ಧಾವಂತದ ಬದುಕಿನಲಿ ಭಾವನೆಗಳು ಬತ್ತದಿರಲಿ
Team Udayavani, Jul 9, 2022, 6:05 AM IST
ಪ್ರಚಲಿತ ದಿನಮಾನಗಳು ಆಧುನಿಕ ಯುಕ್ತವಾಗಿದ್ದು ತತ್ಪರಿಣಾಮ ಮಾನವ ಬದುಕು ಯಂತ್ರಸದೃಶ- ಧಾವಂತ- ಒತ್ತಡ ಮಯ ವಾಗಿದೆ. ಇಡೀ ಜಗತ್ತೇ ಇಂದು ಅಂಗೈಯಲ್ಲಿ ಬಂದು ಕುಳಿತಿರುವುದರಿಂದ ಜನಜೀವನದ ಶೈಲಿ ಅಪಾರ ವ್ಯತ್ಯಾಸ ಕಂಡುಕೊಂಡಿದೆ. ಇದರಿಂದ ವ್ಯಕ್ತಿ- ವ್ಯಕ್ತಿಗಳ ನಡುವಣ ಸಂಬಂಧಗಳ ಸ್ವರೂಪವೇ ಬದಲಾಗಿದ್ದು ಭಾವ- (ಸತ್)ಭಾವನೆಗಳ ನ್ಯೂನತೆ- ಕೊರತೆಯ ಪರಿಣಾಮ ಸಮಾಜದಲ್ಲಿ ಸಂಬಂಧಗಳು ಶಿಥಿಲವಾಗುತ್ತಿವೆ, ಸಮಷ್ಟಿ ಭಾವನೆಯ ಪ್ರಜ್ಞೆ ನೇಪಥ್ಯಕ್ಕೆ ಸರಿಯುತ್ತಿದೆ. ಸಮಾಜ ಸಂವೇದನಾಶೀಲತೆ ರಹಿತ ಮಾರ್ಗದತ್ತ ಮುಖ ಮಾಡಿದೆಯೋ ಎಂಬ ಆತಂಕ ಆವರಿಸಿದೆ, ಮನೆ ಮಾಡಿದೆ.
ಮಾನವ ಮೂಲತಃ ಸಂಘಜೀವಿ- ಸ್ನೇಹ ಜೀವಿ. ಸಂಬಂಧಗಳೇ ಮಾನವನ ಬದು ಕಿನ ಜೀವಾಳ-ಬಂಡವಾಳ. ನಾಗರಿ ಕತೆಯ ಬೆಳವಣಿಗೆಯಲ್ಲಿ, ಸಂಬಂಧಗಳ ಸಂಧಿಸು ವಿಕೆಯಲ್ಲಿ ಪ್ರಮುಖ ಕಾರುಬಾರು ಭಾವ – (ಸತ್) ಭಾವನೆಗಳದ್ದೇ. ಹೀಗೆ ಸತ್ ಭಾವನೆ ಗಳು ಜನ ಜೀವನದ ಜೀವಧಾತು. ಹೀಗಿದ್ದ ಮೇಲೆ ಭಾವನಾರಹಿತ ಜೀವನ ಅನರ್ಥಕಾರಿ, ಅಪಾಯಕಾರಿ ಹಿನ್ನೆಲೆಯದ್ದು ಎಂದು ಸಾರಬೇಕು. ನಯನ ಮನೋಹರ ಬದುಕಿನ ಸೌಧದ ನಿರ್ಮಾಣದಲ್ಲಿ ಭಾವನೆಗಳೇ ಪಂಚಾಂಗ ಮತ್ತು ಇವುಗಳ ಪಾತ್ರ ಅನಿರ್ವಚನೀಯ. ಪರೋಪಕಾರ, ಔದಾರ್ಯ, ನಂಬಿಕೆ, ವಿಶ್ವಾಸ, ಅನುಕಂಪ, ದಯೆ, ಗೌರವ, ಸ್ವಾಭಿಮಾನ, ಕ್ಷಮಾಪಣೆ, ಪ್ರೀತಿ, ಧೈರ್ಯ, ಸಾತ್ವಿಕ ಸಿಟ್ಟು, ನಿಷ್ಠುರತೆ, ಕಠೊರತೆ, ಮುತ್ತಿನಂತಹ ಮಾತು, ಮೃದುತ್ವ, ಹಾಸ್ಯ, ವಿನೋದ ಸುಪ್ರಸನ್ನ ವದನ… ಈ ಪದಪುಂಜಗಳು ಭಾವನೆಯ ಬುಟ್ಟಿಯಲ್ಲಿರುವಂಥವುಗಳು. ಇವುಗಳನ್ನು ಸಂದಭೋìಚಿತವಾಗಿ ಹೆಕ್ಕಿ ಸಂಬೋಧಿ ಸುವುದಾಗಲಿ, ಅಭಿವ್ಯಕ್ತಿಗೊಳಿಸುವುದಾಗಲಿ ಆದಲ್ಲಿ ಭಾವನೆಗಳ ಜತೆಗೆ ಸಂಸ್ಕಾರಗಳ ಪ್ರಯೋ ಗವಾಗುವುದು ಮತ್ತು ಈ ಮುಖೇನ ವ್ಯಕ್ತಿತ್ವದ ಮೆರುಗಿಗೂ ಬಣ್ಣಗಳೂ ತುಂಬುವವು.
ಆಧುನಿಕ ಬದುಕಿನಿಂದ ಸಂಬಂಧಗಳು ಸಂಕೀರ್ಣವಾಗುತ್ತಿವೆ. ಆಧುನಿಕ ತಂತ್ರಜ್ಞಾನದ ಪರಿಕರಗಳಿಂದ ಸಮಾಜ ಶಿಥಿಲವಾಗುತ್ತಿವೆ, ಭಾವನೆಗಳು ಸಾಯುತ್ತಿವೆ ಎನ್ನುವ ಕೂಗು, ಅಪವಾದಗಳಿವೆ. ಇದನ್ನು ನಾವು ಸಾರಾಸಗಟಾಗಿ ಅಲ್ಲಗಳೆಯುವಂತಿಲ್ಲ. ಹಾಗೆಂದು ಆಧುನಿಕ ಪರಿಕರಗಳಿಂದ ಸಮಾ ಜವು ಹಲವಾರು ದೃಷ್ಟಿಕೋನಗಳಿಂದ ಉಪಕೃತ- ಫಲಭರಿತವಾಗುತ್ತಿವೆ. ಈ ಪರಿಕರಗಳು ನಿತ್ಯದ ಆಗುಹೋಗಿನ ಅವಿಭಾಜ್ಯ ಅಂಗಗಳಾಗಿ ಪರಿಣಮಿಸಿವೆ. ಈ ಪರಿಕರಗಳ ಬಳಕೆ ಮಾತ್ರ ಅವರವರ ವಿವೇಕ, ಆವಶ್ಯಕತೆಗಳ ಮೇಲೆ ಅವಲಂಬಿತವಾಗಿವೆ. “ಅತಿಯಾದರೆ ವಿಷವೂ ಅಮೃತ ಎಂಬಂತೆ’ ಇಂದು ನಮ್ಮ ಸಂಬಂಧಗಳ ಮಹಲು ಕುಸಿದು ಬೀಳುವ ಸಂಕ್ರಮಣ ಘಟ್ಟದಲ್ಲಿ ನಾವಿದ್ದೇವೆ. ಈ ಸಂದಿಗ್ಧಮಯ ಸನ್ನಿವೇಶವನ್ನು ನಾವು ನಾಜೂಕಾಗಿ ಎದುರಿಸಬೇಕಿದೆ. ಆಧುನಿಕ ಪರಿಕರಗಳು ಸದ್ಯಕ್ಕಂತೂ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ ಏನೋ ಹೌದು. ಹಾಗೆಂದು ನಾವು ಈ ಪರಿಕರಗಳಿಗೇ ಜೋತು ಬಿದ್ದಿದ್ದೇವೆ ಎಂದು ಹೇಳಲಾಗದು. ಭಾವನೆ ಮತ್ತು ಈ ಪರಿಕರಗಳ ಬಳಕೆಯಲ್ಲಿ ಸಮ ತೋಲನ ಸಾಧಿಸುವಲ್ಲಿ ನಾವು ಈ ಸವಾಲನ್ನು ದಿಟ್ಟವಾಗಿ ಎದುರಿಸಬಹುದಾಗಿದೆ.
