ಗೃಹ ಕಾರ್ಮಿಕರ ಗೋಳು ಕೇಳುವವರ್ಯಾರು?

ಅನಗತ್ಯ ಆರೋಪ; ಗೃಹ ಕಾರ್ಮಿಕರ ಮೇಲೆ ದೌರ್ಜನ್ಯ

Team Udayavani, Jul 4, 2022, 1:20 PM IST

ಗೃಹ ಕಾರ್ಮಿಕರ ಗೋಳು ಕೇಳುವವರ್ಯಾರು?

ಗೋಳು ಆರು ಲಕ್ಷಕ್ಕಿಂತ ಹೆಚ್ಚು ಅಸಂಘಟಿತ ಗೃಹ ಕಾರ್ಮಿಕರು ರಾಜಧಾನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮನೆ ಮಾಲೀಕರು ಹೇಳಿದ ಕೆಲಸಗಳನ್ನು ಮಾಡುತ್ತಾ ಮನೆಗಳಲ್ಲಿ ನಡೆಯುವ ಅಚಾತುರ್ಯಗಳಿಗೆ ಬಲಿಯಾಗಿ ಆರೋಪವನ್ನು ಹೊತ್ತುಕೊಳ್ಳುವ ಮನೆಕೆಲಸದವರು ಜೀತದಾಳಾಗಿ ಬದುಕುತ್ತಿದ್ದಾರೆ. ಅವರಿಗೆ ನೈತಿಕ ಧೈರ್ಯ ತುಂಬಬೇಕಿದ್ದ ಕಾರ್ಮಿಕ ಇಲಾಖೆ ಮತ್ತು ಕಾರ್ಮಿಕ ಕಲ್ಯಾಣ ಮಂಡಳಿಗಳು ಕಣ್ಮುಚ್ಚಿ ಕುಳಿತಿವೆ. ಗೃಹ ಕಾರ್ಮಿಕರಿಗಾಗಿ ಸರ್ಕಾರದಿಂದ ವಿಶೇಷ ಸೌಲಭ್ಯವೇನೂ ದೊರೆಯುತ್ತಿಲ್ಲ. ವಂಚಿತರಂತೆ ಬಾಳುವ ಗೃಹಕಾರ್ಮಿಕರ ಕುರಿತು ಒಂದು ರೌಂಡಪ್ ವಾರದ ಸುದ್ದಿಸುತ್ತಾಟದಲ್ಲಿ.

