ಸಮಾಜಮುಖಿ ಕಾರ್ಯ ದೇಶಕ್ಕೆ ವಿಸ್ತರಣೆ: ಡಾ| ವೀರೇಂದ್ರ ಹೆಗ್ಗಡೆ
Team Udayavani, Jul 8, 2022, 6:11 AM IST
ಕನಕಪುರ: ಈ ದೇಶದ ಪ್ರಧಾನಿಗಳು ನಮ್ಮ ಸೇವಾ ಕ್ಷೇತ್ರವನ್ನು ಗುರುತಿಸಿ ಮೆಚ್ಚಿಕೊಂಡಿದ್ದಾರೆ. ಇನ್ನು ಮುಂದೆ ನಮ್ಮ ಸಮಾಜಮುಖಿ ಕಾರ್ಯಕ್ರಮಗಳನ್ನು ದೇಶವ್ಯಾಪಿ ವಿಸ್ತರಿಸುತ್ತೇವೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅವರು ತಿಳಿಸಿದರು.
ಬೆಂಗಳೂರು ಹಾಲು ಒಕ್ಕೂಟದ ವತಿಯಿಂದ ತಾಲೂಕಿನ ಶಿವನಹಳ್ಳಿ ಬಳಿ ನಂದಿನಿ ಹಾಲು ಉತ್ಪನ್ನ ಸಂಕೀರ್ಣದ ಆವರಣದಲ್ಲಿ ತಮಗೆ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮಕ್ಕೆ ಆಗಮಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯಸಭೆಗೆ ನಾಮನಿರ್ದೇಶಿತನಾಗುತ್ತೇನೆ ಎಂಬ ಕಲ್ಪನೆಯೂ ನನಗಿರಲಿಲ್ಲ. ನಾನು ಅದರ ಹಿಂದೆ ಹೋಗುವವನೂ ಅಲ್ಲ. ಇದು ತಾನಾಗಿಯೇ ಒಲಿದು ಬಂದಿದೆ ಎಂದರು.
ರಾಜ್ಯ ಸಭೆಗೆ ನಾಮನಿರ್ದೇಶಿ ತನಾದ ಬಗ್ಗೆ ಬುಧವಾರ ರಾತ್ರಿವರೆಗೂ ನನಗೆ ಮಾಹಿತಿ ಇರಲಿಲ್ಲ. ಸ್ವತಃ ಪ್ರಧಾನಿಯೇ ಟ್ವೀಟ್ ಮಾಡುವ ಮೂಲಕ ನಮಗೆ ತಿಳಿಸಿದ್ದಾರೆ. ಆ ಬಳಿಕ ಅಭಿನಂದನೆಯ ಮಹಾಪೂರ ಹರಿದು ಬಂದಿದೆ ಹಾಗೂ ನಮ್ಮ ಜನತೆ ಬಹಳ ಸಂತೋಷಪಟ್ಟಿದ್ದಾರೆ. ನನಗೆ ಯಾವುದೇ ರಾಜಕೀಯ ಆಸಕ್ತಿ ಇಲ್ಲ. ಮಂಜುನಾಥ ಸ್ವಾಮಿಯ ಹೆಗ್ಗಡೆಯ ಪೀಠಕ್ಕಿಂತ ದೊಡ್ಡದು ಯಾವುದೂ ಇಲ್ಲ ಎಂದರು.
ಈ ದೇಶದ ಪ್ರಧಾನಿಗಳಿಗೆ ಸೂಕ್ಷ್ಮವಾಗಿ ಗಮನಿಸುವ ಶಕ್ತಿ ಇರುವುದರ ಬಗ್ಗೆ ಯೋಚಿಸುತ್ತಿದ್ದೇನೆ. ಮೋದಿಯವರು ಬಹಳ ಸೂಕ್ಷ್ಮತೆ ಮತ್ತು ನೆನಪು ಉಳ್ಳವರು. ಹಾಗಾಗಿ ನಮ್ಮ ಕಾರ್ಯಕ್ಷೇತ್ರ ಪ್ರಧಾನಿಯವರ ಗಮನ ಸೆಳೆದಿದೆ. ನಾವು ಒತ್ತಡದಿಂದಿದ್ದಾಗ ಹೆಚ್ಚಿನ ಕಾರ್ಯ ಮಾಡಬಹುದು. ನಾನು ರಾಜಕೀಯರಹಿತವಾಗಿ ಹಿರಿಯ ಸದಸ್ಯರ ಕೂಟ ಎಂದು ಸೇರಿಕೊಂಡಿದ್ದೇನೆ ಎಂದರು.
