ಮುಂಗಾರು ಕೃಷಿ ಚಟುವಟಿಕೆ ಚುರುಕು
Team Udayavani, Jul 4, 2022, 1:57 PM IST
ದೇವನಹಳ್ಳಿ: ಜಿಲ್ಲೆಯಲ್ಲಿ ಉತ್ತಮ ಮಳೆಯಾಗು ತ್ತಿರುವುದರಿಂದ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಎಲ್ಲೆಡೆ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಮಳೆರಾಯನ ಕೃಪೆಯಿಂದ ಹೊಲಗಳಲ್ಲಿ ಭೂಮಿಯನ್ನು ರೈತರು ಹದ ಮಾಡುತ್ತಿದ್ದಾರೆ.
ರೈತರು ಎತ್ತು, ಟ್ರ್ಯಾಕ್ಟರ್‌ಗಳಿಂದ ಭೂಮಿಯನ್ನು ಹದಮಾಡಿಕೊಂಡು ಕೃಷಿ ಚಟುವಟಿಕೆ ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬೆಲೆ ಏರಿಕೆ ಹೆಚ್ಚಳದಿಂದ ಪ್ರತಿಯೊಂದು ವಸ್ತುಗಳು ದುಬಾರಿಯಾಗಿರುವ ನಡುವೆಯೂ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ವರ್ಷವೂ ಸಹ ಉತ್ತಮ ಮಳೆಯಾಗಿತ್ತು. ಜಿಲ್ಲೆಯಲ್ಲಿ ಪೂರ್ವ ಮುಂಗಾರು ಉತ್ತಮವಾಗಿತ್ತು. ಇದರ ಪರಿಣಾಮವಾಗಿ ಮೇ ತಿಂಗಳಿನಲ್ಲಿ ಉತ್ತಮ ಮಳೆಯಾಗಿದೆ.
ಕೃಷಿ ಕಾರ್ಯ ಪ್ರಾರಂಭವಾಗುತ್ತಿದೆ. ಇದರ ಜತೆಗೆ ಕಳೆದ ಬಾರಿಗಿಂತ ಈ ಬಾರಿ ಕೃಷಿ ಉಪಕರಣಗಳಾದ ಟ್ರ್ಯಾಕ್ಟರ್, ಉಳುಮೆ ಸಾಧನಗಳು ಸೇರಿದಂತೆ ಬಹುತೇಕ ಎಲ್ಲಾ ಕೃಷಿ ಉಪಕರಣಗಳ ಬಾಡಿಗೆ ಪ್ರತಿ ಗಂಟೆಗೆ 300ರಿಂದ 500ರೂ ಏರಿಕೆ ಕಂಡಿದೆ. ಆದರೆ, ಇಲಾಖೆ ಯಂತ್ರಗಳ ದರವು ಕಳೆದ ಬಾರಿಯಂತೆ ಮುಂದುವರಿಸಲಾಗಿದೆ. ಕೂಲಿಗಾರರು ಸಹ ಸರಿಯಾದ ಸಮಯಕ್ಕೆ ಸಿಗುವುದಿಲ್ಲ. ಕೂಲಿಗಾರರಿಗೂ ಹೆಚ್ಚಿನ ಹಣ ನೀಡುವಂತಾಗಿದೆ.
ಬಿತ್ತನೆ ಕಾರ್ಯ ಆರಂಭ: ಜಿಲ್ಲೆಯಲ್ಲಿ 69, 600ರಿಂದ 70 ಸಾವಿರ ಹೆಕ್ಟೇರ್ ಬಿತ್ತನೆ ಗುರಿಯನ್ನು ಹೊಂದಲಾಗಿದೆ. 4,054 ಕ್ವಿಂಟಲ್ ಬಿತ್ತನೆ ಗುರಿಯಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತಿ ಹೆಚ್ಚು ರಾಗಿ ಬೆಳೆ ಅವಲಂಬಿತರಾಗಿದ್ದಾರೆ. ಅತಿ ಹೆಚ್ಚು ರೈತರು ರಾಗಿ ಬೆಳೆಯುತ್ತಾರೆ. ಜಿಲ್ಲೆಯಲ್ಲಿ ರಾಗಿಗೆ ಹೆಚ್ಚಿನ ಮಹತ್ವವಿದೆ. ಇದರಲ್ಲಿ ಬಹುಪಾಲು ರಾಗಿ ಆಗಿದ್ದು, 56,570 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಮೆಕ್ಕೆಜೋಳ 8,050 ಹೆಕ್ಟೇರ್ ಬಿತ್ತನೆ ಗುರಿಯಿದೆ. ಉಳಿದಂತೆ ತೊಗರಿ, ನವಣೆ, ಸಾಸಿವೆ, ಅಲಸಂಧೆ, ಸ್ವಾಮೆ, ಸಜ್ಜೆ ಬಿತ್ತನೆ ಆರಂಭವಾಗಿದೆ. ರಾಗಿ ಕೊಂಚ ಬಿತ್ತನೆ ನಡೆಯುತ್ತಿದ್ದು, ಭೂಮಿಯನ್ನು ಹದಗೊಳಿಸಿ ಉಳುಮೆ ಕೆಲಸ ನಡೆಯುತ್ತಿವೆ. ಜಿಲ್ಲೆಯಲ್ಲಿ ಜು. 2ನೇ ವಾರದ ವೇಳೆ ಬಹುತೇಕ ಬಿತ್ತನೆ ಕಾರ್ಯ ಆರಂಭವಾಗುತ್ತದೆ.