ರಾಜಧಾನಿ ಬೆಂಗಳೂರಿನಲ್ಲಿ ಬಡತನ, ಆರ್ಥಿಕ ಸಮಸ್ಯೆಯಿಂದ ಕೌಟುಂಬಿಕ ದೌರ್ಜನ್ಯ ತಾಳಲಾರದೆ ಬೇರೆಯವರ ಮನೆಗಳಲ್ಲಿ ಅಥವಾ ಅಪಾರ್ಟ್‌ಮೆಂಟ್‌ಗಳಲ್ಲಿ ಮನೆಗೆಲಸ ಮಾಡಲು ಮುಂದಾಗುತ್ತಾರೆ. ಆದರೆ, ಅವರ ಜೀವನಕ್ಕೆ ಭದ್ರತೆ ಇಲ್ಲದಂತಾಗಿದೆ. ಕುಟುಂಬ ನಿರ್ವಹಣೆಗಾಗಿ ಮತ್ತೂಬ್ಬರ ಮನೆಯಲ್ಲಿ ಕೆಲಸ ಮಾಡುವ ಮಹಿಳೆಯರ ಮೇಲೆ ದೌರ್ಜನ್ಯ, ಕಳವು ಆರೋಪ, ಮಾನಸಿಕ ಹಿಂಸೆ, ಕಿರುಕುಳವೂ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಮನೆಗೆಲಸ ಮಾಡುವವರು ಸರಿಸುಮಾರು ಆರು ಲಕ್ಷ ಮಹಿಳೆಯರು ಇದ್ದಾರೆ. ಆದರೆ, ಇವರು ಒಂದು ರೀತಿಯಲ್ಲಿ ಅಸಂಘಟಿತ ಕಾರ್ಮಿಕರು. ಹೀಗಾಗಿ, ಇವರಿಗೆ ಕಾರ್ಮಿಕ ಇಲಾಖೆ ಅಥವಾ ಕಾರ್ಮಿಕ ಕಲ್ಯಾಣ ಮಂಡಳಿಯ ಯಾವೊಂದು ಸವಲತ್ತೂ ಸಿಗುತ್ತಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಕೆಲಸದ ಸ್ಥಳಗಳಲ್ಲಿ ನಾನಾ ರೀತಿಯ ಸಮಸ್ಯೆ ಎದುರಿಸಬೇಕಾದ ಪರಿಸ್ಥಿತಿ ಇದೆ. ಕೆಲಸಕ್ಕಿಟ್ಟುಕೊಂಡಿರುವ ಮಾಲೀಕರು ಹೇಳಿದ ಹಾಗೆ ಜೀತದಂತೆ ಕಾರ್ಯನಿರ್ವಹಿಸಿದರೂ ಮಾಲೀಕರಿಂದ ಇಲ್ಲಸಲ್ಲದ ಆರೋಪಗಳನ್ನು ಅನುಭವಿಸಬೇಕು. ಜತೆಗೆ ಲೈಂಗಿಕ ಕಿರುಕುಳ, ಮಾನಸಿಕ ಕಿರುಕುಳ ಸಹಿಸಿಕೊಳ್ಳಬೇಕಾದ ಸ್ಥಿತಿ. ಇಂತಹ ಗೃಹ ಕಾರ್ಮಿಕರಿಗೆ ತಮ್ಮ ನೋವುಗಳನ್ನು ಹೇಳಿಕೊಳ್ಳಲು ಒಂದು ಪ್ರತ್ಯೇಕ ಕಲ್ಯಾಣ ಮಂಡಳಿಯೂ ಇಲ್ಲ ಎಂಬುದು ಶೋಚನೀಯ ಸಂಗತಿ. ಆರು ಲಕ್ಷ ಜನ ಗೃಹ ಕಾರ್ಮಿಕರು ಇದೇ ಗೃಹ ಸಂಬಂಧಿತ ಕೆಲಸಗಳನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ, ಸಮಾಜ ಇವರನ್ನು ಯಾವುದೇ ಗೌರವ, ಘನತೆ, ಮನುಷ್ಯತ್ವದಿಂದ ಕಾಣುತ್ತಿಲ್ಲ. ಕೆಲವು ಕಡೆಯಂತೂ ಕಳ್ಳತನ, ಸುಳ್ಳು ಆಪಾದನೆಗಳನ್ನು ಹೇರಿ ಮನೆಯಿಂದ ಹೊರದೂರಿದ್ದಾರೆ. ಜತೆಗೆ ಲೈಂಗಿಕ ಕಿರುಕುಳಕ್ಕೂ ಮಹಿಳೆಯರು ಒಳಗಾಗಿದ್ದಾರೆ. ಈ ರೀತಿಯ ಹಲವು ದೌರ್ಜನ್ಯಗಳು ನಡೆದಿವೆ. ಅವುಗಳನ್ನು ನೋಡುವುದಾದರೆ,

ಪ್ರಕರಣ-1 : ಕೋರಮಂಗಲದ ಒಂದು ಅಪಾರ್ಟ್‌ಮೆಂಟ್‌ನಲ್ಲಿ ಒಂದು ಕುಟುಂಬದವರು ಯಾವುದೋ ಕಾರ್ಯಕ್ರಮಕ್ಕೆ ಹೋಗುವ ಭರದಲ್ಲಿ ಬೆರಳಿಗೆ ಹಾಕುವ ವಜ್ರದ ಉಂಗುರವನ್ನು ಮಂಚದ ಮೇಲೆ ಬಿಟ್ಟು ಮರೆತು ಹೋಗಿದ್ದರು. ನಂತರ, ಮನೆಗೆಲಸ ಮಾಡಲು ಬಂದ ಮಹಿಳೆಯು ಮನೆಯನ್ನು ಸ್ವಚ್ಛಗೊಳಿಸಿ ಹೋಗಿದ್ದಾಳೆ. ಆದರೆ, ಮನೆಯವರು ಉಂಗುರವನ್ನು ಕದ್ದಿರುವ ಆರೋಪವನ್ನು ಆಕೆಯ ಮೇಲೆ ಹೇರಿ, ಠಾಣೆಯಲ್ಲಿ ದೂರು ದಾಖಲಿಸಿ, ಕೆಲಸದವಳನ್ನು ವಿಚಾರಣೆಗೆಂದು ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಿ ಹಿಂಸಿಸಿದ್ದಾರೆ. ವಜ್ರದ ಉಂಗುರವನ್ನು ಕದ್ದಿರುವುದನ್ನು ಒಪ್ಪಿಕೋ ಎಂದು ಒತ್ತಡವೇರಿದ್ದಾರೆ. ತದನಂತರ ಕೆಲವು ದಿನಗಳ ಬಳಿಕ ಹಾಸಿಗೆಯಲ್ಲಿ ಉಂಗುರ ಸಿಕ್ಕ ನಂತರ, ಮನೆಯವರು ಕೆಲಸದವಳತ್ತಿರ ಕ್ಷಮೆ ಕೋರಿ ಸುಮ್ಮನಾದರು.

