ಸೋಮವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ
Team Udayavani, Jul 11, 2022, 7:12 AM IST
ಮೇಷ :
ಹಿರಿಯರಿಂದ ಸುಖ ಸಂತೋಷ. ಸರಕಾರೀ ಕೆಲಸಗಳಲ್ಲಿ ಪ್ರಗತಿ. ಗಣ್ಯರ ಸಂಪರ್ಕದಿಂದ ಮಾನ್ಯತೆ. ಸ್ವಸಾಮರ್ಥ್ಯದಿಂದ ಧನ ಸಂಪಾದನೆ. ಸಹೋದ್ಯೋಗಿಗಳ ಸಹಕಾರ. ಭೂಮ್ಯಾದಿ ವ್ಯವಹಾರಗಳಲ್ಲಿ ಪ್ರಗತಿ. ದೇವತಾರಾಧನೆಯಿಂದ ಯಶಸ್ಸು.
ವೃಷಭ:
ದೈರ್ಯ ಶೌರ್ಯ ಪರಾಕ್ರಮದಿಂದ ಕೂಡಿದ ಸ್ವಾಭಿಮಾನಕ್ಕೆ ದಕ್ಕೆಯಾಗದಂತೆ ಕಾರ್ಯವೈಖರಿ. ಸಂಪತ್ತು ವೃದ್ಧಿ. ದಾನ ಧರ್ಮದಲ್ಲಿ ಆಸಕ್ತಿ ಶ್ರದ್ಧೆ. ಬಂಧುಮಿತ್ರರ ಸಹಕಾರ. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿ. ಗುರುಹಿರಿಯರ ಆರೋಗ್ಯ ಗಮನಿಸಿ.
ಮಿಥುನ:
ಸಂಶೋದನಾತ್ಮಕ ಪ್ರವೃತ್ತಿ. ಆರೋಗ್ಯ ಗಮನಿಸಿ. ವ್ಯವಹರಿಸುವಾಗ ಮಾತಿನಲ್ಲಿ ಕಠೊರತೆಗೆ ಆಸ್ಪದ ನೀಡದಿರಿ. ಹಣಕಾಸಿನ ಸಂಪತ್ತಿನ ವಿಚಾರದಲ್ಲಿ ಸಾಹಸ ಪ್ರವೃತ್ತಿ ಸಲ್ಲದು. ಅನಿರೀಕ್ಷಿತ ಧನಾಗಮನ ಸಂಭವ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದಿಂದ ಯಶಸ್ಸು.
ಕಟಕ:
ಸಾಂಸಾರಿಕ ಸುಖ ವೃದ್ಧಿ. ದಂಪತಿಗಳಲ್ಲಿ ಅನುರಾಗ ಹೆಚ್ಚಾದೀತು. ದೀರ್ಘ ಪ್ರಯಾಣ ಸಂಭವ. ಉತ್ತಮ ಜನರ ಒಡನಾಟದಿಂದ ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಸೌಲಭ್ಯ ಪ್ರಾಪ್ತಿ.
ಸಿಂಹ:
ಆರೋಗ್ಯ ತೃಪ್ತಿದಾಯಕ. ಸದಾ ವಿದ್ಯಾರ್ಜನೆಯಲ್ಲಿ ಆಸಕ್ತಿ. ಉತ್ತಮ ಗೌರವದಿಂದ ಕೂಡಿದ ಧನ ಸಂಪತ್ತಿನ ವೃದ್ಧಿ. ಮಕ್ಕಳಲ್ಲಿ ವಿಶೇಷ ಪ್ರೀತಿ ಸುಖ ಸಂತೋಷ. ದೂರದ ವ್ಯವಹಾರದಲ್ಲಿ ಪ್ರಗತಿ. ಸ್ಥಾನ ಸುಖಾದಿ ಲಭ್ಯ.
ಕನ್ಯಾ:
ಪರರಿಗೆ ಸಹಾಯ ಮಾಡುವಾಗ ಪೂರ್ವಾಪರ ವಿಚಾರ ಮಾಡಿ ನಿರ್ಣಯ ಮಾಡಿ. ಉದ್ಯೋಗ ಸಂಪತ್ತು ವಿಚಾರದಲ್ಲಿ ಉತ್ತಮ ಪ್ರಗತಿದಾಯಕ ಬದಲಾವಣೆ ತೋರಿಬರುವುವು. ಸಂಶೋಧಕರಿಗೆ ಅನುಕೂಲಕರ ಪರಿಸ್ಥಿತಿ.
ತುಲಾ:
ಬಂಧುಮಿತ್ರರ ಸಹಕಾರ. ಗೃಹದಲ್ಲಿ ಸಂತಸದ ವಾತಾವರಣ. ದೂರದ ಮಿತ್ರರ ಸಮಾಗಮ. ಪಾಲುದಾರಿಕಾ ವ್ಯವಹಾರಗಳಲ್ಲಿ ಹೆಚ್ಚಿದ ಅಭಿವೃದ್ಧಿ. ಯೋಚಿಸಿದಂತೆ ಕಾರ್ಯ ಸಫಲತೆಯಿಂದ ಮನಃ ಸಂತೋಷ. ಗುರುಹಿರಿಯರಿಂದ ಸೂಕ್ತ ಸಲಹೆ ಲಭ್ಯ.
