ಬ್ರಹಾವರದ ಹೃದಯ-ಇನ್ನಷ್ಟು ಸುಸಜ್ಜಿತ, ಸುಂದರವಾಗಲಿ
ಚಾಂತಾರಿಗೆ ಅಭಿವೃದ್ಧಿಯ ಪಥ ತೋರಬೇಕಿದೆ
Team Udayavani, Jul 5, 2022, 12:51 PM IST
ಬ್ರಹ್ಮಾವರ: ತಾಲೂಕು ಕೇಂದ್ರವಾದ ಬ್ರಹ್ಮಾ ವರದಲ್ಲಿ ಚಾಂತಾರು, ವಾರಂಬಳ್ಳಿ, ಹಂದಾಡಿ ಗ್ರಾಮ ಪಂಚಾ ಯತ್‌ಗಳು ಒಳಪಡುತ್ತವೆ. ಈ ಪೈಕಿ ಚಾಂತಾರು ಗ್ರಾಮಕ್ಕೆ ತಾಲೂಕು ಕೇಂದ್ರವೆಂದರೆ ತೀರಾ ಹತ್ತಿರದ ನಂಟು.
ಚಾಂತಾರು ಚ್ಯವನ ಋಷಿಯ ಆಶ್ರಮ ಸ್ಥಾನ ಈ ಗ್ರಾಮವಾಗಿತ್ತಂತೆ. ಆದ್ದರಿಂದ ಋಷಿಯ ನಾಮಾಂಕಿತದಂತೆ ಈ ಗ್ರಾಮಕ್ಕೆ ಚಾಂತಾರು ಹೆಸರು ಬಂದಿದೆ ಎನ್ನಲಾಗುತ್ತದೆ. ಗ್ರಾಮವು ಆರ್ಥಿಕವಾಗಿ, ಶೈಕ್ಷಣಿಕವಾಗಿ ಧಾರ್ಮಿಕವಾಗಿ ಹಾಗೂ ಸಾಂಸ್ಕೃತಿಕವಾಗಿಯೂ ಸಾಕಷ್ಟು ಮುಂಚೂಣಿಯಲ್ಲಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳು, ಸಹಕಾರಿ ಸಂಘಗಳಲ್ಲದೇ ಇನ್ನಿತರ ಕಚೇರಿಗಳು, ವಾಣಿಜ್ಯ ಮಳಿಗೆಗಳು ಇವೆ. ಶೈಕ್ಷಣಿಕವಾಗಿಯೂ ಹಿ.ಪ್ರಾ ಶಾಲೆ, ಕಿ.ಪ್ರಾ. ಶಾಲೆ, ಖಾಸಗಿ ಹಿ.ಪ್ರಾ. ಶಾಲೆ, ಅಂಗ್ಲ ಮಾಧ್ಯಮ ಶಾಲೆ ಹಾಗೂ ಕಾಲೇಜು ಇವೆ. ಸಾಂಸ್ಕೃತಿಕವಾಗಿ ಯಕ್ಷಗಾನ, ನಾಟಕ, ಸಿನೆಮಾ ಹಾಗೂ ಜನಪದ, ಕ್ರೀಡೆಗಳಲ್ಲಿ ಪ್ರಸಿದ್ಧಿ ಪಡೆದಿದೆ. ಗ್ರಾಮದ ಒಟ್ಟು ವಿಸ್ತೀರ್ಣ 1,394 ಎಕ್ರೆ ಪ್ರದೇಶ. 2011ರ ಜನಗಣತಿಯಂತೆ 5,512 ಜನಸಂಖ್ಯೆ.
ತಾಲೂಕು ಕೇಂದ್ರಕ್ಕೆ ತೀರಾ ಹತ್ತಿರವಿದೆ ಎಂದ ಮೇಲೆ ಲಾಭವೂ ಉಂಟು, ನಷ್ಟವೂ ಉಂಟು. ತಾಲೂಕು ಕೇಂದ್ರ ವಿಸ್ತರಣೆಯಾಗುತ್ತಿರುವಾಗ ಅಕ್ಕಪಕ್ಕದ ಗ್ರಾಮಗಳು ಕರಗುವುದುಂಟು. ಇದು ನಷ್ಟವೆಂದಾದರೆ, ತಾಲೂಕು ಕೇಂದ್ರ ಬೆಳೆದಾಗ ವಾಣಿಜ್ಯ ಮತ್ತಿತರ ಚಟುವಟಿಕೆಗಳು ಅಕ್ಕಪಕ್ಕದ ಗ್ರಾಮಗಳ ಕಡೆಗೂ ಹರಿದು ಬರುತ್ತವೆ. ಅದು ಲಾಭ ಎಂದಿಟ್ಟುಕೊಳ್ಳಬಹುದು. ಹಾಗಾಗಿ ನಾಳೆಯ ಪ್ರಗತಿಗೆ ಇಂದು ಮೂಲ ಸೌಕರ್ಯ ವೃದ್ಧಿಸಿಕೊಳ್ಳುತ್ತಾ ಹೋಗಬೇಕು. ಅದೂ ಮುಖ್ಯ. ಸ್ಥಳೀಯ ಗ್ರಾಮ ಪಂಚಾಯತ್‌ನ ಹೊಣೆಗಾರಿಕೆಯೂ ಸಹ.