ಪ್ರಕರಣ-2 : ಮಹಾಲಕ್ಷ್ಮೀ ಲೇಔಟ್‌ನಲ್ಲಿ ವಾಸವಿದ್ದು, ಒಂದು ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಲೀಕರ ಮನೆಯೊಂದರಲ್ಲಿ ಮಗು ನೋಡಿಕೊಳ್ಳಲು ಹೋಗುತ್ತಿದ್ದ ಮನೆಗೆಲಸದವರ ಮೇಲೆ 2 ಲಕ್ಷ ರೂ. ಮೊತ್ತದ ಸುಳ್ಳು ಕಳ್ಳತನ ಆರೋಪವನ್ನು ಹೊರಿಸಿ, ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಇದರ ಬೆನ್ನಲ್ಲೇ ಪೊಲೀಸರು ಆ ಮನೆಗೆಲಸದ ಮಹಿಳೆ ಮನೆಗೆ ಹೋಗಿ, ಆ ಮಹಿಳೆ ಅವಳ ಗಂಡ ಮತ್ತು ತಮ್ಮನನ್ನೂ ಠಾಣೆಗೆ ಕರೆದುಕೊಂಡು ಹೋಗಿ, ರಾತ್ರಿ 12 ಗಂಟೆವರೆಗೆ ವಿಚಾರಣೆ ನಡೆಸಿ ಅಸಭ್ಯವಾಗಿ ವರ್ತಿಸಿದ್ದಾರೆ.

ಪ್ರಕರಣ-3 : ಕೋರಮಂಗಲದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮನೆಗೆಲಸ ಮಾಡುತ್ತಿದ್ದ ಮಹಿಳೆಯು ಕೊರೊನಾ ವೇಳೆ ಆರ್ಥಿಕ ಸಂಕಷ್ಟಕ್ಕೀಡಾಗಿದ್ದ ಕಾರಣ 500 ಅಥವಾ 1000 ರೂ. ಸಂಬಳ ಜಾಸ್ತಿ ಮಾಡಿ ಎಂದಿದ್ದಕ್ಕೆ, ಸಾಫ್ಟ್ವೇರ್‌ ಕಂಪನಿಯಲ್ಲಿಯೇ ಇಂಕ್ರಿಮೆಂಟ್‌ ಕೊಟ್ಟಿಲ್ಲ ಎಂದು ಹೇಳಿದ ಮಾತಿಗೆ ಸುಮ್ಮನಾದಳು. ನಂತರ ಕೆಲವೇ ದಿನಗಳಲ್ಲಿ ಮಾಂಗಲ್ಯ ಸರ, ಡೈಮಂಡ್‌ ಆಭರಣಗಳು ಕಾಣೆಯಾಗಿದೆ ಎಂದು ಮನೆಗೆಲಸದವಳ ಮೇಲೆ ಆಪಾದನೆ ಹೊರೆಸಿ ಠಾಣೆ ಮೆಟ್ಟಿಲೇರಿಸಿ ಕಿರುಕುಳ ನೀಡಲಾಯಿತು.

ಪ್ರಕರಣ-4 : ಒಂದು ಮನೆಯಲ್ಲಿ ಪೋಷಕರು ಮಗಳನ್ನು ಮನೆಯಲ್ಲಿ ಬಿಟ್ಟು ಹೊರಗಡೆ ಹೋಗಿದ್ದಾರೆ. ಮನೆಗೆಲಸ ಮಗಿದ ನಂತರ, ಮಾಲೀಕರ ಮಗಳು ಮನೆಗೆಲಸವರಿಗೆ ಒಂದು ಚೀಲದಲ್ಲಿ ಹಣ್ಣು ಮತ್ತು ಸಾರು ಹಾಕಿ ಕೊಟ್ಟಿದ್ದಾಳೆ. ಆ ಚೀಲವನ್ನು ತೆಗೆದುಕೊಂಡು ಹೋದ ನಂತರ ಮನೆಗೆಲಸದವಳ ಮೇಲೆ 5 ಲಕ್ಷ ರೂ. ಕಳ್ಳತನದ ಆರೋಪ ಹೊರಿಸಿ ಪೊಲೀಸ್‌ ದೂರು ನೀಡಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಮನೆಗೆಲಸದವಳು ಚೀಲ ತೆಗೆದುಕೊಂಡು ಹೋಗುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದೇ ಸಂದರ್ಭದಲ್ಲಿ ಮಗಳ ಫ್ರೆಂಡ್‌ ಕೂಡಾ ಮನೆಯಿಂದ ಹೊರಬಂದಿರುವುದು ಕಾಣಿಸಿದರೂ, ಅವರನ್ನು ವಿಚಾರಿಸದೇ, ಮನೆಗೆಲಸದವರನ್ನು ತರಾಟೆಗೆ ತೆಗೆದುಕೊಂಡು ಕಿರುಕುಳ ನೀಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಕಿರುಕುಳ : ನಗರದ ಎಚ್‌ಎಸ್‌ಆರ್‌ ಲೇಔಟ್‌ನ ಒಂದು ಅಪಾರ್ಟ್‌ಮೆಂಟ್‌ ನಲ್ಲಿ ಕಾರ್ಯನಿರ್ವಹಿಸುತ್ತದ್ದ ಸಂದರ್ಭದಲ್ಲಿ ಕೈ ಜಾರಿ ಗಾಜಿನ ಲೋಟವೊಂದು ನೆಲಕ್ಕೆ ಬಿದ್ದು ಚೂರಾಯಿತು. ಇದಕ್ಕೆ ಮನೆ ಮಾಲೀಕರು ಒಂದು ಸಾವಿರ ಹಣವನ್ನು ದಂಡ ಕಟ್ಟಿಕೊಡಿ ಎಂದರು. ಅದೇ ರೀತಿಯ ಹೊಸ ಗಾಜಿನ ಲೋಟವನ್ನು ತಂದುಕೊಟ್ಟರೂ, ಅದನ್ನು ತಿರಸ್ಕರಿಸಿ 1,000 ರೂ. ಹಣವನ್ನು ಅವಳಿಂದ ತೆಗೆದುಕೊಂಡಿದ್ದಾರೆ. ಮನೆಗೆಲಸದವರು 1,000 ರೂ. ಗಾಗಿ ಅದೆಷ್ಟೋ ದಿನಗಳು ಕಷ್ಟಪಟ್ಟು ದುಡಿಯಬೇಕಾಯಿತು. ಈ ರೀತಿಯಾಗಿ ಸುಳ್ಳು ಆರೋಪಗಳನ್ನು ಹೊತ್ತು ಬದುಕುವ ಪರಿಸ್ಥಿತಿ ಎದುರಾಗಿದೆ. ಇನ್ನೂ ಕೆಲವರು ಜೀವ ಕಳೆದುಕೊಳ್ಳುವ ಮಟ್ಟಕ್ಕೂ ಹೋಗಿದ್ದಾರೆ.

ವಲಸೆ ಬಂದವರು : ನಗರದಲ್ಲಿನ ಗೃಹ ಕಾರ್ಮಿಕರಲ್ಲಿ ಹೆಚ್ಚಾಗಿ ಹೊರ ರಾಜ್ಯದವರೇ ಇದ್ದಾರೆ. ಕೊಲ್ಕತ್ತಾ, ಒಡಿಶಾ, ರಾಜಸ್ಥಾನ, ಮುಂಬೈ, ಅಸ್ಸಾಂ, ತಮಿಳುನಾಡು ಸೇರಿದಂತೆ ನಾನಾ ರಾಜ್ಯಗಳಿಂದ ವಲಸೆ ಬಂದು, ಇಲ್ಲೇ ಜೀವನವನ್ನು ಕಟ್ಟಿಕೊಂಡವರೂ ಇದ್ದಾರೆ.

ಉಪಯೋಗವಿಲ್ಲದ ಕಾರ್ಮಿಕ ಇಲಾಖೆ ಸ್ಮಾರ್ಟ್ಕಾರ್ಡ್‌ : ಬಹುವರ್ಷಗಳ ಹೋರಾಟದ ಪ್ರತಿಫ‌ಲವಾಗಿ ಕಾರ್ಮಿಕ ಇಲಾಖೆಯೂ ಗೃಹ ಕಾರ್ಮಿಕರಿಗೆ ಸ್ಮಾರ್ಟ್‌ಕಾರ್ಡ್‌ ನೀಡುವುದಾಗಿ ತಿಳಿಸಿತು. ಈ ಸ್ಮಾರ್ಟ್‌ಕಾರ್ಡ್‌ ಕೇವಲ 2000 ಮಹಿಳೆಯರಿಗೆ ಮಾತ್ರ ದೊರಕಿದ್ದು, ಈ ಕಾರ್ಡ್‌ನಿಂದ ಕಿಂಚಿತ್ತೂ ಉಪಯೋಗವಿಲ್ಲದಂತಾಗಿದೆ. ಈ ಕಾರ್ಡ್‌ನಿಂದ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ.