ಕಳೆದ ಬಾರಿ 7,635 ಹೆಕ್ಟೇರ್ ಬಿತ್ತನೆ: ಜಿಲ್ಲೆಯಲ್ಲಿ ಕಳೆದ ವರ್ಷ ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆ ಕೊರತೆಯಿಂದ ರೈತರು ಹೆಚ್ಚಾಗಿ ರಾಗಿ ಬಿತ್ತನೆಗೆ ಮುಂದಾಗಿದ್ದರು. ಇದರಿಂದ ಕೇವಲ 7,635 ಹೆಕ್ಟೇರ್‌ನಲ್ಲಿ ಮಾತ್ರ ಮೆಕ್ಕೆಜೋಳ ಬಿತ್ತನೆ ಮಾಡಲಾಯಿತು. ಆದರೆ, ಈ ಬಾರಿ ಪೂರ್ವ ಮುಂಗಾರು ಉತ್ತಮವಾಗಿದ್ದ ರೈತರು ಮತ್ತೆ ಮೆಕ್ಕೆಜೋಳ ಬಿತ್ತನೆಗೆ ಮನಸ್ಸು ಮಾಡುವ ನಿರೀಕ್ಷೆಯಿದೆ. ಇದರ ಜತೆಗೆ ಮೆಕ್ಕೆಜೋಳ ಪ್ರದೇಶವನ್ನು ವಿಸ್ತರಿಸಲು ಈ ಬಾರಿ ಜಿಲ್ಲಾದ್ಯಂತ 6,050 ಹೆಕ್ಟೇರ್ ಮೆಕ್ಕೆಜೋಳ ಬಿತ್ತನೆ ಮಾಡುವ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ.
4,054 ಕ್ವಿಂಟಲ್ ಬಿತ್ತನೆ ಬೀಜದ ಬೇಡಿಕೆ: ಜಿಲ್ಲೆಯ ಪ್ರಮುಖ ಬೆಳೆಯಾದ ರಾಗಿ ಬಿತ್ತನೆ ಈವರೆಗೆ 47 ಹೆಕ್ಟೇರ್ ಬಿತ್ತನೆ ಕಾರ್ಯವಾಗಿದೆ. ಇದರ ಜತೆಗೆ 1,515 ಹೆಕ್ಟೇರ್ ಗುರಿ ಇರುವ ಅವರೆಯಿದೆ. 1,056 ಹೆಕ್ಟೇರ್ ತೊಗರಿ ಗುರಿ ಇದ್ದು, 111 ಹೆಕ್ಟೇರ್ ಪೂರ್ಣಗೊಂಡಿದೆ. ನೆಲಗಡಲೆ ಕೂಡ 37 ಹೆಕ್ಟೇರ್ ಪೂರ್ಣಗೊಂಡಿದೆ. 4,054 ಕ್ವಿಂಟಲ್ ಬಿತ್ತನೆ ಬೀಜದ ಬೇಡಿಕೆ ಇದೆ. ಇದರಲ್ಲಿ 422 ಕ್ವಿಂಟಲ್ ವಿತರಣೆಯಾಗಿದೆ. 581 ಕ್ವಿಂಟಲ್ ರೈತ ಸಂಪರ್ಕ ಕೇಂದ್ರದಲ್ಲಿದ್ದು, ಬೇಡಿಕೆ ತಕ್ಕಂತೆ ಹಂತ ಹಂತವಾಗಿ ನೀಡಲಾಗುತ್ತಿದೆ.