ಈ ದೃಷ್ಟಿಯಲ್ಲಿ ವಿಶ್ಲೇಷಿಸುವುದಾದರೆ ಗ್ರಾಮ ವ್ಯಾಪ್ತಿಯಲ್ಲಿ ಸುಸಜ್ಜಿತ ತ್ಯಾಜ್ಯ ವಿಲೇವಾರಿ ಘಟಕ, ಒಳಚರಂಡಿ ವ್ಯವಸ್ಥೆ, ಹಸಿ ತ್ಯಾಜ್ಯ ಸಂಸ್ಕರಣ ಕೇಂದ್ರ ಆವಶ್ಯಕ. ವಸತಿ ಮತ್ತು ವಾಣಿಜ್ಯ ಸೇರಿ 25ಕ್ಕೂ ಹೆಚ್ಚು ಬಹುಮಹಡಿ ಕಟ್ಟಡಗಳಿರುವುದರಿಂದ ಈ ಮೂಲಸೌಕರ್ಯಗಳ ತುರ್ತು ಆವಶ್ಯಕತೆಯಿದೆ. ಗ್ರಾಮದಲ್ಲಿ 100ಕ್ಕೂ ಮಿಕ್ಕಿ ಮಂದಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಸರಕಾರಿ ಭೂಮಿ ಒತ್ತುವರಿ ತೆರವುಗೊಳಿಸಿ ನಿವೇಶನ ರಹಿತರಿಗೆ ಶೀಘ್ರವೇ ಹಂಚಿಕೆಯಾಗಬೇಕು ಎನ್ನುವುದು ಗ್ರಾಮಸ್ಥರ ಬೇಡಿಕೆ.
ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ, ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನ ಕೇಂದ್ರ ಮತ್ತು ಕೃಷಿ ಡಿಪ್ಲೊಮಾ ಕಾಲೇಜಿನಲ್ಲಿ ರೈತರು ಹಾಗೂ ಕೃಷಿಗೆ ಪೂರಕವಾದ ಇನ್ನಷ್ಟು ಚಟುವಟಿಕೆಗಳು ನಡೆಯಬೇಕು. ಜತೆಗೆ ಸ್ಥಳೀಯರಿಗೆ ಉದ್ಯೋಗಾವಕಾಶ ಸೃಷ್ಟಿಯಾಗಬೇಕು ಎನ್ನುವ ಆಗ್ರಹವೂ ಗ್ರಾಮಸ್ಥರದ್ದು.
ಬ್ರಹ್ಮಾವರ ಕುಂಜಾಲು ಜಂಕ್ಷನ್‌ನಲ್ಲಿ ತಾಲೂಕು ಸರ್ಕಲ್ ನಿರ್ಮಾಣ ಬೇಡಿಕೆ ಹಳೆಯದ್ದು. ಅದು ಈಡೇರಬೇಕಿದೆ. ಜತೆಗೆ ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಸೇರಿದಂತೆ ಎಲ್ಲ ಅಗತ್ಯ ಸೌಕರ್ಯಗಳನ್ನು ಕಾಲ ಮಿತಿಯೊಳಗೆ ಒದಗಿಸಿದರೆ ಮಾತ್ರ ಗ್ರಾಮದ ಪ್ರಗತಿಗೆ ಪೂರಕವಾಗಲಿದೆ.
