![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jul 11, 2022, 7:30 AM IST
ಭೋಪಾಲ್: 8 ವರ್ಷದ ಬಾಲಕನೊಬ್ಬ ತನ್ನ 2 ವರ್ಷದ ತಮ್ಮನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಕಾಯುತ್ತಾ ಕುಳಿತ ಕರುಣಾಜನಕ ಕಥೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಪೂಜಾರಾಮ್ ಹೆಸರಿನ ವ್ಯಕ್ತಿಯ ಮಗ ರಾಜಾ(2) ರಕ್ತಹೀನತೆಯಿಂದಾಗಿ ಇತ್ತೀಚೆಗೆ ಮೊರೆನಾ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಆದರೆ, ಆಸ್ಪತ್ರೆಯಿಂದ 30ಕಿ.ಮೀ. ದೂರದಲ್ಲಿರುವ ಮನೆಗೆ ರಾಜಾನ ಶವ ತೆಗೆದುಕೊಂಡು ಹೋಗಲು ಪೂಜಾರಾಮ್ ಒದ್ದಾಡಿದ್ದಾನೆ.
ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ಕಳುಹಿಸಬೇಕೆಂದರೆ 1500 ರೂ. ಕೊಡಬೇಕೆಂದು ಚಾಲಕ ಹೇಳಿದ ಹಿನ್ನೆಲೆ ಅಲ್ಲೇ ಹತ್ತಿರವಿದ್ದ ಪಾರ್ಕ್ ಬಳಿ ತನ್ನ ಮೊದಲ ಮಗ ಗುಲ್ಶನ್‌ನನ್ನು ರಾಜಾನ ಶವ ಕಾಯಲು ಬಿಟ್ಟು ಬೇರೆ ಗಾಡಿ ವ್ಯವಸ್ಥೆ ಮಾಡಲು ತೆರಳಿದ್ದಾನೆ. ಈ ದೃಶ್ಯ ಕಂಡ ಸ್ಥಳೀಯ ಪತ್ರಕರ್ತರೊಬ್ಬರು ವರದಿ ಮಾಡಿದ್ದು, ವಿಚಾರ ಎಲ್ಲೆಡೆ ದೊಡ್ಡ ಸುದ್ದಿಯಾಗಿದೆ.
You seem to have an Ad Blocker on.
To continue reading, please turn it off or whitelist Udayavani.