ಕ್ರಿಕೆಟ್‌ ತಂಡದಲ್ಲಿ ಪದೇ ಪದೆ ಬದಲಾವಣೆ ಸಲ್ಲದು


Team Udayavani, Jul 7, 2022, 6:00 AM IST

ಕ್ರಿಕೆಟ್‌ ತಂಡದಲ್ಲಿ ಪದೇ ಪದೆ ಬದಲಾವಣೆ ಸಲ್ಲದು

ಇದೇ ವರ್ಷದ ಅಕ್ಟೋಬರ್‌-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಪುರುಷರ ಟಿ20 ವಿಶ್ವಕಪ್‌ ಪಂದ್ಯಾವಳಿ ನಡೆಯುತ್ತಿದ್ದು, ಎಲ್ಲ ದೇಶಗಳು ಸಜ್ಜಾಗುತ್ತಿವೆ. ಅಂದರೆ ಇನ್ನು ಸರಿಯಾಗಿ 3 ತಿಂಗಳುಗಳಲ್ಲಿ ಈ ಪಂದ್ಯಾವಳಿಗೆ ಇಡೀ ಜಗತ್ತು ಸಾಕ್ಷಿಯಾಗುತ್ತಿದೆ. ಇದಕ್ಕೆ ತಕ್ಕಂತೆ ಭಾರತದಲ್ಲೂ ತರಬೇತುದಾರ ರಾಹುಲ್‌ ದ್ರಾವಿಡ್‌ ಅವರ ನೇತೃತ್ವದಲ್ಲಿ ತಂಡವನ್ನು ತಯಾರು ಮಾಡಲಾಗುತ್ತಿದೆ.

ಭಾರತ ಕ್ರಿಕೆಟ್‌ ತಂಡದ ಈಗಿನ ಅತೀ ದೊಡ್ಡ ಸಮಸ್ಯೆ ಎಂದರೆ, ಸ್ಥಿರ ಪ್ರದರ್ಶನದ್ದು. ಇತ್ತೀಚೆಗಷ್ಟೇ ಐಪಿಎಲ್‌ ಪಂದ್ಯಾವಳಿ ಮುಗಿದಿದ್ದು, ಇದರಲ್ಲಿ ಮಿಂಚಿದ ಕೆಲವರನ್ನು ತಂಡಕ್ಕೆ ಸೇರಿಸಿಕೊಂಡು ಪ್ರಯೋಗ ಮಾಡಲಾಗುತ್ತಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿಯೂ ಇವರಲ್ಲಿ ಯಾರಾದರೂ ಮಿಂಚಿದರೆ ಅವರನ್ನು ವಿಶ್ವಕಪ್‌ ತಂಡಕ್ಕೆ ಆರಿಸುವ ಇರಾದೆ ಬಿಸಿಸಿಐನದ್ದು. ಆದರೆ ಈ ಹೊತ್ತಿನಲ್ಲಿ ತಂಡದಲ್ಲಿ ಭಾರೀ ಪ್ರಮಾಣದ ಪ್ರಯೋಗ ತರವೇ ಎಂಬ ಪ್ರಶ್ನೆಯೂ ಎದ್ದಿದೆ. ಐಪಿಎಲ್‌ ಮುಗಿದ ಅನಂತರ, ಗಾಯದ ಸಮಸ್ಯೆಯಿಂದ ಕೆ.ಎಲ್‌. ರಾಹುಲ್‌ ಬ್ಯಾಟ್‌ ಹಿಡಿದೇ ಇಲ್ಲ. ಇನ್ನು ನಾಯಕ ರೋಹಿತ್‌ ಶರ್ಮ ಮತ್ತು ಮಾಜಿ ನಾಯಕ ವಿರಾಟ್‌ ಕೊಹ್ಲಿ ಐಪಿಎಲ್‌ನಲ್ಲೇ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದಾರೆ. ಇದ್ದುದರಲ್ಲಿ ಉತ್ತಮ ಬ್ಯಾಟಿಂಗ್‌ ಹರಿದು ಬಂದದ್ದು ಕೆ.ಎಲ್‌.ರಾಹುಲ್‌ ಅವರ ಕಡೆಯಿಂದಲೇ. ಆದರೆ ಇವರ ಗಾಯದ ಸಮಸ್ಯೆ ದೊಡ್ಡದಾಗಿ ಕುಳಿತಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇನ್ನು ಐಪಿಎಲ್‌ ಗೆದ್ದ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ಕೂಡ ಅಷ್ಟೇನೂ ಸಿಡಿದಿಲ್ಲ. ಇದು ಐರ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಸಾಬೀತಾಗಿದೆ.

