ಸಮಾಜದಲ್ಲಿ ಬಿರುಕು ಮೂಡಿಸುವುದು ಸರಿಯಲ್ಲ
Team Udayavani, Jul 8, 2022, 3:43 PM IST
ಚಿತ್ತಾಪುರ: ಬಂಜಾರಾ ಸಮುದಾಯ ಹಾಗೂ ದಲಿತ ಸಮುದಾಯಗಳ ಮಧ್ಯೆ ಬಿರುಕು ಮೂಡಿಸಿ ಸಮಾಜದಲ್ಲಿ ಅಶಾಂತಿ ಮೂಡಿಸುವುದು ಸರಿಯಲ್ಲ ಎಂದು ತಾಪಂ ಮಾಜಿ ಸದಸ್ಯ ನಾಮದೇವ ರಾಠೊಡ ಹೇಳಿದರು.
ಬಂಜಾರಾ ಸಮಾಜ ಸಮನ್ವಯ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಜಾರಾ ಸಮಾಜದ ರಾಮತೀರ್ಥ ಗ್ರಾಪಂ ಸದಸ್ಯ ಅಯ್ಯಪ್ಪ ಪವಾರ ಎಂಬುವರು ಬಂಜಾರಾ ಸಮಾಜಕ್ಕೆ, ಬಂಜಾರಾ ಸಮಾಜದ ಮಹಿಳೆಯರಿಗೆ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಕುರಿತು ಮೊಬೈಲ್ ವಾಟ್ಸ್‌ಆ್ಯಪ್ ವೈಸ್ ರೆಕಾರ್ಡಿಂಗ್ ನಲ್ಲಿ ಅಶ್ಲೀಲ, ಅವಾಚ್ಯ ಪದ ಬಳಸಿ ನಿಂದಿಸಿ ಹಗುರವಾಗಿ ಮಾತನಾಡಿದ್ದಾರೆ. ಈ ಮೂಲಕ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿದ್ದಾರೆ. ಜಾತಿ, ಜಾತಿಗಳ ಮಧ್ಯೆ ಗಲಭೆ ಉಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಶಾಸಕ ಪ್ರಿಯಾಂಕ್ ಖರ್ಗೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಹಾಗೂ ಸರ್ವ ಸಮಾಜದ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಬಂಜಾರಾ ಸಮಾಜದ ಜನರಿಗೆ ಪುರಸಭೆ, ಎಪಿಎಂಸಿ, ತಾಪಂ, ಜಿಪಂ ಕ್ಷೇತ್ರಗಳಲ್ಲಿ ಟಿಕೆಟ್ ನೀಡಿ ಗೆಲ್ಲಿಸಿದ್ದಾರೆ. ಬಾಲುನಾಯಕ ತಾಂಡಾದಲ್ಲಿ ಕೇವಲ 14 ಮತ ಪಡೆದರೂ ಕೂಡ ಕೋಟಿಗಟ್ಟಲೇ ಅನುದಾನ ತಂದು ಅಭಿವೃದ್ಧಿ ಪಡಿಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿಕೊಟ್ಟ ಏಕೈಕ ನಾಯಕ ಪ್ರಿಯಾಂಕ್ ಖರ್ಗೆ ಆಗಿದ್ದಾರೆ ಎಂದು ಬಣ್ಣಿಸಿದರು.
ಮುಖಂಡ ಜಗದೀಶ ಚವ್ಹಾಣ ಮಾತನಾಡಿ, ಬಂಜಾರಾ ಸಮಾಜದವರು ಎಲ್ಲ ಪಕ್ಷದಲ್ಲೂ ಇದ್ದಾರೆ. ಬಂಜಾರಾ ಸಮಾಜವನ್ನು ದಿಕ್ಕು ತಪ್ಪಿಸುವಂತಹ ಕೆಲಸವನ್ನು ಯಾರೊಬ್ಬರು ಮಾಡಬಾರದು ಎಂದರು.
ಮುಖಂಡ ಚಂದು ಜಾಧವ ಮಾತನಾಡಿ, ಸಮಾಜಗಳ ನಡುವೆ ಅಶಾಂತಿ ಉಂಟು ಮಾಡುವುದಾದರೇ ಮಣಿಕಂಠ ರಾಠೊಡ ಅವರನ್ನು ಚಿತ್ತಾಪುರಕ್ಕೆ ಬರಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಮುಖಂಡರಾದ ರವಿ ರಾಠೊಡ, ಭೀಮಸಿಂಗ್ ಚವ್ಹಾಣ, ಹರಿನಾಥ ಚವ್ಹಾಣ, ಜೇಮಸಿಂಗ್ ರಾಠೊಡ, ದೇವಿದಾಸ ಚವ್ಹಾಣ, ನೀಲಕಂಠ ಪವಾರ್, ವಿಜಯ ಚವ್ಹಾಣ, ಪ್ರವೀಣ ಪವಾರ್, ಚಂದರ್ ಚವ್ಹಾಣ, ರಾಕೇಶ ಪವಾರ್, ತಿರುಪತಿ ಚವ್ಹಾಣ, ಕುಮಾರ ಚವ್ಹಾಣ, ಅಶೋಕ ಚವ್ಹಾಣ, ದೇವರಾಜ ರಾಠೊಡ, ಜಗದೀಶ ಪವಾರ್, ಭಾರತ್ ರಾಠೊಡ, ವಿಶಾಲ ನಾಯಕ್, ರವಿ ಜಾಧವ, ಸುಭಾಷ ಜಾಧವ, ಸಂತೋಷ ಚವ್ಹಾಣ, ಕುಮಾರ ಜಾಧವ, ರಾಮು ರಾಠೊಡ, ಅಂಬ್ರಿàಶ ಚವ್ಹಾಣ, ಹೀರಾಸಿಂಗ್ ಚವ್ಹಾಣ, ರವಿಂಚಂದ್ರ ರಾಠೊಡ, ಸಂಜಯ ರಾಠೊಡ, ಸಂತೋಷ ರಾಠೊಡ, ಕುಮಾರ್ ರಾಠೊಡ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.