ಸಮಸ್ಯೆ ಶೀಘ್ರ ಸರಿಪಡಿಸದಿದ್ದರೆ ಜೆಸ್ಕಾಂ ಕಚೇರಿ ಎದುರು ಧರಣಿ
Team Udayavani, Jul 4, 2022, 2:39 PM IST
ನಾರಾಯಣಪುರ: ಕೊಡೇಕಲ್‌ಗೆ ಪ್ರತ್ಯೇಕ ಫೀಡರ್ ಹಾಗೂ ಹೋಬಳಿ ವಲಯದ ಗ್ರಾಮಗಳಿಗೆ ನಿರಂತರ ಜ್ಯೋತಿ ವಿದ್ಯುತ್ ಸೌಕರ್ಯ ಒದಗಿಸದಿದ್ದರೆ ಜು.20ರಿಂದ ಕರವೇ (ಪ್ರವೀಣ ಶೆಟ್ಟಿ ಬಣ)ವತಿಯಿಂದ ಕೊಡೇಕಲ್ ಜೆಸ್ಕಾಂ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ಹುಣಸಗಿ ಕರವೇ ತಾಲೂಕು ಅಧ್ಯಕ್ಷ ರಮೇಶ ಬಿರಾದಾರ ಎಚ್ಚರಿಕೆ ನೀಡಿದರು.
ಕೊಡೇಕಲ್ ಪಟ್ಟಣದ ಪಿಎಸೈ ಅವರಿಗೆ ಕಾರ್ಯಕರ್ತರೊಂದಿಗೆ ಮನವಿ ಸಲ್ಲಿಸಿ ಮಾತನಾಡಿ ಅವರು, ಪಟ್ಟಣಕ್ಕೆ ಸರಬರಾಜು ಮಾಡುವ ವಿದ್ಯುತ್ ಲೈನ್ ಪ್ರತ್ಯೇಕ ಮಾಡಿ ಮತ್ತು ವಲಯದ ವಿವಿಧ ಹಳ್ಳಿಗಳಿಗೆ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ನೀಡುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೂ ಇದುವರೆಗೂ ಪ್ರತ್ಯೇಕ ಫೀಡರ್ ಬೆಡ್ ಸ್ಥಾಪಿಸಿಲ್ಲ. ಜು.20ರೊಳಗೆ ಫೀಡರ್ ಸ್ಥಾಪಿಸಬೇಕು ಮತ್ತು ನಿರಂತರ ಜ್ಯೋತಿ ಸೌಕರ್ಯ ಒದಗಿಸದಿದ್ದರೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಪಿಎಸೈ ಶ್ರೀಶೈಲ ಅಂಬಾಟೆ ಮನವಿ ಸ್ವೀಕರಿಸಿ ಮಾತನಾಡಿ, ನಾನು ಜೆಸ್ಕಾಂ ಅಧಿಕಾರಿಗಳ ಜೊತೆಗೆ ಮಾತನಾಡಿ ಜು.20ರೊಳಗೆ ಎಲ್ಲ ಸರಪಡಿಸುವಂತೆ ಹೇಳುವುದಾಗಿ ಭರವಸೆ ನೀಡಿದರು.
ಶಿವರಾಜ ಹೊಕ್ರಾಣಿ, ಕಾಂತು ಗುತ್ತೆದಾರ, ರಮೇಶ ಪೂಜಾರಿ, ಅಮರೇಶ ನೂಲಿ, ಬಸವರಾಜ ದೊಡಮನಿ, ಅಂಬ್ರೇಶ ಅಗ್ನಿ, ಶಂಕರಗೌಡ ಮಾಲಿಪಾಟೀಲ, ರಮೇಶ ಅಂಬಿಗೇರ, ಪ್ರಭು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Essar Group: ಎಸ್ಸಾರ್ ಗ್ರೂಪ್ ನಿ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
Kundapura: ಬಸ್ ತಂಗುದಾಣಗಳೇ ಮಾಯ; ಜನರು ಅಯೋಮಯ!
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.