ಅಂಬೇಡ್ಕರ್ ಕಂಡ ಕನಸು ಮೋದಿಯಿಂದ ನನಸು
Team Udayavani, Jul 4, 2022, 1:03 PM IST
ಸೇಡಂ: ಡಾ|ಬಾಬಾ ಸಾಹೇಬರು ದೇಶದ ಪ್ರಗತಿಯ ಬಗ್ಗೆ ತಮ್ಮದೇ ಆದ ಕನಸನ್ನು ಹೊತ್ತಿದ್ದವರು, ಅವರು ಕಂಡ ಕನಸುಗಳನ್ನು ಇಂದು ಪ್ರಧಾನಿ ಮೋದಿ ನನಸು ಮಾಡುವತ್ತ ಹೆಜ್ಜೆಯನ್ನಿಡುತ್ತಿದ್ದಾರೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಹೇಳಿದರು.
ಪಟ್ಟಣದ ಕಲಬುರಗಿ ರಸ್ತೆಯಲ್ಲಿರುವ ಪೂರ್ಣಾನಂದ ಹೋಟೆಲ್‌ನಲ್ಲಿ ಭಾನುವಾರ ಬಿಜೆಪಿ ತಾಲೂಕು ಎಸ್ಸಿ ಮೋರ್ಚಾ ಆಯೋಜಿಸಿದ್ದ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಬಾಬಾ ಸಾಹೇಬರ ಹೆಸರಿನ ಮೇಲೆ ಹತ್ತಾರು ವರ್ಷಗಳ ಕಾಲ ಅಧಿಕಾರ ಅನುಭವಿಸಿದ ಕಾಂಗ್ರೆಸ್, ಅವರ ಯಾವುದೇ ಆಶಯ ಈಡೇರಿಸಿಲ್ಲ. ತಮ್ಮ ಸ್ವಾರ್ಥಕ್ಕಾಗಿಯೇ ಅವರ ಹೆಸರು ಬಳಸಿಕೊಂಡರೆ ವಿನಃ ಅವರ ಬಯಸಿದ ಭಾರತ ನಿರ್ಮಾಣ ಮಾಡಲಿಲ್ಲ ಎಂದು ದೂರಿದರು.
ದೇಶದ ಸಂವಿಧಾನ ನಿರ್ಮಾತೃ ಡಾ|ಬಿ.ಆರ್.ಅಂಬೇಡ್ಕರವರ ಸ್ಮಾರಕಗಳ ಅಭಿವೃದ್ಧಿಗೆ ಪಂಚ ಪವಿತ್ರ ಸ್ಥಳಗಳ ಅಭಿವೃದ್ಧಿಯ ಹೆಸರಿನಲ್ಲಿ ಒತ್ತು ನೀಡಿದ್ದು ಮೋದಿ ನೇತೃತ್ವದ ಬಿಜೆಪಿ ಸರ್ಕಾರ. ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿ ಆಗಿ ಅಧಿಕಾರ ವಹಿಸಿಕೊಂಡು ಬಾಬಾ ಸಾಹೇಬರ ಕನಸಿನ ಭಾರತ ನಿರ್ಮಾಣ ಮಾಡುತ್ತಿದ್ದಾರೆ. ಇದನ್ನು ಪ್ರತಿಯೊಬ್ಬರು ಅರಿತುಕೊಳ್ಳುವುದು ಅವಶ್ಯವಾಗಿದೆ ಎಂದರು.
ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾ ರಾಯ ಅಷ್ಟಗಿ, ಕಾರ್ಯದರ್ಶಿ ನಾಮದೇವ ರಾಠೊಡ, ತಾಲೂಕು ಅಧ್ಯಕ್ಷ ಪರ್ವತರೆಡ್ಡಿ ಪಾಟೀಲ, ತಾಲೂಕು ಪ್ರಭಾರಿ ಧರ್ಮಣ್ಣ ಇಟಗಾ ಮಾತನಾಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಕಲ್ಯಾಣಪ್ಪ ಪಾಟೀಲ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಾಗಪ್ಪ ಕೊಳ್ಳಿ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಲಕ್ಷೀನಾರಾಯಣ ಚಿಮ್ಮನಚೋಡಕರ್, ತಿರುಪತಿ ಶಹಬಾದಕರ್, ಶರಣು ಮೆಡಿಕಲ್, ಮುಕುಂದ ದೇಶಪಾಂಡೆ, ಆನಂದ ಚಂದಾಪೂರ, ರವಿ ಭಂಟನಹಳ್ಳಿ, ರಾಜು ಕಟ್ಟಿ, ಮಾಣಿಕಗೌತಂ, ಲಕ್ಷ್ಮಣ ಮಂತ್ರಿ, ಲಾಲಪ್ಪ ಕಟ್ಟಿಮನಿ, ಮಲ್ಲಿಕಾರ್ಜುನ ಪಾಳಾದಿ ಸೇರಿದಂತೆ ಅನೇಕರಿದ್ದರು. ಶರಣು ಕೆರಳ್ಳಿ ಪ್ರಾರ್ಥಿಸಿದರು. ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷ ವಿಜಯಕುಮಾರ ಶರ್ಮಾ ಸ್ವಾಗತಿಸಿದರು, ತಾಲೂಕು ಪ್ರಧಾನ ಕಾರ್ಯದರ್ಶಿ ಓಂಪ್ರಕಾಶ ಪಾಟೀಲ ನಿರೂಪಿಸಿದರು. ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯರಾಜ ಕೊಂಡಪಳ್ಳಿ ವಂದಿಸಿದರು.
ಕಷ್ಟದಲ್ಲಿದ್ದ ಅನ್ನದಾತರ ಕಣ್ಣಿರು ಒರೆಸುವ ಕೆಲಸ ನಾವು ಮಾಡುತ್ತಿದ್ದೇವೆ. ರೈತರನ್ನು ಸಿರಿವಂತರಾಗಿ ಮಾಡುವ ಕನಸು ನಾವು ಇಟ್ಟಿದ್ದರೆ. ಇದನ್ನು ಸಹಿಸಿಕೊಳ್ಳಲು ಆಗದ ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲರು ನಾವು ಭ್ರಷ್ಟಾಚಾರ ಮಾಡುತ್ತಿದ್ದೇವೆ ಎಂದು ಆರೋಪ ಮಾಡುತ್ತಿದ್ದಾರೆ. ಅವರು ತಮ್ಮ ಅವಧಿಯಲ್ಲಿ ಹೇಗೆಲ್ಲ ಭ್ರಷ್ಟಾಚಾರ ಮಾಡಿದ್ದಾರೆ ಎನ್ನುವ ಪಟ್ಟಿ ನಮ್ಮಲ್ಲಿಯೂ ಇದೆ ಸಮಯ ಬಂದಾಗ ಹೇಳುತ್ತೇನೆ. –ರಾಜಕುಮಾರ ಪಾಟೀಲ ತೆಲ್ಕೂರ, ಶಾಸಕ ಸೇಡಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.