ಬೆಂ.ಗ್ರಾ. ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ : ಜಿಲ್ಲೆಯಲ್ಲಿ ದಾಖಲೆಯ ಮಳೆ ಪೂರ್ವ ಮುಂಗಾರಿನಲ್ಲಿ ಕಾಣಿಸಿಕೊಂಡಿತ್ತು. ಏಪ್ರಿಲ್ ತಿಂಗಳಿನಲ್ಲಿನ ವಾಡಿಕೆ ಮಳೆ 35.0ಮಿ.ಮೀ. ಆಗಿದೆ. ಆದರೆ, 59.5 ಮಿ.ಮೀ. ಮಳೆಯಾಗುವ ಮೂಲಕ ಶೇ.70ರಷ್ಟು ಹೆಚ್ಚಿಗೆ ಮಳೆಯಾಗಿದೆ. ಇನ್ನು ಮೇ ತಿಂಗಳಲ್ಲಿ ಉತ್ತಮ ಮಳೆಯಾಗಿದೆ. ಜೂನ್ ತಿಂಗಳಲ್ಲಿ ಜಿಲ್ಲೆಯಲ್ಲಿ ವಾಡಿಕೆ ಮಳೆ 67 ಮಿ.ಮೀ. ಇದ್ದು, 193.8 ಮಿ.ಮೀ. ಮಳೆಯಾಗಿದೆ. ಇನ್ನು ಜನವರಿಯಿಂದ ಜೂನ್‌ವರೆಗೆ ಶೇ. 208.3ಮಿ.ಮೀ. ವಾಡಿಕೆ ಮಳೆಗಿಂತ 496 ಮಿ.ಮೀ. ಮಳೆಯಾಗಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರುವುದರಿಂದ ಎಲ್ಲಾ ಹೋಬಳಿಯ ರೈತಸಂಪರ್ಕ ಕೇಂದ್ರಗಳಲ್ಲಿ ಸಕಾಲದಲ್ಲಿ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ಜಿಲ್ಲೆಯಲ್ಲಿ 69,600 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. –ಜಯಸ್ವಾಮಿ, ಕೃಷಿ ಜಂಟಿ ನಿರ್ದೇಶಕ ರೈ
ತರಿಗೆ ಮಳೆ ಚೆನ್ನಾಗಿ ಬರುತ್ತಿರುವುದ ರಿಂದ ಕೃಷಿ ಇಲಾಖೆಯಿಂದ ಹೆಚ್ಚಿನ ಸೌಲಭ್ಯ ನೀಡಬೇಕು. ಖಾಸಗಿ ಯಂತ್ರಗಳ ಬಾಡಿಗೆ ದರ ಹೆಚ್ಚು ದುಬಾರಿಯಾಗಿದೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸರಿಯಾದ ಸಮಯಕ್ಕೆ ದೊರೆಯುವಂತೆ ಆಗಬೇಕು. ಭೂಮಿಯನ್ನು ಹದಮಾಡಿ ಕೊಂಡು ಕೃಷಿ ಚಟುವಟಿಕೆ ಮಾಡುತ್ತಿದ್ದೇವೆ. –ಶ್ರೀನಿವಾಸ್, ರೈತ
-ಎಸ್. ಮಹೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ… ನಕ್ಸಲ್ ಎನ್‌ಕೌಂಟರ್ ಬಗ್ಗೆ ಡಿಐಜಿ ಹೇಳಿದ್ದೇನು ?
Udupi: ಈಶ್ವರನಗರ-ಪರ್ಕಳ ರಸ್ತೆಯ ಹೊಂಡಗಳಿಗೆ ಕೊನೆಗೂ ತೇಪೆ
Udupi: ವಿಸಿಲ್ ಹೊಡೆದು, ಕೈ ಸನ್ನೆಯಲ್ಲೇ ಟ್ರಾಫಿಕ್ ನಿರ್ವಹಣೆ!
Paddana-Tulu folk songs: ಮರೆಯಾಗದಿರಲಿ ಪಾಡ್ದನನವೆಂಬ ಸಂಸ್ಕೃತಿಯ ಸಂಪರ್ಕ ಕೊಂಡಿ
Padubidri: ನಿಧಾನವಾಗಿ ಚಲಿಸಿ, ಹೆದ್ದಾರಿ ಕಾಮಗಾರಿ ನಡೆಯುತ್ತಿದೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.