ಟೆಂಗಳಿ ರಸ್ತೆ ನಿರ್ಮಿಸಲು ಆಗ್ರಹಿಸಿ ಪ್ರತಿಭಟನೆ
Team Udayavani, Jul 8, 2022, 3:10 PM IST
ಕಾಳಗಿ: ತಾಲೂಕಿನ ಟೆಂಗಳಿ ಗ್ರಾಮದಿಂದ ಟೆಂಗಳಿ ಕ್ರಾಸ್ ವರೆಗೆ ಸಂಪೂರ್ಣ ಹದಗೆಟ್ಟಿರುವ ರಸ್ತೆ ಕಾಮಗಾರಿಯನ್ನು ಶೀಘ್ರವೇ ಆರಂಭಿಸಬೇಕು ಎಂದು ತಾಲೂಕು ಕರವೇ(ಟಿ.ಎ ನಾರಾಯಣಗೌಡ್ರು ಬಣ) ಕಾರ್ಯಕರ್ತರು ಟೆಂಗಳಿ ಕ್ರಾಸ್ ರಸ್ತೆ ಬಳಿ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ ತಾಲೂಕು ಕರವೇ ಅಧ್ಯಕ್ಷ ಜಾವೀದಮಿಯ್ಯ ಆಫಖಾನ್ ಮಾತನಾಡಿ, ಚಿಂಚೋಳಿ ಹಾಗೂ ಚಿತ್ತಾಪುರ ಮತಕ್ಷೇತ್ರದ ಗಡಿಭಾಗ ಹೊಂದಿರುವ ಟೆಂಗಳಿ ಗ್ರಾಮದಿಂದ ಟೆಂಗಳಿ ಕ್ರಾಸ್ ವರೆಗಿನ ರಸ್ತೆ ಸಂಪೂರ್ಣ ನಿರ್ಲಕ್ಷಕ್ಕೆ ಒಳಗಾಗಿದೆ. ಈ ರಸ್ತೆ ಕೆಟ್ಟು ಸುಮಾರು ಎಂಟು ವರ್ಷಗಳೇ ಕಳೆದಿವೆ. ಈ ಕುರಿತು ಅನೇಕ ಬಾರಿ ಶಾಸಕರು, ಸಂಸದರು, ಸಂಬಂಧಿಸಿದ ಅಕಾರಿಗಳ ಗಮನಕ್ಕೂ ತರಲಾಗಿದೆ. ಆದರೂ ಪ್ರಯೋಮನವಾಗಿಲ್ಲ ಎಂದರು.
ಟೆಂಗಳಿ ಗ್ರಾಮದಿಂದ ಟೆಂಗಳಿ ಕ್ರಾಸ್ ವರೆಗಿನ ರಸ್ತೆಯಲ್ಲಿ ತಗ್ಗು, ಗುಂಡಿಗಳು ಬಿದ್ದಿರುವುದರಿಂದ ತಾಲೂಕಿನ ಮಂಗಲಗಿ, ಕೊಡದೂರ, ಸಾಲಹಳ್ಳಿ, ಮಳಗ(ಕೆ), ಡೊಣ್ಣೂರ, ಅರಜಂಬಗಾ, ಮಲಘಾಣ, ತೊನಸನಳ್ಳಿ(ಟಿ), ಕಾಳಗಿ, ಕಲಗುರ್ತಿ ಸೇರಿದಂತೆ ಅನೇಕ ಗ್ರಾಮಗಳ ಜನರು, ವಿದ್ಯಾರ್ಥಿಗಳು ಚಿತ್ತಾಪುರ, ಕಲಬುರಗಿ ನಗರಕ್ಕೆ ದಿನನಿತ್ಯ ಕಚೇರಿ ಕೆಲಸ ಹಾಗೂ ಶಾಲೆ, ಕಾಲೇಜುಗಳಿಗೆ ಹೋಗಲು ತೊಂದರೆ ಅನುಭವಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಂತರ ಕಾಳಗಿ ತಹಶೀಲ್ದಾರ್ ನಾಗನಥ ತರಗೆ, ಚಿತ್ತಾಪುರ ತಹಶೀಲ್ದಾರ್ ಉಮಾಕಾಂತ ಹಳ್ಳೆ ಅವರಿಗೆ ಮನವಿ ಸಲ್ಲಿಸಿದರು. ತಾಲೂಕು ಕರವೇ ಅಧ್ಯಕ್ಷ ಜಾವೀದಮಿಯ್ಯ ಅಫಖಾನ್, ಉಪಾಧ್ಯಕ್ಷ ಕಾಳಶೆಟ್ಟಿ ಬೆಳಗುಂಪಿ, ಚಿತ್ತಾಪುರ ತಾಲೂಕು ಕರವೇ ಅಧ್ಯಕ್ಷ, ಮಲ್ಲಿಕಾರ್ಜುನ ಅಲ್ಲೂರಕರ್, ಸೇಡಂ ಕರವೇ ಅಧ್ಯಕ್ಷ ಅಂಬರೀಶ ಉಡಗಿ, ಕಾರ್ಯಕರ್ತರಾದ ಫಿರೋಜ ಸಿಕಲಗರ್, ಈರಣ್ಣ ಕೊಳ್ಳಿ, ಸಂತೋಷ ಕೊಂಕನಳ್ಳಿ, ಜಗನ್ನಾಥ ಕೊಂಕನಳ್ಳಿ, ಭಾಗೇಶ ಕೊಳಕೊರ, ಮೈನೋದ್ದಿನ ತೊನಸಳ್ಳಿ, ಸಿದ್ಧು ಉಗೋರ, ವಿಜಯಕುಮಾರ ಕೊಣಿನ, ಟೆಂಗಳಿ ಗ್ರಾಪಂ ಅಧ್ಯಕ್ಷ ಮೆಹಬೂಬ್ ಪಟೇಲ, ಸದಸ್ಯ ಹಣಮಂತ ಡೊಣ್ಣೂರ, ಗ್ರಾಮದ ಮುಖಂಡರಾದ ಓಂಪ್ರಕಾಶ ಹೆಬ್ಟಾಳ, ಮಲ್ಲಿಕಾರ್ಜುನ ನೈಕೊಡಿ, ಮೈಬು ಟೇಲರ್, ಮಲ್ಲಿಕಾರ್ಜುನ ಕೇಶ್ವರ ಪಾಲ್ಗೊಂಡಿದ್ದರು. ಪಿಎಸ್‌ಐ ಹುಲಿಯಪ್ಪ ಗೌಡಗೊಂಡ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.