ವಾಹನಗಳಿಗೆ ಆ್ಯಡ್ ಆನ್ ವಿಮೆ : ವಿಮೆ ಸಂಸ್ಥೆಗಳಿಗೆ ಐಆರ್‌ಡಿಎಐ ಅನುಮತಿ
Team Udayavani, Jul 7, 2022, 6:40 AM IST
ನವದೆಹಲಿ: ವಾಹನಗಳಿಗೆ ಆ್ಯಡ್ ಆನ್ ವಿಮೆಗಳನ್ನು ಮಾಡಿಸುವುದಕ್ಕೆ ವಾಹನ ವಿಮೆ ಸಂಸ್ಥೆಗಳಿಗೆ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(ಐಆರ್‌ಡಿಎಐ) ಅನುಮತಿ ಕೊಟ್ಟಿದೆ.
ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿರುವ “ಪೇ ಹೌ ಯು ಡ್ರೈವ್’ ಮತ್ತು “ಪೇ ಆ್ಯಸ್ ಯು ಡ್ರೈವ್’ ಎನ್ನುವ ಯೋಜನೆ ಆರಂಭಿಸಲು ಅನುಮತಿ ಕೊಡಲಾಗಿದೆ.
ಪೇ ಹೌ ಯು ಡ್ರೈವ್‌ನಲ್ಲಿ ನೀವು ವಾಹನ ಓಡಿಸುವ ಶೈಲಿಯನ್ನು ಆಧರಿಸಿ ವಿಮೆ ಮಾಡಲಾಗುವುದು.
ಪೇ ಆ್ಯಸ್ ಯು ಡ್ರೈವ್‌ನಲ್ಲಿ ನೀವು ಎಷ್ಟು ಪ್ರಮಾಣದಲ್ಲಿ ವಾಹನ ಬಳಕೆ ಮಾಡುತ್ತೀರಿ ಎನ್ನುವುದನ್ನು ಆಧರಿಸಿ ವಿಮೆ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.