ಭಾರತದ ಸಂವಿಧಾನ ತುಂಬಾ ಸುಂದರ…ಆದರೆ…ಕೇರಳ ಸಚಿವ ಸಾಜಿ ಹೇಳಿದ್ದೇನು?
ಬ್ರಿಟಿಷರು ಹೇಗೆ ಬರೆದಿಟ್ಟಿದ್ದಾರೋ ಅದೇ ರೀತಿ ಭಾರತೀಯರು ಸಂವಿಧಾನ ರಚಿಸಿದ್ದಾರೆ.
Team Udayavani, Jul 5, 2022, 3:47 PM IST
ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಚಿವ ಸಂಪುಟದ ಮೀನುಗಾರಿಕೆ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸಾಜಿ ಚರಿಯಾನ್ ಭಾರತದ ಸಂವಿಧಾನವನ್ನು ಟೀಕಿಸಿ ಮಾಡಿದ ಭಾಷಣದ ವಿಡಿಯೋ ವೈರಲ್ ಆಗಿದ್ದು, ಇದು ಭಾರೀ ಪ್ರತಿಭಟನೆಗೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಉಡುಪಿ: ರಜೆ ಬಗ್ಗೆ ಮಾಹಿತಿಯಿಲ್ಲದೆ ಶಾಲೆಗೆ ಹೊರಟ ವಿದ್ಯಾರ್ಥಿಗೆ ಟೆಂಪೋ ಢಿಕ್ಕಿ; ಗಂಭೀರ
ಇತ್ತೀಚೆಗೆ ಮಲ್ಲಪಲ್ಲಿಯ ಪಟ್ಟಣಂತಿಟ್ಟದಲ್ಲಿ ಸಚಿವ ಸಾಜಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದ ವೇಳೆ, ನಮ್ಮ ಸಂವಿಧಾನವನ್ನು ತುಂಬಾ ಸುಂದರವಾಗಿ ರಚಿಸಲಾಗಿದೆ ಎಂದು ನಾವೆಲ್ಲರೂ ಹೆಮ್ಮೆಯಿಂದ ಹೇಳುತ್ತೇವೆ. ಆದರೆ ನನ್ನ ಪ್ರಕಾರ ನಮ್ಮ ದೇಶದ ಸಂವಿಧಾನವನ್ನು ಹೆಚ್ಚಿನ ಜನರು ಲೂಟಿ ಹೊಡೆಯಲು ಅನುಕೂಲವಾಗುವಂತೆ ರಚಿಸಲಾಗಿದೆ ಎಂದು ಆರೋಪಿಸಿದ್ದರು.
“ಬ್ರಿಟಿಷರು ಹೇಗೆ ಬರೆದಿಟ್ಟಿದ್ದಾರೋ ಅದೇ ರೀತಿ ಭಾರತೀಯರು ಸಂವಿಧಾನ ರಚಿಸಿದ್ದಾರೆ. ದೇಶದಲ್ಲಿ ಸಂವಿಧಾನ ಜಾರಿಯಾಗಿ 75 ವರ್ಷವಾಗಿದೆ. ನನ್ನ ಪ್ರಕಾರ ಇದೊಂದು ದೇಶದ ಜನರಿಗೆ ಲೂಟಿ ಹೊಡೆಯಲು ಅನುಕೂಲವಾಗುವ ಸುಂದರ ಸಂವಿಧಾನ ಎಂದು ಹೇಳುತ್ತೇನೆ” ಎಂಬುದಾಗಿ ಸಾಜಿ ಹೇಳಿರುವುದಾಗಿ ವರದಿ ವಿವರಿಸಿದೆ.
ಮಂಗಳವಾರ(ಜುಲೈ 05) ಟೆಲಿವಿಷನ್ ಮಾಧ್ಯಮಗಳಲ್ಲಿ ಸಾಜಿ ಭಾಷಣದ ವಿಡಿಯೋ ಪ್ರಸಾರವಾದ ನಂತರ ವಿವಾದಕ್ಕೆ ಎಡೆ ಮಾಡಿಕೊಟ್ಟಿರುವುದಾಗಿ ವರದಿ ತಿಳಿಸಿದೆ. ಸಚಿವ ಸಾಜಿ ಸಂವಿಧಾನದ ವಿರುದ್ಧ ನೀಡಿರುವ ಹೇಳಿಕೆ ಬಗ್ಗೆ ವರದಿ ನೀಡುವಂತೆ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.