ಒಣ ಮೀನಿಗೆ ಮೊರೆ ಹೋಗುವ ಮೀನು ಪ್ರಿಯರು
ಮಳೆಗಾಲದಲ್ಲಿ ಹಸಿಮೀನಿನ ಕೊರತೆ
Team Udayavani, Jul 5, 2022, 1:35 PM IST
ಮಲ್ಪೆ: ಮಳೆಗಾಲದಲ್ಲಿ ಯಾಂತ್ರಿಕ ಮೀನುಗಾರಿಕೆ ಬಂದ್ ಆಗಿರುದರಿಂದ ಹಸಿಮೀನು ಲಭ್ಯತೆ ಕಡಿಮೆಯಾಗಿರುತ್ತದೆ. ಹೊರ ರಾಜ್ಯದಿಂದ ಹಸಿಮೀನುಗಳು ಲಾರಿ ಮೂಲಕ ಬಂದರು ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಬರುವುದಿಲ್ಲ. ಕರಾವಳಿ ಜನರಿಗೆ ಮೀನಿಲ್ಲದಿದ್ದರೆ ಊಟ ಮಾಡಲಾಗದ ಸ್ಥಿತಿ,ಇತ್ತ ತರಕಾರಿಗೂ ದುಪ್ಪಟ್ಟು ದರ. ಹಾಗಾಗಿ ಮೀನು ಪ್ರಿಯರು ಮಳೆ ಗಾಲ ಸಂದರ್ಭದಲ್ಲಿ ಒಣ ಮೀನಿಗೆ ಮೊರೆ ಹೋಗುತ್ತಾರೆ.
ವರ್ಷಪೂರ್ತಿ ಒಣಮೀನು ಲಭ್ಯವಾಗಿ ದ್ದರೂ ಮಳೆಗಾಲದಲ್ಲಿ ಮಾತ್ರ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಳ್ಳುತ್ತದೆ. ಜನರು ಸಂತೆಗೆ ಬಂದು ಎರಡು ತಿಂಗಳಿಗೆ ಬೇಕಾಗುವಷ್ಟು ಒಣ ಮೀನನ್ನು ಖರೀದಿಸಿ, ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಪ್ರತಿ ವರ್ಷ ಮೇ ಅಂತ್ಯ ಜೂನ್ ಪ್ರಾರಂಭದಲ್ಲಿ ಸಂತೆ ಮಾರುಕಟ್ಟೆಯಲ್ಲಿ ಒಣ ಮೀನಿನ ಮಾರಾಟ ಜೋರಾಗಿರುತ್ತದೆ. ಮಲ್ಪೆ ಬಂದರು ವ್ಯಾಪ್ತಿ ಹಾಗೂ ಕರಾವಳಿ ತೀರದ ಸುತ್ತಮುತ್ತಲಿನ ಮಹಿಳೆಯರು ಒಣಮೀನು ಮಾರಾಟದಲ್ಲಿ ತೊಡಗುತ್ತಾರೆ. ಇವರು ರಖಂ ಆಗಿ ಮೀನನ್ನು ಖರೀದಿಸಿ ಸಂತೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.
ವಿವಿಧ ತರಹದ ಒಣಮೀನು
ತಾಟೆ, ತೊರಕೆ, ಬಂಗುಡೆ, ಕುರ್ಚಿ, ಗೋಲಯಿ, ನಂಗ್, ಅಡೆಮೀನು, ಕಲ್ಲರ್, ಆರಣೆಮೀನು, ಮಡಂಗ್ ಮೊದಲಾದ ವಿವಿಧ ಜಾತಿಯ ಒಣ ಮೀನುಗಳನ್ನು ಮಾರುಕಟ್ಟೆ ಕಾಣಬಹುದು. ತಾಟೆ, ತೊರಕೆ ಮೀನುಗಳು ಇದರ ದುಪ್ಪಟ್ಟು ಬೆಲೆಗಳನ್ನು ಪಡೆದುಕೊಳ್ಳುತ್ತವೆ. ಹೆಚ್ಚು ಒಣಗಿದ ಮೀನುಗಳಿಗೆ ಬೇಡಿಕೆ ಜಾಸ್ತಿ. ಈ ಮೀನನ್ನು ಹೆಚ್ಚು ಸಮಯದವರೆಗೆ ಸಂಗ್ರಹಿಸಿಟ್ಟರೂ ಹಾಳಾಗುವುದಿಲ್ಲ ಎನ್ನಲಾಗಿದೆ.