ಭಾವನೆಗಳಿಂದ ಸಂಬಂಧಗಳನ್ನು ಉಳಿಸಿ, ಮುಂದಿನ ತಲೆಮಾರಿಗೆ ವರ್ಗಾಯಿಸುವ ಮಹತ್ತರ ಉತ್ತರದಾಯಿತ್ವ ನಿಭಾಯಿಸಲು ಕಟಿಬದ್ಧರಾಗಬೇಕಾಗಿದೆ. ಭಾವನೆಗಳ ಜೀವಂತ ವಿರಿಸುವಿಕೆಯ, ಪೋಷಿಸುವಿಕೆಯ ದೀಕ್ಷೆ ತೊಡಬೇಕಾಗಿದೆ. ಇಲ್ಲವಾದಲ್ಲಿ ಕರಾಳತೆಯ ಕೂಪದತ್ತ ಸಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ನಮ್ಮ ಜೀವಕ್ಕೆ ಹೇಗೆ ಆತ್ಮ ಭೂಷಿತವೊ ಹಾಗೆಯೇ ನಮ್ಮ ಬದುಕಿಗೆ ಭಾವನೆಗಳು ಭೂಷಣ. ಆದ್ದರಿಂದ ದೇವರ ಉಪಾ ಸನೆಯಿಂದ ಹಿಡಿದು, ಸಮಾಜ ಸೇವೆ, ರಾಷ್ಟ್ರ ಸೇವೆ ಬಾಲ್ಯದಿಂದ ಬಾಳಿನ ಅಂತ್ಯದವರೆಗೂ ಭಾವನೆಗಳು ಬಾಳಿನಲ್ಲಿ ಸಂಗಮಿಸಬೇಕು. ಈ ಥರ ಭಾವನೆಗಳು ಬಾಳಿನಲ್ಲಿ ಅನವರತ ಮಿಳಿತಗೊಂಡರೆ, ಭಾವಗಳ ತೋರಣ ಗಳಿಂದ ಸಿಂಗಾರಗೊಂಡರೆ ನಮ್ಮ ಸಮ ಷ್ಠಿಯ ಸ್ವರೂಪವೇ ವಿಭಿನ್ನ ರೂಪ ತಾಳಿ, ಅಲಂಕಾರಗೊಂಡು ಸುಂದರಮ ಯವಾಗುವುದು. ಪರಿಪೂರ್ಣತೆಯತ್ತ,ಸುಸಂಸ್ಕೃತದತ್ತ, ಸದೃಢ ಆರೋಗ್ಯದತ್ತ, ಸಮಾ ಜದ ಪುರಸ್ಕಾರದತ್ತ ಸಾಗಲು ಭಾವಗಳು ಒಳ್ಳೆಯ ಆಯ್ಕೆಗಳು. ಹೀಗೆ ಸಮಾಜ ಸದಾ ಭಾವನೆಗಳ ಮೆರವಣಿಗೆಯಲ್ಲಿ ಸಾಗುತ್ತಿರಲಿ.
- ಸಂದೀಪ್ ನಾಯಕ್ ಸುಜೀರ್, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.