ಈಗ ಮಳೆಯಾದ್ರೆ ಮಾತ್ರ ಕೈಗೆ ಬೆಳೆ
ತೆಲಸಂಗ ಹೋಬಳಿ ಭಾಗಕ್ಕಿಲ್ಲ ನೀರಾವರಿ ಸೌಲಭ್ಯ
Team Udayavani, Jul 5, 2022, 5:29 PM IST
ತೆಲಸಂಗ: ಮುನಿದ ಮುಂಗಾರು ಮಳೆ.. ಆತಂಕದಲ್ಲಿ ರೈತ ಸಮುದಾಯ. ಇದು ಅಕ್ಷರಶಃ ನಿಜ. ಈ ವರ್ಷ ಉತ್ತಮ ಮಳೆಯಾಗಿ ರೈತರ ಸ್ಥಿತಿಗತಿ ಉತ್ತಮಗೊಳ್ಳುವ ಆಸೆಗೆ ಮುಂಗಾರು ಮಳೆ ತಣ್ಣೀರೆರೆಚಿದೆ.
ಹೌದು.. ತೆಲಸಂಗ ಹೋಬಳಿಯಲ್ಲಿ ವಾಡಿಕೆಗಿಂತ ಪ್ರಸಕ್ತ ವರ್ಷ ಜೂನ್ ತಿಂಗಳಿಗೂ ಮುನ್ನ ಅಂದರೆ ಮೇ 13 ರಂದು 27.2 ಮಿ.ಮೀ, 18 ರಂದು 6.1, 20 ರಂದು 104.2, 21 ರಂದು 28.2 ಮಿ.ಮೀ ಮಳೆ ಸುರಿದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಈ ಹಿಂದಿನ 10 ವರ್ಷದಲ್ಲಿ ಈ ಭಾಗದಲ್ಲಿ ಮೇ ತಿಂಗಳಲ್ಲಿ ಮಳೆ ಆಗಿದ್ದೇ ಇಲ್ಲ. ಬೇಸಿಗೆಯಲ್ಲಿ ಹೊಲಗೆಲಸ ಮಾಡಿ ಬಿತ್ತನೆಗೆ ಭೂಮಿಯನ್ನು ಸಿದ್ದಗೊಳಿಸಿದ್ದ ರೈತರು ಆರಂಭಿಕ ಮಳೆ ವಾಡಿಕೆಗಿಂತ ಮೊದಲೇ ಸುರಿದಿದ್ದರಿಂದ ತೊಗರಿ, ಹೆಸರು, ಉದ್ದು ಬಿತ್ತನೆ ಮಾಡಿದ್ದಾರೆ. ಮೋಡಗಳ ಚೆಲ್ಲಾಟ ರೈತನಿಗೆ ಪ್ರಾಣ ಸಂಕಟ ಎನ್ನುವಂತೆ, ಭೂಮಿಗೂ ತಾಗದಂತೆ ಜೂ.1 ರಂದು ಕೇವಲ 9.1, 3ರಂದು 5.2, 6ರಂದು 4.2 ಮಿ.ಮೀಟರ್ ಮಳೆ ಸುರಿದಿದ್ದು ನಂತರ ಮಾಯವಾಗಿದೆ. ಸದ್ಯಕ್ಕೆ ವರುಣನ ಕಣ್ಣುಮುಚ್ಚಾಲೆಯಿಂದ ಮೊಳಕೆಯೊಡೆದು ಮೇಲೆ ಬಂದ ಬೆಳೆ, ಮಳೆಗಾಗಿ ಬಾಯಿತೆರೆದು ನಿಂತಿದೆ. ಈ ವಾರದಲ್ಲಿ ಚೆನ್ನಾಗಿ ಮಳೆ ಸುರಿದರೆ ಮಾತ್ರ ಬಿತ್ತಿದ ಬೆಳೆಯಲ್ಲಿ ಅರ್ಧದಷ್ಟಾದರೂ ಇಳುವರಿ ಕೈಗೆಟುಕಲಿದ್ದು, ಹೀಗೆ ಮುಂದುವರೆದರೆ ಬಿತ್ತನೆಗೆ ಮಾಡಿದ ಖರ್ಚು ಒಂದೆಡೆ ಇರಲಿ, ಹೊಲ ಸ್ವತ್ಛಗೊಳಿಸುವ ಕೂಲಿಯೂ ದೊರೆಯುವುದಿಲ್ಲ ಎನ್ನುವಂತಾಗಿದೆ.