ಒಣ ಮೀನು ಬಲು ರುಚಿ
ಹಸಿಮೀನಿಗಿಂತ ಒಣ ಮೀನಿನ ರುಚಿ ವಿಭಿನ್ನ. ಮಹಿಳೆಯರು ಮೀನನ್ನು ಸಿಗಿದು, ಉಪ್ಪು ಬೆರೆಸಿ ಬಿಸಿಲಿನಲ್ಲಿ ಒಣಗಿಸಿ ಬೆಚ್ಚಗಿನ ವಾತಾವರಣದಲ್ಲಿ ಸಂಗ್ರಹಿಡುತ್ತಾರೆ. ಬಳಿಕ ಅವುಗಳನ್ನು ಮಾರಾಟ ಕೇಂದ್ರಕ್ಕೆ ಅಥವಾ ಸಂತೆಗೆ ತರುತ್ತಾರೆ.
ಕೇವಲ ಮಳೆಗಾಲ ಪ್ರಾರಂಭವಾಗುವ ಮುನ್ನ ಮಾತ್ರ ಹೆಚ್ಚು ವ್ಯಾಪಾರವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಡಿಸೇಲ್‌ದರ ಒಂದೆ ಸವನೇ ಏರಿಕೆಯಾಗುವುದರಿಂದ ಮೀನು ಗಾರಿಕೆ ನಡೆಸುವುದೇ ಕಷ್ಟಕರವಾಗಿದೆ. ಹಾಗಾಗಿ ಒಣ ಮೀನುಗಾರಿಕೆಯೂ ದುಬಾರಿಯಾಗಿದೆ ಎನ್ನುತ್ತಾರೆ ಒಣಮೀನು ಮಾರಾಟ ಮಹಿಳೆಯರು.
ಮಳೆಗಾಲದಲ್ಲಿ ದರ ಹೆಚ್ಚು: ಮಲ್ಪೆ ಬಂದರಿನಲ್ಲಿ ಸುಮಾರು 70-75 ಮಂದಿ ಒಣಮೀನು ವ್ಯಾಪಾರಸ್ಥ ಮಹಿಳೆಯರು ಇದ್ದಾರೆ. ಬೇಸಗೆಯಲ್ಲಿ ಹಸಿಮೀನನ್ನು ಖರೀದಿಸಿ ಒಣಗಿಸುತ್ತೆವೆ. ಎಪ್ರಿಲ್, ಮೇ ತಿಂಗಳಲ್ಲಿ ಬೇಡಿಕೆ ಹೆಚ್ಚಿರುವುದರಿಂದ ಚಿಲ್ಲರೆ ಮಾರಾಟಗಾರರಿಗೆ ರಖಂ ಆಗಿ ಕೊಡುತೇ¤ವೆ. ಮಳೆಗಾಲದಲ್ಲಿ ಹಸಿಮೀನು ಸಿಗದಿರುವುದರಿಂದ ಮೀನಿನ ದರಗಳು ಹೆಚ್ಚಾಗಿವೆ. ಕಡಿಮೆ ಪ್ರಮಾಣದಲ್ಲಿ ಸಿಗುವ ಮೀನಿಗೆ ದರ ಹೆಚ್ಚಿರುತ್ತದೆ. –ಜಯಂತಿ ಎಂ. ಕುಂದರ್, ಮಲ್ಪೆ, ಒಣಮೀನು ವ್ಯಾಪಾರಸ್ಥೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್
Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ
Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.