ಹೈನುಗಾರಿಕೆಯಲ್ಲಿ ದೇಶದ ಸಾಧನೆ ಅದ್ಬುತ :
6 ದಶಕಗಳ ಹಿಂದೆ ಹಾವಾಡಿಗರ ದೇಶ ಎಂದು ಕರೆಯಲ್ಪಡುತ್ತಿದ್ದ ಭಾತರ ಇಂದು ಹೈನುಗಾರಿಕೆಯಲ್ಲಿ ಅದ್ಬುತ ಸಾಧನೆ ಮಾಡಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ತಿಳಿಸಿದರು.
ನಮ್ಮ ದೇಶದಲ್ಲಿ ಗೋವುಗಳನ್ನು ದೇವರು ಎಂದೇ ಪೂಜಿಸುತ್ತೇವೆ. ರೈತರು ಯಾವುದೇ ಕೃಷಿ ಬೆಳೆಗಳಿಂದ ಆದಾಯ ಕಾಣಬೇಕಾದರೆ, ಕನಿಷ್ಠ 6 ತಿಂಗಳಿಂದ 1 ವರ್ಷ ಕಾಯಬೇಕು. ಆದರೆ, ಹೈನುಗಾರಿಕೆ ಆಗಲ್ಲ. ಹೈನುಗಾರಿಕೆಯಿಂದ ರೈತರಿಗೆ ಬಹಳ ಅನುಕೂಲವಾಗಿದ್ದು, ಲಾಭದಾಯಕವಾಗಿದೆ ಎಂದರು.
ಕಸಾಯಿ ಖಾನೆಗೆ ಬಿಡಬೇಡಿ :
ದೈವ ಸ್ವರೂಪಿಯಾದ ಗೋವುಗಳನ್ನು ವಯಸ್ಸಾದಾಗ ಕಸಾಯಿ ಖಾನೆಗೆ ನೀಡುವ ಬದಲು ಗೋ ಶಾಲೆಗಳಿಗೆ ಕೊಡಬೇಕು. ದೇಸಿ ತಳಿಯ ಗೋವುಗಳನ್ನು ಸಂರಕ್ಷಣೆ ಮಾಡಲೇಬೇಕಾಗಿದೆ. ರೈತರು ಹೆಚ್ಚು ದೇಸಿ ತಳಿಯ ಹಸುಗಳನ್ನು ಸಾಕಾಣಿಕೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ಹೇಳಿದರು.
ಧರ್ಮಸ್ಥಳದ ದರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ರಾಜ್ಯಸಭೆಗೆ ಆಯ್ಕೆಯಾಗಿರುವುದು ಕರ್ನಾಟಕ ಹಾಗೂ ಕನ್ನಡಿಗರಿಗೆ ಹೆಮ್ಮೆ ತಂದಿದೆ.ಹೆಗ್ಗಡೆಯವರು ಮೊದಲಿನಿಂದಲೂ ಗ್ರಾಮೀಣ ಬದುಕಿನಲ್ಲಿ ಬೆಳೆದವರು. ಅವರು ಗ್ರಾಮೀಣ ಭಾಗದ ಮಹಿಳೆಯರ ಮನದಲ್ಲಿದ್ದಾರೆ. ಅವರನ್ನು ಆಯ್ಕೆ ಮಾಡಿದುದಕ್ಕಾಗಿ ರಾಷ್ಟ್ರಪತಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ .–ಡಿ.ಕೆ.ಸುರೇಶ್, ಸಂಸದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panchayat Raj University; ಇನ್ನು ಸಿಎಂ ಕುಲಾಧಿಪತಿ!: ರಾಜ್ಯಪಾಲರ ಅಧಿಕಾರಕ್ಕೆ ಕೊಕ್
Agriculture; ರಾಜ್ಯದ ರೈತರು, ಜನತೆಗೆ ಶುಭ ಸುದ್ದಿ: ಈ ಬಾರಿ ಬಂಪರ್ ಇಳುವರಿ!
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Panchayat Raj University; ಇನ್ನು ಸಿಎಂ ಕುಲಾಧಿಪತಿ!: ರಾಜ್ಯಪಾಲರ ಅಧಿಕಾರಕ್ಕೆ ಕೊಕ್
America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ
UGC; ಪದವಿ ಕಲಿಕೆ ಅವಧಿ ನಿರ್ಧಾರ ಆಯ್ಕೆ ಶೀಘ್ರ: ಚೇರ್ಮನ್ ಹೇಳಿದ್ದೇನು?
Bangladesh; ಚಿನ್ಮಯಿ ಕೃಷ್ಣದಾಸ್‌ಗೂ ನಮಗೂ ಸಂಬಂಧವಿಲ್ಲ: ಇಸ್ಕಾನ್ ಸ್ಪಷ್ಟನೆ
Bullet train ದೇಶದಲ್ಲಿಯೇ ನಿರ್ಮಾಣ: ಸಂಸತ್ತಿಗೆ ಕೇಂದ್ರ ಮಾಹಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.