ದೇಶ ಮತ್ತು ಧರ್ಮ ರಕ್ಷಣೆಗಾಗಿ ಅಗ್ನಿಪಥ ಯೋಜನೆಗೆ ಯುವಕರು ಸೇರಬೇಕು : ಶ್ರೀಶೈಲಗೌಡ ಪಾಟೀಲ
Team Udayavani, Jul 6, 2022, 6:22 PM IST
ರಬಕವಿ-ಬನಹಟ್ಟಿ : ಮುಂದಿನ ದಿನಗಳಲ್ಲಿ ದೇಶ ಮತ್ತು ಧರ್ಮ ರಕ್ಷಣೆಗಾಗಿ ಪ್ರತಿಯೊಬ್ಬ ಭಾರತೀಯ ಯುವಕ ಅಗ್ನಿಪಥ ಯೋಜನೆಗೆ ಸೇರಿಕೊಳ್ಳಬೇಕು. ಇಂದಿನ ದಿನಗಳಲ್ಲಿ ಅಗ್ನಿಪಥ ಯೋಜನೆ ಭಾರತ ದೇಶಕ್ಕೆ ಅಗತ್ಯ ಮತ್ತು ಅವಶ್ಯಕವಾಗಿದೆ ಎಂದು ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಶ್ರೀಶೈಲಗೌಡ ಪಾಟೀಲ ತಿಳಿಸಿದರು.
ಬುಧವಾರ ಅವರು ಬನಹಟ್ಟಿಯ ಬಸ್ ನಿಲ್ದಾಣದ ಹತ್ತಿರ ರಾಜ್ಯ ಹೆದ್ದಾರಿಯಲ್ಲಿ ತಾಲೂಕು ಹಿಂದೂ ಸಂಘಟನೆಗಳ ಒಕ್ಕೂಟದ ವತಿಯಿಂದ ರಾಜಸ್ಥಾನ ಉದಯಪುರದಲ್ಲಿ ನಡೆದ ಟೇಲರ ಉದ್ಯೋಗಿ ಕನ್ಹಯ್ಯಾಲಾಲ್ ಮತ್ತು ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದ ಜೌಷದಿ ವ್ಯಾಪಾರಿ ಉಮೇಶ ಅವರ ಬರ್ಬರ ಹತ್ಯೆಯನ್ನ ಖಂಡಿಸಿ ಬೃಹತ್ ಪ್ರತಿಭಟನೆಯನ್ನು ನಡೆಸಿ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಜಿಹಾದಿಗಳ ಪ್ರತಿಕೃತಿ ದಹನ ಮಾಡದೆ, ಕೃತ್ಯ ಎಸಗಿದವರನ್ನೆ ದಹನ ಮಾಡಬೇಕಾಗಿದೆ. ಹಿಂದೂ ಕಾರ್ಯಕರ್ತರ ಮೇಲೆ ನಡಯುತ್ತಿರುವ ಹಲ್ಲೆ ಮತ್ತು ಹತ್ಯೆಗಳಿಗೆ ಕೊನೆಯಾಗಬೇಕು. ಹಿಂದೂಗಳಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುವುದು ಜಿಹಾದಿಗಳ ಕಾರ್ಯವಾಗಿದೆ. ಈ ಎಲ್ಲ ಕೃತ್ಯಗಳಿಗೆ ದುರ್ಬಲ ಮಾನಸಿಕ ಅಧಿಕಾರಿಗಳು ಹೊಣೆಗಾರರಾಗಿದ್ದಾರೆ ಎಂದು ಶ್ರೀಶೈಲಗೌಡ ಪಾಟೀಲ ತಿಳಿಸಿದರು.
ಇದೇ ಸಂದರ್ಭದಲ್ಲಿ ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಲಿಂಗ ಗುಂಜಗಿ ಮಾತನಾಡಿ, ನೂಪೂರ ಶರ್ಮಾ ಹೇಳಿದ್ದು ನೂರಕ್ಕೆ ನೂರು ಸತ್ಯವಾಗಿದೆ. ನಾವೆಲ್ಲರೂ ಅವರನ್ನು ಬೆಂಬಲಿಸಬೇಕು. ಇತಿಹಾಸಗಳಿಂದಲೂ ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಆದ್ದರಿಂದ ಹಿಂದೂಗಳು ಜಾಗೃತರಾಗಬೇಕು. ದೇಶದ ಕಾನೂನುಗಳು ಬದಲಾಗಬೇಕು. ಪೊಲೀಸ್ ಅಧಿಕಾರಿಗಳ ಬೇಜವಾಬ್ದರಿಯಿಂದ ಕೊಲೆಗಾರರು ಗೆಲ್ಲುತ್ತಿದ್ದಾರೆ. ದೇಶದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಉಮೇಶ ಶಿದರೆಡ್ಡಿ, ರಾಮಪುರದ ಸಂಗಮೇಶ್ವರ ಮಠದ ಸಂಗಮೇಶ್ವರ ಸ್ವಾಮೀಜಿ, ಶಿವಾನಂದ ಗಾಯಕವಾಡ ಮಾತನಾಡಿದರು.