ಇದರ ನಡುವೆಯೇ ಬುಧವಾರ ಬಿಸಿಸಿಐ, ವೆಸ್ಟ್‌ ಇಂಡೀಸ್‌ ವಿರು ದ್ಧದ ಏಕದಿನ ಸರಣಿಗೆ ತಂಡವನ್ನು ಆಯ್ಕೆ ಮಾಡಿದ್ದು, ಅನುಭವಿಗಳಿಗೆ ವಿಶ್ರಾಂತಿ ನೀಡಿದೆ. ಅಂದರೆ ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ಜಸ್‌ಪ್ರೀತ್‌ ಬೂಮ್ರಾ, ಹಾರ್ದಿಕ್‌ ಪಾಂಡ್ಯ, ರಿಷಭ್‌ ಪಂತ್‌ ಅವರನ್ನು ತಂಡದಿಂದ ಕೈಬಿಟ್ಟು ಶಿಖರ್‌ ಧವನ್‌ ನೇತೃತ್ವದಲ್ಲಿ ತಂಡವನ್ನು ಕಳುಹಿಸಿಕೊಡಲು ಮುಂದಾಗಿದೆ. ಅನುಭವಿ ಆಟಗಾರ ರವೀಂದ್ರ ಜಡೇಜ ಅವರಿಗೆ ಉಪನಾಯಕ ಪಟ್ಟ ಕಟ್ಟಲಾಗಿದೆ.

ಐಪಿಎಲ್‌ನಲ್ಲಿ ಮಿಂಚಿದ ಋತುರಾಜ್‌ ಗಾಯಕ್‌ವಾಡ್‌, ಶುಭ್ಮನ್ ಗಿಲ್‌, ದೀಪಕ್‌ ಹೂಡಾ, ಸೂರ್ಯಕುಮಾರ್‌ ಯಾದವ್‌, ಶ್ರೇಯಸ್‌ ಅಯ್ಯರ್‌, ಸಂಜು ಸ್ಯಾಮ್ಸನ್‌, ಶಾದೂìಲ್‌ ಠಾಕೂರ್‌, ಯಜುವೇಂದ್ರ ಚಹಲ್‌, ಅಕ್ಸರ್‌ ಪಟೇಲ್‌, ಆವೇಶ್‌ ಖಾನ್‌, ಪ್ರಸಿದ್ಧ ಕೃಷ್ಣ, ಮೊಹಮ್ಮದ್‌ ಸಿರಾಜ್‌, ಅರ್ಷದೀಪ್‌ ಸಿಂಗ್‌ ಅವರಿಗೆ ಸ್ಥಾನ ನೀಡಲಾಗಿದೆ. ವಿಶೇಷವೆಂದರೆ, ಇವರಲ್ಲಿ ಸೂರ್ಯಕುಮಾರ್‌ ಯಾದವ್‌, ಶ್ರೇಯಸ್‌, ಶಿಖರ್‌ ಧವನ್‌, ಚಹಲ್‌, ಸಿರಾಜ್‌ ಸೇರಿ ಕೆಲವರಿಗೆ ಮಾತ್ರ ಏಕದಿನದಲ್ಲಿ ಆಡಿದ ಅನುಭವವಿದೆ. ಉಳಿದಂತೆ ಬಹುತೇಕರು ಏಕದಿನಕ್ಕೆ ಹೊಂದಿಕೊಳ್ಳುವರೇ ಎಂದು ನೋಡಬೇಕಾಗಿದೆ.