ಚಾಂತಾರು ಮದಗ
ವಿಸ್ತಾರವಾದ ಚಾಂತಾರು ಮದಗ ಪ್ರಮುಖ ನೀರಿನ ಮೂಲ. ಪಂಚಾಯತ್ ವ್ಯಾಪ್ತಿಗೆ ಇಲ್ಲಿಂದಲೇ ಕುಡಿಯುವ ನೀರಿನ ಪೂರೈಕೆಯಾಗುತ್ತಿದೆ. ನೀರಿನ ಸಂರಕ್ಷಣೆ ಜತೆಗೆ ಉತ್ತಮ ಪ್ರವಾಸೀ ತಾಣವಾಗಿ ಅಭಿವೃದ್ದಿಪಡಿಸಲು ಅವಕಾಶವಿದೆ. ಸುತ್ತಲೂ ವಾಕಿಂಗ್ ಟ್ರಾಫಿಕ್, ಉದ್ಯಾನವನ, ವಿದ್ಯುತ್ ದೀಪ ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸಿದರೆ ಮದಗ ಇನ್ನಷ್ಟು ಸುಂದರವಾಗಲಿದೆ. ಹೂಳನ್ನು ತೆಗೆದು ಸುರಕ್ಷತಾ ಕ್ರಮಗಳೊಂದಿಗೆ ಬೋಟಿಂಗ್ ವ್ಯವಸ್ಥೆಯನ್ನೂ ಮಾಡಬಹುದಾಗಿದೆ. ಇದರಿಂದ ಜಲ ಮೂಲವನ್ನು ಉಳಿಸಿದಂತೆಯೂ ಆಗುತ್ತದೆ. ಹಾಗೆಯೇ ಪ್ರವಾಸಿ ತಾಣದ ಮೂಲಕ ಸ್ಥಳೀಯ ಪಂಚಾಯತ್ ನ ಆದಾಯವೂ ಹೆಚ್ಚಲಿದೆ. ಸ್ಥಳೀಯರಿಗೆ ಒಂದಿಷ್ಟು ಉದ್ಯೋಗವೂ ಸಿಗಬಹುದು. ಆದರೆ ಜಲ ಮೂಲ ಹಾಳಾಗಿ ಪರಿಸರ ಮಾಲಿನ್ಯವಾಗದಂತೆ ಎಚ್ಚರ ವಹಿಸಬೇಕು. ಇಲ್ಲವಾದರೆ ಜಲ ಮೂಲಕ್ಕೇ ಧಕ್ಕೆ ಬರುವ ಅಪಾಯವಿದೆ.
ಮತ್ತು ವಾಣಿಜ್ಯ ಸೇರಿ 25ಕ್ಕೂ ಹೆಚ್ಚು ಬಹುಮಹಡಿ ಕಟ್ಟಡಗಳಿರುವು ದರಿಂದ ಈ ಮೂಲಸೌಕರ್ಯಗಳ ತುರ್ತು ಆವಶ್ಯಕತೆಯಿದೆ. ಗ್ರಾಮದಲ್ಲಿ 100ಕ್ಕೂ ಮಿಕ್ಕಿ ಮಂದಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಸರಕಾರಿ ಭೂಮಿ ಒತ್ತುವರಿ ತೆರವುಗೊಳಿಸಿ ನಿವೇಶನ ರಹಿತರಿಗೆ ಶೀಘ್ರವೇ ಹಂಚಿಕೆಯಾಗಬೇಕು ಎನ್ನುವುದು ಗ್ರಾಮಸ್ಥರ ಬೇಡಿಕೆ.ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ, ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನ ಕೇಂದ್ರ ಮತ್ತು ಕೃಷಿ ಡಿಪ್ಲೊಮಾ ಕಾಲೇಜಿನಲ್ಲಿ ರೈತರು ಹಾಗೂ ಕೃಷಿಗೆ ಪೂರಕವಾದ ಇನ್ನಷ್ಟು ಚಟುವಟಿಕೆ ಗಳು ನಡೆಯಬೇಕು. ಜತೆಗೆ ಸ್ಥಳೀಯರಿಗೆ ಉದ್ಯೋಗಾವಕಾಶ ಸೃಷ್ಟಿಯಾಗಬೇಕು ಎನ್ನುವ ಆಗ್ರಹವೂ ಗ್ರಾಮಸ್ಥರದ್ದು.
ವಾಹನ ನಿಲುಗಡೆ ಸಮಸ್ಯೆ
ಬ್ರಹ್ಮಾವರ ಪೇಟೆಯಲ್ಲಿ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಇಲ್ಲ. ಮುಖ್ಯವಾಗಿ ಕುಂಜಾಲು ಕ್ರಾಸ್‌ನಿಂದ ತಾಲೂಕು ಆμàಸ್ ರಸ್ತೆ, ರಥಬೀದಿಯಲ್ಲಿ ಮಿತಿ ಮೀರಿದ ವಾಹನ ದಟ್ಟಣೆ ಇರುತ್ತದೆ. ರಸ್ತೆ ಒತ್ತುವರಿ ತೆರವುಗೊಳಿಸಿ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಟ್ಟರೆ ವಾಹನ ದಟ್ಟಣೆಯನ್ನೂ ಸಮರ್ಪಕವಾಗಿ ನಿರ್ವಹಿಸಬಹುದೆನ್ನುವುದು ಸಾರ್ವಜನಿಕರ ಲೆಕ್ಕಾಚಾರ.
