ ಆಗುತ್ತಿರುವುದು ನಿಜ, ನಿಗದಿತ ಸ್ಥಳ ಗುರುತಿಸಿದರೆ ವ್ಯಾಪಾರ ಮಾಡಲು ಅನುಕೂಲವಾಗುತ್ತದೆ.
– ಮಹಮ್ಮದ್, ವ್ಯಾಪಾರಿ

ಸಿದ್ದರಾಜು ಕೆ. 

ಟಾಪ್ ನ್ಯೂಸ್

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು

Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ

Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು

Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.