ತೆಲಸಂಗ ಗ್ರಾಮವೊಂದರಲ್ಲಿಯೇ ಗೋವಿನ ಜೋಳ ಕಳೆದ ವರ್ಷ 9263 ಹೆಕ್ಟೇರ್, ಪ್ರಸಕ್ತ ವರ್ಷ 8144 ಹೆಕ್ಟೇರ್, ತೊಗರಿ ಕಳೆದ ವರ್ಷ 8844 ಹೆಕ್ಟೇರ್ -ಪ್ರಸಕ್ತ ವರ್ಷ 4200 ಹೆಕ್ಟೇರ್, ಉದ್ದು ಕಳೆದ ವರ್ಷ 1738 ಹೆಕ್ಟೇರ್-ಪ್ರಸಕ್ತ ವರ್ಷ 23195 ಹೆಕ್ಟೇರ್ ಭೂಮಿ ಬಿತ್ತನೆ ಆಗಿದೆ. ಸದ್ಯ ವರುಣನ ಕೃಪೆಗಾಗಿ ರೈತ ಆಕಾಶದತ್ತ ಮುಖಮಾಡಿ ಕುಳಿತಿದ್ದಾನೆ.
ತೊಗರಿ ಬೆಳೆ ಕೈ ಬಿಟ್ಟು ಉದ್ದು ಬಿತ್ತಿದರು: ಈ ಭಾಗದಲ್ಲಿ ನೀರಾವರಿ ಆಗಿಲ್ಲ. ಮಳೆ ಆದರೆ ಬೆಳೆ. ಹತ್ತಾರು ವರ್ಷಗಳಿಂದ ಮಳೆ ಕೊರತೆಯಿಂದ ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ. ಸಾಕಷ್ಟು ಜನ ಪ್ರತಿವರ್ಷ ಗುಳೆ ಹೋಗುವುದು ತಪ್ಪಿಲ್ಲ. ಮಳೆಯಾಶ್ರಿತ ಮಡ್ಡಿ ಭೂಮಿಯಲ್ಲಿ ಬೆಳೆಯಬಹುದಾದ ತೊಗರಿ ಬೆಳೆಗೆ ಕಳೆದ 3 ವರ್ಷ ವರ್ಷಗಳಿಂದ ರೋಗಬಾಧೆ ಕಾಡತೊಡಗಿದೆ. ಸಿಡಿ ಹಾಯ್ದು ಕಾಳು ಬಿಡುತ್ತಿಲ್ಲ. ಕಡಿಮೆ ಮಳೆಯಲ್ಲಿ ಮಡ್ಡಿ ಜಮೀನಿನಲ್ಲಿ ಬೆಳೆಯಬಹುದಾದ ತೊಗರಿ ಬೆಳೆ ನೆಚ್ಚಿದ್ದ ಈ ಭಾಗದ ರೈತರು ಈಗ ಉದ್ದು ಬೆಳೆಯತ್ತ ಮುಖ ಮಾಡಿದ್ದಾರೆ. ಎಲ್ಲಿ ನೋಡಿದರಲ್ಲಿ ಉದ್ದು ನನ್ನನ್ನೇ ನೋಡು ಎಂದು ಅಂದವಾಗಿ ಬೆಳೆದು ನಗುತ್ತಿದೆ. ಆದರೆ ಮಳೆ ಕೈಕೊಟ್ಟಿದ್ದರಿಂದ ಕಮರುವ ಹಂತ ತಲುಪಿದೆ.
ಬೋರು, ಬಾವಿಗಳಿಗಿಲ್ಲ ಇನ್ನೂ ನೀರು: ಕಳೆದ ವರ್ಷ ಮಳೆ ಕಡಿಮೆ ಆಗಿದ್ದರಿಂದ ಅಂತರ್ಜಲ ಕುಸಿದು ಬೇಸಿಗೆಯಲ್ಲಿಯೇ ಬೋರ್ವೆಲ್ ಗಳಿಗೆ ನೀರು ಕಡಿಮೆ ಆಗಿವೆ. ಇನ್ನು ಕೆಲವು ಬತ್ತಿ ಹೋಗಿವೆ. ತೋಟಗಾರಿಕಾ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಮತ್ತೆ ಮತ್ತೆ ಸಾವಿರ ಅಡಿಯಷ್ಟು ಬೋರ್ವೆಲ್ ಕೊರೆಯಿಸುತ್ತಿದ್ದಾರೆ. ಜೂನ್ ತಿಂಗಳ ಮೊದಲ ವಾರದಲ್ಲಿ ಮಳೆ ಚೆನ್ನಾಗಿ ಸುರಿದರೆ ಬೋರ್ವೆಲ್ ಬಾವಿಗಳಿಗೆ ನೀರಾಗುತ್ತಿದ್ದವು. ವರ್ಷದ ಮಳೆ ಆರಂಭದಿಂದ ತಿಂಗಳು ಕಳೆದರೂ ಒಡ್ಡುವಾರಿ ತುಂಬಿ ಹರಿಯವಷ್ಟು ಮಳೆ ಆಗಿಲ್ಲ. ಹವಾಮಾನ ವೈಪರೀತ್ಯದಿಂದ ತುಂತುರು ಮಳೆಗಳು ಮಾತ್ರ ಸುರಿದಿವೆ. ಮುಂದೆ ಮಳೆ ಆಗಬಹುದೆಂಬ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ ರೈತರು, ತೋಟಗಾರಿಕೆ ಬೆಳೆ ಮಾಡಿದ ರೈತರು, ಸದ್ಯ ಗಾಳಿ ಬೀಸುತ್ತಿರುವ ವಾತಾವರಣ ನೋಡಿ ಆತಂಕಗೊಂಡಿದ್ದಾರೆ.
