ರಾಶಿ ಫಲ : ಈ ರಾಶಿಯ ಅವಿವಾಹಿತರಿಗೆ ವಿವಾಹ ಯೋಗ
Team Udayavani, Jul 10, 2022, 7:07 AM IST
ಮೇಷ: ಸರಕಾರಿ ಕೆಲಸಗಳಲ್ಲಿ ಪ್ರಗತಿ. ಗುರುಹಿರಿಯರ ಅವಲಂಬನೆ. ಧಾರ್ಮಿಕ ಕಾರ್ಯಗಳ ನಿಮಿತ್ತ ದೂರ ಪ್ರಯಾಣ. ಉದ್ಯೋಗ ವ್ಯವಹಾರಗಳಲ್ಲಿ ಅಡಚಣೆ ತೋರೀತು. ಮಕ್ಕಳಿಗಾಗಿ ಧನವ್ಯಯ. ದಾಂಪತ್ಯ ತೃಪ್ತಿಕರ. ಗೃಹೋಪಕರಣ ವಸ್ತು ಸಂಗ್ರಹ.
ವೃಷಭ: ಬಂಧು ಬಳಗದವರಿಂದ ಸಹಕಾರ. ದಾಂಪತ್ಯದಲ್ಲಿ ಪರಸ್ಪರ ಅನುರಾಗ. ಅಧ್ಯಯನದಲ್ಲಿಯೂ ಭೂಮ್ಯಾದಿ ಆಸ್ತಿ ವಿಚಾರಗಳಲ್ಲಿ ಪ್ರಗತಿ. ಮಕ್ಕಳಿಗೆ ನಿರೀಕ್ಷಿತ ಸ್ಥಾನ ಲಾಭವಾದ್ದರಿಂದ ಸಂತೋಷ ವೃದ್ಧಿ. ಸಹೋದರ ಸಮಾನರಿಗೆ ಪ್ರಯಾಣ ಯೋಗ.
ಮಿಥುನ: ಸುದೃಢ ಆರೋಗ್ಯ. ಸಂದರ್ಭಕ್ಕೆ ಸರಿಯಾಗಿ ಸಹಾಯ ಒದಗಿ ಬರುವುದು. ಯತೇಚ್ಛ ಧನಾಗಮನ. ಉದ್ಯೋಗ ವ್ಯವಹಾರಗಳಲ್ಲಿಯೂ ಪಾಲುದಾರಿಕೆಯಲ್ಲಿ ಹೆಚ್ಚಿದ ಪ್ರಗತಿ. ಸಾಂಸಾರಿಕ ಸುಖ ವೃದ್ಧಿ. ಗುರುಹಿರಿಯರ ಆರೋಗ್ಯ ಗಮನಿಸಿ. ಅವಿವಾಹಿತರಿಗೆ ವಿವಾಹ ಯೋಗ.
ಕರ್ಕ: ಕೆಲಸ ಕಾರ್ಯಗಳಲ್ಲಿ ನಿರೀಕ್ಷಿಸಿದಂತೆ ಸಫಲತೆ. ನೂತನ ಮಿತ್ರರ ಸಮಾಗಮ. ದೂರದ ವ್ಯವಹಾರಗಳಿಂದ ಧನಾಗಮ. ಮಕ್ಕಳಿಂದ, ಗುರುಹಿರಿಯರಿಂದ ಸಂತೋಷ ವೃದ್ಧಿ. ನಷ್ಟ ದ್ರವ್ಯ ಪ್ರಾಪ್ತಿ ಇತ್ಯಾದಿ ಶುಭ ಫಲ.
ಸಿಂಹ: ನಿರಂತರ ಧನಲಾಭದ ವಿಚಾರದಲ್ಲಿ ಮಗ್ನತೆ. ನಿರೀಕ್ಷಿಸಿದಂತೆ ಸ್ಥಾನ ಲಾಭ. ಸಂದಭೋìಚಿತ ಕಾರ್ಯ ನಡೆನುಡಿಯಿಂದ ಪ್ರಗತಿ. ಗುರುಹಿರಿಯರಲ್ಲಿ ಬೇಸರ ಬಾರದಂತೆ ನಿರ್ವಹಿಸಿ. ಸಾಂಸಾರಿಕ ಸುಖ ಮಧ್ಯಮ. ಆರೋಗ್ಯದ ಕಡೆ ಗಮನಿಸಿ.
ಕನ್ಯಾ: ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಜವಾಬ್ದಾರಿಯಿಂದ ದೇಹಾಯಾಸ ಸಂಭವ. ಧನ ಸಂಪತ್ತಿಗಾಗಿ ದೀರ್ಘ ಪ್ರಯಾಣ ಸಂಭವ. ಪತಿ ಪತ್ನಿಯರು ಆರೋಗ್ಯ ಗಮನಿಸಿ. ಭೂಸಂಬಂಧ ವಿಚಾರಗಳಲ್ಲಿ ಜಾಗೃತೆ ನಡೆ ಅಗತ್ಯ.
