ಹಾರ್ದಿಕ್ ಪಾಂಡ್ಯ ಆಲೌ ರೌಂಡ್ ಆಟ: ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯಗಳಿಸಿದ ಭಾರತ
Team Udayavani, Jul 8, 2022, 2:01 AM IST
ಸೌತಾಂಪ್ಟನ್: ಇಂಗ್ಲೆಂಡ್ ವಿರುದ್ಧದ ಮೊದಲ ಟಿ- ಟ್ವಿಂಟಿ ಪಂದ್ಯದಲ್ಲಿ ಭಾರತ 50 ರನ್ ಗಳಿಂದ ಭರ್ಜರಿ ಜಯ ಸಾಧಿಸಿದೆ.
ಟಾಸ್ ಗೆದ್ದು ಬ್ಯಾಟ್ ಮಾಡಿದ ರೋಹಿತ್ ಪಡೆ ಆರಂಭದಲ್ಲೇ ಇಶಾನ್ ಕಿಶನ್ ವಿಕೆಟ್ ಕಳೆದುಕೊಂಡಿತ್ತು. ಆ ಬಳಿಕ ಕೊಂಚ ಹೊತ್ತು ಕ್ರೀಸ್ ನಲ್ಲಿ ನಿಂತಿದ್ದ ಕ್ಯಾಪ್ಟನ್ ರೋಹಿತ್ ಶರ್ಮಾ 24 ರನ್ ಗಳಿಸಿ ಮೊಯಿನ್ ಆಲಿ ಎಸತಕ್ಕೆ ಬಟ್ಲರ್ ಕೈಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಕಡೆ ಸಾಗಿದರು.
ಸ್ಫೋಟಕ ಆಟಗಾರ ದೀಪಕ್ ಹೂಡಾ ಬಿರುಸಿನ 33 ರನ್ ಹಾಗೂ ಸೂರ್ಯಕುಮಾರ್ ಯಾದವ್ 39 ರನ್ ಗಳಿಸಿ ಆಂಗ್ಲ ಬೌಲರ್ ಗಳನ್ನು ಕಾಡಿದರು. ಬಳಿಕ ಬಂದ ಹಾರ್ದಿಕ್ ಪಾಂಡ್ಯ 6 ಬೌಂಡರಿ, 1 ಸಿಕ್ಸರ್ ಸಿಡಿಸಿ ಆಕರ್ಷಕ ಅರ್ಧಶತಕಗಳಿಸಿದರು. ( 51 ರನ್)
ಕಡೆಯ ಓವರ್ ಗಳಲ್ಲಿ ಭಾರತದ ವಿಕೆಟ್ ಗಳು ಒಂದರ ಮೇಲೆ ಒಂದಾರಂತೆ ಹೋಗಿ, ಅಂತಿಮವಾಗಿ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 198 ರನ್ ಗಳಿಸಿ 199 ರ ಬೃಹತ್ ಗುರಿಯನ್ನು ಬಿಟ್ಟು ಕೊಟ್ಟಿತು.
ದೊಡ್ಡ ಟಾರ್ಗೆಟ್ ಬೆನ್ನಟ್ಟಿದ್ದ ಇಂಗ್ಲೆಂಡ್ ಆರಂಭಿಕ ಓವರ್ ನಲ್ಲೇ ನಾಯಕ ಬಟ್ಲರ್ ಶೂನ್ಯ ಸುತ್ತಿ ಭುವನೇಶ್ವರ್ ಕುಮಾರ್ ಎಸತೆಕ್ಕೆ ಔಟ್ ಆದರು.
ಜೇಸನ್ ರಾಯ್ ಡೇವಿಡ್ ಮಾಲನ್, ಲಿವಿಂಗ್ ಸ್ಟೂನ್, ಸ್ಯಾಮ್ ಕರನ್ ನಿರೀಕ್ಷೆಯಷ್ಟು ಸಿಡಿಯಲಿಲ್ಲ. ಮೊಯಿನ್ ಆಲಿ, ಹ್ಯಾರಿ ಬ್ರೂಕ್ ಮೂವತ್ತರ ಮೇಲೆ ರನ್ ಗಳಿಸಿದರೂ ಕಡೆಯವರೆಗೆ ಸಾಗಲಿಲ್ಲ.
ಭಾರತದ ಪರವಾಗಿ ಹಾರ್ದಿಕ್ ಪಾಂಡ್ಯ 4 ಓವರ್ ನಲ್ಲಿ 4 ಮಹತ್ವದ ವಿಕೆಟ್ ಗಳನ್ನು ಪಡೆದು ಮಿಂಚಿದರು. ಯಜುವೇಂದ್ರ ಚಹಲ್ 2 ವಿಕೆಟ್ ಗಳನ್ನು ಪಡೆದರು.
ಇಂಗ್ಲೆಂಡ್ ಸರ್ವಪತನವಾಗಿ 148 ರನ್ ಗಳಿಸಿ ಶರಣಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chess player; ಕುಟುಂಬ ಸಮೇತ ಮೋದಿ ಭೇಟಿಯಾದ ಕೊನೆರು ಹಂಪಿ
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.