ಇದನ್ನೂ ಓದಿ : ಕೇರಳ: ಸಂವಿಧಾನ ವಿರೋಧಿ ಹೇಳಿಕೆ:ಭಾರೀ ಆಕ್ರೋಶದ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ಸಾಜಿ ರಾಜೀನಾಮೆ
ಪ್ರತಿಭಟನಾಕಾರರು ಬನಹಟ್ಟಿಯ ಈಶ್ವರಲಿಂಗ ಮೈದಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆಯನ್ನು ನಡೆಸಿ ಬನಹಟ್ಟಿಯ ಬಸ್ ನಿಲ್ದಾಣದ ಮುಂಭಾಗದಲ್ಲಿ ಸಭೆಯನ್ನು ನಡೆಸಿದರು. ಇದೇ ಸಂದರ್ಭದಲ್ಲಿ ಗ್ರೇಡ್ 2 ತಹಶೀಲ್ದಾರ್ ಎಸ್.ಬಿ. ಕಾಂಬಳೆ ಅವರಿಗೆ ಮನವಿ ಸಲ್ಲಿಸಿದರು. ನಂತರ ದೇಶದ್ರೋಹಿಗಳ ಪ್ರತಿಕೃತಿಯನ್ನು ದಹನ ಮಾಡಿ ಆಕ್ರೋಶ ವ್ಯಕ್ತಿ ಪಡಿಸಿದರು.
ಪ್ರತಿಭಟನೆಯಿಂದಾಗಿ ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ಜಮಖಂಡಿ ಕುಡಚಿ ರಾಜ್ಯ ಹೆದ್ದಾರಿ ಬಂದಾಗಿತ್ತು.
ಈ ಸಂದರ್ಭದಲ್ಲಿ ಧರೆಪ್ಪ ಉಳ್ಳಾಗಡ್ಡಿ, ವಿದ್ಯಾಧರ ಸವದಿ, ಶಿವಾನಂದ ಗಾಯಕವಾಡ, ಈಶ್ವರ ಪಾಟೀಲ, ಬಾಬಾಗೌಡ ಪಾಟೀಲ, ಭೀಮಸಿ ಹಂದಿಗುAದ, ಈರಣ್ಣ ಚಿಂಚಖAಡಿ, ಭೀಮಸಿ ಪಾಟೀಲ, ಅಶೋಕ ರಾವಳ, ಸತೀಶ ಬಂಗಿ, ಸಂಜಯ ತೆಗ್ಗಿ, ಸದಾಶಿವ ಪರೀಟ, ವಿಷ್ಣು ಲಡ್ಡಾ, ಚಂದ್ರಶೇಖರ ಕುರಂದವಾಡ, ವಿರುಪಾಕ್ಷಯ್ಯ ಮಠಪತಿ, ಎಂ. ಎಂ. ಹೊಸಮನಿ, ಪರಶುರಾಮ ರಾವಳ, ಶ್ರೀಶೈಲ ಬೀಳಗಿ, ಮಹಾವೀರ ಕೊಕಟನೂರ, ಕುಮಾರ ಕದಂ, ಪ್ರವೀಣ ಧಬಾಡಿ, ಶ್ರೀಶೈಲ ಗಸ್ತಿ, ಅರುಣ ಬುದ್ನಿ,ಮುತ್ತುರಾಜ ಶಿರಹಟ್ಟಿ, ಶಂಕರ ಅಂಗಡಿ, ಮಲ್ಲು ಸವದಿ, ಮಲಕಪ್ಪ ಬಿ. ಪಾಟೀಲ, ಶಿವಾನಂದ ಕಾಗಿ, ಜಯಪ್ರಕಾಶ ಸೊಲ್ಲಾಪುರ, ಬಸವರಾಜ ಅಮ್ಮಣಗಿಮಠ ಹಾಗೂ ಶ್ರೀರಾಮ ಸೇನೆಯ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಅನೇಕರು ಇದ್ದರು.
ಜಮಖಂಡಿ ಡಿವೈಎಸ್ಪಿ ಎಂ. ಪಾಂಡುರಂಗಯ್ಯ, ಸಿಪಿಐ ಐ.ಎಂ.ಮಠಪತಿ, ಪಿಎಸ್‌ಐ ಸುರೇಶ ಮಂಟೂರ ಮತ್ತು ಪೊಲೀಸ್ ಸಿಬ್ಬಂದಿ ವರ್ಗ ಸೂಕ್ತ ಬಂದೊಬಸ್ತಿ ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ
ಹೈಕಮಾಂಡ್ ಸೂಚನೆಗೆ ಔತಣಕೂಟ ಮುಂದಕ್ಕೆ ಹಾಕಿದ್ದೇವೆ, ರದ್ದು ಮಾಡಿಲ್ಲ: ಜಿ.ಪರಮೇಶ್ವರ್
ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.