ಭಟ್ಕಳ: ಬಂದರಿನಲ್ಲಿ ತೇಲಿ ಬಂದ ಗೋವಿನ ರುಂಡಗಳು
Team Udayavani, Jul 10, 2022, 8:46 PM IST
ಭಟ್ಕಳ: ಅತ್ಯಂತ ಸೂಕ್ಷ್ಮ ಪ್ರದೇಶ ಎಂದು ಹಣೆಪಟ್ಟಿ ಪಡೆದುಕೊಂಡಿದ್ದ ತಾಲೂಕಿನ ಬಂದರಿನ ಸಂಗಮ ಪ್ರದೇಶದಲ್ಲಿ ಗೋವಿನ ರುಂಡಗಳು ನೀರಿನಲ್ಲಿ ತೇಲಿ ಬಂದಿದ್ದು,ಭಾನುವಾರ ಕೆಲ ಕಾಲ ಜನರಲ್ಲಿ ಆತಂಕ ಮೂಡಿಸಿತ್ತು.
ಸಂಜೆಯ ಸುಮಾರಿಗೆ ಬಂದರ ಪ್ರದೇಶದಲ್ಲಿ ಮೀನುಗಾರರು ಗೋವಿನ ರುಂಡಗಳು ನೀರಿನಲ್ಲಿ ತೇಲಿ ಬರುತ್ತಿರುವುದನ್ನು ಗಮನಿಸಿ ಆತಂಕಕ್ಕೊಳಗಾದರು. ನಂತರ ಅನೇಕ ಚೀಲಗಳಲ್ಲಿ ತೇಲಿ ಬರುತ್ತಿರುವುದನ್ನು ನೋಡಿದ್ದು ತಕ್ಷಣ ಕೆಲವರು ರುಂಡವನ್ನು ಹಗ್ಗದಿಂದ ಕಟ್ಟಿ ಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಗ್ರಾಮೀಣ ಠಾಣೆಯ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಗೋವಿನ ರುಂಡವನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಇನ್ನೂ ಕೆಲವು ರುಂಡಗಳು ಸಮುದ್ರಕ್ಕೆ ಸೇರಿದ್ದು, ಒಂದು ಮಾತ್ರ ದೊರೆತಿದೆ ಎನ್ನಲಾಗಿದೆ.
ರಾಜ್ಯದಲ್ಲಿ ಗೋಹತ್ಯೆ ನಿಷೇಧವಿದ್ದರೂ ಸಹ ಅಲ್ಲಲ್ಲಿ ಗೋವುಗಳನ್ನು ವಧೆ ಮಾಡಿರುವುದು ಸ್ಪಷ್ಟವಾಗಿದ್ದು ಬೆಳಿಗ್ಗೆ ಕಂಪೌಂಡ್ ಒಳಗಡೆ 20 ಕೆ.ಜಿ. ಮಾಂಸ ದೊರೆತರೆ, ಸಂಜೆ ನೀರಿನಲ್ಲಿ ತೇಲಿ ಬಂದ ಗೋವಿನ ರುಂಡಗಳು ಆತಂಕಕ್ಕೆ ಕಾರಣವಾಗಿದೆ. ಕಾನೂನನ್ನು ಉಲ್ಲಂಘನೆ ಮಾಡಿದವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸಬೇಕು ಎನ್ನುವ ಕೂಗು ಕೇಳಿ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.