ಯುದ್ಧದ ಎಫೆಕ್ಟ್ : 4 ತಿಂಗಳಲ್ಲಿ 7.1 ಕೋಟಿ ಮಂದಿಗೆ ಬಡತನ!
ವಿಶ್ವದ ಶೇ. 9ರಷ್ಟು ಜನ ಬಡತನದ ವ್ಯಾಪ್ತಿಗೆ
Team Udayavani, Jul 8, 2022, 6:45 AM IST
ದುಬಾೖ : ರಷ್ಯಾ-ಉಕ್ರೇನ್ ಯುದ್ಧದಿಂದ ಆ ದೇಶಗಳು ಮಾತ್ರವಲ್ಲ, ಇಡೀ ಜಗತ್ತೇ ಒದ್ದಾಡುತ್ತಿದೆ! ಹಾಗೆಯೇ ರಷ್ಯಾ ಮೇಲೆ ಜಗತ್ತಿನ ಹಲವು ದೇಶಗಳು ನಿರ್ಬಂಧ ಹೇರಿದ್ದವು. ಅದರ ಪರಿಣಾಮ ಕೇವಲ ರಷ್ಯನ್ನರ ಮೇಲಾಗಿಲ್ಲ, ವಿಶ್ವದ ಇತರ ದೇಶಗಳ ಮೇಲೂ ಆಗಿವೆ. ಹಾಗಾಗಿ 7.1 ಕೋಟಿ ಮಂದಿ ಬಡವರ ಪಟ್ಟಿಗೆ ಸೇರಿಕೊಂಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ಆಹಾರ ಪದಾರ್ಥಗಳು ಮತ್ತು ತೈಲದರ ದುಬಾರಿಯಾಗಿರುವುದು.
ಯುಎನ್‌ಡಿಪಿಯ (ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮಗಳು) ಅಂದಾಜಿನ ಪ್ರಕಾರ, ಯುದ್ಧಾರಂಭವಾದ 3 ತಿಂಗಳಿನಲ್ಲೇ 5.16 ಕೋಟಿ ಮಂದಿ ಬಡತನ ರೇಖೆಯ ವ್ಯಾಪ್ತಿಗೆ ಬಂದರು.
ಇವರು ದಿನವೊಂದಕ್ಕೆ ಕೇವಲ 1.90 ಡಾಲರನ್ನು ತಮ್ಮ ಜೀವನಕ್ಕಾಗಿ ವ್ಯಯಿಸುತ್ತಿದ್ದಾರೆ. ಅದಾದ ಮೇಲೆ ಮತ್ತೆ 2 ಕೋಟಿ ಮಂದಿ ಈ ಪಟ್ಟಿ ಸೇರಿಕೊಂಡರು. ಈ ಪಟ್ಟಿಗೆ ಸೇರಿದವರು ದಿನವೊಂದಕ್ಕೆ 3.20 ಡಾಲರ್‌ಗಳನ್ನು ವ್ಯಯಿಸುತ್ತಿದ್ದಾರೆ. ಒಟ್ಟಾರೆ ವಿಶ್ವದ ಜನಸಂಖ್ಯೆಯ ಶೇ. 9 ಮಂದಿ ಬಡತನದ ವ್ಯಾಪ್ತಿಗೆ ಬಂದಿದ್ದಾರೆ. ಉಕ್ರೇನಿನ ಬಂದರುಗಳನ್ನು ಮುಚ್ಚಲಾಗಿದ್ದು, ಧಾನ್ಯಗಳ ರಫ್ತು ನಿಂತಿದೆ. ಇದೂ ಜಾಗತಿಕ ಆರ್ಥಿಕತೆಗೆ ಹೊಡೆತ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
MUST WATCH
ಹೊಸ ಸೇರ್ಪಡೆ
Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.