ಅನ್ಯ ಜಾತಿ ಯುವತಿ ಪ್ರೀತಿ: ವಿಷ ಕುಡಿಸಿ ಯುವಕನ ಕೊಲೆ
Team Udayavani, Jul 5, 2022, 12:18 PM IST
ಕಲಬುರಗಿ: ಅನ್ಯ ಜಾತಿಯ ಯುವತಿಯನ್ನು ಪ್ರೀತಿ ಮಾಡುತ್ತಿದ್ದ ಎನ್ನುವ ಕಾರಣಕ್ಕೆ ಅಫಜಲಪುರ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಯುವಕನೊಬ್ಬನನ್ನು ಯುವತಿಯ ಕುಟುಂಬ ಸದಸ್ಯರು ಕೂಡಿಕೊಂಡು ವಿಷ ಕುಡಿಸಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಕೊಲೆಯಾಗಿರುವ ಯುವಕನನ್ನು ದೇವಲಗಾಣಗಾಪುರದ ಚಂದ್ರಕಾಂತ ಶರಣಪ್ಪ ಪೂಜಾರಿ (24) ಎಂದು ಗುರುತಿಸಲಾಗಿದೆ.
ಈತ ದೇವಲಗಾಣಗಾಪುರದ ಯುವತಿಯೊಬ್ಬಳ್ಳನ್ನು ಪ್ರೀತಿಸುತ್ತಿದ್ದ. ಈಚೆಗೆ ಇಬ್ಬರು ಕೆಲವು ದಿನಗಳ ಮಟ್ಟಿಗೆ ಒಟ್ಟಿಗೆ ಓಡಿ ಹೋಗಿದ್ದರು. ಆ ಬಳಿಕ ಯುವತಿಯ ಸಂಬಂಧಿಕರು ಉಪಾಯವಾಗಿ ಯುವತಿಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದರು.
ಜೀವ ತೆಗಿತೀವಿ: ಈ ವೇಳೆಯಲ್ಲಿ ಯುವತಿಯ ಸಂಬಂಧಿಕರು ಯುವಕನ ಮನೆಗೆ ಹೋಗಿ ಎಚ್ಚರಿಕೆ ನೀಡಿದ್ದರು. ಇನ್ನೊಮ್ಮೆ ನಮ್ಮ ಹುಡುಗಿಯ ತಂಟೆಗೆ ಬಂದರೆ ಜೀವ ತೆಗೆತೀವಿ ಎಂದು ಎಚ್ಚರಿಸಿದ್ದರು. ಈ ಎಚ್ಚರಿಕೆಯ ಬಳಿಕ ಯುವಕನ ಮನೆಯವರು ಯುವಕನಿಗೆ ಬುದ್ಧಿವಾದ ಹೇಳಿದ್ದಾರೆ. ಪ್ರೇಮ ಅಂತ್ಹೇಳಿ ಜೀವ ಕಳೆದುಕೊಳ್ಳಬ್ಯಾಡ ನೀನು ದುಡಿಯಲು ಬೆಂಗಳೂರಿಗೆ ಹೋಗು ಅಂತ ಕಳಿಸಿದ್ದರು. ಆದರೆ, ವಿಧಿ ಲಿಖೀತ ಅಳಿಸಲಾಗಲಿಲ್ಲ. ಯುವತಿ ಮನೆಯವರು ಯುವಕನಿಗೆ ಫೋನ್ ಮಾಡಿ ಕರೆಯಿಸಿದರು. ಅಲ್ಲದೆ, ಯುವತಿಯ ಮುಂದೆ ನನಗೂ, ನಿನಗೂ ಯಾವುದೇ ಸಂಬಂಧ ಇಲ್ಲ, ಪ್ರೀತಿ ಮಾಡಲು ನನಗೆ ಆಗುವುದಿಲ್ಲ ಎಂದೆಲ್ಲ ಹೇಳಿಸಲು ಗ್ರಾಮಕ್ಕೆ ಕರೆಯಿಸಿಕೊಂಡಿದ್ದರು. ಗ್ರಾಮ ಆಗಮಿಸಿದ್ದ ಚಂದ್ರಕಾಂತನನ್ನು ಇಂಗಳಗಿ ಗ್ರಾಮದ ಸೀಮಾಂತರ ಹೊಲದಲ್ಲಿ ಮಾತನಾಡಲು ಕರೆಯಿಸಿ ಮೊದಲು ವಿಷ ಕುಡಿಸಿ ಬಳಿಕ ಕತ್ತು ಹಿಚುಕಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ವಿಟ್ಲ: ಸಾರಡ್ಕ ಬಳಿ ಗುಡ್ಡ ಕುಸಿತ: ಕರ್ನಾಟಕ-ಕೇರಳ ಸಂಚಾರ ಬಂದ್
ದೂರು ದಾಖಲು: ಕೊಲೆಗೆ ಸಂಬಂಧಿಸಿದಂತೆ ಚಂದ್ರಕಾಂತ ತಾಯಿ ಯಲ್ಲಮ್ಮ ಶರಣಪ್ಪ ಪೂಜಾರಿ ಅವರು ದೂರು ನೀಡಿದ್ದಾರೆ. ಯುವತಿಯ ಸಂಬಂಧಿಕರಾದ ಈರಪ್ಪ, ಹುಲೆಪ್ಪ ಮೂರನೆತ್ತಿ ಮತ್ತು ರಾಕೇಶ ತಳವಾರ ವಿರುದ್ಧ ರೇವೂರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಸ್ಪಿ ಪಂತ್ ಭೇಟಿ: ಘಟನೆಯ ವಿಷಯ ತಿಳಿಯುತ್ತಲೇ ಎಸ್ಪಿ ಇಶಾ ಪಂತ್ ಅವರು ಇಂಗಳಗಿ ಗ್ರಾಮದ ಕೊಲೆಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸಿಪಿಐ ಜಗದೇವಪ್ಪ ಪಾಳಾ, ರೇವೂರು ಠಾಣೆಯ ಪಿಎಸ್‌ಐ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.