ವೃಶ್ಚಿಕ:
ದೈರ್ಯ ಶೌರ್ಯದಿಂದ ಕೂಡಿದ ಕಾರ್ಯ ವೈಖರಿ. ಕೆಲಸ ಕಾರ್ಯಗಳಲ್ಲಿ ಕೀರ್ತಿ ಸಂಪಾದನೆ. ನಿರೀಕ್ಷಿತ ಗೌರವಾನ್ವಿತ ಧನ ಸಂಪತ್ತು ವೃದ್ಧಿ. ದಾರ್ಮಿಕ ಕ್ಷೇತ್ರ ಸಂದರ್ಶನ. ದೂರದ ಮಿತ್ರರ ಗುರು ಹಿರಿಯರ ಸಹಕಾರ. ದಂಪತಿಗಳಲ್ಲಿ ಅನ್ಯೋನ್ಯತೆ.
ಧನು:
ಸಂಸಾರದೊಂದಿಗೆ ದೀರ್ಘ ಪ್ರಯಾಣ ಸಂಭವ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಧನ ಸಂಮೃದ್ಧಿ ಯಶಸ್ಸು ಸುಖ ಸಂತೋಷ. ಉತ್ತಮ ವಾಕ್‌ಚತುರತೆಯಿಂದ ಜನರಂಜನೆ. ಆಸ್ತಿ ವಿಚಾರಗಳಲ್ಲಿ ಮುನ್ನಡೆ.
ಮಕರ:
ಉತ್ತಮ ಆರೋಗ್ಯ. ಬಂಧುಮಿತ್ರರ ಭೇಟಿ. ಗೃಹದಲ್ಲಿ ಸಂಭ್ರಮ. ಉದ್ಯೋಗ ವ್ಯವಹಾರಗಳಲ್ಲಿ ಯಶಸ್ಸು ಸಂತೋಷ. ದಾಂಪತ್ಯ ತೃಪ್ತಿದಾಯಕ. ಮಕ್ಕಳಿಂದ ಅನುರಾಗ ವೃದ್ಧಿ. ಅಧಿಕ ಧನಾರ್ಜನೆ. ಸಾಂಸಾರಿಕ ಸುಖ ತೃಪ್ತಿದಾಯಕ.
ಕುಂಭ:
ಆರೋಗ್ಯ ವಿಚಾರದಲ್ಲಿ ಉದಾಸೀನತೆ ಸಲ್ಲದು. ಸರಿಯಾದ ನಿಯಮ ಪಾಲಿಸುವುದರಿಂದ ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ದೈರ್ಯ ಶೌರ್ಯದಿಂದ ಪ್ರಗತಿ. ನಾಯಕತ್ವ ಗುಣ ವೃದ್ಧಿ. ಅಧಿಕ ಧನಾರ್ಜನೆ. ಸಾಂಸಾರಿಕ ಸುಖ ತೃಪ್ತಿದಾಯಕ.
ಮೀನ:
ಆರೋಗ್ಯದ ಕಡೆ ಗಮನಿಸಿ. ದಂಪತಿಗಳಲ್ಲಿ ಪರಸ್ಪರ ಸಹಕಾರ ಅಗತ್ಯ. ಧನಾರ್ಜನೆಗೆ ಕೊರತೆಯಾಗದು. ಮಾತಿನಲ್ಲಿ ಸ್ಪಷ್ಟತೆ ತಾಳ್ಮೆ ಅಗತ್ಯ. ಮಾನಸಿಕ ಒತ್ತಡಕ್ಕೆ ಒಳಗಾಗದಂತೆ ಕಾರ್ಯ ನಿರ್ವಹಿಸಿ. ದೇವತಾ ಪ್ರಾರ್ಥನೆಯಿಂದ ನೆಮ್ಮದಿ. ಗುರುಹಿರಿಯರ ಆಶೀರ್ವಾದದಿಂದ ಯಶಸ್ಸು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Daily Horoscope: ಉದ್ಯೋಗದಲ್ಲಿ ಯಶಸ್ಸಿನ ಭರವಸೆ, ಆಪ್ತರ ನೈತಿಕ ಬೆಂಬಲದಿಂದ ಧೈರ್ಯ ವರ್ಧನೆ
Daily Horoscope; ಮನೋಬಲ ಕುಗ್ಗಿಸುವವರ ಸಹವಾಸ ಬಿಡಿ
Horoscope: ದುಡಿಮೆಗೆ ತಕ್ಕ ಪ್ರತಿಫಲದ ಭರವಸೆ ನಿಮ್ಮದಾಗಲಿದೆ
MUST WATCH
ಹೊಸ ಸೇರ್ಪಡೆ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.