ತುಲಾ: ಗುರುಹಿರಿಯರ ಆಶೀರ್ವಾದದಿಂದ ಹೆಚ್ಚಿನ ಸ್ಥಾನ ವೃದ್ಧಿ. ಸಹೋದ್ಯೋಗಿಗಳ ಸಹಕಾರದಿಂದ ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ ಹಾಗೂ ಹೆಚ್ಚಿನ ಸಂಪಾದನೆ ಪ್ರಾಪ್ತಿ. ಭೂಮ್ಯಾದಿ ಆಸ್ತಿ ವಿಚಾರಗಳಲ್ಲಿ ಚರ್ಚೆ ಸಂಭವ. ದಾಂಪತ್ಯ ಸುಖ ವೃದ್ಧಿ.
ವೃಶ್ಚಿಕ: ಉದ್ಯೋಗ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿ. ನಿರೀಕ್ಷೆಗೆ ಸರಿಯಾಗಿ ಧನಾಗಮ. ಭೂಮ್ಯಾದಿ ವ್ಯವಹಾರಗಳಲ್ಲಿ ಅಡಚಣೆ ವಿಳಂಬ. ಮಾನಸಿಕ ಒತ್ತಡ. ದಂಪತಿಗಳಲ್ಲಿ ಪರಸ್ಪರ ಸಹಕಾರ ವೃದ್ಧಿ. ಮಕ್ಕಳಿಂದ ಸಂತೋಷ.
ಧನು: ವಿದ್ಯಾರ್ಜನೆಯಲ್ಲಿ ತಲ್ಲೀನತೆ. ಅವಿವಾಹಿತರಿಗೆ ವಿವಾಹ ಭಾಗ್ಯ. ನೂತನ ಮಿತ್ರರ ಸಮಾಗಮ. ಆಸ್ತಿ ವಿಚಾರಗಳಲ್ಲಿ ಮುನ್ನಡೆ. ಗೃಹದಲ್ಲಿ ಸಂತಸದ ವಾತಾವರಣ. ಅತಿಯಾದ ಪರಿಶ್ರಮದಿಂದ ಧನ ವೃದ್ಧಿ.
ಮಕರ: ದಾಂಪತ್ಯದಲ್ಲಿ ಪರಸ್ಪರ ಅನುರಾಗ ವೃದ್ಧಿ. ದೀರ್ಘ ಪ್ರಯಾಣ ಸಂಭವ. ಭೂಮ್ಯಾದಿ ವಿಚಾರಗಳಲ್ಲಿ ಆಸ್ತಿ ವಿಚಾರಗಳಲ್ಲಿ ಬದಲಾವಣೆ ಸಂಭವ. ಎಚ್ಚರಿಕೆ ನಡೆ ಅಗತ್ಯ. ಮಕ್ಕಳ ವಿಚಾರದಲ್ಲಿ ಹೆಚ್ಚಿದ ಶ್ರಮ ಜವಾಬ್ದಾರಿ.
ಕುಂಭ: ಆರೋಗ್ಯ ಗಮನಿಸಿ. ನಡೆನುಡಿಗಳಲ್ಲಿ ಸ್ಪಷ್ಟತೆ ಇರಲಿ. ಅನ್ಯಥಾ ತೊಂದರೆಗಳನ್ನು ನಿಯಂತ್ರಿಸದಿರಿ. ಭೂಮ್ಯಾದಿ ವ್ಯವಹಾರಗಳಲ್ಲಿ ಏರುಪೇರು ಸಂಭವ. ಮಕ್ಕಳಿಗೆ ದೂರ ಪ್ರಯಾಣ. ಅಧ್ಯಯನ ನಿಮಿತ್ತ ದಂಪತಿಗಳು ಸಾಮರಸ್ಯ ಕಾಪಾಡಿಕೊಳ್ಳಿ
ಮೀನ: ವೃದ್ಧಿದಾಯಕ ಆರೋಗ್ಯ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿಸಿದಂತೆ ಧನಾಗಮನ. ಸ್ಥಾನ ಕೀರ್ತಿ ಪ್ರಶಂಸೆ ಪ್ರಾಪ್ತಿ. ಉತ್ತಮ ವಾಕ್‌ಚತುರತೆ, ಮನೋರಂಜನೆ. ಸಾಂಸಾರಿಕ ಸುಖ ವೃದ್ಧಿ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುವುದು. ಗುರುಹಿರಿಯರ ಆರೋಗ್ಯ ಗಮನಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಕರ್ತವ್ಯಕ್ಕೆ ತನ್ನ ಬದಲಿಗೆ ಮಗನನ್ನು ಕಳುಹಿಸಿದ ಮಹಿಳಾ ನೌಕರೆ ಅಮಾನತು
Belagavi: ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ; ಆಸ್ಪತ್ರೆಗೆ ದಾಖಲಾದ ಸಚಿವೆ
Bengaluru: 2 ಕೋಟಿ ರೂ. ಹೂಡಿದರೆ 1 ದಿನದಲ್ಲಿ 3.5 ಕೋಟಿ ಕೊಡುವುದಾಗಿ ವಂಚನೆ!
Cast Census: ಜಾತಿ ಗಣತಿ ಮರು ಸಮೀಕ್ಷೆ ಅಗತ್ಯ: ಅಶೋಕ್ ಹಾರನಹಳ್ಳಿ
Congress: ‘ಒಬ್ಬರಿಗೆ ಒಂದೇ ಹುದ್ದೆ’ಗೆ ವಿಶೇಷ ಸಂದರ್ಭಗಳಲ್ಲಿ ವಿನಾಯಿತಿ: ರಣದೀಪ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.