ಆದರೆ ಇದೆಲ್ಲದಕ್ಕಿಂತ ಹೆಚ್ಚಾಗಿ, ವಿಶ್ವಕಪ್‌ಗೆ ಇನ್ನು 3 ತಿಂಗಳುಗಳಿರು ವಾಗ ಈ ಮಟ್ಟದ ಪ್ರಯೋಗ ಬೇಕಾಗಿರಲಿಲ್ಲ ಎಂಬುದು ಹಿರಿಯ ಕ್ರಿಕೆಟಿಗರ ಮಾತುಗಳು. ಇರ್ಫಾನ್‌ ಪಠಾಣ್‌ ಅವರು ವಿಶ್ರಾಂತಿ ನೀಡುವ ನಿರ್ಧಾರವನ್ನು ಟೀಕಿಸಿದ್ದಾರೆ. ಇದರಿಂದ ಫಾರ್ಮ್ ಬರುತ್ತದೆಯೇ ಎಂದೂ ಪ್ರಶ್ನಿಸಿದ್ದಾರೆ. ಒಮ್ಮೆ ಅವಲೋಕಿಸಿದರೆ, ಅವರು ಮಾತು ಸತ್ಯ ಎನ್ನಿಸುತ್ತದೆ. ವಿಶ್ವಕಪ್‌ಗೆ ಮುನ್ನ ಒಂದು ಗಟ್ಟಿ ತಂಡ ತಯಾರಾದರೆ ಉತ್ತಮ ಎಂದೇ ತೋರುತ್ತದೆ.

ಟಾಪ್ ನ್ಯೂಸ್

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

ಕಾಳಿಂಗ ನಾವಡ ಪ್ರಶಸ್ತಿಗೆ ಕೋಟ ಶಿವಾನಂದ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರೈತರ ಹಿತರಕ್ಷಣೆ ನೆಪದಲ್ಲಿ ಗ್ರಾಹಕರಿಗೆ ಬರೆ ಸಲ್ಲದು

ರೈತರ ಹಿತರಕ್ಷಣೆ ನೆಪದಲ್ಲಿ ಗ್ರಾಹಕರಿಗೆ ಬರೆ ಸಲ್ಲದು

ಪರೀಕ್ಷಾ ಅಕ್ರಮಗಳ ತಡೆಗೆ ಎಸ್‌ಎಸ್‌ಸಿ ಕಠಿನ ನಿಲುವುಪರೀಕ್ಷಾ ಅಕ್ರಮಗಳ ತಡೆಗೆ ಎಸ್‌ಎಸ್‌ಸಿ ಕಠಿನ ನಿಲುವು

ಪರೀಕ್ಷಾ ಅಕ್ರಮಗಳ ತಡೆಗೆ ಎಸ್‌ಎಸ್‌ಸಿ ಕಠಿನ ನಿಲುವು

ಗ್ರಾಮೀಣ ಬಡಜನರ ಬೇಡಿಕೆಗೆ ಸ್ಪಂದಿಸಿದ ಕೇಂದ್ರ ಸರಕಾರ

ಗ್ರಾಮೀಣ ಬಡಜನರ ಬೇಡಿಕೆಗೆ ಸ್ಪಂದಿಸಿದ ಕೇಂದ್ರ ಸರಕಾರ

Jammu-Kashmir ಗಡಿಯಲ್ಲಿ ಉದ್ಧಟತನ: ಪಾಠ ಕಲಿಯದ ಪಾಕ್‌

Jammu-Kashmir ಗಡಿಯಲ್ಲಿ ಉದ್ಧಟತನ: ಪಾಠ ಕಲಿಯದ ಪಾಕ್‌

Train ಹಳಿ ತಪ್ಪಿಸುವ ಯತ್ನ: ಉಗ್ರರ ಷಡ್ಯಂತ್ರ ಮಟ್ಟ ಹಾಕಿ

Train ಹಳಿ ತಪ್ಪಿಸುವ ಯತ್ನ: ಉಗ್ರರ ಷಡ್ಯಂತ್ರ ಮಟ್ಟ ಹಾಕಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

1-32

Cat; ವಿಶ್ವದ ಹಿರಿಯ ಬೆಕ್ಕು, 33 ವರ್ಷದ ರೋಸಿ ಇನ್ನಿಲ್ಲ

yogi-3

Pakistan ಕ್ಯಾನ್ಸರ್‌, ಅದರ ಹುಟ್ಟಿಗೆ ಕಾಂಗ್ರೆಸ್‌ ಕಾರಣ: ಯೋಗಿ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

kangana-2

Emergency; ಭಿಂದ್ರನ್‌ವಾಲೆ ಸಾಧುವಲ್ಲ, ಭಯೋತ್ಪಾದಕ: ಸಂಸದೆ ಕಂಗನಾ

Suside-Boy

Health Problem: ಮಲಗಿದ್ದ ವೇಳೆ ಮೃತಪಟ್ಟ ವ್ಯಕ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.