ಪ್ರಸಕ್ತ ವರ್ಷ ಆರಂಭಿಕ ಮಳೆಯಿಂದ ಭಾರಿ ಪ್ರಮಾಣದಲ್ಲಿ ರೈತರು ಬಿತ್ತನೆ ಮಾಡಿದ್ದಾರೆ. 9 ಕಡೆ ಬೀಜ ವಿತರಣಾ ಕೇಂದ್ರ ತೆರೆದು ಸಕಾಲಕ್ಕೆ ಬೀಜ ವಿತರಣೆ ಮಾಡಿದ್ದೆವು. ಆದರೆ ಇಷ್ಟೊತ್ತಿಗೆ ಒಂದೆರೆಡು ಒಡ್ಡು ತುಂಬಿ ಹರಿಯುವಷ್ಟು ಮಳೆ ಸುರಿಯಬೇಕಿತ್ತು. ವಾರದಲ್ಲಿ ಚೆನ್ನಾಗಿ ಮಳೆ ಸುರಿಯದಿದ್ದರೆ ಬೆಳೆಗೆ ತೊಂದರೆ ತಪ್ಪಿದ್ದಲ್ಲ. -ಯಂಕಪ್ಪ ಉಪ್ಪಾರ,ಕೃಷಿ ಅಧಿಕಾರಿ, ತೆಲಸಂಗ.
ಈ ವರ್ಷ ಮಳೆಗಾಲದ ಆರಂಭದಲ್ಲಿಯೇ ಸುರಿದ ಮಳೆಯಿಂದ ತುಂಬಾ ಹರ್ಷಗೊಂಡಿದ್ದೆವು. ಕಳೆದ ಹತ್ತು ವರ್ಷದಿಂದ ಮಳೆ ಚೆನ್ನಾಗಿ ಬಾರದ್ದಕ್ಕೆ ನಷ್ಟ ಅನುಭವಿಸಿದ್ದು, ಈ ವರ್ಷವಾದರೂ ದೇವರು ಕೈ ಹಿಡಿಯುತ್ತಾನೆ ಎಂದುಕೊಂಡಿದ್ದೆವು. ಸದ್ಯ ಮಳೆ ಸುರಿಯದಿದ್ದರೆ ಭೂತಾಯಿ ನಂಬಿ ಬೆಳೆಗೆ ಮಾಡಿದ ಖರ್ಚು ಕೈಗೆಟಕುವುದಿಲ್ಲ. –ನವೀನ ಪೋಳ, ಯುವ ರೈತ, ತೆಲಸಂಗ.
ತೆಲಸಂಗ ಹೋಬಳಿಯಲ್ಲಿಯೇ ಹೆಚ್ಚು ತುಂತುರು ನೀರಾವರಿ ಮಾಡಿ ವಾಣಿಜ್ಯ ಬೆಳೆಗಳನ್ನು ಮಾಡಿದ್ದಾರೆ. ಮಳೆಯ ಕೊರತೆಯಿಂದ ಅಂತರ್ಜಲ ಕುಸಿದಿದ್ದರ ಪರಿಣಾಮ ಸದ್ಯಕ್ಕೆ ತೋಟಗಾರಿಕಾ ಬೆಳೆ ಉಳಿಸಿಕೊಳ್ಳಲು ಮಳೆ ಚೆನ್ನಾಗಿ ಸುರಿಯಬೇಕು. ಎಂದರೆನೇ ಬೋರ್ವೆಲ್ ನೀರು ಹೆಚ್ಚುತ್ತವೆ. ಬೋರ್ವೆಲ್ ನೀರು ಹೆಚ್ಚಿದರೆ ಮಾತ್ರ ಬರುವ ದಿನಗಳಲ್ಲಿ ಬೆಳೆ ಚೆನ್ನಾಗಿ ಪಡೆಯಲು ಸಾಧ್ಯವಿದೆ. -ಶ್ವೇತಾ ಹಾಡಕರ, ತೋಟಗಾರಿಕಾ ಸಹಾಯಕ ನಿರ್ದೇಶಕಿ, ಅಥಣಿ.
-ಜೆ.ಎಂ.ಖೊಬ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.