ಸಹಾಯ ಹಸ್ತ ಇದೆ : ಮನೆಗೆಲಸವರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಸರ್ಕಾರ ಗಮನಹರಿಸದ ಕಾರಣ, ಮನೆಗೆಲಸದವರೇ ಒಕ್ಕೂಟಗಳನ್ನು ರಚಿಸಿಕೊಂಡಿದ್ದಾರೆ. ನಂತರ ದೌರ್ಜನ್ಯಕ್ಕೊಳಗಾದ ಮಹಿಳೆಯರು ಪೊಲೀಸ್‌ ಸಹಾಯವಾಣಿ 112 ಹೊಯ್ಸಳಕ್ಕೆ ಅಥವಾ ರಾಜ್ಯ ಮಹಿಳಾ ಆಯೋಗ 080 22100435/ 22862368 ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೇ 9916615692/8095192706 ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದಾಗಿದೆ.

ಗೃಹ ಕಾರ್ಮಿಕರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯವನ್ನು ತಡೆಗಟ್ಟುವ ಹಾಗೂ ಅವರನ್ನು ಕಾರ್ಮಿಕರೆಂದು ಗುರುತಿಸುವುದಕ್ಕಾಗಿ ಪ್ರತ್ಯೇಕ ಸಾಮಾಜಿಕ ಭದ್ರತಾ ಮಂಡಳಿಯನ್ನು ಸ್ಥಾಪಿಸಬೇಕೆಂದು
ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಬರೆಯಲಾಗಿದೆ. ಇದರ ಬಗ್ಗೆ ಸರ್ಕಾರ ಶೀಘ್ರದಲ್ಲೇ ಕ್ರಮ ಕೈಗೊಳ್ಳಬೇಕಾಗಿದೆ. – ಪ್ರಮೀಳಾ ನಾಯ್ಡು, ಅಧ್ಯಕ್ಷೆ, ರಾಜ್ಯ ಮಹಿಳಾ ಆಯೋಗ 

ನಾಲ್ಕು ವರ್ಷಗಳಿಂದ ಹೋರಾಟ ಮಾಡಿದ ಹಿನ್ನೆಲೆ ಅಂಬೇಡ್ಕರ್‌ ಸಹಾಯಹಸ್ತ ಯೋಜನೆಯಡಿ ಗೃಹ ಕಾರ್ಮಿಕರಿಂದ ನೋಂದಣಿ ಮಾಡಿಸಿಕೊಂಡರೂ, ಕಾರ್ಮಿಕ ಇಲಾಖೆಯಿಂದ ಯಾವುದೇ ಸೌಲಭ್ಯಗಳು ದೊರೆತಿಲ್ಲ. ಇವರಿಗೂ ಕಟ್ಟಡ ಕಾರ್ಮಿಕರಿಗೆ ನೀಡುವ ಸೌಲಭ್ಯವನ್ನು ಸರ್ಕಾರ ಒದಗಿಸಬೇಕು. -ಗೀತಾ ಮೆನನ್‌,ಮಹಿಳಾ ಹಕ್ಕು ಹೋರಾಟಗಾರ್ತಿ

 

ಭಾರತಿ ಸಜ್ಜನ್

ಟಾಪ್ ನ್ಯೂಸ್

ISRO 2

ISRO; ಬಾಹ್ಯಾಕಾಶದಲ್ಲಿ ಅಲಸಂಡೆ, ಪಾಲಕ್‌ ಬೆಳೆಯಲು ಪ್ಲಾನ್‌!

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

stalin

Tamil Nadu University; ಕುಲಪತಿ ನೇಮಕ: ಸಿಎಂ, ಗೌರ್ನರ್‌ ನಡುವೆ ಮತ್ತ ಸಂಘರ್ಷ

ISRO 2

ISRO; ಬಾಹ್ಯಾಕಾಶದಲ್ಲಿ ಅಲಸಂಡೆ, ಪಾಲಕ್‌ ಬೆಳೆಯಲು ಪ್ಲಾನ್‌!

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

1-ru

PF fraud; ಆರೋಪಿ ಕಂಪೆನಿಗಳಿಗೆ ನಾನು ನಿರ್ದೇಶಕನಲ್ಲ: ರಾಬಿನ್‌ ಉತ್ತಪ್ಪ

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.