ʼಚಾರಿತ್ರಿಕ ಹಿನೆಲೆ ಇರುವ ಗ್ರಾಮʼ
ಬ್ರಹ್ಮಾವರದ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಹೋಲಿ ಫ್ಯಾಮಿಲಿ ಚರ್ಚ್, ಶ್ರೀ ಆಂಜನೇಯ, ಗಣಪತಿ ದೇವಸ್ಥಾನಗಳು, ಚಾಂತಾರು ಗದ್ದುಗೆ ಅಮ್ಮನವರ ದೇವಸ್ಥಾನ, ಅಗ್ರಹಾರದಲ್ಲಿ ವಿಷ್ಣುಮೂರ್ತಿ ದೇವಸ್ಥಾನ, ಚ್ಯವನ ಋಷಿ ಆಶ್ರಮಸ್ಥಾನ ಚಾಂತಾರು ಗರೋಡಿ, ಶ್ರೀ ರಾಮ ಮಂದಿರಗಳು, ಹಲವಾರು ದೈವಸ್ಥಾನಗಳು ಪ್ರಮುಖ ಧಾರ್ಮಿಕ ಕೇಂದ್ರಗಳಾಗಿವೆ.
ಸಮಸ್ಯೆ ಪರಿಹಾರಕ್ಕೆ ಪ್ರಯತ್ನ: ನಿವೇಶನ ರಹಿತರ ಸಮಸ್ಯೆ ಪರಿಹರಿಸಲು ಹೆರಂಜೆಯಲ್ಲಿ ಸುಮಾರು 1 ಎಕ್ರೆ ಜಾಗ ಗುರುತಿಸಿ ತಹಶೀಲ್ದಾರ್ ಹಾಗೂ ಶಾಸಕರಿಗೆ ಪತ್ರ ಬರೆಯಲಾಗಿದೆ. ಪೇಟೆಯ ಚರಂಡಿ ಸಮಸ್ಯೆ ಕುರಿತಂತೆ ಸ್ಥಳ ಪರಿಶೀಲನೆ ನಡೆಸಿ ಚರಂಡಿಗೆ ನೇರವಾಗಿ ಕೊಳಚೆ ನೀರು ಬಿಡದಂತೆ ಸೂಚನೆ ನೀಡಲಾಗಿದೆ. ಪಾರ್ಕಿಂಗ್ ಸ್ಥಳದಲ್ಲಿ ಇರುವ ಫಾಸ್ಟ್‌ಫುಡ್ ಅಂಗಡಿಗಳನ್ನು ತೆರವುಗೊಳಿಸಲು ಕ್ರಮ ತೆಗೆದುಕೊಂಡಿದ್ದೇವೆ. – ಮೀರಾ ಸದಾನಂದ ಪೂಜಾರಿ, ಅಧ್ಯಕ್ಷರು, ಚಾಂತಾರು ಗ್ರಾ.ಪಂ.
ಹೃದಯ ಭಾಗಕ್ಕೆ ಆದ್ಯತೆ ನೀಡಿ: ಚಾಂತಾರು ಗ್ರಾಮ ತಾಲೂಕಿನ ಹೃದಯ ಭಾಗದಲ್ಲಿರುವುದರಿಂದ ಇನ್ನಷ್ಟು ಮೂಲ ಸೌಕರ್ಯ ಕಲ್ಪಿಸಬೇಕಿದೆ. ರಸ್ತೆ ಒತ್ತುವರಿ ತೆರವುಗೊಳಿಸುವುದರಿಂದ ಪಾರ್ಕಿಂಗ್ ಸಮಸ್ಯೆ, ಸರಕಾರಿ ಜಾಗ ಒತ್ತುವರಿ ತೆರವಿನಿಂದ ನಿವೇಶನ ಸಮಸ್ಯೆ ಪರಿಹಾರವಾಗಬಹುದು. –ಸದಾಶಿವ ಶೆಟ್ಟಿ , ಬ್ರಹ್ಮಾವರ
-ಪ್ರವೀಣ್ ಮುದ್ದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.