ಹಿಂದು ವ್ಯಕ್ತಿ ಕಗ್ಗೊಲೆಗೆ ಖಂಡನೆ
Team Udayavani, Jul 3, 2022, 11:45 AM IST
ರಾಯಚೂರು: ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯಲಾಲ್‌ನನ್ನು ಧರ್ಮಾಂಧರು ಭೀಕರವಾಗಿ ಕೊಲೆಗೈದಿರುವುದನ್ನು ಖಂಡಿಸಿ ಶನಿವಾರ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಡಿಸಿ ಕಚೇರಿ ಎದುರು ಪ್ರತಿಭಟಿಸಿದರು.
ಈ ಕುರಿತು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿ, ವಿಡಿಯೋ ತುಣುಕಿನಲ್ಲಿ ಕೃತ್ಯವನ್ನು ವೈಭವಿಕರಿಸಿದ್ದಲ್ಲದೇ ದೇಶದ ಪ್ರಧಾನಮಂತ್ರಿಗಳಿಗೂ ಜೀವ ಬೆದರಿಕೆಯೊಡ್ಡಿರುವ ದುಷ್ಕರ್ಮಿಗಳ ಕೃತ್ಯ ಖಂಡನೀಯ. ಈ ಘಟನೆ ಹಿಂದಿರುವ ದೇಶದ್ರೋಹಿ ಸಂಘಟನೆಗಳಾದ ಐಎಸ್‌ಐಎಸ್ ಮತ್ತು ಪಿಎಫ್‌ಐ ಭಾಗಿಯಾಗಿರುವುದು ಎನ್‌ಐಎ ತನಿಖಾ ಸಂಸ್ಥೆಯು ದೃಢಪಡಿಸಿದೆ.
ದೇಶದಲ್ಲಿ ಈಗಾಗಲೇ ಹಲವು ದೇಶದ್ರೋಹಿ ಕೃತ್ಯಗಳನ್ನು ನಿರಂತರ ನಡೆಸುತ್ತಲೇ ಬಂದಿವೆ ಎಂದು ದೂರಿದರು. ರಾಜ್ಯದಲ್ಲಿಯೂ ಈ ಎರಡು ಸಂಘಟನೆಗಳು ಕೊಲೆ, ದೊಂಬಿ ಹಾಗೂ ದೇಶ ವಿರೋಧಿ ಚಟುವಟಿಕೆಗಳ ಮೂಲಕ ಅರಾಜಕತೆ ಸೃಷ್ಟಿಸುವ ಮೂಲಕ ಸಮಾಜದಲ್ಲಿ ಭಯೋತ್ಪಾದನೆ ಸೃಷ್ಟಿಸುತ್ತಿವೆ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇಂಥ ಕೃತ್ಯಗಳ ಹಿಂದಿರುವ ಎಲ್ಲ ಮತಾಂಧ ಸಂಘಟನೆಗಳು ಹಾಗೂ ಅವುಗಳನ್ನು ಪೋಷಿಸುತ್ತಿರುವ ಕಾಣದ ಕೈಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಹಿರಿಯ ಮುಖಂಡರಾದ ಬಾಳಪ್ಪ, ಸಂಘಟನೆಯ ಸಹ ಸಂಯೋಜಕ ದೇವರಾಜ, ನಿರಂಜನಮೂರ್ತಿ, ಹರೀಶ, ಪ್ರೀತಮ್ ಕುಮಾರ, ವಿಷ್ಣು ಕಲ್ಯಾಣಧಿಕಾರಿ ಸೇರಿ ಇತರರು ಪ್ರತಿಭಟನೆಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.